ಅತ್ಯಾಚಾರ ಪ್ರಕರಣ :
ಅಫಜಲಪೂರ
ಠಾಣೆ : ಶ್ರೀ ನಿತೀನ ತಂದೆ ಮಾರುತಿ ವಾಳವೇಕರ ಸಾ ; ಉಪ್ಪಾರ ಹಟ್ಟಿ ತಾ : ಅಫಜಲಪೂರ ರವರ ಅಣ್ಣನಾದ ಬೀರಣ್ಣನು ಸುಮಾರು 04 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾನೆ. ಅವರಿಗೆ 4 ಜನ ಮಕ್ಕಳು ಇರುತ್ತಾರೆ. ನಮ್ಮ ಅಣ್ಣನ 03 ಜನ ಮಕ್ಕಳು ನಮ್ಮೊಂದಿಗೆ ವಾಸವಾಗಿರುತ್ತಾರೆ. ಸದರಿ ಮನಿಶಾಳ ವಯಸ್ಸು 16 ವರ್ಷ ಇರುತ್ತವೆ. ನಮ್ಮ ಅಣ್ಣನ ಕೊನೆಯ ಮಗಳು ಮತ್ತು ನಮ್ಮ ಅತ್ತಿಗೆ ಅಂಬವ್ವಾ ಇವರು ಪ್ರತ್ಯೇಕ
ಮನೆಯಲ್ಲಿ ವಾಸವಾಗಿರುತ್ತಾರೆ. ಊರಲ್ಲಿ ಒಂದು ಮತ್ತು ಹೊಲದಲ್ಲಿ ಒಂದು ಹೀಗೆ ನಮ್ಮ ಎರಡು
ಮನೆಗಳು ಇರುತ್ತವೆ. ಹೊಲದ ಕೆಲಸ ಇದ್ದಾಗ ನಾವು ಹೊಲದ ಮನೆಯಲ್ಲಿ ಇರುತ್ತೇವೆ. ಹೊಲದ ಕೆಲಸ ಇಲ್ಲದಿದ್ದಾಗ ಊರಲ್ಲಿನ ಮನೆಯಲ್ಲಿ
ಇರುತ್ತೇವೆ. ಕಳೆದ 4-5 ದಿವಸಗಳಿಂದ ನಮ್ಮ ಹೊಲದಲ್ಲಿ ಕೆಲಸ ನಡೆದಿದ್ದರಿಂದ ನಾನು
ಮತ್ತು ನನ್ನ ಹೆಂಡತಿ ಮಕ್ಕಳು ಎಲ್ಲರು ನಮ್ಮ ಹೊಲದಲ್ಲಿನ ಮನೆಯಲ್ಲಿ ಉಳಿದುಕೊಂಡು ಈ ದಿವಸ
ಬೆಳಿಗ್ಗೆ ಊರಲ್ಲಿನ ಮನೆಗೆ ಬಂದಿರುತ್ತೇವೆ. ಇಂದು ದಿನಾಂಕ 25-06-2014 ರಂದು ಬೆಳಿಗ್ಗೆ 08;00 ಗಂಟೆ ಸುಮಾರಿಗೆ ನಮ್ಮ ಅಣ್ಣನ ಮಗಳಾದ ಕುಮಾರಿ ಇವಳು
ಮನೆಯಲ್ಲಿ ಅಳುತ್ತಾ ಕುಳತಿದ್ದಳು. ಆಗ ನಾನು ಅವಳನ್ನು ವಿಚಾರಿಸಿದಾಗ ಅವಳು ಅಳುತ್ತಾ
ತಿಳಿಸಿದ್ದೇನೆಂದರೆ, ದಿನಾಂಕ 21-06-2014 ರಂದು ರಾತ್ರಿ 8;00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನೊಬ್ಬಳೆ ಇದ್ದು ನಮ್ಮ ಅಜ್ಜಿ ಪಕ್ಕದವರ ಮನೆಗೆ ಹೋಗಿ
ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ. ನಮ್ಮ ಅಜ್ಜಿ ಹೊರಗಡೆ ಹೋಗುವದನ್ನು ನೋಡಿ ಮತ್ತು
ಮನೆಯಲ್ಲಿ ಒಬ್ಬಳೆ ಇರುವುದನ್ನು ತಿಳಿದುಕೊಂಡು ನಮ್ಮ ಓಣಿಯ ನಿತೀನ ತಂದೆ ಮಾರುತಿ ವಾಳವೇಕರ
ಎಂಬಾತನು ನಮ್ಮ ಮನೆಯಲ್ಲಿ ಬಂದು ಒಮ್ಮೇಲೆ ಬಾಗಿಲು ಮುಚ್ಚಿದನು. ಆಗ ನಾನು ಆತನಿಗೆ ನಮ್ಮ ನೆಯಲ್ಲಿ ಬಂದು ಬಾಗಿಲು ಏಕೆ ಮುಚ್ಚಿದಿ ಅಂತಾ ಕೇಳಿದಾಗ ಅವನು ಕೂಗಾಡಿದರೆ ನೋಡು ನಿನ್ನ
ಕುತ್ತಿಗೆ ಒತ್ತಿ ಸಾಯಿಸುತ್ತೇನೆ ಅಂತಾ ಭಯ ಹಾಕಿ ತನ್ನ ಪ್ಯಾಂಟನ್ನು ಬಿಚ್ಚಿ ನನ್ನನ್ನು
ತಬ್ಬಿಕೊಂಡು ನೆಲದ ಮೇಲೆ ಹಾಕಿದನು, ನಾನು ಎಷ್ಟು ವಿರೋಧ ವ್ಯಕ್ತ ಪಡಿಸಿದರೂ ಸಹ ಅವನು ನನಗೆ
ಒತ್ತಾಯಪೂರಕವಾಗಿ ಜಬರಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆ. ನಂತರ ಅವನು ತನ್ನ ಪ್ಯಾಂಟ ಹಾಕಿಕೊಂಡು ಬಾಗಿಲ ತೆಗೆದು ಹೋಗುವಷ್ಟರಲ್ಲಿ ಹೊರಗಡೆ ಹೋಗಿದ್ದ
ನಮ್ಮ ಅಜ್ಜಿ ಪಾರ್ವತಿ ಬರುತ್ತಿರುವುದನ್ನು ನೋಡಿ ನಿತಿನ ವಾಳವೆಕರ ಓಡಿ ಹೋಗಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಂಕರ ತಂದೆ ಮಾಧು ರಾಠೋಡ, ಸಾ|| ಮಾಡಿಯಾಳ ತಾಂಡಾ ದಿನಾಂಕ
24-06-2014 ರಂದು ರಾತ್ರಿ 12 ಗಂಟೆಯಿಂದ ದಿನಾಂಕ 25-06-2014 ರಂದು 5 ಗಂಟೆಯ ಮಧ್ಯದ ಅವಧಿಯಲ್ಲಿ
ಫಿರ್ಯಾದಿಯು ಹಾಗೂ ಆತನ ಮನೆಯವರು ಮನೆಯ ಕೀಲಿ ಹಾಕಿ ಮನೆಯ ಮುಂದಿನ ಅಂಗಳದಲ್ಲಿ ಮಲಗಿಕೊಂಡಾಗ
ತನ್ನ ಮನೆಯ ಹಿಂದಿನ ಖೋಲಿಯ ಫತ್ರಾ ಎತ್ತಿ ಯಾರೋ ಕಳ್ಳರು ಮನೆಯಲ್ಲಿ ಇಳಿದು ಮನೆಯಲ್ಲಿದ್ದ
ಟೀಜೂರಿ ಒಡೆದು ಅದರಲ್ಲಿಟ್ಟಿದ್ದ ನಗದು ಹಣ, ಬಂಘಾರದ ಆಭರಣ ಹೀಗೆ ಒಟ್ಟು 2,13,000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment