ಅಪಘಾತ
ಪ್ರಕರಣಗಳು:
ಮಳಖೇಡ
ಪೊಲೀಸ ಠಾಣೆ :
ದಿನಾಂಕ:
11-11-2014 ರಂದು ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯ ಕಾಚೂರಿನ ರೋಡಿನ ಪಕ್ಕದಲ್ಲಿರುವ ಹರಳಯ್ಯ
ಗುಡಿ ಹತ್ತಿರದ ರೋಡಿನ ಮೇಲೆ ಹೋಗುತ್ತಿದ್ದ ಟ್ಯಾಕ್ಟರ ನಂಬರ ಕೆಎ/32-ಟಿಎ-7028 ಟ್ರ್ಯಾಲಿ ನಂಬರ
ಕೆಎ/32-ಟಿಎ-7029 ನೇದ್ದರ ಚಾಲಕನು ತನ್ನ ಟ್ಯಾಕ್ಟರನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ
ಕಾಗಿಣಾ ಹಳ್ಳಿದಿಂದ ರೋಡಿನ ಮೇಲೆ ಹತ್ತುವ ಕಚ್ಚಾದಾರಿಯಲ್ಲಿ ಓಡಿಸುತ್ತಿರುವಾಗ ರಸ್ತೆಯ ಮೇಲೆ
ಇದ್ದ ಸದರಿ ಟ್ಯಾಕ್ಟರ್‌ನ ಇಂಜಿನ್ ಒಮ್ಮೇಲೆ ಹಾರಿ ಟ್ರ್ಯಾಲಿಗೆ ಅಡ್ಡಾಗಿ ನಿಂತು ಟ್ಯಾಕ್ಟರದಲ್ಲಿ
ನನ್ನ ತಮ್ಮ ಕಾಶಪ್ಪ ಸಿಕ್ಕಿ ಬಿದ್ದು ತಲೆಗೆ ಭಾರಿ ರಕ್ತಗಾಯ ಮತ್ತು ಏದೆಗೆ ಒಳ ಪೆಟ್ಟು,
ಎಡಗಲ್ಲಕ್ಕೆ ಸಹ ಪೇಟ್ಟಾಗಿ ಕೀವಿಯಿಂದ, ಮೂಗಿನಿಂದ, ಬಾಯಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ
ಪಟ್ಟಿದ್ದು, ಟ್ಯಾಕ್ಟರ್ ನಂ ಕೆಎ/32-ಟಿಎ-7028 ಟ್ರ್ಯಾಲಿ ನಂಬರ ಕೆಎ/32-ಟಿಎ-7029 ನೇದ್ದರ
ಚಾಲಕನು ಹಳ್ಳದಿಂದ ರೋಡಿನ ಮೇಲೆ ಹೋಗುವ ಏರು ರೋಡಿನಲ್ಲಿ ತನ್ನ ವಾಹನದ ವೇಗದ ಮೇಲೆ ನಿಯಂತ್ರಣ
ಇಡದೆ, ರಸ್ತೆ ಅಪಘಾತ ಪಡಿಸಿ ನನ್ನ ತಮ್ಮ ಕಾಶಪ್ಪನ ಸಾವಿಗೆ ಕಾರಣನಾದ ಚಾಲಕನು ತನ್ನ ಟ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು
ಓಡಿ ಹೋಗಿರುತ್ತಾನೆ. ಸದರಿಯವನ ಹೆಸರು ವಿಳಾಸ ಗೋತ್ತಿರುವದಿಲ್ಲಾ. ಸದರಿ ಟ್ಯಾಕ್ಟರ್ ಚಾಲಕನ
ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ
ಸಂಚಾರಿ ಪೊಲೀಸ ಠಾಣೆ:
ದಿನಾಂಕ 11-11-2014 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಶ್ರೀಮತಿ ಅಸ್ಮೀತಾ ಗಂಡ ಸಂಜೀವಕುಮಾರ ಸಾ: ಬಾಪು
ನಗರ ಕಲಬುರ್ಗಿ ಇವರು ತಮ್ಮ ಗಂಡನಾದ ಸಂಜೀವಕುಮಾರ ನೊಂದಿಗೆ ಮೋ/ಸೈಕಲ ನಂಬರ ಕೆಎ-32 ಎಕ್ಸ-8014 ನೇದ್ದರ ಮೇಲೆ ಹೋಗುತ್ತಿರುವಾಗ ಸಂಜೀವಕುಮಾರನು ಮೋ.ಸೈಕಲನ್ನು
ಅತೀವೇಗ ಮತ್ತು ಅಲಕ್ಷತನದಿಂದ ಒಮ್ಮೆಲೆ ಬ್ರೇಕ ಹಾಕಿದಾಗ ಮೋ/ಸೈಕಲ ಸಮೇತ ಇಬ್ಬರೊ ಕೆಳಗಡೆ
ಬಿದ್ದು ಗಾಯಹೊಂದಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
No comments:
Post a Comment