ಲ್ಯಾಪಟಾಪ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಶ್ರೀ ಶ್ರೀನಿವಾಸ ತಂದೆ ಸುಭಾಷ ಗಡ್ರೆ
ಸಾ: ವಿದ್ಯಾನಗರ ಕಾಲೋನಿ ಬೀದರ ರವರು ಬೀದರ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಲ್ಯಾಪಟಾಫ್ ಕಳ್ಳತನ
ಆಗಿರುವ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಶ್ರೀ ಮಹಾನಿಂಗ ನಂದಗಾಂವ
ಡಿ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಸುಧಾ ಆದಿ ಪಿ.ಐ, ಶ್ರೀ
ಕೆ.ಎಸ್. ಕಲ್ಲದೇವರು ಪಿ.ಎಸ್.ಐ, ಶ್ರೀ
ಸತ್ಯನಾರಾಯಣ ಪಿ.ಎಸ್.ಐ (ಅ.ವಿ) ಹಾಗು ಸಿಬ್ಬಂದಿಯವರು ಲ್ಯಾಪಟಾಫ್ ಕಳ್ಳತನ ಮಾಡಿದ ಇಬ್ಬರೂ
ಆರೋಪಿತರಾದ 1) ಧರ್ಮರಾಯ ತಂದೆ ಶ್ರೀಶೈಲ್ ಜಮಾದಾರ ಸಾ: ತಡಕಲ್ ಗ್ರಾಮ 2) ಬಬ್ರುವಾಹನ ತಂದೆ
ಹಣಮಂತ ಜಮಾದಾರ ಸಾ: ತಡಕಲ್ ತಾ: ಆಳಂದ ರವರಿಗೆ ದಸ್ತಗಿರಿ ಮಾಡಿ ಅವರಿಂದ ಒಂದು ಎಚ್.ಪಿ
ಲ್ಯಾಪಟಾಫ್, 3 ಮೋಬೈಲಗಳು ಹೀಗೆ ಒಟ್ಟು 50,000/-
ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಹಳ್ಳದ
ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಪ್ರಕರಣ :
ಆಳಂದ
ಠಾಣೆ :
ದಿನಾಂಕ 29/08/2014 ರಂದು ರಾತ್ರಿ 11:30 ಗಂಟೆಗೆ ವಾಸಿದ ಬಿಸ್ವಾಸ ಇತನು ರಾತ್ರಿ 10:30 ಗಂಟೆ
ಸುಮಾರಿಗೆ ನಾವು ಇಬ್ಬರು ಕೂಡಿ ಕಿಣ್ಣಿ ಸುಲ್ತಾನ ಗ್ರಾಮದಿಂದ ಕೋತನ ಹಿಪ್ಪರಗಾ ಕಡೆಗೆ ಬರುವಾಗ
ಗ್ರಾಮದ ಹತ್ತಿರ ಇರುವ ಹಳ್ಳದ ಪಕ್ಕದಲ್ಲಿ ಮೋಟರ ಸೈಕಲ ನಿಲ್ಲಿಸಿ ನೀರಿನ ಆಳ ನೋಡಿ ನಡೆದುಕೊಂಡು
ದಾಟಿದಾರಾಯಿತು ಅಂತಾ ನಾವು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ದಾಟುವಾಗ ನೀರಿನ ರಭಸಕ್ಕೆ ಕಾಲು ಹಾರಿದ್ದರಿಂದ ನಾವು
ಇಬ್ಬರು ನೀರಿನಲ್ಲಿ ಬಿದ್ದಾಗ ನಾನು ಒಂದು ಮುಳ್ಳು ಕಂಟಿ ಹಿಡಿದು ಮೇಲೆ ಬಂದಿದ್ದು ನನ್ನ ಜೋತೆಗೆ
ಇದ್ದ ಪವಿತ್ರ ಇತನು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತಾನೆ ನಾನು ಮುಂದೆ ನೋಡಿದರು
ಕತ್ತಲಲ್ಲಿ ಕಾಣಲಿಲ್ಲಾ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಕೋತನ ಹಿಪ್ಪರಗಾ ಗ್ರಾಮದ ಶ್ರೀಹರಿ
ತಂದೆ ಶಿವಾಜಿ ಇಸ್ರಾಜಿ , ದಿಲೀಪ ಕ್ಷೀರಸಾಗರ ಹಾಗು ಇತರರು
ಕೂಡಿ ಇಡಿ ರಾತ್ರಿ ಹಾಗು ನಿನ್ನೆ ದಿನವಿಡಿ ಹುಡುಕಾಡಿದರು ನನ್ನ ತಮ್ಮನ ಬಗ್ಗೆ ಸುಳಿವು
ಸಿಕ್ಕಿರುವುದಿಲ್ಲಾ. ನಂತರ ಈ ಬಗ್ಗೆ ಆಳಂದ ಠಾಣೆಗೆ ಮಾಹಿತಿ ನೀಡಿದ್ದು ದಿನಾಂಕ 31/08/2014
ರಂದು ಸಹ ಹುಡುಕಾಡುವಾಗ ಮದ್ಯಾಹ್ನ 12;30 ಗಂಟೆಗೆ ಹಳ್ಳದ ನೀರು ಕಡಿಮೆಯಾದಾಗ ಕಂಟಿಯಲ್ಲಿ ಕೋತನ
ಹಿಪ್ಪರಗಾ ಗ್ರಾಮದ ಪೂಲ್ ಹತ್ತಿರ ಒಬ್ಬ ವ್ಯಕ್ತಿಯ ಹೆಣ ಬೋರಲಾಗಿ ಬಿದಿದ್ದು ನೋಡಲಾಗಿ ನಾವು
ಅವನನ್ನು ಗುರುತಿಸಿದ್ದು, ನನ್ನ ತಮ್ಮನೇ ಇದ್ದಿರುತ್ತಾನೆ. ಸದರ ಘಟನೆಯು ಆಕಸ್ಮಿಕವಾಗಿ ಪ್ರಕೃತಿ
ವಿಕೋಪದಿಂದ ನನ್ನ ತಮ್ಮ ನೀರಿನಲ್ಲಿ ಕೊಚ್ಚಿ ಹೋಗಿ ನೀರು ಕುಡಿದು ಮುಳುಗಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ
ಕಿರುಕಳ ಪ್ರಕರಣ :
ಗ್ರಾಮೀಣ
ಠಾಣೆ :
ಶ್ರೀಮತಿ ಮುಜೀಬಗುನ್ನಿಸಾ
ಬೇಗಂ ಗಂಡ ಮಹಮ್ಮದ ಮುನ್ನವರ ಸಾ;ಮಿಲ್ಲತ ನಗರ
ರಾಬೇ ಕೌನ್ಸಿಲ್ ಮಜೀದ ಹತ್ತಿರ ಯಾದಗಿರವಾಲೆ ಗುಲಬರ್ಗಾ. ಇವರು ಮದುವೆಯಾಗಿ
8 ತಿಂಗಳಾಗಿ ನನ್ನ ಗಂಡ ಮಹಮ್ಮದ ಮುನ್ನವರ ತಂದೆ ಮಹಮ್ಮದ ಜಿಲಾನಿ ಸಾ; ಮನೆ ನಂ.22-7-1/2 ಕಾಜಿಪಲ್ಲಿ ರಾಮಗುಂಡಂ ಸೋಮನ ಪಳೆ ಕರಿಮನಗರ
ಎ.ಪಿ. ಕಾಲೂನಿ ಹಾವ/ಇಂಡಸ್ಟ್ರೀಯಲ್ ಏರಿಯಾ ಗುಲಬರ್ಗಾ ಇವರೊಂದಿಗೆ ಮದುವೆಯಾಗಿರುತ್ತದೆ. ಮದುವೆಯಾದಾ ಗಿನಿಂದ ನನ್ನ ಗಂಡ ತವರು ಮನೆಯಿಂದ ಮೋಟಾರ ಸೈಕಲ ತೆಗೆದುಕೊಂಡು , ನೀನು ನನಗೆ ಒಪ್ಪುವದಿಲ್ಲಾ ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಾ ಬಂದಿದ್ದು
ದಿನಾಂಕ.26-8-2014 ರಂದು
ಮದ್ಯಾಹ್ನ 1 ಗಂಟೆಯ ಸುಮಾರಿಗೆ
ನಾನು ಮನೆಯಲಿದ್ದಾಗ ರಂಡೀ ಮುಜಬಿಗುನಿಸಾ ನಿನು ನಿನ್ನ ತವರು ಮನೆಯಿಂದ ಮೊಟಾರ ಸೈಕಲ್ ತರಲಿಲ್ಲಾ ಹಾಗೂ
ನಿನು ನನಗೆ ಒಪ್ಪುವದಿಲ್ಲಾ ರಂಡಿ ನಿನು ನನಗೆ ಬೇಕಾಗಿಲ್ಲಾ ನಾನು ನನ್ನ ಊರಿಗೆ ಹೋಗುತ್ತೇನೆ ನಿನು ಏನಾದರೂ ನಾನು ಹೋದ ವಿಷಯ ತಿಳಿಸಿದ್ದಲ್ಲಿ ನಿನಗೆ ಜೀವ ಸಹೀತ ಬೀಡುವದಿಲ್ಲಾ ಅಂತಾ ಜೀವ ಬೆದರಿಕೆ
ಹಾಕಿ ಮನೆಯಿಂದ ಹೋದನು ನಂತರ ನನ್ನ ಗಂಡ ಸೀಟನಲ್ಲಿ ಹೋಗಿರಬಹುದು
ಅಂತಾ ಹಾಗೆ ಮನೆಯಲ್ಲಿ ಉಳಿದುಕೊಂಡೇನು ಇನ್ನುವರೆಗೆ ಮನೆಗೆ ಬಂದಿರುವದಿಲ್ಲಾ ಮತ್ತು ಈ ಬಗ್ಗೆ ನನ್ನ
ತವರು ಮನೆಯವರಾದ ನನ್ನ ತಾಯಿನಸೀಮಾಬಾನು ಹಾಗೂ ಅಣ್ಣಂದಿರರಾದ ಅಭೀದ ಹುಸೇನ ಖಲೀಲ ಅಹೇಮದ ಮಹಮ್ಮದ ಸಲೀಮ
ಇವರಿಗೆ ವಿಚಾರ ತಿಳಿಸಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 31/08/2014 ರಂದು ಮಧ್ಯಾಹ್ನ
01-00 ಗಂಟೆಗೆ ಶ್ರೀಮತಿ. ಕಮಲಾಬಾಯಿ
ಗಂಡ ಪ್ರಭು ಮಹಾಜನ
ಸಾ: ಕಮಲಾಪೂರ ತಾ:ಜಿ: ಗುಲಬರ್ಗಾ ರವರ ಗಂಡ ಪ್ರಭು ರವರು ದಿನಾಂಕ:
31/08/2014 ರಂದು ಬೆಳೆಗ್ಗೆ 11-00 ಗಂಟೆಗೆ
ಗುಲಬರ್ಗಾ- ಹುಮನಾಬಾದ ರಸ್ತೆಯ ಪಕ್ಕದಲ್ಲಿರುವ ನಮ್ಮ ಹೊಲಕ್ಕೆ ಹೋಗಿ
ಬರುತ್ತೇನೆ ಅಂತಾ ತಮ್ಮ ಸೈಕಲ ಮೋಟರ ನಂ: ಕೆಎ-32—ಯು –
6868 ನೇದ್ದರ ಮೇಲೆ ಕುಳಿತುಕೊಂಡು ಮನೆಯಲ್ಲಿ ನಮಗೆ ಹೇಳಿ ಹೋಗಿದ್ದು,
ನಂತರ ಬೆಳೆಗ್ಗೆ 11-45 ಗಂಟೆ
ಸುಮಾರಿಗೆ ನಮ್ಮ
ಸಂಭಂದಿಕರಾದ ಶಿವಪ್ಪ ತಂದೆ ಗುರುಪಾದಪ್ಪ ಕುಮ್ಮಣ್ಣ ಸಾ: ಕಮಲಾಪೂರ ಇವರು ನಮಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿನ್ನ ಗಂಡ
ಪ್ರಭು ಕೂಡಿಕೊಂಡು ಹೊಲಕ್ಕೆ ಹೋಗಿ ನಂತರ ನನಗೆ ನನ್ನ ಹೊಲದ ಹತ್ತಿರ ಇಳಿಸಿ ತಾನು
ಚಾರ ಕಮಾನ ಸೇತುವೆ ಹತ್ತಿರ ಹೋಗಿ
ಸೈಕಲ ಮೋಟರ್ ತಿರಿವಿಕೊಂಡು ಬರುತ್ತೇನೆ ಅಂತಾ
ಹೇಳಿ ತನ್ನ ಮೋಟರ ಸೈಕಲ್
ತೆಗೆದುಕೊಂಡು ಹೋಗಿ ಸೇತುವೆ ಹತ್ತಿರ ಮೋ.ಸೈಕಲನ್ನು ತಿರಿಗಿಸಿಕೊಂಡು ಬರುತ್ತಿರುವಾಗ
ಹಿಂದುಗಡೆಯಿಂದ ಅಂದರೆ ಹುಮನಾಬಾದ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪ್ರಭು ನಡೆಸುತ್ತಿದ್ದ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಆಗ ಪ್ರಭು ಮೋಟರ ಸೈಕಲ
ಸಮೇತ ರಸ್ತೆಯ ಮೇಲೆ ಜೋರಾಗಿ ಬಿದ್ದನು.
ಕಾರ ಅಪಘಾತ ಪಡಿಸಿದ
ರಭಸಕ್ಕೆ ಪ್ರಭುನ ತೆಲೆಗೆ
ಭಾರಿ ರಕ್ತಗಾಯವಾಗಿ ರಕ್ತ ಸೋರಿ ಪ್ರಭು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಅಪಘಾತ ಪಡಿಸಿದ ಕಾರ ನಂ: ಕೆಎ-39 – ಎಂ –
1606 ನೇದ್ದು ಇತ್ತು, ಅದರ ಚಾಲಕ ಅಪಘಾತಪಡಿಸಿದ ನಂತರ ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment