ಅಪಘಾತ ಪ್ರಕರಣಗಳು :
ಕಾಳಗಿ ಠಾಣೆ : ಶ್ರೀ ಮಾರುತಿ ತಂದೆ ಸಾಬಣ್ಣಾ ಬೇವಿನಗಿಡ ಸಾ: ಮಳಗ(ಕೆ) ಇವರು ದಿನಾಂಕ 22-06-2014 ರಂದು ನನ್ನ
ವ್ಯಯಕ್ತಿಕ ಕೆಲಸಕ್ಕಾಗಿ ಮೋಟರ ಸೈಕಲ ನಂ ಕೆಎ-32, 7228-ನೇದ್ದರ ಮೇಲೆ ಕಾಳಗಿ ಗ್ರಾಮಕ್ಕೆ ಹೋಗಿ ಮರಳಿ
ರಾಜಾಪೂರ ಗ್ರಾಮ ಮಾರ್ಗವಾಗಿ ಮಳಗಿ (ಕೆ) ಗ್ರಾಮಕ್ಕೆ ಹೋರಟಾಗ ಸಾಯಂಕಾಲ 5-30 ಗಂಟೆಯ ಸುಮಾರಿಗೆ
ಎದುರಿನಿಂದ ಲೊಕೇಶ ತಂದೆ ಶರಣಯ್ಯ ಜೀವಣಗಿ ಸಾ:: ರಾಜಾಫೂರ ಇತನು ಮೋಟರ ಸೈಕಲ ನಂ ಕೆಎ-32 ಎಕ್ಸ್
0316 ನೇದ್ದರ ಮೇಲೆ ಅತೀವೇಗ ಮತ್ತು ನೀಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದು
ನನ್ನ ಬಲಗಾಲಿಗೆ ಒಳಪೇಟ್ಟು ಮಾಡಿ ನಂತರ ಲೊಕೇಶನು ತನ್ನ ಅಣ್ಣನಾದ ವಿರೇಶನೋಂದಿಗೆ ಬಂದು ಅವಾಚ್ಯ
ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವ ಬೇದರಿಕೆ ಹಾಕಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು
ಗಾಯಾಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಯ್ಯದ ಹಬಿಬೂರ ರಹಿಮಾನ ತಂದೆ ಸಯ್ಯದ ರುಕ್ನೋದ್ದಿನ ಸಾ:ರಹಿಮತ ನಗರ ಹಳೆ ಜೇವರ್ಗಿ ರೋಡ ಗುಲಬರ್ಗಾ ರವರು ದಿನಾಂಕ: 21-06-2014 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಅಬ್ದುಲ್ ರವುಫ ಈತನು ಫಿರ್ಯಾದಿಯ ಮೋ/ಸೈಕಲ್ ನಂ; ಕೆಎ 32 ಇಇ 3081 ನೆದ್ದರ ಮೇಲೆ ಫಿರ್ಯಾದಿಗೆ ಹಿಂದೆ ಕೂಡಿಸಿಕೊಂಡು
ಅಬ್ದುಲ್ ರವುಫ ಸದರ ಮೋ/ಸೈಕಲ್ ರೈಲ್ವೆ ಸ್ಟೇಶನ ದಿಂದ ಎಸ್.ವಿ.ಪಿ.ಸರ್ಕಲ್ ಮುಖಾಂತರ ಮಿನಿ ವಿಧಾನ ಸೌದ ಕಡೆಗೆ ಚಲಾಯಿಸಿಕೊಂಡು
ಹೋಗುತ್ತಿದ್ದಾಗ ಕನ್ನಡ ಭವನ ಎದುರು ರೋಡ ಮೇಲೆ ಮೊ/ಸೈಕಲ್ ನಂ; ಕೆಎ 01ಹೆಚ್.ಎ 0780 ನೆದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು
ಹೋಗುತ್ತಿದ್ದ ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗು ಮತ್ತು ಅಬ್ದುಲ
ರವುಫನಿಗೆ ಗಾಯಗೊಳಿಸಿ ತನ್ನ ಮೋ/ಸೈಕಲ್ ಸ್ಥಳದಲ್ಲೇ ಬಿಟ್ಟು ಸವಾರನು ಓಡಿ ಹೋಗಿದ್ದು ಇರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
:
ಅಫಜಲಪೂರ ಠಾಣೆ : ದಿನಾಂಕ 22-06-2014 ರಂದು ಬೆಳಗ್ಗೆ ಶ್ರೀ ಮಲ್ಲಪ್ಪ ತಂದೆ ಹಣಮಂತ
ಜಮಾದಾರ ಸಾ : ಮಣ್ಣುರ ಹಾಗು ಸಾಯಬಣ್ಣ ಚಿಕ್ಕಮಣೂರ, ಬಾಷಾ ಬಡಗೇರ, ಶಾಹುರಸಿದ್ದ ರವರು ಕುಡಿಕೊಂಡು ರಮೇಶ ಬಾಕೆ ಇವರ ಸಫಾರಿ ವಾಹಣದಲ್ಲಿ ಮಣ್ಣುರ
ಗ್ರಾಮದಿಂದ ಅಫಜಲಪೂರಕ್ಕೆ ಹೊರಟಿದ್ದು ಬೆಳಗ್ಗೆ 10-30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಸಮೀಪ
ಮನೋಹರ ರಾಮನಗರ ಇವರ ಇಟ್ಟಂಗಿ ಭಟ್ಟಿ ಹತ್ತಿರ ವಾಹನ ನಿಲ್ಲಿಸಿ ಇಟ್ಟಂಗಿ ನೋಡುತ್ತಿರುವಾಗ ಅದೆ
ಸಮಯಕ್ಕೆ ಬಸವರಾಜ ತಂದೆ ಮಾಹಾದೇವಪ್ಪಾ ಕರೂಟಿ ಇವರು
ತಮ್ಮ ಬೋಲೆರೊ ವಾಹನವನ್ನು ತಗೆದುಕೊಂಡು ನಮ್ಮ ಎದುರಿಗೆ ಬಂದು ನಮ್ಮ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ
ತಮ್ಮ ವಾಹನದಿಂದ ಇಳಿದು ಬಂದು ನನ್ನನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು ಬಸವರಾಜ ಅಳ್ಳಗಿ
ಇವನಿಗೆ ಪಂಚಾಯತಿಯಲ್ಲಿ ಬೈದಿ ಅಂತಾ ನ್ನ ಜೋತೆಗೆ ಜಗಳ ತೆಗೆದು ಅಲ್ಲಿಯೆ ಬಿದ್ದ ಬಡಿಗೆಯಿಂದ
ನನಗೆ ಹೊಡೆಯತೊಡಗಿದನು ಬಸವರಾಜ ಜೋತೆಯಲ್ಲಿ ಬಂದಿದ್ದ ಬಸವರಾಜ ತಂದೆ ಗೌಡಪ್ಪ ಅಳ್ಳಗಿ, ಮಾಹಾಂತೇಶ
ತಂದೆ ಚಂದಪ್ಪ ವಾಯಿ ಶಿವಪ್ಪ ತಂದೆ ಮಾಹಾದೇವಪ್ಪ ಕರೂಟಿ, ಹಣಮಂತ ತಂದೆ ಬನ್ನಪ್ಪ ಕರೂಟಿ, ಶಾಮ
ತಂದೆ ಕಲ್ಲಪ್ಪ ಹಿರೋಳಿ ಇವರುಗಳು ನನ್ನನ್ನು ಮುಂದೆ ಹೋಗದಂತೆ ತಡೆದು ಕೈಯಿಂದ ಹೊಡೆ ಬಡೆ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಧರ್ಮರಾಜ ತಂದೆ ಭಗವಾನ ಜಾಧವ ಸಾ: ಭಗವಾನ ತಾಂಡಾ
ವರನಾಳ ತಾ:ಜಿ:ಗುಲಬರ್ಗಾ ಇವರು ದಿನಾಂಕ:21/06/2014ರಂದು ರಾತ್ರಿ 7-30 ಗಂಟೆಗೆ ನನ್ನ
ಕ್ರೋಜರ ಜೀಪನ್ನು ತೆಗೆದುಕೊಂಡು ನಮ್ಮ ತಾಂಡಾಕ್ಕೆ ಬಂದು ಸರ್ಕಾರಿ ಶಾಲೆಯ ಮುಂದೆ ರಸ್ತೆಯಲ್ಲಿ
ನನ್ನ ಕ್ರೋಜರ ಜೀಪನ್ನು ಸೈಡಿಗೆ ಹಚ್ಚಿ ಮನೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಸಂಬಂಧಿಕರಾದ ಮೋಹನ
ತಂದೆ ಕಿಶನ ಜಾಧವ ಮತ್ತು ನಾರಾಯಣ ತಂದೆ ಕಿಶನ ಜಾಧವ ಇವರು ಬಂದು ನಮ್ಮ ತಾಂಡಾದ ವಸಂತ ಜಾಧವ ಇವರಿಗೆ ಮೈಯಲ್ಲಿ ಆರಾಮ ಇರುವುದಿಲ್ಲಾ ಅವರಿಗೆ
ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ನಿನ್ನ ಕ್ರೋಜರ ಜೀಪನ್ನು ಕೊಡು ಅಂತಾ ಕೇಳಿದ್ದು.
ಅದಕ್ಕೆ ನಾನು ಜೀಪನ್ನು ಕೊಡುವುದಿಲ್ಲಾ ನಾನೆ ಬರುತ್ತೇನೆ. ನಡೆಯಿರಿ ಅಂತಾ ಅಂದಿದಕ್ಕೆ ಏ ರಂಡಿ ಮಗನೇ ಧರ್ಮ್ಯಾನೀನು ಒಬ್ಬನೇ ನಮ್ಮ
ತಾಂಡಾದಲ್ಲಿ ಕ್ರೋಜರ ಜೀಪ ಇಟ್ಟಿದ್ದಿಯಾ ಅಂತಾ ನಿನಗೆ ಸೊಕ್ಕ ಬಂದಿದೆ ಅವಾಚ್ಯ ಶಬ್ದಗಳಿಂದ
ಬೈಯುತ್ತಿದ್ದಾಗ ನಾನು, ಜೀಪ ಕೊಡುವುದಿಲ್ಲಾ ಅಂತಾ ಮನೆ ಕಡೆಗೆ ಹೋಗುತ್ತಿದ್ದಾಗ
ವಸಂತ ಈತನು ನನಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿದಾಗ ನಾರಾಯಣ ಈತನು ಬಡಿಗೆಯಿಂದ
ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಚೀರಾಡುತ್ತಿರುವಾಗ ಮೋಹನ ಜಾಧವ ಈತನು ನನಗೆ ಮೇಲಕ್ಕೆ
ಎತ್ತಿ ಬಗೆದಿದ್ದರಿಂದ ಸೊಂಟಕ್ಕೆಗುಪ್ತಗಾಯವಾಯಿತು. ಅಲ್ಲಿಯೇ ಮನೆಯ ಮುಂದೆ ಕುಳಿತಿದ್ದ ನನ್ನ
ತಂದೆ ಭಗವಾನ ಜಾಧವ ಮತ್ತು ನನ್ನ ಹೆಂಡತಿ ಶಾರದಾಬಾಯಿ ಇವರು ಜಗಳ ಬಿಡಿಸಲು ಬಂದಾಗ ನಾರಾಯಣ ಈತನು
ಏ ರಂಡಿ ಮಕ್ಕಳೇ ನೀವು ಜಗಳ ಬಿಡಿಸಲು ಬರುತ್ತಿರಿ ನಮಗೆ ಎದುರು ಹಾಕಿಕೊಂಡುವರು ಯಾರೂ ಉಳಿದಿಲ್ಲಾ
ಜೀವದ ಮೇಲೆ ಆಶೆ ಇದ್ದರೆ ನಾವು ಹೇಳಿದಂತೆ ಕೇಳ ಬೇಕು ಅಂತಾ ಜೀವದ ಭಯ ಹಾಕಿ ಹೊಡೆಬಡೆ
ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment