ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮತಿ ತಾರಾಬಾಯಿ ಗಂಡ ದುಂಡಪ್ಪ ದೇವುರ ಸಾ: ಶಿವಶಂಕರ ಬಡಾವಣಿ ಮಲಗಣ ಕ್ರಾಸ ಸಿಂದಗಿ ಜಿ; ಬಿಜಾಪೂರ ರವರು ದಿನಾಂಕ 19--06-2014 ರಂದು ರಾತ್ರಿ 07-15 ಗಂಟೆಗೆ ತನ್ನ
ಮಗನಿಗೆ ಹೊರಗಿನ ಔಷದ ತರಲು ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರಿನ ರೋಡನಲ್ಲಿ ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರ್.ಟಿ.ಓ
ಕ್ರಾಸ್ ಕಡೆಯಿಂದ ಅಟೋರೀಕ್ಷಾ ನಂಬರ ಕೆಎ-32 -8390 ರ ಚಾಲಕ ಯುಸುಪ ಈತನು ತನ್ನ ಅಟೋರೀಕ್ಷಾವನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:- 19/06/2014 ರಂದು ಮದ್ಯಾಹ್ನ 12:30
ಗಂಟೆ ಸುಮಾರಿಗೆ ಮೃತ ಶೇಖ ಫೀರ ಪಾಶಾ ಇತನು ತನ್ನ ಕೋಳಿ ಸಾಗಾಣಿಕೆ ಮಾಡುವ ಟಂ ಟಂ ನಂ
ಕೆಎ-39/3808 ನೇದ್ದನ್ನು ತೆಗೆದುಕೊಂಡು ಅದರಲ್ಲಿ ಫಿರ್ಯಾದಿ ಮಹಮ್ಮದ ಶಾ ಇತನಿಗೆ ಕೂಡಿಸಿಕೊಂಡು
ಗುಲಬರ್ಗಾಕ್ಕೆ ಬರುವಾಗ ಅವರಾದ ಗ್ರಾಮದ ಹತ್ತಿರ ಇರುವ ಈರಣ್ಣಾ ಚೌವಡಶೆಟ್ಟಿ ಇವರ ಹೋಲದ ಹತ್ತಿರ
ಮೆಹೆಂದ್ರಾ ಪಿ.ಕಪ್ ನಂ ಎಪಿ-05 ಡಬ್ಲೂ-8448 ನೇದ್ದರ ಚಾಲಕನು ಹಿಂದಿನಿಂದ ಅತೀವೇಗ ಮತ್ತು
ನಿಕ್ಷಾಜಿತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದರಿಂದ ಸದರಿ ಟಂ ಟಂ ರೋಡಿನ ಬಲ ಬದಿಯ ತಗ್ಗಿನಲ್ಲಿ
ಬಿದಿದ್ದರಿಂದ ಫಿರ್ಯಾದಿ ಮತ್ತು ಮೃತನಿಗೆ ಭಾರಿ ರಕ್ತಗಾಯಗಳಾಗಿದ್ದು ಅಲ್ಲದೇ ಸದರಿ ಮೆಹೆಂದ್ರ
ಪಿ.ಕಪ್ ಚಾಲಕನು ಎದುರಿಗೆ ಬರುತ್ತಿದ್ದ ಡಿಸ್ಕವರಿ ಮೋಟಾರ ಸೈಕಲ ನಂ ಕೆಎ-32 ಇಬಿ-8145
ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಾಯಾಳು ಶಿವಕುಮಾರ ಮತ್ತು ಸಿದ್ದಪ್ಪ ಇವರಿಗೆ ಭಾರಿ
ಗಾಯಗಳಾಗಿದ್ದು ಸದರಿಯವರನ್ನು 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ
ಗುಲಬರ್ಗಾಕ್ಕೆ ತರುವಾಗ 01:45 ಪಿ.ಎಂದ ಸುಮಾರಿಗೆ ದಾರಿ ಮದ್ಯದಲ್ಲಿ ಶೇಖ ಫಿರ ಪಾಶಾ ಇತನು ಮೃತ
ಪಟ್ಟಿದ್ದು ಅಪಘಾತ ಪಡಿಸಿದ ನಂತರ ಮೆಹೆಂದ್ರಾ ಪಿಕಪ್ ಚಾಲಕನು ತನ್ನ ವಾಹನವನ್ನು ಅಲ್ಲಿಯೇ
ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ರಾಘವೇಂದ್ರ ತಂದೆ ಪ್ರಭು ನಡಗೇರಿ ಸಾ||
ಕುಡಕಿ ಇವರು ದಿನಾಂಕ 18-06-2014 ರಂದು ರಾತ್ರಿ ಕುಡಕಿಯಿಂದ ಫಿರ್ಯಾದಿದಾರರು
ತಮ್ಮ ಕ್ರೂಸರ ನಂ. ಕೆ.ಎ 29,
ಎಮ. 2089 ನೇದ್ದರಲ್ಲಿ ಭಜನೆ ಕಾರ್ಯಕ್ರಮ ಕುರಿತು 01]
ಚಂದ್ರಶಾ ತಂದೆ ಗ್ಯಾನಬಾ ತಳವಾರ,
02] ಚೌಡಪ್ಪ ತಂದೆ ಶಿವಲಿಂಗಪ್ಪಾ ಪೊಲೀಸ
ಪಾಟೀಲ,
03] ಶ್ರೀಮಂತ ತಂದೆ ಯಲ್ಲಪ್ಪ ಪೊಲೀಸ ಪಾಟೀಲ,
04] ಹಣಮಂತ ತಂದೆ ಅಪ್ಪಾಸಾಬ ಎಲ್ಲರೂ ಕೂಡಿ
ಹೊರಟಾಗ ಸುಂಟನೂರ ಗ್ರಾಮದ ಹತ್ತಿರ ಇರುವ ಅಪ್ಪಾಪೀರ ದರ್ಗಾದ ಹತ್ತಿರ ರಾತ್ರಿ 9 ಗಂಟೆಗೆ
ಹೋಗುತ್ತಿದ್ದಾಗ ಎದುರುಗಡೆಯಿಂದ ಟ್ರಾಕ್ಟರ ನಂ. ಕೆ.ಎ 32, ಟಿ 3951 – 52 ನೇದ್ದರ ಚಾಲಕನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕ್ರೂಸರಗೆ ಡಿಕ್ಕಿ
ಹೊಡೆದಿದ್ದರಿಂದ ಕ್ರೂಸರದಲ್ಲಿದವರಿಗೆ ತರಚಿದ ಮತ್ತು ರಕ್ತಗಾಯಗಳಾಗಿದ್ದು ಅಲ್ಲದೆ ಕ್ರೂಸರ
ಜಖಂಗೊಂಡಿರುತ್ತದೆ, ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅರ್ಜುನ
ತಂದೆ ಧರ್ಮಣ್ಣಾ ಕಾಂಬಳೆ ಸಾ: ಸಂಗೋಳಗಿ ಶೆಡ್ ತಾ|| ಆಳಂದ ರವರು ದಿನಾಂಕ 21-06-2014 ರಂದು ಸಂಬಂಧಿಕರ
ಮದುವೆ ಇರುವುದರಿಂದ ನಾವು ಮದುವೆಗೆ ಹೋಗಬೇಕು ಅಂತಾ ದಿನಾಂಕ 18-06-2014 ರಂದು ರಾತ್ರಿ 11:00
ಗಂಟೆ ಸುಮಾರಿಗೆ ಪೂನಾದಿಂದ ನಮ್ಮ ಅಳಿಯ ಚಲಾಯಿಸುವ ವಾಹನ ನಂ ಎಮ್‌ಹೆಚ್ 12 ಸಿಟಿ 7556 ಟಾಟಾ
ಸೂಮೋ ವಾಹನ ನೇದನ್ನು ಮಾಡಿಕೊಂಡು ನಾನು & ನನ್ನ ಹೆಂಡತಿ ರಾಧಾಬಾಯಿ ಮಗಳು ಕವಿತಾಗಂಡ
ಶಿವಾನಂದ ಜಮಗೆ, ಸಂಗೀತಾ ಗಂಡ ಮಲ್ಲಿನಾಥ ಜುಬರೆ, ಮೊಮ್ಮಕ್ಕಳಾದ ಗೌರಮ್ಮಾ ತಂದೆ ಅಭಿಮಾನ್
ಕಾಂಬಳೆ, ಚಂದ್ರಕಲಾ ತಂದೆ ಶಿವಾನಂದ ಜಮಗೆ, ಪದ್ಮಾ ತಂದೆ ಶಿವಾನಂದ ಜಮಗೆ, ಕಾರ್ತಿಕ ತಂದೆ
ಶಿವಾನಂದ ಜಮಗೆ, ಪ್ರೇಮಾ ತಂದೆ ರೋಹಿತ ಕಾಂಬಳೆ, & ನನ್ನ ಅಳಿಯ ಮಲ್ಲಿನಾಥ ಜುಬರೆ ಎಲ್ಲರೂ
ಕೂಡಿ ಸೋಲಾಪೂರ ಮಾರ್ಗ ಮೂಲಕ ವಾಗ್ದರಿ ರೋಡಿನ ಮಾರ್ಗ ಮೂಲಕ ನಮ್ಮೂರ ಸಂಗೋಳಗಿ (ಜಿ) ಕಡೆಗೆ
ಬರುವಾಗ ಸಾವಳೇಶ್ವರ ಪಾಟಿ ದಾಟಿ ಬರುವಾಗ ಖಾನಾಪೂರ ಕ್ರಾಸ್ ಹತ್ತಿರ ಬಂದಾಗ ನಮ್ಮ ಟಾಟಾ ಸೂಮೋ
ವಾಹನ ಚಾಲಕ ನನ್ನ ಅಳಿಯ ಮಲ್ಲಿನಾಥ ಮರೆಪ್ಪಾ ಜುಬರೆ ಈತನು ಅತಿವೇಗ & ಅಲಕ್ಷತನದಿಂದ ಮಾನವ
ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಹೋಗುವಾಗ ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ
ಕೂಡಾ ಅದೇ ರೀತಿಯಲ್ಲಿ ಓಡಿಸುತ್ತಾ ಹೋಗುವಾಗ ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ ಕೂಡಾ ಅದೇ
ರೀತಿಯಲ್ಲಿ ಓಡಿಸುತ್ತಾ ಹೋದವನೆ ವಾಹನ ನಿಯಂತ್ರಣ ತೆಗೆದುಕೊಳ್ಳಲಾಗದೆ, ಒಮ್ಮೇಲೆ ರೋಡಿನ
ಪಕ್ಕಕ್ಕೆ ಖಾನಾಪೂರ ಕ್ರಾಸ್ ಹತ್ತಿರ ತಗ್ಗಿನಲ್ಲಿ ವಾಹನ ಪಲ್ಟಿ ಮಾಡಿದ್ದರಿಂದ ಒಳಗಡೆ ಇದ್ದ
ನನಗೆ ಬಲಕ್ಕೆ ಭುಜದ ಮೇಲೆ ಸೊಂಟದ ಮಗ್ಗಲಿಗೆ, ಎಡಗೈ ಬೆರಳಿಗೆ, ಹೊಟ್ಟೆಗೆ ಎದೆಗೆ
ಗುಪ್ತಗಾಯವಾಗಿದೆ, ಮೊಮ್ಮಗಳು ಗೌರಮ್ಮಳಿಗೆ ಎಡಮೆಲಕಿಗೆ ಸೊಂಟಕ್ಕೆ ಗುಪ್ತಗಾಯ ರಕ್ತಗಾಯವಾಗಿದ್ದು
ಚಂದ್ರಕಲಾ ಇವಳಿಗೆ ಹೊಟ್ಟೆಗೆ ಎಡಮೊಳ ಕಾಲಿಗೆ ಗುಪ್ತಗಾಯ ಪದ್ಮಾ ಇವಳಿಗೆ ಹೊಟ್ಟೆಗೆ ಬೆನ್ನಿಗೆ
ಗುಪ್ತಗಾಯವಾಗಿದ್ದು ಮಗಳು ಕವಿತಾ ಇವಳಿಗೆ ಎಡಗೈ ಮುಂಗೈ ಮುರದಿದ್ದು ಹಣೆಗೆ ಮೊಳಕಾಲಿಗೆ ತರಚಿದ
ಗಾಯವಾಗಿದ್ದು ಕಾರ್ತಿಕ ಇತನಿಗೆ ಎಡ ಮೆಲಕಿಗೆ ಹಣೆಯ ಮೇಲೆ ತೆರಚಿದ ಗಾಯವಾಗಿದ್ದು ನನ್ನ ಅಳಿಯ
ಚಾಲಕ ಮಲ್ಲಿನಾಥನಿಗೆ ಬಲಗಡೆ ಸೊಂಟಕ್ಕೆ ತೆರಚಿದ ರಕ್ತ ಮತ್ತು ಗುಪ್ತ ಗಾಯವಾಗಿದ್ದು ಬಲಗೈ ಮುಂಗೈ
ಹತ್ತಿರ ರಕ್ತ ಮತ್ತು ಗುಪ್ತ ಗಾಯವಾಗಿದ್ದು ಮೊಮ್ಮಗಳು ಪ್ರೇಮಾ ಇವಳಿಗೆ ಗದ್ದಕ್ಕೆ ತೆರಚಿದ
ಗಾಯವಾಗಿದೆ, ಮತ್ತು ನನ್ನ ಹೆಂಡತಿ ರಾಧಾಬಾಯಿ ಇವಳಿಗೆ ತಲೆಯ ಮೇಲೆ ಭಾರಿ ರಕ್ತಗಾಯವಾಗಿ ಬಲಗಾಲು
ಮುರಿದು ಸ್ಥಳದಲ್ಲಿಯೇ ಮೃತ್ತಪಟ್ಟಿರುತ್ತಾಳೆ, ನನ್ನ ಮಗಳು ಸಂಗೀತಾ ಗಂಡ ಮಲ್ಲಿನಾಥ ಜುಬರೆ
ಇವಳಿಗೆ ಹಣೆಯ ಮೇಲೆ ತಲೆ ಒಡೆದು ಭಾರಿ ರಕ್ತಗಾಯ & ಅಲ್ಲಲ್ಲಿ ಗುಪ್ತಗಾಯವಾಗಿ ಬಲಗೈ ಮುಂಗೈ
ಮುರಿದು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ್ತ ಪಟ್ಟಿರುತ್ತಾಳೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕ್ರೀಮಿನಾಶಕ ಔಷಧಿ
ಸೇವಿಸಿ ಮರಣ ಹೊಂದಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶರಣಪ್ಪ ತಂದೆ ಶಿವಪ್ಪಾ ಸುಗೂರ ಸಾ||
ಬೆಣ್ಣೆಶಿರೂರ ಇತನು ಸರಾಯಿ ಕುಡಿದ
ನಶೆಯಲ್ಲಿ ಹೊಟ್ಟೆ ನೋವು ತಾಳದೆ ಮನೆಯಲ್ಲಿದ್ದ ಯಾವುದೋ ಒಂದು ಕ್ರಿಮಿನಾಶಕ ಔಷಧಿ ಸೇವಿಸಿ ಉಪಚಾರ
ಕುರಿತು ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿ ದಿನಾಂಕ 19-06-2014 ರಂದು 0715 ಗಂಟೆಗೆ ಮೃತಪಟ್ಟಿರುತ್ತಾನೆ ಸದರಿಯವನ ಸಾವಿನ ಬಗ್ಗೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇಲ್ಲ
ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment