ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಮೋಹನ ತಂದೆ ತೇಜು ಚವ್ಹಾನ
ಸಾ : ಮಡಕಿ ತಾಂಡಾ ತಾ : ಆಳಂದ ರವರು ದಿನಾಂಕ 01-010-2014 ರಂದು ಗುಲಬರ್ಗಾದಲ್ಲಿ ಸೈಬಣ್ಣಾ
ಪೂಜಾರಿ ಈತನ ಪಾಸಪೂರ್ಟ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿರುವಾಗ ಮಾಹಾಗಾಂವ ಕ್ರಸ
ದಿಂದ ಮಾಹಾಗಾಂವ ಗ್ರಾಮದ ಮಧ್ಯದಲ್ಲಿ ರಾಜಕುಮಾರ ಈತನು ಮೋಟಾರ ಸೈಕಲ್ ನಂ ಕೆಎ.32 ಈಡಿ. 0977 ನೇದ್ದರ ಮೇಲೆ ಗಾಯಾಳು ಸೈಬಣ್ಣಾ ಈತನಿಗೆ
ಕೂಡಿಸಿಕೊಂಡು ಅತೀ ವೇಗ ಹಾಗು ಅಲಕ್ಷತನದದಿಂದ ಚಲಾಯಿಸಿ ತನ್ನ ನಿಯಂತ್ರಣ ಕಳೆದುಕೊಂಡು ಅಪಘಾತಪಡಿ
ಸಿದ್ದರಿಂದ ಇಬ್ಬರಿಗೆ ಗಾಯಗಲಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಶರಣಯ್ಯಾ ಸ್ವಾಮಿ ಸಾ :
ಕೆ.ಎಚ್.ಬಿ. ಕಾಲೂನಿ ಹೈಕೊರ್ಟ ಎದುರುಗಡೆ ಗುಲಬರ್ಗಾ ರವರು ದಿನಾಂಕ: 03/10/2014 ರಂದು ಬೆಳಿಗ್ಗೆ 10=30 ಗಂಟೆಯ ಸುಮಾರಿಗೆ ಹಳೆ ಜೇವರ್ಗಿ ರೋಡಿನ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ ಅಂಬಾಜಿ ಸ್ಟೀಲ್
ಅಂಗಡಿ ಎದುರಿನ ರೋಡಿನ ಪಕ್ಕದಲ್ಲಿ ತನ್ನ ಟಂಟಂ ವಾಹನಗಳ
ನಂ: ಕೆಎ 32 ಸಿ-1237 ಮತ್ತು ಕೆಎ 32 ಸಿ 1238 ನೆದ್ದವುಗಳು ಪ್ರತಿ ದಿನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿದ್ದಾಗ
ರೈಲ್ಚೆ ಅಂಡರ ಬ್ರೀಜ್ ಕಡೆಯಿಂದ ರಾಮ ಮಂದೀರ ಕಡೆಗೆ ಹೋಗುವ ಕುರಿತು ಕಾರ ನಂ: ಕೆಎ 32 ಎನ್ 4138 ರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಟಂಟಂ
ವಾಹನಗಳಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಟಂಟಂ ವಾಹನಗಳಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಸದರ
ವಾಹನಗಳಿಗೆ ಡ್ಯಾಮೇಜ ಮಾಡಿ ಕಾರ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಅಫಜಪೂರ ಠಾಣೆ : ಶ್ರೀಮತಿ ಗುರುಬಾಯಿ ಗಂಡ ಗುರುದತ್ತ ಕಾಖಂಡಕಿ ಸಾ : ಅಫಜಲಪೂರ ರವರ ಅಣ್ಣ ವಿಠ್ಠಲ ತಂದೆ ನರಸಪ್ಪ ಮನಗೂಳಿ ರವರು ದಿನಾಂಕ 02-10-2014 ರಂದು ಬೆಳಿಗ್ಗೆ ಪುನಾದಿಂದ ನಮ್ಮ ಮನೆಗೆ ಬಂದಿದ್ದು ನನ್ನ ಗಂಡ ಮತ್ತು ನಮ್ಮ ಅಣ್ಣ ಇಬ್ಬರು ಕೂಡಿ
12;00 ಪಿ.ಎಂ ಸುಮಾರಿಗೆ ಮನೆಯಿಂದ ಮಾದಾಬಾಳ ತಾಂಡಾ ಹತ್ತಿರ ಇರುವ ನಮ್ಮ ಹೊಲದ ನೋಡಲು ಹೋಗಿದ್ದು ಇರುತ್ತದೆ, ನಂತರ 1;00 ಪಿ.ಎಂ ಕ್ಕೆ ನಮ್ಮ ಅಣ್ಣ ನಮ್ಮ ಮನೆಗೆ ಫೋನ ಮಾಡಿ ಹೇಳಿದ್ದೇನೆಂದರೆ, 12;30 ಪಿ.ಎಂ ಸುಮಾರಿಗೆ ನಾನು ಬೇಡಾ ಅಂತಾ ಅಂದರು ಮಾವ ಗುರುದತ್ತ ರವರು ಕೇಳದೆ ತಮ್ಮ ಹೊಲದ ಭಾವಿಯಲ್ಲಿ ಈಜಾಡಲು ಹೋಗಿ ಸ್ವಲ್ಪ ಹೊತ್ತು ಈಜಾಡಿ ನಂತರ ಒಳಗೆ ಮುಳಗಿದವರು ಮರಳಿ ನಿರಿನಿಂದ ಮೇಲೆ ಏಳಲಿಲ್ಲಾ ಅಂತಾ ಗಾಬರಿಗೊಂಡು ಹೇಳಿದನು. ನಂತರ ನಾನು ನಮ್ಮ ಭಾವ ಅಶೋಕ, ನಮ್ಮ ಮೈದುನ ಶಿವಾನಂದ ಹಾಗು ಇತರರು ಕೂಡಿ ನಮ್ಮ ಹೊಲದ ಭಾವಿ ಹತ್ತಿರ ಹೋಗಿ ನೋಡಿದೆವು, ನಂತರ ಅಗ್ನಿ ಶಾಮಕ ಕರೆಯಸಿ ಭಾವಿಯಲ್ಲಿದ್ದ ನನ್ನ ಗಂಡನ ಶವವು ಹೊರಗೆ ತೆಗೆದು ಹಾಕಿದರು. ನನ್ನ ಗಂಡ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ಎರಡು ದಿನದಿಂದ ಸರಿಯಾಗಿ ಊಟ ಸಹ ಮಾಡದೆ ಇಂದು ನಮ್ಮ ಹೊಲದ ಭಾವಿಯಲ್ಲಿ ಈಜಲಾಡುತ್ತಿರುವಾಗ ನಿತ್ರಾಣಕ್ಕೆ ಬಂದು ಭಾವಿಯ ನೀರಲ್ಲಿ ಮುಳಗಿ ಉಸಿರುಗಟ್ಟು ಮೃತ ಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment