ದರೋಡೆ ಮಾಡಲು ಹೊಂಚು ಹಾಕಿ ಕುಳಿತಿರುವವರನ್ನು ಬಂಧಿಸಿ ಮಾರಕಾಸ್ತ್ರಗಳ ವಶ :
ಅಫಜಲಪೂರ ಠಾಣೆ : ದಿನಾಂಕ
16-09-2014 ರಂದು ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿಯವರಾದ ಶ್ರೀ
ಜಗನ್ನಾಥ ಪಿಸಿ-530, ಶ್ರೀ ಆನಂದ ಪಿಸಿ-1258, ಶ್ರೀ ಚಂದ್ರಶಾ ಪಿಸಿ-903, ಶ್ರೀ ನಾಗರಾಜ ಪಿಸಿ-816, ಶ್ರೀ ಸುರೇಶ ಪಿಸಿ-801, ಶ್ರೀ ಚಿದಾನಂದ ಪಿಸಿ-1225, ಶ್ರೀ ನಿಂಗಣ್ಣ ಪಿಸಿ-894, ಶ್ರೀ ತಸ್ಲೀಮ್ ಪಿಸಿ-775 ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಅಫಜಲಪೂರ-ಕರಜಗಿ ರೋಡಿಗೆ ಇರುವ ಡಿಗ್ಗಿ ಕ್ರಾಸ ಹತ್ತಿರ
5-6 ಜನರು ಡಕಾಯಿತಿ ಮಾಡಲು ಹೊಂಚುಹಾಕಿ ಕುಳಿತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ಮಾನ್ಯ
ಸಿ.ಪಿ.ಐ ಸಾಹೇಬರಾದ ಶ್ರೀ ಪಿ.ವ್ಹಿ.ಸಾಲಿಮಠ ಸಾಹೇಬರ ಮಾರ್ಗದರ್ಶನದಂತೆ ಸ್ಥಳಕ್ಕೆ ಹೋಗಿ ಡಿಗ್ಗಿ ಕ್ರಾಸ ಹತ್ತಿರ ಸುಮಾರು
4-5 ಜನರು ಇದ್ದು, ಅದರಲ್ಲಿ 2 ಜನರು ರೊಡಿನ ಆಚೆಗೆ ಒಬ್ಬ ಮತ್ತು ಇಚೇಗೆ ಒಬ್ಬ ನಿಂತುಕೊಂಡು ಹಗ್ಗವನ್ನು ರೋಡಿಗೆ ಅಡ್ಡಲಾಗಿ ಹಿಡಿದುಕೊಂಡಿದ್ದರು. ಇನ್ನೂ 3 ಜನರು ಅಲ್ಲೆ ಇರುವ ಒಂದು ಗಿಡದ ಮರೆಯಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದರು, ಆಗ ನಾವು ನಮ್ಮ ವಾಹನವನ್ನು ನಿಲ್ಲಿಸಿ, ವಾಹನದಿಂದ ಕೆಳಗೆ ಇಳಿಯುವಾಗ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಎಲ್ಲರೂ ಓಡಹತ್ತಿದರು, ಆಗ ನಾನು ಮತ್ತು ನಮ್ಮ ಸಿಬ್ಬಂದಿಯವರು ಪಂಚರ ಸಮಕ್ಷಮ ಬೆನ್ನು ಹತ್ತಿದಾಗ 04 ಜನರು ಸಿಕ್ಕಿದ್ದು, ಒಬ್ಬನು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋದನು, ಸಿಕ್ಕ
4 ಜನರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಡವರಿಸುತ್ತಾ 1) ಗಿರೀಶ ತಂದೆ ಶಿವಾನಂದ ಸಾಸನೇಕರ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ 2) ಪ್ರಕಾಶ ತಂದೆ ಕುಪ್ಪಣ್ಣ ಭೂತಿ ಸಾ||
ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ
3) ಶರಣಯ್ಯ ತಂದೆ ಪಾಲಯ್ಯಸ್ವಾಮಿ ಮಠಪತಿ ಸಾ|| ಬಸವೇಶ್ವರ ಕಾಲೋನಿ ಅಫಜಲಪೂರ 4) ಶರಣಪ್ಪ ತಂದೆ ಬಸಣ್ಣ ನಿಂಬರ್ಗಿ ಸಾ||
ಗೌರ (ಬಿ) ಗ್ರಾಮ ಅಂತಾ ತಿಳಿಸಿದರು, ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಪ್ರಬು ಜಮಾದಾರ ಸಾ|| ದುದ್ದಣಗಿ
ಅಂತಾ ತಿಳಿಸಿದ್ದು, ಸದರಿಯವರ ಅಂಗ ಶೋಧನೆ ಮಾಡಲಾಗಿ ಗಿರೀಶ ಸಾಸನೇಕರ ಈತನ ಹತ್ತಿರ ಒಂದು ನಾಡ ಪಿಸ್ತೂಲು ಮತ್ತು ಒಂದು ಬಟನ್ ಚಾಕು ದೊರೆತಿದ್ದು, ಪ್ರಕಾಶ ಭೂತಿ ಈತನ ಹತ್ತಿರ ಒಂದು ನಾಡ ಪಿಸ್ತೂಲು, ಶರಣಯ್ಯ ಮಠಪತಿ ಈತನ ಹತ್ತಿರ ಒಂದು ತಲವಾರ ಮತ್ತು ಒಂದು ಪ್ಲಾಸ್ಟಿಕ ಚೀಲದಲ್ಲಿರುವ ಖಾರದ ಪುಡಿ ದೊರೆತಿದ್ದು. ಶರಣಪ್ಪ ನಿಂಬರ್ಗಿ ಈತನ ಹತ್ತಿರ ಒಂದು ನಾಡ ಪಿಸ್ತೂಲು ಮತ್ತು 18 ಜಿವಂತ ಗುಂಡುಗಳು ದೊರೆತವು, ಸದರಿಯವರಿಗೆ ತಮ್ಮ ಬಳಿ ಇದ್ದ ಪಿಸ್ತೂಲಗಳ ಪರವಾನಿಗೆ ಬಗ್ಗೆ ವಿಚಾರಿಸಲಾಗಿ, ಸದರಿಯವರು ತಡವರಿಸುತ್ತಾ ಇವು ನಾಡ ಪಿಸ್ತೂಲ ಇದ್ದು,
ಯಾವುದೆ ಪರವಾನಿಗೆ ಇಲ್ಲ ಅಂತಾ ತಿಳಿಸಿದರು, ಸದರಿಯವರು ಹೊಂಚುಹಾಕಿ ಕುಳಿತುಕೊಂಡು ರೋಡಿಗೆ ಹೋಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ.
ವಾಹನದಲ್ಲಿ ಓಡಾಡುವ ಜನರ ಹತ್ತಿರ ಇರುವ ಹಣ ಒಡವೆಗಳನ್ನು ಕಿತ್ತುಕೊಂಡು ದರೋಡೆ ಮಾಡಲು ಹೊಂಚುಹಾಕಿ ಕಾಯುತ್ತಿರುವುದು ಖಚಿತವಾಗಿದ್ದು ಇರುತ್ತದೆ. ಸದರಿಯವರ ಹತ್ತಿರ ದೊರೆತ
1) ಒಟ್ಟು 03 (ಮೂರು) ನಾಡ
ಪಿಸ್ತೂಲುಗಳನ್ನು ಅಕಿ-30,000 ರೂ
2) 18 ಜಿವಂತ ಗುಂಡುಗಳನ್ನು ಅಕಿ-1800/- ರೂ
3) ಒಂದು ಉದ್ದನೇಯ ತಲವಾರ ಅಕಿ
- 500/-ರೂ 4) ಪ್ಲಾಸ್ಟಿಕ ಚೀಲದಲ್ಲಿರುವ ಖಾರದ ಪುಡಿಯನ್ನು ಅಕಿ-00-00
5) ವಾಹನವನ್ನು ನಿಲ್ಲಿಸಲು ತಂದಿದ್ದ ಸ್ಥಳದಲ್ಲಿಯೆ ಬಿದ್ದಿದ್ದ ಒಂದು ಅಂದಾಜು 20 ಪೀಟ ಉದ್ದವಾದ ನೂಲಿನ ಹಗ್ಗವನ್ನು ಅಕಿ-
50/- ರೂ 6) ಒಂದು ಬಟನ್ ಚಾಕು ಅಕಿ- 500/- ರೂ ಇವುಗಳನ್ನು ಸದರಿ ಆರೋಪಿತರಿಂದ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಅಯ್ಯಣ್ಣ ತಂದೆ
ಶರಣಪ್ಪ ತಾಳಿಕೊಟಿ ಸಾ: ಬಿಳವಾರ ಇವರು ದಿ: 15-9-2014 ರಂದು ರಾತ್ರಿ ನಮ್ಮ ತಂದೆ ಶರಣಪ್ಪ
ತಾಳಿಕೊಟ್ಟಿ ಇವರು ಜೇವರಗಿ ಬಸ್ ನಿಲ್ದಾಣದಿಂದ ಜೇವರಗಿ ಬಸ್ ಡಿಪೋ ವರೆಗೆ ಕೆ.ಎಸ್.ಆರ್.ಟಿ ಬಸ್
ನಂ ಕೆ.ಎ-35-ಎಫ್-128 ನೇದ್ದರ ಚಾಲಕ ಶಿವಕುಮಾರ ಇತನು ನಡೆಯಿಸುವ ಬಸ್ಸಿನ ಬಾಗಿಲದಲ್ಲಿ ನಿಂತು
ಹೋಗುವಾಗ ರಾತ್ರಿ 8-45 ಗಂಟೆಗೆ ಜೇವರಗಿ ಪಟ್ಟಣದ ರಿಲಾಯನ್ಸ್ ಪೆಟ್ರೋಲ ಪಂಪ ಎದರು
ರೊಡಿನಲ್ಲಿ ಬಸ್ಸಿನ ಚಾಲಕನು ಬಸ್ ನ್ನು ಅತಿವೇಗ
ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೆ ಕಟ್ ಹೊಡೆದ ಪ್ರಯುಕ್ತ ನಮ್ಮ ತಂದೆ ಶರಣಪ್ಪ ತಾಳಿಕೊಟಿ
ಇವರು ಬಸ್ಸಿನಿಂದ ರೋಡಿನ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತ ಗಾಯವಾಗಿದ್ದು ಅವನಿಗೆ ರಾತ್ರಿಯೇ
ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಿದ್ದಾಗ, ರಾತ್ರಿಯೇ 11-15 ಗಂಟೆಗೆ ಸದರ ಆಸ್ಪತ್ರೆ ಅವರಣದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment