ಕಳವು ಪ್ರಕರಣ :
ಆಳಂದ
ಠಾಣೆ : ಶ್ರೀಮತಿ ಶೋಭಾ ಗಂಡ
ರಾಜಗೋಪಾಲ ರಾಠಿ ಸಾ:ಗೋಪಾಲಸ್ವಾಮಿ ಟೆಂಪಲ್ ಮೇನ್
ರೋಡ ಸುರಪೂರ ಜಿ:ಯಾದಗೀರ ರವರು ದಿನಾಂಕ:11/06/2014 ರಂದು ನನ್ನ ತಂಗಿಯ ಮಗಳ ಮದುವೆ ಸಲುವಾಗಿ
ಗುಲಬರ್ಗಾದಿಂದ ಸೊಲಾಪೂರಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಸಾಯಂಕಾಲ 05 ರಿಂದ 06 ಗಂಟೆಯ
ವರೆಗೆ ನನ್ನ ಹತ್ತಿರ ಇದ್ದ ಸುಮಾರು 14 ತೊಲೆ ಬಂಗಾರ ಹಾಗೂ 08 ತೊಲೆ ಬೇಳ್ಳಿ ಹಾಗೂ ನಗದು 15
ಸಾವಿರ ರೂ.ಗಳು ಇವುಗಳನ್ನು ವಿ.ಐ.ಪಿ. ಸೂಟಕೇಸನಲ್ಲಿ ಇಟ್ಟು ಕೊಂಡು ಇದರ ಜೊತೆಯಲ್ಲಿ ಏರಬ್ಯಾಗ ತೆಗೆದುಕೊಂಡು
ಮದ್ಯಾಹ್ನ 01:30 ಗಂಟೆಗೆ ಸುರಪೂರದಿಂದ ಸೋಲಾಪೂರಕ್ಕ ಹೋಗುವ ಸಲುವಾಗಿ ಬಸ್ಸನು ಹತ್ತಿದೆ ಸದರಿ
ಎಲ್ಲಾ ಆಭರಣದ ಅಂದಾಜು 4,14,500=00ರೂ ಇದ್ದು ಬಸ್ಸಿನಲ್ಲಿ ತಗೆದುಕೊಂಡು ಹೂರಟೆ ಗುಲಬರ್ಗಾಕ್ಕೆ
04=30 ಗಂಟೆಗೆ ಬಂದು ಇಳಿದು ಪುನ:ಹ ಸೋಲಾಪೂರಕ್ಕೆ ಹೋಗವ ಬಸ್ಸನು ಸಾಯಂಕಾಲ 05=15 ಗಂಟೆಗೆ ಬಂದಾಗ ಎಲ್ಲಾ
ಸಾಮಾನುಗಳೊಂದಿಗೆ ಬಸ್ಸಿಗೆ ಹತ್ತಿದೆ ಗುಲಬರ್ಗಾ ಬಿಟ್ಟು 15-20 ನಿಮಿಷದಲ್ಲಿ ನಿದ್ರೆಯಲ್ಲಿ
ಮುಳಗಿದ್ದು ಆ ನಂತರ ಟೋಲ್ ನಾಕಾ ಬಂದಾಗ ಬಸ್ಸ ನಿಂತಿದ್ದು ಸದರಿ ಸಾಮಾನುಗಳು ನೋಡಲಾಗಿ ಸದರಿ
ಆಭರಣ ಇರುವ ಸೂಟಕೇಸ ಇರಲ್ಲಿಲ್ಲಾ ಬಹುಶ ಟೋಲನಾಕಾದಲ್ಲಿ ನಿಂತಾಗ ಆಭರಣಗಳ ಸೂಟಕೇಸ ಯಾರೋ ಕಳವು
ಮಾಡಿಕೊಂಡು ಹೋಗಿರಬಹುದು ನಂತರ ನಾನು ಆಳಂದ ಬಸ್ ಸ್ಟ್ಯಾಂಡದಲ್ಲಿ ಬಂದು ಎಲ್ಲಾ ಸಾಮಾನುಗಳನ್ನು
ಚೆಕ್ಕ ಮಾಡಲಾಗಿ ಅವರಿವರನು ಕೇಳಲಾಗಿ ಸೂಟಕೇಸ ಸಿಕ್ಕಿರಲಿಲ್ಲಾ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಶಾಹಾಬಾದ
ನಗರ ಠಾಣೆ : ದಿನಾಂಕ 09-07-2014
ರಂದು ಶ್ರೀ ಚಿದಾನಂದ ತಂದೆ
ಶಿವಶರಣಪ್ಪಾ ಮಲಕೂಡ ಸಾ|| ನೆಹರೂ ಚೌಕ ಶಹಾಬಾದ ರವರ ತಮ್ಮ ಗೌರಿಶಂಕರ
ಈತನು ಮದ್ಯಾಹ್ನ 1.30 ಪಿ.ಎಮ್. ಸುಮಾರಿಗೆ
ಗೌರಿಶಂಕರ ಈತನು ಮನೆಯಿಂದ ಎದ್ದು ಹೊರಗಡೆ
ಹೋಗಿಬರುತ್ತೇನೆ ಅಂತಾ ಹೇಳಿ ಮನೆಯಲ್ಲಿದ್ದ
ಹಿರೊಹೊಂಡಾ ಸಿಡಿ-100 ಮೊ.ಸೈ. ನಂ
ಕೆಎ-32 ಇ-2961 ನೇದ್ದರ ಮೇಲೆ ಹೋದನು. ನಂತರ
1.45 ಪಿ.ಎಮ್. ಸುಮಾರಿಗೆ ನನ್ನ ತಮ್ಮ ಜೇವರ್ಗಿ ರಸ್ತೆಗೆ ಹೌಸಿಂಗ ಬೋರ್ಡ ಕಾಲೋನಿ
ದಾಟಿ ಅಂದಾಜು 500 ಮೀಟರ ಅಂತರದಲ್ಲಿ ಮೊ.ಸೈ. ಮೇಲಿಂದ
ಬಿದ್ದಿರುತ್ತಾನೆ ಅಂತಾ ಮಾಹಿತಿ ಗೊತ್ತಾಗಿ, ನಾನು
ಮತ್ತು ಸಂಗಡ ನನ್ನ ತಮ್ಮ ಸಂತೋಷ ಹಾಗೂ ಅಣ್ಣತಮ್ಮಕ್ಕೀಯ ಮಹೇಶ ಮಲಕೂಡ ಮೂರು ಜನರು ಕೂಡಿಕೊಂಡು ಹೋಗಿ ನೋಡಲಾಗಿ, ಶಹಾಬಾದ ಜೇವರ್ಗಿ ರಸ್ತೆಗೆ ಹೌಸಿಂಗ ಬೋರ್ಡ ಕಾಲೋನಿದಾಟಿ ಗೋಳೆದವರ ಹೊಲದ
ಹತ್ತಿರ ರಸ್ತೆಯ ಬಲ ಬದಿಗೆ ತಗ್ಗಿನಲ್ಲಿ ಬಿದ್ದಿದ್ದು
ನನ್ನ ತಮ್ಮ ಗೌರಿಶಂಕರನಿಗೆ ನೋಡಲಾಗಿ ಅವನ ಎಡ ಕಪಾಳಕ್ಕೆ ಭಾರಿರಕ್ತಗಾಯವಾಗಿದ್ದು, ಮತ್ತು ಎಡ ಮೆಲಕಿಗೆ ತರಚಿದ ರಕ್ತಗಾಯವಾಗಿದ್ದು, ತಲೆಯ
ಹಿಂಬದಿಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ಮತ್ತು ಕಿವಿ, ಬಾಯಿಂದ ರಕ್ತಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ
ಠಾಣೆ : ದಿನಾಂಕ 09-07-2014 ರಂದು 3 ಪಿ.ಎಮ್ ಕ್ಕೆ
ಸುಲ್ತಾನಪೂರ ರೋಡಿಗೆ ಬರುವ ಬಂಬು ಬಜಾರ ಹತ್ತಿರ ಜಮಗಾ ಬಸ್ ನಿಲ್ದಾಣ ಹತ್ತಿರ ರೋಡಿನ ಮೇಲೆ ಮಾಳಪ್ಪಾ
ತಂದೆ ನಾಗಪ್ಪಾ ಜಿವಣಗಿ ಈತನು ತನ್ನ ಗೂಡ್ಸ ವಾಹನ ಸಂಖ್ಯೆ ಕೆ.ಎ 32
ಬಿ
7963 ನೇದ್ದರಲ್ಲಿ ಪತ್ರಾಸ್ ಮತ್ತು ಕಟ್ಟಿಗೆ ಬಂಬು
ಅಪಾಯಕಾರಿ ರೀತಿಯಲ್ಲಿ ಹೇರಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ
ಪಕ್ಕದ ಕೇಬಲಗೆ ಸಿಕ್ಕಿಸಿ ತನ್ನ ವಾಹನ ನಿಲ್ಲಿಸಿದ್ದು ಅಲ್ಲದೇ ಇದರಿಂದ ಸಾರ್ವಜನಿಕ ವಾಹನ
ಸಂಚಾರಕ್ಕೆ ಅಡೆತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment