ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ
ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ. 02.11.2014 ರಂದು ಸ್ಟೆಷನ ರಸ್ತೆಗಿರುವ ನ್ಯೂ ಜಗದಂಬಾ ಮರಾಠಾ ಖಾನಾವಳಿಯ ಪಕ್ಕದಲ್ಲಿರುವ ಹೆಚ್.ಕ್ಯೂ.ಹೊಟೇಲ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ
ಸುಮಾರು 6-7 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ
ಸಹಾಯದಿಂದ ಅಂದರ ಬಹಾರ ಎಂಬ ನಸೀಬದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿತರಾದ 1) ಪ್ರತಾಪರೆಡ್ಡಿ ತಂದೆ ಶ್ರೀನಿವಾಸರೆಡ್ಡಿ ಮಾಲಿಪಾಟೀಲ ಸಾ|| ಕಡಬೂರ ತಾ|| ಚಿತ್ತಾಪೂರ, 2) ನಿಂಗಾರೆಡ್ಡಿ ತಂದೆ ಬಸವರಾಜಪ್ಪ ಆಲೂರ ಸಾ|| ಆಲೂರ ತಾ|| ಚಿತ್ತಾಪೂರ 3) ಶಿವಶರಣಪ್ಪಾ ತಂದೆ ಬಸವಣತರಾಯ ಗರೂರ ಸಾ|| ನಾಲವಾರ ತಾ|| ಚಿತ್ತಾಪೂರ 4) ವಿರೇಶ ತಂದೆ ಸಿದ್ದಣ್ಣಾ
ನಾಲವಾರ ಸಾ|| ನಾಲವಾರ ತಾ|| ಚಿತ್ತಾಪೂರ 5) ಖಾಸೀಂ ತಂದೆ ಅಬ್ದುಲ ಸುಗೂರ ಸಾ|| ಸುಗೂರ ತಾ|| ಚಿತ್ತಾಪೂರ 6) ಮಲ್ಲನಗೌಡ ತಂದೆ ಸಿದ್ದನಗೌಡ
ನಾಲವಾರ ಸಾ|| ನಾಲವಾರ ತಾ|| ಚಿತ್ತಾಪೂರ 7) ಬನಶಂಕರಯ್ಯಸ್ವಾಮಿ ತಂದೆ ಸೋಮಯ್ಯಸ್ವಾಮಿ ಮಲ್ಲಿನಾಥ ಸಾ|| ಎಲೇರಿ ತಾ|| ಯಾದಗೀರ ಇವರನ್ನು ಹಿಡಿದು ಅವರ ತಾಬೆಯಲ್ಲಿದ್ದ ಒಟ್ಟು 26,420/- ರೂ ನಗದು ಹಣ ಹಾಗೂ 52 ಇಸ್ಪೆಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 02-11-2014
ರಂದು 07-30 ಪಿ.ಎಮ್ ಕ್ಕೆ ಶ್ರೀ ಸಂತೋಷ ತಂದೆ ಜಗಮೋಹನ ತಿವಾರಿ, ಸಾಃ ಮ. ನಂ. 9-214 ಕಟಗರಪೂರ ಶಹಾಬಜಾರ ಕಲಬುರ್ಗಿ, ಮತ್ತು ಗೆಳೆಯರಾದ ಹನುಮಾನಸಿಂಗ ತಂದೆ ಪ್ರದೀಪಸಿಂಗ
ಠಾಕೂರ ಇಬ್ಬರು ಮದನ ಟಾಕೀಜ ದಿಂದ ಚೌಕ ಸರ್ಕಲ ಕಡೆಗೆ ನಡೆದುಕೊಂಡು ಹೋಗಲು ರೋಡ ದಾಟುತ್ತಿದ್ದಾಗ
ಮಹೇಶ ತಂದೆ ಚಂದ್ರಪ್ಪಾ ಪೂಜಾರಿ ಸಾಃ ದೇಶಮುಖಗಲ್ಲಿ ಈತನು ಮದ್ಯಪಾನ ಸೇವನೆ ಮಾಡಿ ತನ್ನ ಮೋಟಾರ
ಸೈಕಲ ಕೆ.ಎ 32 ಇ.ಬಿ 0319 ನೇದ್ದನ್ನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ್ದ ಫಿರ್ಯಾದಿ ಎಡಗಾಲಿಗೆ
ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಎಡಗಾಲು ಮೊಳಕಾಲಿಗೆ ಭಾರಿ ಗುಪ್ತ
ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 02-11-2014 ರಂದು ಶ್ರೀ
ಭಿಮರಾಯ ತಂದೆ ಸಿದ್ರಾಮಪ್ಪಾ ಕನ್ನೂರ ಸಾ:
ಕರಣೇಶ್ವರ ನಗರ ಕಲಬುರ್ಗಿ ರವರು ಸರ್ವಜ್ಞ ಕಾಲೇಜ ಎದುರಿನಲ್ಲಿರುವ ನನ್ನ ಹೊಟೇಲ ಬಂದ
ಮಾಡಿ ನಾನು ಮನೆಗೆ ಹೋಗುವ ಸಲುವಾಗಿ 3 ಚಕ್ರ ಯಳ್ಳ ಸೈಕಲ ಚಲಾಯಿಸಿಕೊಂಡು ಹೋಗುವಾಗ ರಿಂಗ ರೋಡ
ಕರಣೇಶ್ವರ ನಗರ ಕ್ರಾಸ ಹತ್ತೀರ ಹಿಂದಿನಿಂದ ಮೊ/ಸೈ ನಂ ಕೆಎ-32-ಇಬಿ-4148 ರ ಸವಾರ ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೊ/ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ
ನನ್ನ ಎಡ ಟೊಂಕಕ್ಕೆ ಗುಪ್ತಪೆಟ್ಟು ಬಲ ಎದೆಗೆ ಗುಪ್ತ ಪೆಟ್ಟು ಹಾಗೂ ಹೊಟ್ಟೆಗೆ ಗುಪ್ತ ಪೆಟ್ಟು
ಗೊಳಿಸಿ ತನ್ನ ಮೊ/ಸೈ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜೂನ ತಂದೆ
ವೀರಣ್ಣಾ ದುತ್ತರಗಾಂವ ಸಾ: ಹನುಮಾನ ಗುಡಿ
ಹತ್ತೀರ ಬಿದ್ದಾಪೂರ ಕಾಲೋನಿ ಕಲಬುರ್ಗಿ ರವರು ದಿನಾಂಕ
02-11-2014 ರಂದು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಕಣ್ಣಿ ಮಾರ್ಕೆಟನಲ್ಲಿ ತರಕಾರಿ ಖರೀದಿ
ಮಾಡಿಕೊಂಡು ಮನಗೆ ಹೋಗುವ ಸಲುವಾಗಿ ಕಣ್ಣಿ ಮಾರ್ಕೆಟ ಕ್ರಾಸ್ ಹತ್ತಿರ ಅಟೋ ನಿಲ್ಲುವ ಸ್ಥಳಕ್ಕೆ
ನಡೆದುಕೊಂಡು ರೋಡ ಎಡಗಡೆಯಿಂದ ಹೋಗುತ್ತಿರುವಾಗ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-33 ಕ್ಯೂ-3003
ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ
ಮಾಡಿ ಎಡಗಾಲು ಮೊಳಕಾಲ ಕೆಳಗೆ ಭಾರಿ ಗುಪ್ತಪೆಟ್ಟು ಮತ್ತು ರಕ್ತಗಾಯ, ಬಲಗಡೆ ಎದೆಗೆ ಗುಪ್ತಪೆಟ್ಟು, ಬಲ ಮೆಲಕಿಗೆ ಹಾಗು ಬಲ ಕಿವಿಗೆ
ಗುಪ್ತಪೆಟ್ಟುಗೊಳಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಬಸಲಿಂಗಪ್ಪ ತಂದೆ ಶಿವರಾಜ ದುತ್ತುರಗಾಂವ ವಿಳಾಸಃ
ಮನೆ ನಂ; 11-940 ಜಿಲಾನಾಬಾದ ಅಶೋಕ ನಗರ ಕಲಬುರ್ಗಿ ಇವರು ದಿನಾಂಕ 27/10/2014 ರಂದು 9;30 ಎಎಮ್ ಕ್ಕೆ ತನ್ನ ದ್ವಿಚಕ್ರ ವಾಹನ ಹಿರೋ ಹೊಂಡಾ
ಸ್ಪ್ಲಂಡರ್ ಪ್ಲಸ್ ನಂ; ಕೆಎ 32 ಡಬ್ಲೂ 4122 ನೇದ್ದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬರುವ ಮಾನ್ಯ 1 ನೇ ಹೆಚ್ಚುವರಿ ಜೆ ಎಮ್ ಎಫ್ ಸಿ ನ್ಯಾಯಾಲಯದ ಹಿಂದುಗಡೆ ನಿಲುಗಡೆ
ಮಾಡಿ ನ್ಯಾಯಾಲಯದಲ್ಲಿ ಕೆಲಸ ಮುಗಿಸಿಕೊಂಡು ಮರಳಿ 6;00 ಪಿಎಮ್‌ಕ್ಕೆ ಬಂದು ನೋಡಲಾಗಿ ನನ್ನ ವಾಹನ ಇರಲಿಲ್ಲಾ ನನ್ನ ವಾಹನವನ್ನು ಇಲ್ಲಿಯ ವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಆದ್ದರಿಂದ ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ದ್ವಿಚಕ್ರ ವಾಹನ
ಹಿರೋ ಹೊಂಡಾ ಸ್ಪ್ಲಂಡರ್ ಪ್ಲಸ್ ನಂ; ಕೆಎ 32 ಡಬ್ಲೂ 4122 ಇಂಜಿನ್ ನಂ.HA10EAAHA82055, ಚೆಸ್ಸಿ ನಂ. MBLHA10EJAHA23070 ಅ||ಕಿ|| 35,000/- ರೂ ನೇಧ್ದನ್ನು ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment