ಕೊಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಖುರುಬಾನ್ ಹುಸೇನ
ತಂದೆ ಫರದ್ದಿನ್ ಸಾಹೇಬ ಪಾಪಾವಾಲೆ ಸಾ: ಅಂಬೇವಾಡ
ತಾ: ಆಳಂದ ರವರ ಅಣ್ಣನಾದ ಶೇಖ
ಹುಸೇನ ತಂದೆ ಫ್ರದಿನ್ ಸಾಹೇಬ ಪಾಪವಾಲೇ ಉ: ಪುನಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಸಾ: ಅಂಬೇವಾಡ
ತಾ: ಆಳಂದ ಇವರ ಮನೆಯಲ್ಲಿ ದಿನಾಂಕ 06-09-2014 ರಂದು ಮುಂಜಾನೆ 09-;30 ಗಂಟೆ ಸುಮಾರಿಗೆ ಚೀರಾಡುವ ಸಪ್ಪಳ ಕೇಳಿ
ಅಣ್ಣನ ಮನೆಯಲ್ಲಿ ನಾನು ಮಶಾಕ ಪಟೇಲ ವಜೀರ ಪಟೇಲ ಸಂಗೋಳಗಿ ಮತ್ತು ಮೈಹಿಬೂ ಅಲಿ ತಂದೆ ಇರ್ಫಾನ
ಅಲಿ ಇನಾಮದಾರ ಮತ್ತು ಹರಜತ ಪಟೇಲ ತಂದೆ ಫೀರಷಾ ಪಟೇಲ ಹಡಲಗಿ, ಚಿದಾನಂದ ಲಂಪಾಟೆ ನಾವೇಲ್ಲರೂ
ಕೂಡಿಕೊಂಡು ಬಾಗಿಲು ಬಡೆದಿದ್ದು ಆಗ ಒಳಗಿನವರು ಬಾಗಿಲು ತೆರಲಿಲ್ಲಾ ಆಗ ನಾವು ಕಿಡಕಿಯಿಂದ
ನೋಡಿದ್ದು ನನ್ನ ಅಣ್ಣನ ಮಕ್ಕಳು ಮತ್ತು ಹೆಂಡತಿ ಕೂಡಿಕೊಂಡು ನೀನು ನಮಗೆ ಹೇಚ್ಚಿನ ಹಣ
ಕೊಡುವುದಿಲ್ಲ ಪುನಾದಲ್ಲಿದ್ದ ಮಜಾ ಮಾಡುತ್ತೀ ನೀನನಗೆ ಇವತ್ತು ಮುಗಿಸಿಯೇ ಬಿಡುತ್ತೇವೆ ಎಂದು
ನನ್ನ ಅಣ್ಣ ದೊಡ್ಡ ಮಗನಾದ ಅಸ್ಲಾಂ ಕೈಯಲ್ಲಿ ಬಡಿಗೆಯಿದ್ದು ಮತ್ತು ಎರಡನೇ ಮಗನಾದ ಬಸೀರ ನವಾಜ
ಕೈಯಲ್ಲಿ ಬಡಿಗೆಯಿದ್ದು ಅವರು ಅದೇ ಬಡಿಗೆಯಿಂದ ನಮ್ಮ ಅಣ್ಣನ ತಲೆಗೆ ಹೊಡೆದು ಭಾರಿ ರಕ್ತಗಾಯ
ಮಾಡಿದರು. ಆಗ ನಮ್ಮ ಅಣ್ಣನ ಮಗಳಾದ ಮರಸತ ಬೇಗಂ ಇವಳು ನನ್ನ ಅಣ್ಣ ಎರಡು ಕೈಗಳನ್ನು ಒತ್ತಿ
ಹಿಡಿದಿದ್ದು ಆಗ ನನ್ನ ಅಣ್ಣ ಹೆಂಡತಿ ಖುರೇಷಾ ಇವಳು ಕೈಯಲ್ಲಿ ಕಲ್ಲು ಇದ್ದು ಅದರಿಂದ ನನ್ನ ಅಣ್ಣ
ತಲೆಯ ಹಿಂಬಾಗದಲ್ಲಿ ಜೋರಾಗಿ ಹೊಡೆದು ಭಾರಿ ರಕ್ತಾಗಾಯ ಪಡಿಸಿದಳು ಆಗ ನಾವು ಎಷ್ಟು ಚೀರಿದರು
ಬಾಗಿಲು ತೆರೆಯದೇ ಇರುವುದರಿಂದ ನಾನು ಮತ್ತು ಮೈಹಿಬೂಬ ಅಲಿ, ಮಶಾಖ ಪಟೇಲ ಮೂರು ಜನರು ಕೂಡಿ ಮನೆಯ
ಮೇಲೆ ಏರಿ ಪತ್ರಾವನ್ನು ತೆಗೆದು ಒಳಗೆ ಇಳಿದು ನಮ್ಮ ಅಣ್ಣನಿಗೆ ಭಾರಿ ರಕ್ತಾಗಾಯಗಳಾದಿದ್ದು ಅವನು
ಬೇಹೋಷ ಆಗಿದ್ದನು ಕೂಡಲೇ ಒಂದು ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ಆಳಂದ ಸರಕಾರಿ ಆಸ್ಪತ್ರೆಗೆ
ತೆಗೆದುಕೊಂಡು ಬರುತ್ತಿದ್ದಾಗ ಆಸ್ಪತ್ರೆಯ ಹತ್ತೀರದಲ್ಲಿ ನಮ್ಮ ಅಣ್ಣನು ಮೃತ ಪಟ್ಟಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರೇವನಸಿದ್ದಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ ಅಫಜಲಪೂರ ರವರು ಕಾರ್ಯನಿರ್ವಹಿಸುವ ವ್ಯಾಪ್ತಿಗೆ ಬರುವ ಗೌರ (ಬಿ) ಗ್ರಾಮ ಪಂಚಾಯತದಲ್ಲಿ ಅಭಿವೃದ್ದಿ ಅಧಿಕಾರಿಯಾದ ಪ್ರಮೋದ ಮೋಗರೆ ಇವರು ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. 2013-14 ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಬಾಕಿ ಉಳಿದ ಕಾಮಗಾರಿಗಳ ಅನುಷ್ಠಾನದಂತೆ ಈಗಾಗಲೆ ಗೌರ (ಬಿ) ಗ್ರಾಮ ಪಂಚಾಯತಿಯಲ್ಲಿ ಎಮ್.ಐ.ಎಸ್ ಮಾಡಿ ಆನಲೈನ ಮೂಲಕ ಹಣ ಡ್ರಾ ಮಾಡಿದ್ದು ಕಂಡು ಬಂದಿರುತ್ತದೆ. ಸದರಿ ಯೋಜನೆ ಅಡಿಯಲ್ಲಿ ದಿನಾಂಕ 01-04-2014 ರಿಂದ ಇಲ್ಲಿಯವರೆಗೆ ಎಮ್.ಐ.ಎಸ್ ನಲ್ಲಿ ದಾಖಲಿಸಿ ಎಫ್.ಟಿ.ಓ ಮಾಡಿದ ಮಾಹಿತಿಯನ್ನು ಹಾಗು ಸಂಬಂಧ ಪಟ್ಟ ಎಲ್ಲಾ ದಾಖಲಾತಿಗಳನ್ನು ದಿನಾಂಕ 04-09-2014 ರಂದು ನನ್ನ ಮುಂದೆ ಹಾಜರ ಪಡಿಸುವಂತೆ ಪತ್ರದ ಮೂಲಕ ತಿಳಿಸಿದ್ದು ಇರುತ್ತದೆ. ಆದರೆ ಸದರಿ ಅಭಿವೃದ್ದಿ ಅಧಿಖಾರಿಯಾದ ಪ್ರಮೋದ ಮೋಗರೆ ಇವರು ನನ್ನ ಮುಂದೆ ಸಂಬಂಧ ಪಟ್ಟ ಯಾವುದೆ ದಾಖಲಾತಿಗಳು ಹಾಜರ ಪಡಿಸಿರುವುದಿಲ್ಲ ಮತ್ತು ಅವರೂ ಸಹ ಬಂದಿರುವುದಿಲ್ಲ. ಸದರಿ ಪ್ರಮೋದ ಮೋಗರೆ ರವರಿಗೆ ಈ ಮೊದಲು ಮೇಲಾಧಿಖಾರಿಯವರು ಸದರಿ ದಾಖಲಾತಿಗಳು ಹಾಜರ ಪಡಿಸುವಂತೆ ನೋಟೀಸ ಜಾರಿ ಮಾಡಿದ್ದರು ಸಹ ದಾಖಲಾತಿಗಳು ಹಾಜರ ಪಡಿಸದೆ ಸರಕಾರಕ್ಕೆ ಮತ್ತು ಇಲಾಖೆಗೆ ಮೋಸ ಮಾಡುವ ಉದ್ದೇಶದಿಂದ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ತಲೆ ಮರೆಸಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
:
ಅಫಜಲಪೂರ ಠಾಣೆ : ಶ್ರೀಮತಿ ಸುಮಿತ್ರಾ ಗಂಡ ಅಶೋಕ ಪೂಜಾರಿ ಸಾ|| ಚಿಂಚೋಳಿ ಗ್ರಾಮ ಇವರು ದಿನಾಂಕ 04-09-2014 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ನಮ್ಮ ಮನೆಯ ಮುಂದೆ ಇದ್ದಾಗ, ನಮ್ಮ ಗಂಡನ ಏರಡನೆ ಅಣ್ಣ ತಮ್ಮಕಿಯ 1) ಬಸಪ್ಪ ತಂದೆ ಜಟ್ಟೆಪ್ಪ ಪೂಜಾರಿ (ವಾಳಿ) 2) ಮಲ್ಲಪ್ಪ ತಂದೆ ಜಟ್ಟೆಪ್ಪ ಪೂಜಾರಿ (ವಾಳಿ) ಹಾಗೂ ಇವರ ಮಕ್ಕಳಾದ 3) ಕುಪ್ಪಣ್ಣ ತಂದೆ ಬಸಪ್ಪ ಪೂಜಾರಿ (ವಾಳಿ) 4) ಆನಂದ ತಂದೆ ಬಸಪ್ಪ ಪೂಜಾರಿ (ವಾಳಿ) 5) ಮಾಲಿಕಪ್ಪ ತಂದೆ ಚಂದಪ್ಪ ಪೂಜಾರಿ (ವಾಳಿ 6) ಕುಮಣ್ಣ ತಂದೆ ಮಲ್ಲಪ್ಪ ಪೂಜಾರಿ (ವಾಳಿ) ಸಾ|| ಎಲ್ಲರೂ ಚಿಂಚೊಳಿ ಗ್ರಾಮ ಇವರು ಮತ್ತು 7) ಶಿವಪ್ಪ ತಂದೆ ಶರಣಪ್ಪ ಜಮಾದಾರ ಸಾ|| ಮಲ್ಲಾಬಾದ ಇವರು ಎಲ್ಲರು ನಮ್ಮ ಹತ್ತಿರ ಬಂದು, ನನ್ನ ಗಂಡನಿಗೆ ಮತ್ತು ನನಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೆ ಬಿದ್ದ ಒಂದು ಬಡಿಗೆಯಿಂದ ನನ್ನ ಕೈಯ ಮೇಲೆ ಹೊಡೆದನು, ಆಗ ನನ್ನ ಗಂಡ ಬಿಡಿಸಲು ಬಂದಾಗ ಕಲ್ಲಿನಿಂದ ನನ್ನ ಗಂಡನ ಬೆನ್ನಿನ ಮೇಲೆ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ
ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪುಟ್ಟಪ್ಪಗೌಡ ತಂದೆ ನಾನಾಸಾಹೇಬ ಮಾಲಿ ಪಾಟೀಲ ಸಾ: ಎಮ್.ಐ.ಜಿ 88 ಅಕ್ಕಮಾಹಾದೇವಿ ಕಾಲೋನಿ
ಗುಲಬರ್ಗಾ ಇವರು ತಮ್ಮ ಹಿರೊಹೊಂಡಾ ಪ್ಯಾಶನ್
ಪ್ಲಸ್ ದ್ವಿಚಕ್ರ ವಾಹನ ನಂ; KA-32 WU-2405 ಕಪ್ಪು ಬಣ್ಣ ಚೆಸ್ಸಿ ನಂ:GUPAKA321228 ಇಂಜಿನ ನಂ: HA10EV8GC60036 ಅ.ಕಿ 25,000/-ರೂ ಬೆಲೆಬಾಳುವದನ್ನು, ತಮ್ಮ ದಿನನಿತ್ಯದ ಕೆಲಸದ
ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 19/08/2014 ರಂದು 6 ಪಿ.ಎಂ.ಕ್ಕೆ ವ್ಯಕ್ತಿಯ ಕೆಲಸಕ್ಕಾಗಿ ಕೇಂದ್ರ ಬಸ್
ನಿಲ್ದಾಣದ ಹತ್ತಿರ ಬಂದು ಅಲ್ಲೆ ಇರುವ ಕಮಲ ಹೊಟೇಲ ಎದುರಿಗೆ ನನ್ನ ಮೋಟಾರ ಸೈಕಲ್ ನಿಲ್ಲಿಸಿ
ಗೆಳೆಯರೊಂದಿಗೆ ಟಿ ಸ್ಟಾಲದಲ್ಲಿ ಟಿ ಕುಡಿಯುತ್ತಾ
ನಿಂತಿದ್ದು ನಂತರ 6-15 ಪಿ.ಎಂ.ಕ್ಕೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಪ್ಯಾಷನ್
ಪ್ಲಸ್ ಮೋಟಾರ ಸೈಕಲ್ ಇರಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment