POLICE BHAVAN KALABURAGI

POLICE BHAVAN KALABURAGI

12 March 2014

Gulbarga District Reported Crimes

ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಮಾಡಿಯಾಳ ಗ್ರಾಮದ ಕಾವೇರಿ ವ|| 42 ವರ್ಷಸಾ|| ಮಾಡಿಯಾಳ  ಇವಳು ತನ್ನ ಮನೆಯಲ್ಲಿದ್ದಾಗ ಅದೇ ಗ್ರಾಮದ ಹಣಮಂತ ಪ್ರಭು ಪುರಲೆ ಎಂಬುವವನು ಮನೆಗೆ ನುಗ್ಗಿ ಗಾಸಲೇಟ ಕೊಡುವದಾಗಿ ಆಸೆ ತೋರಿಸಿ ತನ್ನ ಸಂಗಡ  ಮಲಗುವಂತೆ ಒತ್ತಾಯ ಮಾಡಿದ್ದು ಅದಕ್ಕೆ  ನಿರಾಕರಿಸಿದ್ದಕ್ಕೆ ಹಣಮಂತನು ಕೈ ಹಿಡಿದು ಜಗ್ಗಾಡಿ ಕಾಲಿನಿಂದ ತೊಡೆ ಹಾಗೂ ಸಂಸಾರದ ಮೇಲೆ ಒದ್ದು ಬಲವಂತವಾಗಿ ನೆಲಕ್ಕೆ ಹಾಕಿ ಸೀರೆ ಎತ್ತಿ ಸಂಭೋಗ ಮಾಡಲು ಯತ್ನಿಸಿದಾಗ  ಚೀರಾಡಿದ್ದು ಅವಳ ಸಪ್ಪಳ ಕೇಳಿ ನೆರೆ ಮನೆಯವರು ಬಂದಾಗ ಹಣಮಂತನು ಬಿಟ್ಟು ಹೋಗಿರುತ್ತಾನೆ ಅಂತ ಶ್ರೀಮತಿ ಶಶಿಕಲಾ ಗಂಡ ಶಿವಶರಣಪ್ಪ ಕಲ್ಯಾಣ  ಸಾ|| ಕೊಗನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಮಜರ ಅಹ್ಮದ ತಂದೆ ಅಹ್ಮದ ಶರೀಫ್ ಸುಂಡಕೇ ಸಾ|| ಅಹ್ಮದ ರಜಾ ಕಾಲೋನಿ ರಜಾ-ಜಾಮಿಯಾ ಮಸ್ಜಿದ ಎದುರಿಗಡೆ ಗುಲಬರ್ಗಾ ರವರು ದಿನಾಂಕ 10.03.2014 ರಂದು ಮಧ್ಯಾನ 12.30 ಗಂಟೆಗೆ ನಾನು ನನ್ನ ಮಗಳ ಜೊತೆಗೆ ಪರೀಕ್ಷ ಫಲಿತಾಂಶ ನೋಡಿ ಬರಲು ಡೆಕ್ಕನ್ ಕಾಲೇಜಿಗೆ ಹೋಗಿದ್ದೆ ನನ್ನ ಹೆಂಡತಿ ನುಜತ ಸುಲ್ತನ ನನ್ನ ಮಗಳಾದ ನಿಖತ ಪರ್ವಿನ ಇವಳ ಡಿಲೇವರಿ ಆಗಿದ್ದರಿಂದ ಅವರ ಮನೆಯಾದ ಮಹಿಬೂಬ ನಗರದ ಕಾಲೊನಿಗೆ ಮಾತಾಡಿಸಿ ಬರಲು ಮನೆಗೆ ಕೀಲಿ ಹಾಕಿ ಹೋಗಿದ್ದೇವು ಮರಳಿ ಅಂದಾಜು ಮಧ್ಯಾನ 13.00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಮುಂದಿನ ಗೇಟಿಗೆ ಹಾಕಿದ ಕೀಲಿ ಹಾಗೇ ಇದ್ದು ಕೀಲಿ ತೆರೆದು ಮುಖ್ಯೆ ಬಾಗಿಲಿಗೆ ಹೋಗಿ ನೋಡಲಾಗಿ ಬಾಗಿಲಿಗೆ ಹಾಕಿದ ಕೊಂಡಿ ಮುರಿದಿ ಕೀಲಿ ಸಮೇತ ಕೆಳಗೆ ಬಿದ್ದಿದ್ದು ಬಾಗಿಲು ಅರ್ದ ತೆರೆದಿದ್ದು ನೋಡಿ ಘಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ನಲ್ಲಿರುವ ಅಲಮಾರಿಯ ಕೀಲಿ ರಾಡಿನಿಂದ ಮುರಿದಿದ್ದು ಬಾಗಿಲು ತೆರೆದಿದ್ದು ನೋಡಲಾಗಿ ಮತ್ತು ನನ್ನ ಹೆಂಡತಿಗೆ ಫೋನ್ ಮಾಡಿ ಕರೆಯಿಸಿ ಪರಿಶಿಲಿಸಲು ಅಲಮಾರಿಯಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,82,000/- ರೂ ಬೆಲೆಬಾಳುವಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೈಯದ ಮುಜ್ಜಿಬ ಉಲ್ಲಾ ಖಾದರಿ ತಂದೆ ಸೈಯದ್ ಅಮೀದ್ ಉಲ್ಲಾ ಖಾದರಿ  ಸಾ: ಮ.ನಂ. 3-1023/1 ಎ/ಸಿ ಅತ್ತರಕಂಪೌಂಡ ಗಾಜಿಪೂರ ಗುಲಬರ್ಗಾದ ಇವರು ತಮ್ಮ  ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ದ್ವಿಚಕ್ರ ವಾಹನ ನಂ; KA-25 W-4819 ಗ್ರೇ ಕಲರ, ಚೆಸ್ಸಿ ನಂ: 05E16C21835 ಇಂಜಿನ ನಂ: 05E15M22467 ಅ.ಕಿ 15,000/-ರೂ ಬೆಲೆಬಾಳುವದನ್ನು, ನ್ನ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 12-01-2014 ರಂದು ರವಿವಾರ 4:00 ಪಿಎಮ್ ಕ್ಕೆ ಕೇಂದ್ರ ಬಸ್ ನಿಲ್ದಾಣದ ಒಳಗಡೆ ಆಟೋ ಸ್ಟ್ಯಾಂಡ ನಿಲ್ಲುವ ಸ್ಥಳದ ಹಿಂದುಗಡೆ ಫುಟಫಾತ ಮೆಲೆ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ಆಳಂದಕ್ಕೆ ಹೋಗಿದ್ದು ನಂತರ 6:00 ಪಿಎಮ್ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನದಿಂದ ಆಕ್ರಮ ಮರಳು ಸಾಗಿಸಿದ ಪ್ರಕರಣ :
ಫರತಾಬಾದ ಠಾಣೆ :  ಮಾನ್ಯ ಎಎಸ್‌ಪಿ ಸಾಹೇಬರು ಗ್ರಾಮಾಂತರ ಉಪ ವಿಬಾಗ ಗುಲಬರ್ಗಾರವರು ದಿನಾಂಕ: 08-03-2014  ರಂದು ರಾತ್ರಿ ವೇಳೆಯಲ್ಲಿ ನಿಮ್ಮ ಪಿಎಸ್‌‌ಐರವರಿಗೆ ಸಿಬ್ಬಂದಿಯೊಂದಿಗೆ ಹಸನಾಪೂರ ಗ್ರಾಮದ ಸೀಮಾಂತರ  ಬೀಮಾ ನದಿಯಲ್ಲಿ ಆಕ್ರಮವಾಗಿ ಕಳ್ಳತನದಿಂದ ಮರಳನ್ನು ಹಿಟಾಚಿ ಮತ್ತು ಜೆಸಿಬಿಯಿಂದ ತೆಗೆದು ಟಿಪ್ಪರನಲ್ಲಿ  ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ದಾಳಿ ಮಾಡಲು ಪಿ.ಎಸ್.ಐ ರವರಿಗೆ ತಿಳಿಸಿದ್ದು ಅವರು ಏನೂ ಕ್ರಮ ಕೈಕೊಂಡಿದ್ದಾರೆ ಅಂತಾ ಕೇಳಿದರು. ಅದಕ್ಕೆ ನಾನು ಪರಿಶೀಲಿಸಿ ನೋಡಲಾಗಿ ಪ್ರಕರಣ ದಾಖಲಾಗಿರಲಿಲ್ಲ. ಈ ವಿಷಯ ಮಾನ್ಯ ಎ.ಎಸ್.ಪಿ ಸಾಹೇಬರಿಗೆ ತಿಳಿಸಲಾಗಿ ಅದಕ್ಕೆ ಸಿಪಿಐ ಎಂಬಿ ನಗರ ವೃತ್ತ ಗುಲಬರ್ಗಾ ರವರು ಸಹ ವಿಚಾರಿಸಿದ್ದು ಅವರಿಗೆ ಇದೆ ವಿಷಯ ತಿಳಿಸಿದ್ದರ ಮೇರೆಗೆ ನನಗೆ ಕೂಡಲೇ ಸ್ಥಳಕ್ಕೆ ದಿನಾಂಕ: 8-3-2014 ರಂದು ರಾತ್ರಿ ಪಿ.ಎಸ್.ಐ ಫರಹತಾಬಾದ ರವರೊಂದಿಗೆ ಹೋದ ಸಿಬ್ಬಂಧಿಯವರಿಗೆ ವಿಚಾರಿಸಿ ಅವರೊಂದಿಗೆ ಹೋಗಿ ಅಲ್ಲಿ ಇರುವ ಆಕ್ರಮ ಮರಳು ಸಾಗಾಣಿಕೆ ಮಾಡುವ ಅಂದಿನ ದಿವಸ ಇದ್ದ   ವಾಹನಗಳನ್ನು ಜಪ್ತಿ ಮಾಡಿ ಕ್ರಮ ಕೈಕೊಳ್ಳಲು ಸೂಚಿಸಿರುತ್ತಾರೆ ಅಂತಾ ನಮಗೆ ಪಂಚರಿಗೆ ತಿಳಿಸಿ ಠಾಣೆಯಲ್ಲಿ ಇದ್ದ ಸಿಬ್ಬಂಧಿಯವರಾದ ವಿಜಯಕುಮಾರ ಸಿಪಿಸಿ 908, ಸುಬ್ಬು ನಾಯಕ ಸಿಪಿಸಿ 377 ರವರಿಗೆ ವಿಚಾರಿಸಲಾಗಿ ಅವರು ದಿನಾಂಕ: 8-3-2014 ರಂದು ರಾತ್ರಿ ಪಿ.ಎಸ್.ಐ ರವರೊಂದಿಗೆ ಮಾನ್ಯ ಎ.ಎಸ್.ಪಿ ಸಾಹೇಬರ ನಿರ್ದೇಶನದ ಮೇರೆಗೆ ಹಸನಾಪೂರ ಸೀಮಾಂತರದ ಭೀಮಾ ನದಿಯ ದಂಡೆಯ ಹತ್ತಿರ ಹೋಗಿ 1) ಒಂದು ಟಾಟಾ ಕಂಪನಿಯ  ಹಿಟಾಚಿ,  2) ಒಂದು ಜೆಸಿಬಿ  ಮತ್ತು 3) ಒಂದು ವಿಕೆಜಿ ಅಂತಾ ಬರೆದ ಟಿಪ್ಪರದಲ್ಲಿ ಆಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಬಗ್ಗೆ ಹೇಳಿದ್ದು ಅದಕ್ಕೆ ಪಿ.ಎಸ್.ಐ ಸಾಹೇಬರು ವಿಚಾರಿಸಿ ಬಂದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಪುನಃ ನಮ್ಮೊಂದಿಗೆ ಬಂದು ಸದರಿ ಸ್ಥಳ ತೊರಿಸಲು ತಿಳಿಸಿದ್ದರಿಂದ ಅವರು ಸಹ ಒಪ್ಪಿದ್ದು ಅವರೊಂದಿಗೆ ಸದರಿ ಸ್ಥಳಕ್ಕೆ ಪೊಲೀಸ್ ವಾಹನ ಸಂಖ್ಯೆ ಕೆಎ-32 ಜಿ-430 ನೇದ್ದರಲ್ಲಿ ಹೋಗಿದ್ದು, ವಿಜಯಕುಮಾರ ಪಿಸಿ 908 ಮತ್ತು ಸುಬ್ಬು ನಾಯಕ ಪಿಸಿ 377 ರವರು ಇದೇ ಸ್ಥಳ ಇರುತ್ತದೆ ಅಂತಾ ತಿಳಿಸಿದರು. ಸ್ಥಳ ಪರಿಶೀಲನೆ ಮಾಡಲಾಗಿ ಟಾಟಾ ಹಿಟಾಚಿ ಕೆಂಪು ಬಣ್ಣದು ಸ್ಥಳದಲ್ಲಿಯೇ ಇದ್ದು ಆದರೆ ಒಂದು ಜೆ.ಸಿ.ಬಿ ಮತ್ತು ಒಂದು ಟಿಪ್ಪರ ಬಿಳಿಯ ಬಣ್ಣದ್ದು ವಿಕೆಜಿ ಅಂತಾ ಬರೆದಿದ್ದು ಸ್ಥಳದಲ್ಲಿ ಇರಲಿಲ್ಲ.  ಹಿಟಾಚಿ ಹತ್ತಿರ ಒಬ್ಬ ವ್ಯಕ್ತಿ ಇದ್ದು, ಅವನು ಪೊಲೀಸರನ್ನು ನೋಡಿ ಅಲ್ಲಿಂದ ಹೋಗಲು ಪ್ರಯತ್ನಸಿರುತ್ತಿರುವಾಗ ಸಿಬ್ಬಂಧಿಯೊಂದಿಗೆ ಎ.ಎಸ್.ಐ ರವರು ಆತನಿಗೆ ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಜೆ.ಬಿ.ಚೆಲ್ಲಯ್ಯ ತಂದೆ ಎ. ಜೋಕಿನ ಸಾ: ಸಿ ಬ್ಲಾಕ್ ಎಸ್-6 ಏಷಿಯನ್ ಗಾರ್ಡನ ಗುಲಬರ್ಗಾ ಅಂತಾ ತಿಳಿಸಿ ತಾನು ರಿತೀಶ ತಂದೆ ಮಾಲಿಕಯ್ಯ ಗುತ್ತೇದಾರ ಸಾ: ಅಫಜಲಪೂರ ಹತ್ತಿರ ಮ್ಯಾನೇಜರ ಕೆಲಸ ಮಾಡಿಕೊಂಡು ಇದ್ದು ರಿತೀಶ ಗುತ್ತೇದಾರರು ಹೇಳಿದ ಮೇರೆಗೆ ನಾನು ಕಳ್ಳತನದಿಂದ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು  ದಿನಾಂಕ: 8-3-2014 ರಂದು ರಾತ್ರಿ ಇದ್ದ ಹಿಟಾಚಿ ಸ್ಥಳದಲ್ಲಿ ಇದದ್ದು ತೋರಿಸಿದ್ದು ಅದರ ಅಪೇರಟರ ವಿಜಯಕುಮಾರ ಅಂತಾ ಹೇಳಿದನು ಮತ್ತು ಅಂದಿನ ದಿವಸ ವಿಕೆಜಿ ಅಂತಾ ಬರೆದ ಟಿಪ್ಪರನಲ್ಲಿ 3 ಲೋಡ ಮರಳು ಅ.ಕಿ. 60,000=00 ರೂ. ದ್ದು ಕಳ್ಳತನದಿಂದ ಆಕ್ರಮವಾಗಿ ಸಾಗಿಸಿದ್ದು ಇರುತ್ತದೆ ಅಂತಾ ತಿಳಿಸಿದನು. ನಂತರ ಜೆ.ಸಿ.ಬಿ ಮತ್ತು ಟಿಪ್ಪರ ಬಗ್ಗೆ ವಿಚಾರಿಸಲು ಅವುಗಳನ್ನು ಬೇರೆ ಕಡೆ ಕೆಲಸಕ್ಕೆ ಕಳುಹಿಸಿರುವುದ್ದಾಗಿ ತಿಳಿಸಿದನು. ಮತ್ತು ಅವರ ಹೆಸರುಗಳು ಗೊತ್ತಿರುವುದಿಲ್ಲ ಅಂತಾ ತಿಳಿಸಿದ್ದರಿಂದ ನಾವು ಪಂಚರು ಸ್ಥಳದಲ್ಲಿ ಇದ್ದ ಟಾಟಾ ಹಿಟಾಚಿ ಪರೀಶಿಲಿಸಲು ಅದು ಕೆಂಪು ಬಣ್ಣದು ಇದ್ದು, ಅದರ ಅ.ಕಿ. 8,00,000=00 ರೂ. ಆಗಬಹುದು. ಹಿಟಾಚಿ ಡ್ರೈವರ ಇರದೆ ಇದ್ದ ಪ್ರಯುಕ್ತ ಅದನ್ನು ಸ್ಥಳದಲ್ಲಿಯೇ ಬಿಟ್ಟು  ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಚಿತಂಬರಾವ ತಂದೆ ಹುಲೆಪ್ಪಾ ಮೇತ್ರಿ, ಸಾಃ ಮ.ನಂ. 103, ಮಹಾಲಕ್ಷ್ಮಿ ಲೇಔಟ, ನೆಹರು ಗಂಜ ಗುಲಬರ್ಗಾ ರವರು  ದಿನಾಂಕ 11-03-2014 ರಂದು ಫಿರ್ಯಾದಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ4889 ನೇದ್ದರ ಮೇಲೆ ತನ್ನ ಮಗನಾದ ಶರಣಬಸ್ಪಪಾ ಈತನನ್ನು ಹಿಂದೆ ಕೂಡಿಸಿಕೊಂಡು ಮನೆಯಿಂದ ಸುಪರ ಮಾರ್ಕೆಟಕ್ಕೆ ಹೋಗುವ ಕುರಿತು ಹುಮನಾಬಾದ ರೋಡಿಗೆ ಇರುವ ದರ್ಬಾರ ಹೋಟೆಲ ಮುಂದೆ ಹೋಗುತ್ತಿದ್ದ ಆರೋಪಿ ಅಕ್ರಮಶಾ ತಂದೆ ಜಾಫರಶಾ ಈತನು ತನ್ನ ಟಾಟಾ ಎ.ಸಿ.ಇ ನಂ. ಕೆ.ಎ 37 8662 ನೇದ್ದನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಫಿರ್ಯಾದಿಗೆ ಮತ್ತು ಹಿಂದೆ ಕುಳಿಯ ಶರಣಬಸಪ್ಪಾ ಈತನಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ದಸ್ತಗೀರ ತಂದೆ ಮುರ್ತುಜಾ,  ಸಾಃ ರಾಜೀವ ಗಾಂಧಿ ನಗರ ಗುಲಬರ್ಗಾ ರವರು ದಿನಾಂಕ 10-03-2014 ರಂದು 8-00 ಪಿ.ಎಮ್ ಕ್ಕೆ  ರಾಜೀವ ಗಾಂಧಿ ನಗರದಲ್ಲಿರುವ ನಂಜೇಶ್ವರ ಗುಡಿಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸಿದ್ರಾಮ ತಂದೆ ಶ್ರೀಮಂತ ಜಮಾದಾರ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 888 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಾನು ಸಹ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಫಿರ್ಯಾದಿ ಮತ್ತು ಆರೋಪಿ ಇಬ್ಬರು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: