POLICE BHAVAN KALABURAGI

POLICE BHAVAN KALABURAGI

06 June 2014

GULBARGA DIST REPORTED CRIMES

ಹುಡುಗ ಕಾಣೆ ಪ್ರಕರಣ:
ಮಹಾಗಾಂವ ಠಾಣೆ: ದಿನಾಂಕ : 05-06-2014 ರಂದು ಶ್ರೀ ಸುಭಾಷ ತಂ ರೇವಣಪ್ಪ ಕಟ್ಟಿಮನಿ ಸಾ|| ಮಹಾಗಾಂವ ಕ್ರಾಸ ರವರು ಠಾಣೆಗೆ ಹಾಜರಾಗಿ ದಿನಾಂಕ : 31/05/14 ರಂದು ಬೆಳಗ್ಗೆ 9.00 ಗಂಟೆಗೆ ತನ್ನ ಮಗ ಶಿವಾನಂದನು ಮನೆಯಲ್ಲಿ ಊಟಮಾಡಿ ಶರ್ಟ ಪ್ಯಾಂಟ ದರಿಸಿಕೊಂಡು ಮನೆಯಿಂದ ಹೋರಗೆ ಹೋಗಿದ್ದು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂದಿನಿಂದ ಇಂದಿನವರೆಗೆ ನಾನು ಹಾಗೂ ಮನೆಯವರೆಲ್ಲರೂ ಕೂಡಿ ಎಲ್ಲಾ ಕಡೆ ಹುಡುಕಾಡಿ ನಮ್ಮ ಸಂಬಂದಿಕರ ಊರುಗಳಿಗೆ ಪೋನ ಮಾಡಿ ಶಿವಾನಂದನ ಬಗ್ಗೆ ವಿಚಾರಿಸಿದ್ದು ಇಲ್ಲಿಯವರೆಗೆ ಆತನ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ.  ದಿನಾಂಕ 31-05-2014 ರಂದು ಮನೆಯಿಂದ ಹೋರೆಗೆ ಹೋಗಿ ಕಾಣೆಯಾಗಿರುವ ನನ್ನ ಮಗ ಶಿವಾನಂದನ ಪತ್ತೆ ಮಾಡಿಕೊಡುವಂತೆ ಸಲ್ಲಲಿಸಿದ ದೂರು ಸಾರಾಂಶದ ಮೇಲಿಂಧ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ :ದಿನಾಂಕ:05/06/2014 ರಂದು ಕುಮಾರಿ ವಿಶಾಲಕ್ಷೀ ತಂದೆ ಪ್ರಕಾಶ ಪಾಟೀಲ ಸಾ: ಬೇಲೂರ(ಕೆ) ತಾ:ಜಿ: ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ: 20-05-2014 ರಂದು ಬೇಳಿಗ್ಗೆ 10-30 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಶ್ರೀಮತಿ ಚಂದ್ರಕಲಾ ಪಿ. ಪಾಟೀಲ ಹಾಗು ನನ್ನ ಅಕ್ಕನ ಮಗಳಾದ ಪ್ರೀಯಾ ತಂದೆ ಶಿವಲಿಂಗಪ್ಪಾ ಪಾಟೀಲ ಬೇಲೂರಿನಿಂದ ಗುಲಬರ್ಗಾಕ್ಕೆ ಬರಲು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ನಿಂತುಕೊಂಡಾಗ ಜೀವಣಗಿ ಕಡೆಯಿಂದ ಬರುತ್ತಿದ್ದ ಹಿರೋಹೊಂಡಾ ಫ್ಯಾಶನ ಮೋ.ಸೈಕಲ ನಂ. ಕೆಎ:32, ಎಲ್:5395 ನೇದ್ದರ ಸವಾರನು ತನ್ನ ಮೋ.ಸೈಕಲ ಮೇಲೆ ಒಬ್ಬ ಹುಡಗಿಯನ್ನು ಕೂಡಿಸಿಕೊಂಡು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಕ್ಕನ ಮಗಳಾದ ಪ್ರೀತಿ ಇವಳಿಗೆ ಅಪಘಾತ ಪಡಿಸಿ ತನ್ನ ಮೋ.ಸೈಕಲ ಸಮೇತ ಓಡಿ ಹೋಗಿದ್ದರಿಂದ ಪ್ರೀತಿ ಇವಬಲಗಾಲಕ್ಕೆ ಸಂಪೂರ್ಣ ಗಾಯಗಳಾಗಿದ್ದು. ಬಲಗಡೆ ತಲೆಗೆ, ಬಲಗಡೆ ಬೆನ್ನಿಗೆಹಾಗು ಬಲಗೈಗೆ, ಬಲಗಾಲಿಗೆ ತೀವ್ರಗಾಯಗಳಾಗಿದ್ದು. ಉಪಚಾರ ಕುರಿತು ಕಮಲಾಪೂರ ಆಸ್ಪತ್ರೆ ಉಪಚಾರ ಮಾಡಿಸಿ, ನಂತರ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾ ಬಸವೇಶ್ವರ ಆಸ್ಪತ್ರೆಯಲ್ಲಿ ಓ.ಪಿ.ಡಿ ಮೇಲೆ ತೋರಿಸಿ, ನಂತರ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದು ಇರುತ್ತದೆ. ನಾವು ದಿ;20-05-14 ರಿಂದ ಇಲ್ಲಿಯವರೆಗೆ ಆಕೆಯ ಚಿಕಿತ್ಸೆಯಲ್ಲಿ ತೊಡಗಿದ್ದು ಇರುತ್ತದೆ. ಆದ್ದರಿಂದ ದೂರು ನೀಡಲು ತಡವಾಗಿದ್ದು. ಅಪಘಾತ ಪಡಿಸಿದ ಮೋ.ಸೈಕಲ ನಂ. ಕೆಎ:32,ಎಲ್:5395 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಅಫಜಲಪೂರ ಠಾಣೆ: ಶ್ರೀ ಲಿಂಬಾಜಿ ತಂ. ಸೀತು ರಾಠೋಡ ಸಾ: ದೇಸಾಯಿ ಕಲ್ಲೂರ ತಾಂಡಾ ರವರು ಠಾಣೆಗೆ ಹಾಜರಾಗಿ ದಿನಾಂಕ 05-06-2014 ರಂದು ಸಾಯಂಕಾಲ ತನ್ನ ಮಗ ಆಕಾಶ ಮತ್ತು ಅಫಜಲಪೂರ ಪಟ್ಟಣದ ರಾದಾಕೃಷ್ಣನ ಶಾಲೆಯ ಶೀಕ್ಷಕರಾದ ರವಿ ದಾನೆನ್ನನವರ ಇಬ್ಬರೊ ಶಾಲೆಯ ಪ್ರಚಾರಕ್ಕೆ ಎಂದು ಬಿತ್ತಿ ಪತ್ರಗಳನ್ನು ತಗೆದುಕೊಂಡು ನಮ್ಮ ತಾಂಡಾಕ್ಕೆ ಬಂದು ನಮ್ಮ ತಾಂಡಾದ ಸುರೇಶ ರಾಠೋಡ ರವರ ಹೊಟೇಲ ಮುಂದೆ ಕುಳಿತಿದ್ದಾಗ ಆಕಾಶ ಮತ್ತು ರವಿ ಇಬ್ಬರು ಸದರಿ ಹೊಟೇಲ ಹತ್ತಿರ ಬಂದು ಹೊಟೇಲ ಗೊಡೆಗೆ ಬಿತ್ತಿ ಪತ್ರ ಅಂಟಿಸುತ್ತಿರುವಾಗ ಹೊಟೇಲ ಹತ್ತಿರ ಕುಳಿತಿದ್ದ ಸಂಜಯ ತಂದೆ ಧಾಮಲು ಚವ್ಹಾಣನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನೀವು ಮಕ್ಕಳಿಗೆ ಏನ ಕಲ್ಸತೀರಿ, ಈಗ ದೊಡ್ಡದಾಗಿ ಪ್ರಚಾರ ಮಾಡಲು ಬಂದಿರಿ ಎಂದು ಬೈಯುತ್ತಿರುವಾವ ನಾನು ಸಂಜಯನಿಗೆ ಅವರಿಗೆ ಯಾಕ ಬೈಯುತ್ತಿಯಾ ಅಂತಾ ಕೇಳಿದ್ದಕ್ಕೆ ಸಂಜಯನು ನನಗೆ ಸಹ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ವಿನಾಃಕಾರಣ ನನ್ನ ಜೊತೆ ಜಗಳ ತೆಗೆದು ಸಂಜಯ ಚವ್ಹಾಣ ಮತ್ತು ಆತನ ತಮ್ಮ ಸನೀಲ ಚವ್ಹಾಣ ಇಬ್ಬರೊ ಬಂದು ಸಂಜಯನು ಕಲ್ಲಿನಿಂದ ಹೋಡೆದನು, ಮತ್ತು ಸುನೀಲನು ಕೈಯಿಂದ ನನ್ನ ಮೈ ಕೈಗೆ ಹೊಡೆದು ಈ ಸೂಳೆ ಮಗನಿಗೆ ಇವತ್ತ ಕಲಾಸ ಮಾಡ್ತಿವಿ ಅಂತಾ ಹೊಡೆಯುತ್ತಿದ್ದಾಗ ನನ್ನ ಮಗ ಆಕಾಶ ಮತ್ತು ವಿನೋದ ರಾಠೋಡ, ರವಿ ದಾನ್ನೆನವರ, ಹಾಗೂ ಸುರೇಶ ರಾಠೊಡ ವರು ಬಂದು ಜಗಳ ಬಿಡಿಸಿದ್ದು ವಿನಾಃಕಾರಣ ನನ್ನ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬಯ್ದು ಕೈಯಿಂದ ಕಲ್ಲಿನಿಂದ ಹೊಡೆದ ಆಪಾದಿತರ ವಿರುದ್ದ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: