ಅಕ್ರಮವಾಗಿ
ಅಡುಗೆ ಅನೀಲ ಸಿಲೆಂಡರಗಳನ್ನು ಕಾಳಸಂತೆಯಲ್ಲಿ ರಿಪೀಲಿಂಗ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ :
01/10/14 ರಂದು ರಾಘವೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ
ಎಮ್ ಎಸ್ ಕೆ ಮಿಲ್ ಬಡಾವಣೆಯ ಖದೀರ ಚೌಕ್ ಹತ್ತಿರ ಒಂದು ತಗಡಿನ ಶೇಡ್ಡನಲ್ಲಿ ಗೃಹ ಬಳಕೆಯ ಅನೀಲ
ತುಂಬಿದ ಸಿಲೇಂಡರ್ ಗಳನ್ನು ಯಾವುದೆ ಪರವಾನಿಗೆ ಇಲ್ಲದೆ ಅನಾಧಿಕೃತವಾಗಿ ಸಂಗ್ರಹಸಿ ಇಟ್ಟಿಕೊಂಡು
ಅವುಗಳಲ್ಲಿದ್ದ ಅನೀಲವನ್ನು ಗ್ರಾಹಕರಿಗೆ ವಂಚಸಿ ಅಕ್ರಮವಾಗಿ ಮೋಸದಿಂದ ಅನೀಲವನ್ನು ಎಲೇಕ್ಟಾನಿಕ
ಮಶೀನಗಳ ಸಹಾಯದಿಂದ ತೆಗೆದು ಆಟೋರಿಕ್ಷಾಗಳಿಗೆ ಅಳವಡಿಸಿದ ಅನೀಲ ಸಿಲೇಂಡರಗಳಿಗೆ ತುಂಬಿ ಚಿಲ್ಲರೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ
ಬಾತ್ಮೀ ಮೇರೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ
ಶ್ರೀ ಮಹಾನಂದ ನಂದಗಾವಿ ಇವರ ನೇತ್ರತ್ವದಲ್ಲಿ ಪಿ.ಎಸ್.ಐ. ರಾಘವೇಂದ್ರನಗರ, ಪಿ.ಎಸ್.ಐ.
ಬ್ರಹ್ಮಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಮಹ್ಮದ ದಸ್ತಗಿರ ತಂದೆ ಮಹ್ಮದಸುಲೇಮಾನ ಬೊಲ್ಚರಿ ಖದೀರ ಚೌಕ್ ಜಿಲಾನಾಬಾದ ಎಮ ಎಸ್ ಕೆ ಮಿಲ ಗುಲಬರ್ಗಾ
ಅಂತಾ ತಿಳಿಸಿದ್ದು ಆತನ ಅಂಗ ಶೋಧನೆ ಮಾಡಲು ಅವನ ಹತ್ತಿರ 6150/- ರೂ ದೊರೆತವು ಸದರಿ ಶಡ್ಡಿನಲ್ಲಿ ಪಿ.ಎಸ್.ಐ. ಸಾಹೇಬರು ನಮ್ಮ
ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲು 1) ಎರಡು
ಹೆಚ್.ಪಿ ಕಂಪನಿಯ ಅನೀಲ ತುಂಬಿದ ಗ್ಯಾಸ್
ಸಲೇಂಡರ್ ಗಳು ಅವುಗಳ ಅಂದಾಜ ಕಿಮ್ಮತ್ತು 3000/- ರೂ. 2) ಒಂದು ಹೆಚ್.ಪಿ
ಕಂಪನಿಯ ಖಾಲಿ ಗ್ಯಾಸ್ ಸಿಲೇಂಡರ್ ಗಳು ಅ.ಕಿ 1000/- ರೂ. 3) 1 ಹೆಚ್.ಪಿ ಸಾಮಥ್ಯ ಉಳ್ಲಎಲೇಕ್ಟಿಕಲ್
ಮೋಟಾರ ಅದಕ್ಕೆ ಅನಲ ತೆಗೆಯಲು ಪೈಪಗಳು
ಅಳವಡಿಸಿದ್ದು ಅ.ಕಿ 3000/- ರೂ. ಹೀಗೆ ಇದ್ದು
ಸದರಿ ವಸ್ತುಗಳನ್ನು ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.
ಕಳವು
ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಜಗನ್ನಾಥ ತಂದೆ
ಬುಗ್ಗಯ್ಯ ಸಾ:ಮದರಾ ನಗರಸನಪಲ್ಲಿ ತಾ:ಸೇಡಂ.
ಇವರು ದಿನಾಂಕ :29-09-2014 ರಂದು ರಾತ್ರಿ 11-15 ಗಂಟೆಗೆ ನಮ್ಮ ಬಾರನಲ್ಲಿ ಗಿರಾಕಿ
ಮಾಡಿ ಖರ್ಚುವೆಚ್ಚಗಳನ್ನು ತೆಗೆದು ಉಳಿದ 2, 84,494/- ರೂಪಾಯಿಗಳು 1000/- 500/- 100/- ಹಾಗೂ
10/- ರೂಪಾಯಿ ಮುಖಬೆಲವುಳ್ಳ ಬಂಡಲಗಳನ್ನು ಕೌಂಟರ್ ಟೇಬಲ್ ನ ಡ್ರಾದಲ್ಲಿ ಇಟ್ಟು, ಬಾಗಿಲು
ಮುಚ್ಚಿ ಕೀಲಿ ಹಾಕಿ ಶೆಟರ್ ಹಾಕಿ ಅದಕ್ಕೂ ಕೀಲಿ ಹಾಕಿ ಎಂದಿನಂತೆ ರೆಸ್ಟೋರೆಂಟದಲ್ಲಿ ಕೆಲಸ
ಮಾಡುವ ರಾಯಪ್ಪ, ಶ್ರೀನಿವಾಸ, ಗೌತಮ ಉಳಿದುಕೊಂಡಿದ್ದು ಅವರ ಕೈಗೆ ಕೀಲಿ ಕೊಟ್ಟು, ಮನಗೆ ಹೋಗಿದ್ದು
ದಿನಾಂಕ:30-09-2014 ರಂದು ಬೆಳಗ್ಗೆ 06-30 ಎ.ಎಮ್.ಕ್ಕೆ ನನಗೆ ಪೋನ ಮಾಡಿ ನಮ್ಮ ಢಾಭಾದ ಶೆಟರ್
ಮೇಲಕ್ಕೆ ಎತ್ತಿರುತ್ತದೆ ಅಂತ ಸುದ್ದಿ ತಿಳಿಸಿದ್ದರಿಂದ ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಲು
ನಮ್ಮ ಅಂಗಡಿ ಶೆಟರ್ ಮೇಲಕ್ಕೆ ಎತ್ತಿ ಟೇಬಲ್ ಕೌಂಟರ ಡ್ರಾದಲ್ಲಿಟ್ಟದ್ದ ಒಟ್ಟು ನಗದು ಹಣ 2,
84,494/- ರೂಪಾಯಿಗಳನ್ನು ಯಾರೋ ಕಳ್ಳಲು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ
ಠಾಣೆ : ಶ್ರೀ ಮೆಹಬೂಬಸಾಬ ತಂದೆ ಮಶಾಕಸಾಬ್ ಒಂಟಿ ಸಾ: ಭೀಮಳ್ಳಿ ತಾ:ಜಿ:
ಗುಲಬರ್ಗಾ ರವರು ದಿನಾಂಕ: 30/09/2014 ರಂದು ಬೆಳಿಗ್ಗೆ 11-00
ಗಂಟೆಯಿಂದ ಸಾಯಂಕಾಲ 6-00 ಗಂಟೆ ಮಧ್ಯದ ಅವಧಿಯಲ್ಲಿ ನಾನು ಮತ್ತು ನನ್ನ ಕುಟುಂಬದವರು ಹೋಲಕ್ಕೆ
ಹೋದಾಗ ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲಕೀಲಿ ಮುರಿದು
ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 10 ಗ್ರಾಂದ ಮಾಂಗಲ್ಯದ ಸರದ ಪದಕ ಅ.ಕಿ=24000/- ಹಾಗೂ
39000/- ರೂ ನಗದು ಹಣ ಹೀಗೆ ಒಟ್ಟು 63000/- ರೂ ಕಿಮ್ಮತ್ತಿನದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀಮತಿ
ರಾಧಾಬಾಯಿ ಗಂಡ ಶಿವರಾಮಸಿಂಗ ಠಾಕುರ ಸಾ: ನರೋಣಾ ಇವರು ದಿನಾಂಕ 30/09/2014 ರಂದು ಸಂಜೆ 6
ಘಂಟೆಯ ಸುಮಾರಿಗೆ ನಗರದ ಸಂತ್ರಾಸ ವಾಡಿಯಲ್ಲಿ
ಮೇಡಿಕೆರ ಆಸ್ಪತ್ರೆಯ ಎದುರು ರೋಡಿನ ಮೇಲೆ ಶಿವರಾಮಸಿಂಗ ತಂದೆ ಲಕ್ಷ್ಮಣಸಿಂಗ ಇತನು ನಡೆದುಕೊಂಡು
ಹೋಗುತ್ತಿದ್ದಾಗ ಮೋಟರ ಸೈಕಲ ನಂ KA 32 EC 4706 ನೇದ್ದರ ಚಾಲಕ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡೆಸಿ ಅಪಘಾತಮಾಡಿ ತನ್ನ ಮೋಟರ
ಸೈಕಲ ಸಮೇತ ಓಡಿಹೋಗಿದ್ದು ಅಪಘಾತದಲ್ಲಿ ಶಿವರಾಮಸಿಂಗ ಈತನಿಗೆ ತಲೆಗೆ ಹಿಂದೆ ಭಾರಿ ಗಾಯಗಳಾಗಿರುತ್ತವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment