ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಶಿವಯೋಗಿ ತಂದೆ
ಹಿರಗಪ್ಪಾ ಕಲಬುರ್ಗಿ ಸಾ: ವಚ್ಚಾ ಇವರು ಟ್ರ್ಯಾಕ್ಟರ
ನಂ.ಕೆಎ-32
ಟಿಎ
7043
ನೇದ್ದನ್ನು
7
ತಿಂಗಳ
ಹಿಂದೆ ಖರೀದಿಸಿದ್ದು ನಮ್ಮ ತಂದೆ ಹೆಸರಿನಲ್ಲಿದ್ದು ಟ್ರ್ಯಾಲಿಗೆ ನಂ.ಹಾಕಿಸಿರುವುದಿಲ್ಲಾ. ನಮ್ಮ
ಟ್ರ್ಯಾಕ್ಟರ ಮೇಲೆ ವಿಜಯ ಕುಮಾರ ಆದರ್ಶ ಕಾಲೋನಿ ಗುಲಬರ್ಗಾ ಇತನಿಗೆ ಚಾಲಕ ಅಂತ ಇಟ್ಟುಕೊಂಡಿದ್ದು
ಇಂದು ದಿನಾಂಕ: 24-07-14 ರಂದು 6 ಎಎಂದ ಸುಮಾರಿಗೆ ನಮ್ಮ
ತಂದೆ ಹೋಲದಲ್ಲಿ ಎತ್ತಿನ ಕೊಟ್ಟಿಗೆ ಕಟ್ಟಿಸುತ್ತಿದ್ದು ಅದಕ್ಕೆ ಒಂದು ಟ್ರೀಪ ಭಾಗೋಡಿ ಹಳ್ಳದಿಂದ
ಸಾದಾ ಮರಳು ತೆಗೆದುಕೊಂಡು ಬರಲು ಚಾಲಕನಿಗೆ ಹೇಳಿ ಕೊಟ್ಟು ಕಳುಹಿಸಿದ್ದು ನಂತರ 10 ಎಎಂದ
ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿ ಯಲ್ಲಾಲಿಂಗ ತಂದೆ ಬೀರಪ್ಪಾ ಸಾ:ಮುಗಟಾ ಇತನೂ
ನನಗೆ ಫೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ತಮ್ಮ ಶರಣಪ್ಪ ನಾನು ಗುಂಡಗುರ್ತಿ ಸಮೀಪ ರಾಧಾ ಕೃಷ್ಣ
ದೊಡ್ಡಮನಿ ರವರ ಹೋಲದ ಹತ್ತಿರ ಇರುವ ರೋಡಿನ ಎಡ ಬದಿಯಿಂದ ಬರುತ್ತಿರುವಾಗ ಎದುರಿನಿಂದ 2-3 ಟ್ರ್ಯಾಕ್ಟರಗಳು
ಮರಳು ತುಂಬಿಕೊಂಡು ಬರುತ್ತಿದ್ದು ಅದರ ಹಿಂದೆ ತಹಶೀಲ್ದಾರ ಚಿತ್ತಾಪೂರ ರವರ ಜೀಪ ಇದ್ದು
ಅವುಗಳಲ್ಲಿ ನಿಮ್ಮ ಟ್ರ್ಯಾಕ್ಟರ ಸಹ ಇದ್ದು ಟ್ರ್ತಾಕ್ಟರ ಚಾಲಕ ನಿಮ್ಮ ತಮ್ಮನಿಗೆ ನೋಡಿ
ಟ್ರ್ಯಾಕ್ಟರನ್ನು ವೇಗವಾಗಿ ಗಾಭರಿಯಿಂದ ನಮ್ಮ ಹತ್ತಿರ ತಂದೆ ಬ್ರೇಕ ಮಾಡಿದ್ದಾಗ ಟ್ರ್ಯಾಕ್ಟರ ಆಯ
ತಪ್ಪಿ ರೋಡಿನ ಎಡ ಬದಿಗೆ ಪಲ್ಟಿಯಾಗಿ ನಿಮ್ಮ ತಮ್ಮನ ಮೇಲೆ ಟ್ರ್ಯಾಲಿ ಮರಳು ಸಮೇತ ಬಿದ್ದು
ಟ್ರ್ಯಾಲಿಯಲ್ಲಿ ನಿಮ್ಮ ತಮ್ಮ ಸಿಕ್ಕು ಮೃತಪಟ್ಟಿರುತ್ತಾನೆ ಅಂತ ತಿಳಿಸಿರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ
ರಾಮಶೆಟ್ಟಿ ತಂದೆ ಶಿವರುದ್ರಪ್ಪಾ ಮಾನಕರ ಸಾಃ
ಪ್ಲಾಟ ನಂ. 2-907/49/225, ವಿರೇಂದ್ರ ಪಾಟೀಲ ಬಡಾವಣೆ ಜಿ.ಡಿ.ಎ ಕಾಲೋನಿ ಸೇಡಂ ರೋಡ್
ಗುಲಬರ್ಗಾ ಇವರು ದಿನಾಂಕ 04/03/2014
ರಂದು ರಾತ್ರಿ 08:00 ಪಿ.ಎಂ. ಕ್ಕೆ ಫಿರ್ಯಾದಿಯು ವಿರೇಂದ್ರ ಪಾಟೀಲ ಬಡಾವಣೆ ಜಿ.ಡಿ.ಎ ಕಾಲೋನಿಯಲ್ಲಿರುವ
ಪ್ಲಾಟ ನಂ. 2-907/49/225, ನೇದ್ದಕ್ಕೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕಃ 05/03/2014 ರ 06:30 ಎ.ಎಂ. ರಂದು ಬಂದು ನೋಡಲು
ಮನೆಯ ಬಾಗಿಲಿನ ಕೊಂಡಿ ಮುರಿದು ಮನೆಯಲ್ಲಿದ್ದ 1) ಒಂದು HAIER ಕಂಪನೀಯ
ಎಲ್.ಇ.ಡಿ 32 “ ಟೀವಿ ಅಃಕಿಃ
23,500/- ಹಾಗು 2) ಒಂದು ತೊಲೆಯ ಬಂಗಾರದ ಬ್ರಾಸಲೆಟ್ ಅಃಕಿಃ 28,000/- ನೇದ್ದನ್ನು
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment