POLICE BHAVAN KALABURAGI

POLICE BHAVAN KALABURAGI

10 February 2014

Gulbarga District Reported Crimes


ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಾಗೇಂದ್ರ ತಂದೆ ಯಲ್ಲಪ್ಪ ರವರು ದಿನಾಂಕ: 09-02-2014 ರಂದು ಸಾಯಂಕಾಲ 5=15 ಗಂಟೆ ಸುಮಾರಿಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಡಿ 2034 ನೆದ್ದರ ಮೇಲೆ ಜಗತ ಸರ್ಕಲ್ ದಿಂದ ಗೋವಾ ಹೊಟೇಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಲ್ಲಮ್ಮ ಟೆಂಪಲ್ ದೇವಸ್ಥಾನ ಎದುರಿನ ರೋಡಿನ ಮೇಲೆ ಗೋವಾ ಹೊಟೇಲ ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಡಿ 7536 ರ ಸವಾರನು ತನ್ನ ಮೋ./ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ್ ಅಲ್ಲೆ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಆಕ್ರಮ ಮರಳು ಸಾಗಾಣೆಕೆದಾರರ ಬಂಧನ :
ಫರತಾಬಾದ ಠಾಣೆ : ಶ್ರೀ ಗುರುಲಿಂಗಯ್ಯ ಸಿಹೆಚ್.ಸಿ 377 ರವರು ಸೋಮನಾಥ ಹಳ್ಳಿ ಗ್ರಾಮದ ಸೀಮಾಂತರ  ಬೀಮಾ ನದಿಯಲ್ಲಿ ಆಕ್ರಮವಾಗಿ ಕಳ್ಳತನದಿಂದ  ಹಿಟಾಚಿಯಿಂದ ಮರಳು ತೆಗೆದು ಟ್ಯಾಕ್ಟರಗಳನ್ನು ತುಂಬಿ ಸಂಬಂಧ ಪಟ್ಟ ಇಲಾಖೆಯ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳು ಸರಬುರಾಜು ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿದ್ದು. ಪಿಎಸ್‌ಐ ಸಾಹೇಬರು ಮಾನ್ಯ ಮುಖ್ಯಮಂತ್ರಿಗಳ ಬಂದೋಬಸ್ತ ಕರ್ತವ್ಯ ಕುರಿತು ಯಾನಗುಂದಿಗೆ ಹೊಗಿರುತ್ತೆನೆ ನೀವು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಲು ಮೌಖಿಕವಾಗಿ ನನಗೆ ಫೊನ್‌ ಮೂಲಕ ತಿಳಿಸಿದ ಮೇರೆಗೆ ಸಿಬ್ಬಂದಿ ಮತ್ತು ಪಂಚರನ್ನು ಕರೆದುಕೊಂಡು ಸೊಮನಾಥ ಹಳ್ಳಿಯ ಕಡೆಗೆ ಎಡಗಡೆ ತಿರುಗಿಸಿಕೊಂಡು ಕಚ್ಚಾ ರಸ್ತೆ ಮೂಲಕ ಜೀಪ ತೆಗೆದುಕೊಂಡು  ಹೋಗಿ ಸೋಮನಾಥ ಹಳ್ಳಿ ಗ್ರಾಮದ ಹತ್ತಿರ ಭೀಮಾ ನದಿಯ ದಂಡೆಯ ಮೇಲೆ ದೂರಲ್ಲಿ 5.30 ಎಎಮ್‌ಕ್ಕೆ ಜೀಪ ನಿಲ್ಲಿಸಿದ್ದು, ಬೀಮಾ ನದಿಯ ದಂಡೆಯಲ್ಲಿ ಟ್ಯ್ರಾಕ್ಟರಗಳು ನಿಲ್ಲಿಸಿದ್ದು,ಭೀಮಾ ನದಿ ದಂಡೆಯಲ್ಲಿನ ಮರಳನ್ನು ಕಳ್ಳತನದಿಂದ ಹಿಟಾಚಿಯ ಸಹಾಯದಿಂದ ಅಗೆದು ತುಂಬುವುದನ್ನು ದೂರದಿಂದ ಜಾಲಿ ಕಂಠಿಯ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಿ  ಸುತ್ತುವರೆದು ಹಿಡಿಯುತ್ತಿದ್ದಾಗ ಅದರಲ್ಲಿ ಒಬ್ಬ ವ್ಯಕ್ತಿಯು ಕಂಠಿಯಲ್ಲಿ ಓಡಿ ಹೋದನು. ಆಗ ಸ್ಥಳದಲ್ಲಿದ 3 ಜನ ವ್ಯಕ್ತಿಗಳನ್ನು ಹಿಡಿದು ವಶಕ್ಕೆ ತೆಗೆದುಕೊಂಡು ವಿಚಾರಿಸಲಾಗಿ ಅವರು ತಮ್ಮ ಹೆಸರು 1. ಮಾರುತಿ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಸಾಃ ನರಬೋಳಿ ತಾ|| ಜೇವರ್ಗಿ 2. ಗಣೇಶ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಸಾಃ ನರಬೋಳಿ ತಾ|| ಜೇವರ್ಗಿ 3. ಪ್ರದೀಪ ತಂದೆ ಶಿವರಾಯ ದೊಡ್ಮನಿ ಸಾ:ಐನೊಳ್ಳಿ ತಾ:ಚಿಂಚೊಳಿ ಅಂತಾ ತಿಳಿಸಿದರು. ಒಡಿ ಹೊದವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಹಣಮಂತ ತಂದೆ ಬಾಬುರಾಯ ಡೊಂಬರಿ ಸಾ;ಸೊಮನಾಥ ಹಳ್ಳಿ ಅಂತಾ ತಿಳಿಸಿರುತ್ತಾರೆ.ಮತ್ತು  ಸ್ಥಳದಲ್ಲಿದ್ದ 1. ಟ್ಯ್ರಾಕ್ಟರ ನಂ. ಕೆಎ 32 ಟಿಎ-145 ಮರಳು ತುಂಬಿಕೊಂಡು ಒಯ್ಯಲು ಬಂದಿದ್ದು ಮತ್ತು  2. ಟ್ಯ್ರಾಕ್ಟರ ನಂ. ಕೆಎ 32 ಟಿಎ 5360 ನೇದ್ದು ಮರಳು ತುಂಬಿದು ಇರುತ್ತದೆ. ಟ್ಯ್ರಾಕ್ಟರನಲ್ಲಿದ್ದ ಮರಳಿನ ಅ:ಕಿ:4000=00/- ಇರುತ್ತದೆ. ಕಳ್ಳತನದಿಂದ ಮರಳು ತುಂಬಲು ತಂದಿದ್ದ ಹಿಟಾಚಿಯ ಡಿಸೇಲ್‌ ಆಗಿದ್ದರಿಂದ ಸ್ಥಳದಲ್ಲಿಯೇ ಬಿಟ್ಟು 2 ಟ್ಯ್ರಾಕ್ಟರಗಳನ್ನು ಮತ್ತು 3 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂದು ಸದರಿಯವರ ವಿರುದ್ಧ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 09-02-2014 ರಂದು  ಬೆಳೆಗ್ಗೆ 07-00 ಗಂಟೆಯ ಸುಮಾರಿಗೆ ಶ್ರೀ ಸಂಜೀವ ತಂದೆ ಮನೋಹ್ರ ವಾಡಿ  ಸಾ;ಕಾಳಮಂದರ್ಗಿ ರವರ ಮನೆಯ ಮುಂದಿದ್ದ ಬಟ್ಟೆ  ಒಗೆಯುವ ಕಲ್ಲನ್ನು  ಚಿತ್ರಾಬಾಯಿ ಗಂಢ ಕಲ್ಲಪ್ಪ  ಟೈಗರ ಸಂಗಡ 3 ಜನರು ಸಾಎಲ್ಲರೂ  ಕಾಳಮಂದರ್ಗಿ  ತಾ;ಜಿಗುಲಬರ್ಗಾ  ತಮ್ಮ  ಮನೆಯ  ಮುಂದೆ  ಹಾಕಿಕೊಂಡಿದ್ದು , ನಮ್ಮ ಮನೆಯ ಮುಂದಿದ್ದ  ಬಟ್ಟೆ  ಒಗೆಯುವ  ಕಲ್ಲನ್ನು  ನೀವು  ಯಾಕೆ  ತೆಗೆದುಕೊಂಡು  ಹೋಗಿದ್ದೀರಿ  ಅಂತಾ  ಕೇಳಿದ್ದಕ್ಕೆ  ಆರೋಫಿತರು ಫಿರ್ಯಾದಿಗೆ  ಕಲ್ಲಿನಿಂಧ  ಹೊಡೆ ಬಡೆ  ಮಾಡಿ ಅಪಮಾನ ಮಾಡಿ ಜೀವದ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಕಬ್ಬಿನ ಗದ್ದೆ ಭಸ್ಮ :
ಕಮಲಾಪೂರ ಠಾಣೆ : ದಿನಾಂಕ:08-02-2014 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ತನ್ನ ಓಕಳಿ ಸೀಮಾಂತ ರದಲ್ಲಿರುವ ಹೊಲ ಸರ್ವೆ ನಂ: 14/1 ನೇದ್ದರಲ್ಲಿ ಬೆಳೆದ ಎರಡು ಎಕರೆ ಕಬ್ಬಿಗೆ ಆಕಸ್ಮೀಕವಾಗಿ ವಿದ್ಯೂತ ತಂತಿಗಳು ಕೂಡುವಿಕೆಯಿಂದ ಬೆಂಕಿ ತಗುಲಿ ಕಬ್ಬು ಸುಟ್ಟಿದ್ದು ಇದರಿಂದ ತನಗೆ ಅಂದಾಜು 200000/- (ಎರಡು ಲಕ್ಷ ) ರೂಪಾಯಿಯಷ್ಟು ನಷ್ಟವಾಗಿರುತ್ತದೆ ಅಂತಾ ಶ್ರೀ ಶಿವಪುತ್ರ ತಂದೆ ಬಸಣ್ಣ ಮುಗಳಿ ಸಾ:ಓಕಳಿ ತಾ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: