ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶ್ರೀ ಅಬ್ದುಲ್ ಮಜೀದ ಖಾನ ತಂದೆ
ಅಬ್ದುಲ್ ಅಜೀಜ ಖಾನ ಸ್ಟೇಷನ ಎರಿಯಾ
ಹಾಗು ಮಹಮ್ಮದ ಅಹೆಮ್ಮದುಲ್ಲಾ ಶೌಕತ ನವಾಜ ಹಿರೋ ಹೊಂಡಾ ಪ್ಯಾಶನ ಮೋಟಾರ ಸೈಕಲ್ ನಂ ಕೆಎ-32 ವ್ಹಾ-205
ನೇದ್ದರ ಮೇಲೆ ಸಲಾಮ ಟೇಕಡಿಯಿಂದ ಗುಲಬರ್ಗಾಕ್ಕೆ ಬರುವಾಗ
ಸದರ ಮೋಟಾರ ಸೈಕಲನ್ನು ಮಹಮ್ಮದ ಅಹೆಮ್ಮದುಲ್ಲಾ ಶೌಕತ ನವಾಜ
ಚಲಾಯಿಸುತ್ತಿದ್ದು ರೋಡಿನ ಎಡಗಡಯಿಂದ ಬರುವಾಗ ಉಪಳಾಂವ ಕ್ರಾಸ ಹತ್ತಿರ ಎದುರಗಡೆಯಿಂದ
ಕ್ರೋಜರ ಜೀಪ ನಂ ಕೆಎ-32-9347 ನೇದ್ದರ ಚಾಲಕನು ಅತೀವೇಗ ಮತ್ತು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದವನೇ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಸಮೇತ ರೋಡಿನ ಮೇಲೆ
ಬಿದ್ದಾಗ ಫಿರ್ಯಾದಿಗೆ ಎಡ ಮೋಳಕಾಲಿಗೆ ಭಾರಿ ರಕ್ತಗಾಯ ಹಾಗು ಇತರೇ ಭಾಗಕ್ಕೆ ಭಾರಿ ರಕ್ತ ಮತ್ತು
ಗುಪ್ತಗಾಯವಾಗಿದ್ದು. ಹಾಗು ಮಹಮ್ಮದ ಅಹೆಮ್ಮದುಲ್ಲಾ ಶೌಕತ ನವಾಜ ಇತನಿಗೆ ತಲೆಗೆ, ಹಣೆಗೆ, ಎಡ ಹೊಟ್ಟೆಗೆ ಬಲಹುಬ್ಬಿನ ಮೇಲೆ ಭಾರಿ
ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿದ್ದು ಉಪಚಾರ ಕುರಿತು ಕೆ.ಬಿ.ಎನ್ ಆಸ್ಪತ್ರೆಗೆ
ತೆಗೆದುಕೊಂಡು ಬರುವಾಗ ಸದರಿಯವನು ದಾರಿಯ ಮದ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಶರಣಬಸಪ್ಪ ತಂದೆ ಹಣಮಂತರಾಯ ಹೂಗಾರ ಸಾ : ರಾಜಾಪೂರ ಗುಲಬರ್ಗಾ ರವರು
ದಿನಾಂಕ:12/09/14 ರಂದು ನಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಶವ ಸಂಸ್ಕಾರ ಕುರಿತು ನಾನು
ಮತ್ತು ರವಿ ತಂದೆ ಗುರುಶಾಂತಪ್ಪ ಹೂಗಾರ ಇಬ್ಬರೂ ಮೊಟಾರ ಸೈಕಲ ಮೇಲೆ ಸೇಡಂಕ್ಕೆ ಬಂದಿದ್ದು.
ನಮ್ಮಂತೆ ಮಾವ ಮಲ್ಲಿಕಾರ್ಜುನ ತಂದೆ ವೀರಣ್ಣ ಹೂಗಾರ ಸಾ:ರಾಜಾಪೂರ ಇವರು ತನ್ನ ಮೊಟಾರ ಸೈಕಲ ಮೇಲೆ
ಸೇಡಂಕ್ಕೆ ಬಂದಿದ್ದು. ನಂತರ ಸೇಡಂದಲ್ಲಿ ಶವ ಸಂಸ್ಕಾರ ಮುಗಿಸಿ ನಾನು ಮತ್ತು ರವಿ ಇಬ್ಬರು ನನ್ನ
ಮೊಟಾರ ಸೈಕಲ ಮೇಲೆ ಗುಲಬರ್ಗಾಕ್ಕೆ ಹೊರಟಿದ್ದು. ನಮ್ಮ ಮುಂದೆ ನಮ್ಮ ಮಾವ ಮಲ್ಲಿಕಾರ್ಜುನ ಇತನು
ತನ್ನ ಮೊಟಾರ ಸೈಕಲ ನಂ. ಕೆಎ-32-ಇಡಿ-7042 ನೇದ್ದರ ಮೇಲೆ ಹೊರಟಿದ್ದು. ಅಂದಾಜು 8:00 ಪಿಎಮ
ಸುಮಾರಿಗೆ ಸೇಡಂ ಗುಲಬರ್ಗಾ ರಸ್ತೆಯ ಅಜಾದಪೂರ ಕ್ರಾಸ ಹತ್ತಿರ ನಿಧಾನವಾಗಿ ಹೊರಟಾಗ ಆಗ ಸೇಡಂ
ಕಡೆಯಿಂದ ಒಂದು ವಾಹನ ಚಾಲಕ ತನ್ನ ವಾಹನವನ್ನು ಅತಿವೇಗದಿಂದ ಅಡ್ಡಾತಿಡ್ಡಿ ಚಲಾಯಿಸಿಕೊಂಡು ಬಂದು
ನಮಗೆ ಸೈಡ ಹೊಡೆದು ನಮ್ಮ ಮುಂದೆ ಹೊರಟಿದ್ದ ಮಾವ ಮಲ್ಲಿಕಾರ್ಜುನ ಇತನ ಮೊಟಾರ ಸೈಕಲಗೆ
ಡಿಕ್ಕಿಪಡಿಸಿ ವಾಹನ ಸಮೇತ ಗುಲಬರ್ಗಾ ಕಡೆ ಹೋದನು. ಆಗ ಮಾವ ಮಲ್ಲಕಾರ್ಜುನ ಇತನು ಮೊಟಾರ ಸೈಕಲ
ಸಮೇತ ರಸ್ತೆಯ ಮೇಲೆ ಬಿದ್ದನು. ಆಗ ನಾನು ಮತ್ತು ರವಿ ಹೋಗಿ ನೋಡಲಾಗಿ ಗದ್ದಕ್ಕೆ ಬಲಗಣ್ಣಿನ
ಹುಬ್ಬಿನ ಹತ್ತಿರ ರಕ್ತಗಾಯ ಮತ್ತು ಎದೆಗೆ ರಕ್ತಗಾಯ, ಎಡ ಭುಜಕ್ಕೆ ತರಚಿದ ಗಾಯ, ತಲೆಗೆ
ಗುಪ್ತಗಾಯವಾಗಿದ್ದು. ಮಲ್ಲಿಕಾರ್ಜುನ ಇತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಷ್ಟೊತ್ತಿಗೆ
ಸುದ್ದಿ ತಿಳಿದು ಬಂದಿದ್ದ ಪೊಲೀಸರು ತಮ್ಮ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ
ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ
ಠಾಣೆ : ಶ್ರೀಮತಿ ಮಾಹಾನಂದ
ಗಂಡ ಶಾಮರಾಯ ಪೂಜಾರಿ ಸಾ: ದಂಗಾಪೂರ ಇವರು ದಿನಾಂಕ 12-09-2014 ರಂದು ತನ್ನ
ಸಣ್ಣವ್ವನ ಮಗಳಾದ ಜಗದೇವಿ ಇವಳು ಭಾಳಿ ಗ್ರಾಮದಲ್ಲಿ ಮೃತ ಪಟ್ಟಿದ್ದರಿಂದ ನಾನು ಹಾಗೂ ನಮ್ಮೂರಿನ
ಸೂರಮ್ಮದೇವಿ, ನಾಗಮ್ಮ, ಭಾಗಮ್ಮ, ಮಾಹಾದೆವಿ, ಲಕ್ಷ್ಮಿಬಾಯಿ, ಶರಣಮ್ಮ, ಸುವರ್ಣ, ಅಂಬವ್ವ, ಎಲ್ಲರೂ ಸೇರಿ ಬಾಬು ತಂದೆ ಗದಿಗೆಪ್ಪ ಜಳಕಿ ಇತನ ಟಂ-ಟಂ ಬಾಡಿಗೆ ಮಾಡಿಕೊಂಡು ಮಣ್ಣು
ಕೊಡುವ ಕಾರ್ಯಕ್ರಮಕ್ಕೆ ಹೋಗಿ ಮರಳಿ ದಂಗಾಪೂರ ಗ್ರಾಮಕ್ಕೆ ಬರುವಾಗ ದಂಗಾಪೂರ ಗ್ರಾಮದ ಪಂಚಾಯತಿ
ಎದುರಿಗೆ ಇಳಿಕಲಿನಲ್ಲಿ ಸಾಯಂಕಾಲ 04:15 ಗಂಟೆಗೆ ಟಂ-ಟಂ ಚಾಲಕನಾದ ಮಹೇಶಕುಮಾರ ತಂದೆ
ಮಲ್ಲಿಕಾರ್ಜುನ ಮಣ್ಣೂರ ಇತನು ಟಂ-ಟಂ ಅನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿ ರೋಡಿನ ಎಡ
ಮಗ್ಗಲಿನಲ್ಲಿ ಪಲ್ಟಿ ಹೊಡೆಸಿರುತ್ತಾನೆ ಸದರಿ ಅಫಘಾತದಲ್ಲಿ ನನಗೂ ಹಾಗೂ ನಮ್ಮೂರಿನ ಸೂರಮ್ಮದೇವಿ, ನಾಗಮ್ಮ, ಭಾಗಮ್ಮ, ಮಾಹಾದೆವಿ, ಲಕ್ಷ್ಮಿಬಾಯಿ, ಶರಣಮ್ಮ, ಸುವರ್ಣ, ಅಂಬವ್ವ, ಎಲ್ಲರಿಗೂ ಸಾದಾ, ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾದನಹಿಪ್ಪರಗಾ ಠಾಣೆ : ಶ್ರೀ.ಯಶ್ವಂತರಾವ ತಂದೆ
ಶ್ರೀಮಂತರಾವ ನಂದೇಣಿ ಸಾ:ನಿಂಬಾಳ ಇವರು ದಿನಾಂಕ:12/09/2014 ರಂದು 04:30 ಪಿ.ಎಂ.ಸುಮಾರಿಗೆ
ನಿಂಬಾಳ ಗ್ರಾಮದ ಶ್ರೀಮಂತ ಹೊನ್ನಳ್ಳಿಯವರ ಅಂಗಡಿ ಮುಂದಿನ ರಸ್ತೆಯ ಮೇಲಿನಿಂದ ಬಸ್ ನಿಲ್ದಾಣದ
ಕಡೆಗೆ ಹೋಗುತ್ತಿದ್ದಾಗ ನಮ್ಮೂರಿನ ಮಲ್ಲಿನಾಥ ತಂದೆ ಲಕ್ಷ್ಮಣ ಗದ್ದೆ ಇತನು ನನ್ನ ಎದುರಿಗೆ ಬಂದು
ನನಗೆ ಮುಂದಕ್ಕೆ ಹೋಗದಂತೆ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ನಾನು ಎದುರಿಗೆ ಬರುವಾಗ ನಿನ್ನು
ನನಗೆ ಮರ್ಯಾದೆ ಕೊಡದೆ ನನ್ನ ಎದುರಿನಿಂದ ಎದೆ ಉಬ್ಬಿಸಿ ಹೋಗಿದಿ ಇವತ್ತು ಸಹ ಹಾಗೇ
ಬರತ್ತಾಯಿದ್ದಿ ನಿನ್ನಲ್ಲಿ ಬಹಳ ಸೊಕ್ಕು ಇದೆ ನಿನಗೆ ಇವತ್ತು ನೋಡೆ ಬೀಡುತ್ತೆನೆ ಬೋಸಡಿ ಮಗಾ
ಅಂತಾ ಕೈಯಿಂದ ನನ್ನ ಕಪಾಳಕ್ಕೆ ಹೋಡೆದು ಗಾಯಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 12-09-2014 ರಂದು ಬೆಳಿಗ್ಗೆ
08;30 ಗಂಟೆಗೆ ಶ್ರೀಮತಿ ಮಲ್ಲಮ್ಮ ಗಂಡ ಸಿದ್ದರಾಮ ಪೂಜಾರಿ ಸಾ : ಮಾತೋಳಿ ಹಾಗು
ನೆಗ್ಯಾಣಿ ದೇವಕ್ಕಿ ರವರು ಕೂಡಿಕೊಂಡು ನಮ್ಮ ಹೋಲಕ್ಕೆ
ಹೋಗಿದ್ದು ಹೊಲದಲ್ಲಿ ನಮ್ಮ ಅಣ್ಣತಮ್ಮಕಿಯವರಾದ ಆನಂದ ತಂದೆ ಪಾಂಡುರಂಗ ಪೂಜಾರಿ, ರಮೇಶ ಪಾಂಡುರಂಗ ಪೂಜಾರಿ, ಶ್ರೀಮಂತ ಪಾಂಡುರಂಗ ಪೂಜಾರಿ ರವರು
ಸಾಂಡ ಮುಚ್ಚುತ್ತಿದ್ದರು. ಆಗ ನಾವು ಅವರಲ್ಲಿ ಹೋಗಿ ನ್ಯಾಯಾಲಯದ ತೀರ್ಪು
ಆಗುವವರೆಗೆ ಸಾಂಡ ಮುಚ್ಚಬ್ಯಾಡರಿ ಅಂತಾ ಹೇಳಿದೆವು ಆಗ ಅವರು ನಮಗೆ ತಡೆದು ನಿಲ್ಲಿಸಿ ಅವಾಚ್ಯವಾ ಬೈಯುತ್ತಿದ್ದರು
ನಂತರ ನಾವು ಈ ವಿಷಯವನ್ನು ನಮ್ಮ ಮನೆಯವರಿಗೆ ಹೇಳಿ ಊರಿಗೆ ಬಂದಿರುತ್ತೇವೆ. ನಂತರ 09;30 ಎ.ಎಂ ಕ್ಕೆ ನಮ್ಮ ಮನೆಯ
ಮುಂದೆ ನಡೆದ ವಿಷಯವನ್ನು ನನ್ನ ಗಂಡನಿಗೆ ಹೇಳುತ್ತಿದ್ದಾಗ ಅದೇ ಸಮಯಕ್ಕೆ ಸದರಿ ಆನಂದ ತಂದೆ ಪಾಂಡುರಂಗ
ಪೂಜಾರಿ, ರಮೇಶ ಪೂಜಾರಿ, ಶ್ರೀಮಂತ ಪೂಜಾರಿ ರವರು
ಬಂದು ಏನರೋ ಸುಳಿ ಮಕ್ಕಳ್ಯಾ ನಮ್ಮ ಹೊಲದಾಗ ಅರನಿ ಹಾಕಿದರೆ ನಿಮಗೇನಾಗತಾದು ಅಂತಾ ಅನ್ನುತ್ತಿದ್ದಾಗ
ನನ್ನ ಗಂಡ ನ್ಯಾಯಾಲಯದ ತೀರ್ಪು ಆಗುವವರೆಗೆ ಅರನಿ ಹಾಕಬ್ಯಾಡರಿ ಅಂತಾ ಹೇಳುತ್ತಿದ್ದಾಗ ಆನಂದ ಇವನು
ತನ್ನ ಕೈಯಿಂದ ನನ್ನ ಗಂಡನಿಗೆ ಕಪಾಳ ಮೇಲೆ ಹೊಡೆದನು ನಂತರ ನಮ್ಮ ಮೈದುನ ಶಿವಾನಂದ ಇವರಿಗೆ ರಮೇಶ ಇವನು
ಕಾಲಿನಿಂದ ಬೆನ್ನಿನ ಮೇಲೆ ಒದ್ದು ನೆಲದ ಮೇಲೆ ಖೆಡವಿದನು ಶ್ರೀಮಂತ ಇವನು ಒಂದು ಕಲ್ಲಿನಿಂದ ನನ್ನ
ಹಣೆ ಮೇಲೆ ಹೋಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 12-09-2014 ರಂದು ಬೆಳಿಗ್ಗೆ
08;30 ಗಂಟೆಗೆ ಶ್ರೀ ಆನಂದ ತಂದೆ ಪಾಂಡೂರಂಗ ಪೂಜಾರಿ ಸಾ : ಮಾತೋಳಿ ಮತ್ತು ನಮ್ಮ
ತಮ್ಮಂದಿರರಾದ ರಮೇಶ ಪೂಜಾರಿ, ಶ್ರೀಮಂತ ಪೂಜಾರಿ ರವರು ನಮ್ಮ ಹೊಲದಲ್ಲಿ
ಸಾಂಡ ಹತ್ತಿರ ಕೆಲಸ ಮಾಡುತ್ತಿದ್ದೇವಿ. ಆಗ ನಮಗೆ ಸಿದ್ರಾಮ ಪೂಜಾರಿ ರವರ
ಹೆಂಡತಿ ಮಲ್ಲಮ್ಮ ಹಾಘು ಅವರ ನೆಗ್ಯಾಣಿ ದೇವಕ್ಕಿ ರವರು ನಮ್ಮ ಹತ್ತಿರ ಬಂದು ನ್ಯಾಯಾಲಯದ ತೀರ್ಪು
ಆಗುವವರೆಗೆ ಸಾಂಡ ಮುಚ್ಚಬ್ಯಾಡರಿ ಇಲ್ಲಾ ಅಂದರೆ ನಮ್ಮ ಗಂಡಂದಿರಿಂದ ನಿಮಗೆ ಹೊಡೆಸುತ್ತೇವೆ ಅಂತಾ
ಅಂದು ಅಲ್ಲಿಂದ ಹೋದರು ನಂತರ ನಾವು ಸಹ 09;30 ಎ.ಎಂ ಕ್ಕೆ ಲಕ್ಷ್ಮಣ ಪೂಜಾರಿ ರವರ ಮನೆ ಹತ್ತಿರ ಹೋಗ ಸದರಿ ಲಕ್ಷ್ಮಣನ್ನು ನ್ಯಾಯಾಲಯದ ತೀರ್ಪು ಆಗುವವೆರೆಗೆ ನಮ್ಮ ಹೊಲದಲ್ಲಿನ ಸಾಂಡ ಮುಚ್ಚುವುದಿಲ್ಲ
ಅಂತಾ ಹೇಳಿದರು ನಮ್ಮೊಂದಿಗೆ ಕಾಲಕೆದರಿಕೊಂಡು ಜಗಳ ಮಾಡಲು ಬರುತ್ತಿರಿ ಯಾಕೆ ಅಂತಾ ಕೇಳಿದ್ದಕ್ಕೆ
ಎಲ್ಲರು ನಮಗೆ ಹೋಗದಂತೆ ತಡೆದುನಿಲ್ಲಿಸಿ ಅವರಲ್ಲಿ ಸಿದ್ರಾಮ ಪೂಜಾರಿ ಇವನು ಒಂದು ಕಲ್ಲಿನಿಂದ ನಮ್ಮ
ತಮ್ಮ ಶ್ರೀಮಂತನಿಗೆ ತಲೆಯ ಮೇಲೆ ಹೊಡೆದನು ನಂತರ ಯಲ್ಲಾಲಿಂಗ ಇವನು ಕೈಯಿಂದ ನನ್ನ ಕಪಾಳ ಮೇಲೆ ಹೊಡೆದನು,
ಶಿವಾನಂದ ಇವನು ತನ್ನ ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದು ನೆಲದ ಮೇಲೆ ಕೆಡವಿದನು
ಆಗ ಲಕ್ಷ್ಮಣ ಪೂಜಾರಿ ಇವನು ಕಾಲಿನಿಂದ ನನಗೆ ಒದ್ದು ಗಾಯಗೋಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment