ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ನಂದಲಾಲ ತಂದೆ ಸತ್ಯನಾರಾಯಣ ಲಾಹೋಟಿ ಸಾ:ಎಲ್.ಎನ್.ಟಿ. ರೋಡ್
ಸೇಡಂ ಇವರು ದಿನಾಂಕ:15-11-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನನ್ನ ಅಕ್ಕಿ
ವ್ಯಾಪಾರದ ಅಂಗಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಹಾಗೂ ಕೊಂಡಿಯನ್ನು ಮುರಿದು ಒಳಗಡೆ ಪ್ರವೇಶ
ಮಾಡಿ ಹಣ ಇಟ್ಟ ಪೆಟ್ಟಿಗೆಯನ್ನು ತೆರೆದು ಅದರಲ್ಲಿದ್ದ 100/- ರೂಪಾಯಿಯ, 50/- ರೂಪಾಯಿಯ ಹಾಗೂ 10/- ರೂಪಾಯಿಯ ಮತ್ತು ಒಂದು ಹಾಗೂ 2 ರೂಪಾಯಿಯ
ನಾಣ್ಯಗಳು ಕಳುವಾಗಿದ್ದು ಅಲ್ಲದೇ ನಡೆಯದ ಒಂದು ರೂಪಾಯಿ ಮತ್ತು ಎರಡು ರೂಪಾಯಿಯ ಒಟ್ಟು 20
ರೂಪಾಯಿಗಳು ಹೀಗೆ ಒಟ್ಟು 4,500/- ರೂಪಾಯಿಗಳನ್ನು ಕಳವು
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣಗಳು
:
ನಿಂಬರ್ಗಾ ಠಾಣೆ : ಶ್ರೀ ಮಹಾದೇವ ತಂದೆ ಸಂಗಣ್ಣ ಅಂಗಡಿ ಸಾ|| ಬೆಣ್ಣೆಶಿರೂರ ಇವರು ದಿನಾಂಕ 15/11/2014 ರಂದು ಸಾಯಂಕಾಲ 0500 ಗಂಟೆಗೆ ನಾನು ಪಾಲದಂತೆ ಮಾಡಿದ ಮಳಸಿದ್ದ
ತಂದೆ ಹಣಮಂತ್ರಾಯ ಅಂಗಡಿ ಇವರ ಬಂದಾರಿಯ ಮೇಲೆ ಕಸ ತೆಗೆಯುತ್ತಿರುವಾಗ ಬಾಜು ಹೊಲದವನಾದ ರಾಯಗೊಂಡ
ತಂದೆ ಶರಣಪ್ಪ ಅಂಗಡಿ ಸಾ|| ಬೆಣ್ಣೆಶಿರೂರ ಇವನು ಬಂದವನೆ ಏ ಇಲ್ಯಾಕ
ಕಸ ತೆಗಿತಿ ಅಂತ ಕೈಯಿಂದ ತಡೆದು ತನ್ನ ಕೈಯಲ್ಲಿದ್ದ ಸನಿಕೆಯಿಂದ ನನ್ನ ಎಡಗೈ ಮೇಲೆ ಹೊಡೆದು ಭಾರಿ
ರಕ್ತಗಾಯಗೊಳಿಸಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀಮತಿ ರೇಹಮತಬಿ ಗಂಡ ಸೈಫನಸಾಬ ಮುಲ್ಲಾ ಸಾ|| ಮೈಂದರ್ಗಿ, ಹಾ|| ವ|| ಕವಲಗಾ ಇವರು ದಿನಾಂಕ 15/11/2014 ರಂದು 0230 ಪಿ.ಎಮ ಕ್ಕೆ ತಾನು ತನ್ನ ಮಗನಾದ ಮೌಲಾಲಿ
ಮತ್ತು ತಂಗಿಯ ಮಗನಾದ ಮೈಬೂಬಸಾಬ ಎಲ್ಲರೂ ಸೇರಿ ತನ್ನ ತಮ್ಮನಾದ ಚಾಂದ ತಂದೆ ಇಸ್ಮಾಯಿಲ ಜಮಾದಾರ
ಇತನ ಹೊಲದಲ್ಲಿ ತೊಗರಿ ಬೇಳೆಗೆ ಕ್ರಿಮಿನಾಶಕ ಔಷದಿ ಸಿಂಪಡಿಸುತ್ತಿದ್ದು, ತನ್ನ ತಂಗಿ ಹಾಗೂ ಕವಲಗಾ ಗ್ರಾಮದ
ಪ್ರಭಾಕರ ಎಂಬುವವನಿಗೂ ಹಳೆಯ ದ್ವೇಶವಿದ್ದು ಅದೇ ದ್ವೇಶದಿಂದ ಪ್ರಭಾಕರನು ಹೊಲಕ್ಕೆ ನುಗ್ಗಿ
ತಂಗಿಯ ಮಗನಾದ ಮೌಲಾಲಿ ಇತನಿಗೆ ಏ ರಂಡಿಯ ಮಗನೆ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳ
ಮೇಲೆ ಹೊಡೆದಾಗ ನಾನು ಬಿಡಿಸಲು ಬಂದಿದ್ದಕ್ಕೆ ನನಗೆ ಸೀರೆಯ ಸೆರಗು ಹಿಡಿದು ಜಗ್ಗಾಡಿ ಕೈಯಿಂದ
ಕಪಾಳ ಮೇಲೆ ಹೊಡೆದು ನಿನಗೆ ಜೀವ ಸಹಿತ ಇಡುವದಿಲ್ಲ ಅಂತ ಭಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ನಿಂಗಣ್ಣ ನಾಟಿಕಾರ ಸಾ|| ಹವಳಗಾ ಇವರು ದಿನಾಂಕ 16-11-2014 ರಂದು ಬೆಳಿಗ್ಗೆ 11:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳು ನಾಗಮ್ಮ ಇಬ್ಬರು ನಮ್ಮ ಮನೆಯ ಹತ್ತಿರ ಇದ್ದಾಗ ನಮ್ಮ ಮನೆಯ ಹಿಂದಿನ ಗೋಡೆಯಲ್ಲಿ ಹೆಗ್ಗಣ ಬಂದಿದ್ದು, ಆಗ ನನ್ನ ಮಗಳು ನಾಗಮ್ಮ ಇವಳು ನಮ್ಮ ಮನೆಯ ಹಿಂದೆಯೆ ನಿಂತಿದ್ದ ಮಾಳಪ್ಪ ಮತ್ತು ಅವನ ಅಣ್ಣ ಸಿದ್ದಪ್ಪ ಇವರಿಗೆ ಇಲ್ಲಿ ಕಟ್ಟಿಗೆಗಳನ್ನು ಹಾಕಬೇಡಿ ನಮ್ಮ ಮನೆಯಲ್ಲಿ ಹೆಗ್ಗಣಗಳು ಬರುತ್ತಿವೆ ಅಂತಾ ಹೇಳೀದಕ್ಕೆ ಸದರಿಯವರು ನನ್ನ ಮಗಳಿಗೆ ಏನೆ ರಂಡಿ ನಾವು ಇಲ್ಲಿ ಕಟ್ಟಿಗೆ ಹಾಕುತ್ತೆವೆ ಏನು ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಹೇಳಿದರು, ಆಗ ನಾನು ಸದರಿಯವರಿಗೆ ನನ್ನ ಮಗಳಿಗೆ ಯಾಕ ಬೈತಿರಿ ನಮ್ಮ ಮನೆಯ ಹಿಂದೆ ಕಟ್ಟಿಗೆ ಹಾಕಿ ನಮ್ಮ ಜೋತೆಗೆಯೆ ಜಗಳ ಮಾಡಲು ಬರುತ್ತಿರಾ ಅಂತಾ ಕೇಳುತ್ತಿದ್ದಾಗ ಮಾಳಪ್ಪ ಈತನು ರಂಡಿ ನಿನ್ನ ಸೊಕ್ಕು ಜಾಸ್ತಿ ಆಗಿದೆ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೆನೆ ಅಂತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಏಳೇದಾಡಿ ಕೈಯಿಂದ ನನ್ನ ಬಲ ಮೋಳಕಾಲಿನ ಮೇಲೆ ಹಾಗೂ ಮುಖದ ಮೇಲೆ ಹೊಡೆದಿರುತ್ತಾನೆ, ಹಾಗೂ ಸಿದ್ದಪ್ಪ ಈತನು ಈ ರಂಡಿಗೆ ಇವತ್ತು ಹೊಡೆದು ಖಲಾಸ ಮಾಡು ಅಂತಾ ಹೇಳಿ ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಏಡಗೈ ಮಣಿಕಟ್ಟಿನ ಮೇಲೆ ಹೊಡೆದದು ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಕವೀತಾ ಗಂಡ ಬಸವರಾಜ
ವಗ್ಗೆ ಸಾ:ಬೆನಚಿಂಚೋಳಿ ತಾ:ಹುಮನಾಬಾದ ಜಿ:ಬೀದರ ರವರು ದಿನಾಂಕ:14-11-2014 ರಂದು ಸಾಯಂಕಾಲ
ನಾವು ಜಾವಳ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ ಬೆನ ಚಿಂಚೋಳಿಗೆ ಹೋಗುವ ಸಂಬಂದ ಮೇಲೆ
ಹೇಳಿದ ಎಲ್ಲರೂ ಕ್ರೂಜರ ಜೀಪನಂ- ಕೆ.ಎ-47 ಎಮ-1479 ನೇದ್ದರಲ್ಲಿ ಬರುತ್ತಿದ್ದು. ಜೀಪನ್ನು
ರಾಜೇಶ ಸುಂಬಾಜಿ ಇವನು ಚಲಾಯಿಸುತ್ತಿದ್ದು ರಾಜೇಶನು ತಾನು ನಡೆಸುತ್ತಿದ್ದ ಜೀಪನ್ನು ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದು. ನಾವೇಲ್ಲರೂ ಜೀಪನ್ನು ನಿಧಾನವಾಗಿ ಚಲಾಯಿಸಲು ಅವನಿಗೆ
ಹೇಳಿದರೂ ಹಾಗೇ ತನ್ನ ಜೀಪನ್ನು ಮುಂದು ವರೆಸಿಕೊಂಡು ಬರುತ್ತಿದ್ದು. ನಾವು ಬರುತ್ತಿದ್ದ ಜೀಪ
ಗುಲಬರ್ಗಾ ಹುಮನಾಬಾದ ರಾಷ್ಟ್ರಿಯ ಹೆದ್ದಾರಿಯ ರೋಡ ಕಿಣ್ಣಿ ಸೇತುವೆ ಮೇಲೆ ಬರುತ್ತಿದ್ದಾಗ
ನಿನ್ನೆ ಸಾಯಂಕಾಲ 07-00 ಗಂಟೆಯ ಸೂಮಾರಿಗೆ ರಾಜೇಶನು ತನ್ನ ಜೀಪನ್ನು ಅತಿ ವೇಗ ಮತ್ತು
ಅಲಕ್ಷತನದಿಂದ ನಡೆಸುತ್ತ ಹೋರಟಿದ್ದು. ಅದೆ ವೇಳೆಗೆ ಹುಮನಾಬಾದ ಕಡೆಯಿಂದ ಒಬ್ಬ ಕಾರ ಚಾಲಕನು
ಕೂಡಾ ತನ್ನ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಬ್ರೀಡ್ಜ ದಾಟಿ
ಚಿಡಗುಪ್ಪಾ ಸರಹದ್ದು ಇನ್ನೂ 50 ಮೀಟರ ಅಂತರವಿದ್ದಾಗ ಇಬ್ಬರು ವಾಹನ ಚಾಲಕರು ತಮ್ಮ ವಾಹನಗಳ ಮೇಲೆ
ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಮುಖಾ ಮುಖಿಯಾಗಿ ಡಿಕ್ಕಿ ಹೋಡೆದ ಪರೀಣಾಮ ನಾವು ಕುಳಿತ
ಕ್ರೂಜರ ಜೀಪ ರೋಡಿನ ಎಡಭಾಗಕ್ಕೆ ಪಲ್ಟಿಯಾಗಿ ಬಿದ್ದಿದ್ದು. ನಂತರ ನಾವು ಜೀಪನಿಂದ ಕೆಳಗೆ ಬಂದು
ನೋಡಲು ನನಗೆ ತಲೆಯ ಮೇಲೆ ಗುಪ್ತಗಾಯವಾಗಿದ್ದು. ಅಲ್ಲದೆ ವಾಹನದಲ್ಲಿ ಕುಳಿತ ಇತರರಿಗೂ ರಕ್ತ
ಮತ್ತು ಗುಪ್ತ ಗಾಯಗಳಾಗಿರುತ್ತವೆ. ನಂತರ ಎದುರಿನಿಂದ ಬಂದ ಕಾರ ನೋಡಲು ಅದು ಬಿಳಿಯ ಬಣ್ಣದ ಟಾಟಾ
ವಿಸ್ಟಾ ನಂ.ಕೆಎ-38 ಎಮ-2527 ನೇದ್ದು ಇರುತ್ತದೆ ಅಂತಾ ಸಲ್ಲಸಿದ ದೂರು ಸಾರಾಂಶದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment