ನಿಂಬರ್ಗಾ ಪೊಲೀಸ ಠಾಣೆ:
ನಾನು ರಾಮಜಿ ಹೆಚ್.ಸಿ 394 ನಿಂಬರ್ಗಾ ಠಾಣೆಗೆ ಮಾನ್ಯ ಪಿ.ಎಸ್.ಐ
ಸಾಹೇಬರ ಆದೇಶದ ಮೇರೆಗೆ ಎಮ್.ಎಲ್.ಸಿ ವಿಚಾರಣೆ ಕುರಿತು
ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಬೇಟಿ ಕೊಟ್ಟಿದ್ದು ಸರಕಾರಿ ಆಸ್ಪತ್ರೆಯಲ್ಲಿ ಶ್ರೀ
ಸಿದ್ದಾರಾಮ ತಂದೆ ಬಸವರಾಜ ಬಣಗಾರ ಸಾ: ನಿಂಬರ್ಗಾ ಇತನು ಲಿಖೀತ ಫೀರ್ಯಾದಿ ಸಲ್ಲಿಸಿದ್ದು ಅದರ
ಸಾರಾಂಶವೇನೆಂದರೆ ತನ್ನ ಕಾಕಾ ರಾಜಶೇಖರ ಇತನು ತನ್ನ ಹೊಲದಲ್ಲಿ ಕೃಷಿ ಕೆಲಸ ಮಾಡುವಾಗ
ಆಕಸ್ಮಿಕವಾಗಿ ತನ್ನ ಎತ್ತು ಕೋಡಿನಿಂದ ಸದರಿಯವನಿಗೆ ಮೇಲೆಕ್ಕೆ ಎತ್ತಿ ನೆಲಕ್ಕೆ ಹಾಕಿ
ತಿಕ್ಕಾಡಿದ್ದರಿಂದ ಸದರಿಯವನಿಗೆ ಭಾರಿ ಗುಪ್ತ ಗಾಯ ಮತ್ತು ರಕ್ತ ಗಾಯವಾಗಿದ್ದು ಸದರಿಯವನಿಗೆ
ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು ಸದರಿಯವನು ಉಪಚಾರ
ಹೊಂದುತ್ತ ಮೃತಪಟ್ಟಿರುತ್ತಾನೆ ತನಗೆ ಸದರಿಯವನ ಸಾವಿನ ಬಗ್ಗೆ ಯಾರ ಮೇಲೆ ಸಂಶಯ ಮತ್ತು ಫೀರ್ಯಾದಿ
ಇಲ್ಲ ಅಂತಾ ಕೊಟ್ಟ ಫೀರ್ಯಾದಿ
ಸಾರಾಂಶ ಮೇಲಿಂದ ಮೃತ ರಾಜಶೇಖರ ತಂದೆ ಶಿವಮೂರ್ತೆಪ್ಪ ಬಣಗಾರ ಇತನ ಶವ ಪಂಚನಾಮೆ ಕೈಕೊಂಡು
ಶವವನ್ನು ಪಿ.ಎಮ್ .ಇ ಕುರಿತು ಕೊಟ್ಟು ಕಳುಹಿಸಿ
ಮರಳಿ ಠಾಣೆಗೆ ಬಂದು ಸದರಿ ಫೀರ್ಯಾದಿ ಸಾರಾಂಶದ ಮೇಲಿಂದ ಠಾಣೆಯ
ಯು.ಡಿ.ಆರ್ ಕಲಂ 174 ಸಿ.ಆರ್.ಪಿ.ಸಿ
ಪ್ರಕಾರ ಪ್ರಕರಣ ದಾಖಲು ಮಾಡಿಕೊಂತು ತನಿಖೆ ಕೈಕೊಂಡೆನು.
No comments:
Post a Comment