POLICE BHAVAN KALABURAGI

POLICE BHAVAN KALABURAGI

19 November 2014

Kalaburagi District Reported Crimes

ಹಲ್ಲೆ ಮಾಡಿ ಸಾಮಾನುಗಳನ್ನು ನಾಶಪಡಿಸಿ ತೆಗೆದುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ. ವೆಂಕಟೇಶ ಮೂರ್ತಿ ತಂದೆ ನಾರಾಯಣ ಮೂರ್ತಿ ಇವರು ದಿನಾಂಕ 18/11/2014 ರಂದು 11:00 ಎ.ಎಂ. ದ ಸುಮಾರಿಗೆ ಫಿರ್ಯಾದಿದಾರರ ಮಾಲಿಕತ್ವದ ಬಸವೇಶ್ವರ ಕಾಲೋನಿ ಎಂ.ಜಿ ರೋಡಿಗೆ ಇರುವ ಶ್ರೀ ಸುಮಂಗಲಿ ಡಿಜಿಟಲ್ ಕಮ್ಯೂನಿಕೇಷನ್ ಇಂಡಿಯಾ ಪ್ರ.ಲಿ ಆಫೀಸಕ್ಕೆ ಹೆಚ್.ಎಸ್ ನಾಗೇಂದ್ರ ಮತ್ತು ಆತನ ಸಂಗಡ 08-10 ಜನರು ಕೂಡಿಕೊಂಡು ಬಂದವರೇ ಆಫೀಸನ ಒಳಗಡೆ ಹೋಗಿ ಆಫೀಸ್ ನಲ್ಲಿದ್ದ ಕೆಲಸಗಾರರಿಗೆ ಹೆದರಿಸಿ, ಚಾಕುವಿನಿಂದ ರಕ್ತಗಾಯ ಪಡಿಸಿ, ಆಫೀಸನಲ್ಲಿದ್ದ 1) ಸಿ.ಸಿ ಕ್ಯಾಮೆರಾ ರಿಕಾರ್ಡಿಂಗ್ ಡಿ.ವಿ.ಆರ್ ಅಃಕಿಃ 7,000/- ರೂ. 2) ಕಂಟ್ರೂಲ್ ರೂಮ್ ಒಳಗಡೆ ಇದ್ದ 07 ಡಿಕೋಡರ್ಸ್ ಅಃಕಿಃ 35,000/- ರೂ. 3) ಒಂದ ಜಿನಿಫರ್ ಸ್ವಿಚ್ ಅಃಕಿಃ 13,00,000/- ರೂ. 4) ಒಂದು ಇ.ಡಿ.ಎಫ್.ಎ ಅಃಕಿಃ 9,00,000/- ರೂ ಬೆಲೆ ಬಾಳುವ ಸಾಮಾನುಗಳನ್ನು ಜಬರದಸ್ತಿಯಿಂದ ತೆಗೆದುಕೊಂಡು ಹೋಗಿದ್ದು ಅಲ್ಲದೇ ಕಾಮ್ ನಾಶಪಡಿಸಿ ಅಃಕಿಃ 9,00,000/- ರೂ. ನಷ್ಟು ಹಾನಿ ಮಾಡಿ ನಂಬರ ಪ್ಲೇಟ್ ಇಲ್ಲದ ಇನೋವಾ ಕಾರಿನಲ್ಲಿ ಹೋಗಿರುತ್ತಾರೆ ಅಂತಾ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೋಚು ಹಾಕಿ ಕುಳಿತವರ ಬಂಧನ :
ಜೇವರ್ಗಿ ಠಾಣೆ : ಶ್ರೀ. ಪರಶುರಾಮ ಮನಗುಳಿ ಪಿ.ಎಸ್.ಐ ಜೇವರ್ಗಿ ಠಾಣೆ ರವರು  ಕಟ್ಟಿ ಸಂಗಾವಿ ಹತ್ತಿರ ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸುತ್ತಿರುವ ಬಗ್ಗೆ ಯಾರೋ ಒಬ್ಬರು ಬಾತ್ಮಿ ನೀಡಿದ ಮೇರೆಗೆ ನಾನು ಸಂಗಡ ಠಾಣೆಯ ಸಿಬ್ಬಂದಿಯವರಾದ ಪಿಸಿ 219. 917 ಮತ್ತು ಪಂಚರವರೊಂದಿಗೆ ದಿನಾಂಕ 18.11.2014 ರಂದು 04:30 ಗಂಟೆಗೆ ಕಟ್ಟಿಸಂಗಾವಿ ಕ್ರಾಸ್‌ ಹತ್ತಿರ ಹೋಗಿ ನೋಡಲಾಗಿ ಅಲ್ಲಿ 5 ಜನರು ತಮ್ಮ ಬಿಳಿ ಬಣ್ಣದ ಬುಲೇರೋ ವಾಹನ ನಂ ಕೆ.ಎ33ಎಮ್7771 ನೇದ್ದರ ಸಮೇತ ದರೋಡೆ ಮಾಡುವ ಉದ್ದೆಶದಿಂದ ಹೊಂಚುಹಾಕಿ ಕುಳಿತಿದ್ದನ್ನು ಖಚಿತ ಪಡಿಸಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ಸಿಬ್ಬಂದಿ ಜನರೊಂದಿಗೆ ಅವರ ಮೇಲೆ ದಾಳಿ ಮಾಡಲು ಸದರಿ 5 ಜನರಲ್ಲಿ 3 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲು ಅವರು ತಮ್ಮ ಹೆಸು 1) ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ಸಿರೂರ  2) ಶಿವಕುಮಾರ ತಂದೆ ಸುಭಾಷ ಯಲಗಾರ 3) ಶಾಂತಕುಮಾರ ತಂದೆ ರೇವಪ್ಪ ಬೆಡಜರಗಿ  ಶಂಕರ ಬೆನಕನಳ್ಳಿ ಸಾ|| ನಾಲ್ಕು ಜನರು ಕಲಬುರಗಿ  5) ಮಹೇಬೂಬ ಸಾ|| ಮದರಿ ಗ್ರಾಮ ತಾ|| ಜೇವರ್ಗಿ
ಅಂತಾ ತಿಳಿಸಿದ್ದು ಇದರಲ್ಲಿ  2 ಜನರು ಕತ್ತಲಲ್ಲಿ ಓಡಿ ಹೋಗಿದ್ದು ಹೀಡಿದುಕೊಂಡವರಿಂದ ನಗದು ಹಣ ಒಟ್ಟು 16.000/- ರೂ, ಎರಡು ಕಬ್ಬಿಣದ ಪೈಪುಗಳು,  ಖಾರದ ಪುಡಿ, ಒಂದು ನೂಲಿನ ಹಗ್ಗ ಮತ್ತು ಬುಲೇರೋ ವಾಹನವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿ 3 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಕ್ಕೆ ವಂಚನೆ ಮಾಡಿದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ ಲಾಲಬಿ ಪಿ.ಎಸ್.ಐ ನಾಗರಿಕ  ಹಕ್ಕು ಜಾರಿ ನಿರ್ದೇಶನಾಲಯ ಕಲಬುರಗಿ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಆರೋಪಿತರಾದ 1) ತಿಪ್ಪಣ್ಣ ತಂದೆ ಭೀಮಶ್ಯಾ ಕಮಕನೂರ 2) ರಮೇಶ ತಂದೆ ತಿಪ್ಪಣ್ಣ ಕಮಕನೂರ ಸಾ|| ಇಬ್ಬರೂ ಕಲಬುರಗಿ ಇವರು ದಿನಾಂಕ: 04/03/1994 ರಂದು ತಹಶೀಲ್ದಾರ ಕಲಬುರಗಿರವರಿಂದ ಪರಿಶಿಷ್ಟ ಜಾತಿಯ  'ಟೋಕ್ರಿ ಕೋಳಿ' ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃಧ್ದಿ ನಿಗಮ ಕಲಬುರಗಿಯಿಂದ 7 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಸರಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ವರ್ಗದ ಜನರಿಗೆ ವಂಚನೆ ಮತ್ತು ಮೋಸ ಮಾಡಿದ್ದು ಸದರಿಯವರ ವಿರುಧ್ದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿ ಬಂಧನ :
ಅಫಜಲಪೂರ ಠಾಣೆ : ದಿನಾಂಕ 18-11-2014 ರಂದು ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ಮರೆಯಲ್ಲಿ ನಿಂತು  ನೋಡಲು ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಶವಂತ ತಂದೆ ಅಣ್ಣಪ್ಪ ಹೂಗಾರ ಸಾ|| ಘತ್ತರಗಾ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 480/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬದ್ರಣ್ಣಾ ಸಜ್ಜನ ಸಾ: ಸಿಐಬಿ ಕಾಲೋನಿ ಕಲಬುರಗಿ ರವರು ದಿನಾಂಕ 18-11-2014 ರಂದು ಸಾಯಂಕಾಲ ತನ್ನ ಮೋಟಾರ ಸೈಕಲ ನಂ ಕೆಎ-32-ಎಸ್-5774 ನೇದ್ದರ ಮೇಲೆ ಎಸ,ವಿ,ಪಿ,ಸರ್ಕಲ್ ಕಡೆಗೆ ಹೊಗುವಾಗ ರಾಮ ಮಂದಿರ ರಿಂಗ ರೋಡ ಕಡೆಯಿಂದ ಒಬ್ಬ ಅಂಬುಲೇನ್ಸ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಸಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಡಿಕ್ಕಿಪಡಿಸಿದಾಗ ಫಿರ್ಯಾದಿ ಮೊ/ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಫಿರ್ಯಾದಿಗೆ ಯಾವುದೆ ಗಾಯಾಗಿರುವದಿಲ್ಲಾ. ಸದರಿಯವರ  ಮೋಟಾರ ಸೈಕಲಿನ ಬಲಗಡೆ ಸೈಡಿನ ಡಿಕ್ಕಿ ಕವರ್ ಡ್ಯಾಮೇಜ ಮಾಡಿ  ಅಂಬುಲೇನ್ಸ ನಿಲ್ಲಿಸದೆ ಚಾಲಕ ಓಡಿ ಹೋಗಿದ್ದು ಅದರ ನಂಬರ ನೋಡಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: