POLICE BHAVAN KALABURAGI

POLICE BHAVAN KALABURAGI

07 February 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 06-02-2014 ರಂದು ಹಿತ್ತಲ ಶಿರೂರ ಗ್ರಾಮದ ಹರಿಜನವಾಡಾದಲ್ಲಿರುವ ಸಮುದಾಯ ಭವನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ನಾನು ಸಿಬ್ಬಂಧಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮೂರಜನರನ್ನು ಹಿಡಿದಿದ್ದು 1. ಪಾಂಡುರಂಗ ತಂದೆ ಪ್ರಭು ಕಾಮನಕರ 2. ಶಿವಲಿಂಗ ತಂದೆ ಶಿವಪ್ಪ ಚಿಕಣಿ   3. ಸಂಜು ತಂದೆ ಮೌಲಪ್ಪ ಕಾಮನಕರ ಸಾ|| ಎಲ್ಲರು ಹಿತ್ತಲ ಶಿರೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 615/- ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06.02.2014  ರಂದು ಬೆಳಿಗ್ಗೆ 1030 ಗಂಟೆಗೆ ಟ್ರ್ಯಾಕ್ಟರ ನಂ ಕೆ.ಎ.32ಟಿ.ಎ.5429,5430 ನೇದ್ದರ ಚಾಲಕನಾದ ರಾಯಪ್ಪ ಈತನು ತಾನ ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಹುಮನಾಬಾದ ಬೇಸ್ ಕಡೆಯಿಂದ ರೋಡಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರ ನಂಬರ ಕೆ.ಎ.32 ಎಮ್ 4152 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಕಾರ ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುತ್ತದೆ ಅಪಘಾತದಲ್ಲಿ ಅಟೋರಿಕ್ಷಾಕ್ಕೆ ಹಿಂಬದಿಯಲ್ಲಿ ನೆಗ್ಗಿದ್ದು ಮತ್ತು ಕಾರಿನ ಹಿಂಬದಿ ನೆಗ್ಗಿದ್ದು ಹಿಂಬದಿಯ ಪೂರ್ನಗ್ಲಾಸ್ ಒಡೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ05-02-14 ರಂದು  ರಾತ್ರಿ 07-30 ಸುಮಾರಿಗೆ ದಿನಸಿ[ಕೆ] ತಾಂಡಾದಲ್ಲಿ  ನಳದ  ನೀರು ಬಿಟ್ಟಿದ್ದುಠಕ್ಕಾಬಾಯಿ ಗಂಡ ಮೋತಿರಾಮ ರಾಠೋಡ ಸಾ;ದಿನಸಿ[ಕೆ] ತಾಂಡಾ ತಾ;ಜಿ: ಗುಲಬರ್ಗಾ ರವರು ನೀರು ತುಂಬಿಕೊಂಡು ಹೋಗಿ  ಪಾಳಿಯಲ್ಲಿ ನಿಂತುಕೊಂಡಾಗ ಕವಿತಾ ಗಂಡ ಬಸವರಾಜ  ರಾಠೋಡ ಸಂಗಡ ಇಬ್ಬರೂ ಸಾ;ಎಲ್ಲರೂ ದಿನಸಿ[ಕೆ] ತಾಂಢಾ  ತಾ;ಜಿ: ಗುಲಬರ್ಗಾ  ಪಾಳಿಯಲ್ಲಿ ನಿಲ್ಲದೇ ನೀರು   ತುಂಬಿಕೊಂಡು   ಹೋರಟಾಗ  ನಾನು ಕೇಳಿದ್ದಕ್ಕೆ  ಫೀರ್ಯಾದಿಗೆ ಹೊಡೆ ಬಡೆ ಮಾಡಿ ಅವಾಚ್ಯ  ಬೈಯ್ದು  ಜೀವದ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನರೋಣಾ ಠಾಣೆ : ಶ್ರೀ ಹೂವಪ್ಪಾ ತಂದೆ ದಾನಪ್ಪಾ @ ದಾನನೂರ ನಿಗ್ಗಡಗಿ ಸಾ :ಜವಳಗಾ ಬಿ ರವರ ಹೆಂಡತಿಯಾದ ಮಹಾನಂದ ಗಂಡ ದಾನಸೂರ @ ದಾನಪ್ಪ ನಿಗ್ಗುಡಗಿ ವಯ;23 ವರ್ಷ ಇವಳನ್ನು ದಿನಾಂಕ 31-01-2014 ರಂದು ರಾತ್ರ 9 ಗಂಟೆಯ ಸುಮಾರಿಗೆ ಮಹೇಶ ತಂದೆ ಚಂದ್ರಶಾ ಹೊಳ್ಕರ ಇವನು ತನ್ನ ಜೀಪ ನಂ ಎಪಿ 01 ಟಿ 6677 ನೇದ್ದರಲ್ಲಿ ಜಬರದಸ್ತಿ ಎಳೆದುಕೊಂಡು ಹೋಗುವಾಗ ನಾನು ಮತ್ತು ನನ್ನ ತ್ತಮ ಅಣ್ಣ ಹಾಗು ಅಣ್ಣನ ಹೆಂಡತಿ ಬಿಡಿಸಿಕೊಳ್ಳು ಹೋದರೆ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ನನ್ನ ಹೆಂಡತಿಯನ್ನು ಜಬರದಸ್ತಿ  ಎಳೆದುಕೊಂಡು ಜೀಪನಲ್ಲಿ ಹಾಕಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: