POLICE BHAVAN KALABURAGI

POLICE BHAVAN KALABURAGI

01 February 2014

Gulbarga District Reported Crimes

ಆಕಸ್ಮಿಕ ಬೆಂಕಿ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ದೊಂಡಿಬಾ ತಂದೆ ತುಕಾರಾಮ ಜಿಡ್ಡಿಮನಿ ಸಾ:ಮಾದನ ಹಿಪ್ಪರಗಾ ತಾ: ಆಳಂದ ರವರು ದಿನಾಂಕ:31-01-2014 ರಂದು ಬೇಳಗ್ಗೆ 10:30 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ.ನಂ:332 ವಿಸ್ತಿರ್ಣಿ 3 ಎಕರೆ ಜಮೀನಿನಲ್ಲಿದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಪೂರ್ತಿ ಸುಟ್ಟಿರುತ್ತದೆ ಅದರ ಅಂದಾಜು ಕಿಮ್ಮತ್ತು 5 ಲಕ್ಷ ಮತ್ತು ಸದರಿ ಹೊಲದಲ್ಲಿದ ಡ್ರೀಪ್ ಪೈಪ್ ಗಳು ಸಹ ಸುಟ್ಟಿರುತ್ತವೆ ಅದರ ಅಂದಾಜು ಕಿಮ್ಮತ್ತು 2 ಲಕ್ಷ  ಹೀಗೆ ಒಟ್ಟು 7 ಲಕ್ಷ ರೂಗಳಷ್ಟು ನಷ್ಟವಾಗಿರುತ್ತದೆ. ಸದರಿ ಈ ಘಟನೆಯು ಆಕಸ್ಮಿಕವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ  ಪ್ರಕರಣಗಳು :
ಆಳಂದ ಠಾಣೆ : ಶ್ರೀ ಲಾಯಕ ಅಲಿ ತಂದೆ ಖಾಜಮ ಅಲಿ ಪಟೇಲ್ ಸಾ|| ಹೆಬಳಿ ಗ್ರಾಮದವರು ನಾನು ದಸ್ತಗಿರ ಗುಂಜೋಟಿ ಯವರ ಮಗಳ ಮದುವೆಗೆ ದಿನಾಂಕ 31-01-2014 ರಂದು ಸಮಯ 1 ಗಂಟೆಗೆ ಪಡಸಾವಳಗಿ ಗ್ರಾಮಕ್ಕೆ ಹೋಗಿ ಮದುವೆ ಮುಗಿಸಿಕೊಂಡು ವಾಪಸ ನನ್ನ ಗ್ರಾಮಕ್ಕೆ ಹೊರಟಾಗ ಪಂಚಾಯತಿ ಎದುರುಗಡೆಯಿಂದ ಊರಿಗೆ ಹೊರಟಾಗ ಪಂಚಾಯತಿ ಅಭಿವೃಧ್ಧಿ ಅಧಿಕಾರಿಯಾದ ಮನ್ಮಥ ತಂದೆ ಶಿವರಾಯ ಇವರು & ಇತರ ಸಂಗಡಿಗರಾದ 1) ಹಣಮಂತ ತಂದೆ ಭೀಮಶಾ ಗಾಯಕವಾಡ 2) ಸುವಾಸ ತಂದೆ ವಿರೇಶ ಸಿಂಗೆ 3) ಮುಬಾರಕ ತಂದೆ ರಾಜಾಭೈ ಮೂಲಗೆ 4) ಶ್ರೀಶೈಲ ತಂದೆ ರೇವಣಸಿದ್ದಪ್ಪಾ ಘಾಳೆ 5) ಅಪ್ಪಾರಾಯ ತಂದೆ ರೇವಣಸಿದ್ದಪ್ಪಾ ಘಾಳೆ 6) ಮಾದಣ್ಣಾ ತಂದೆ ಈರಪ್ಪಾ ಜಾಧವ 7) ಸಿದ್ದಪ್ಪಾ ತಂದೆ ಈರಪ್ಪಾ ಜಾಧವ 8) ಈರಪ್ಪಾ ಜಾಧವ (ಪೋಮಣ್ಣಾ) ಇವರೆಲ್ಲರೂ ಸೇರಿ ನನ್ನನ್ನು ಮನ್ಮಥ ಏ ಮಗನೆ ಇಲ್ಲಿ ಏಕೆ ಬಂದಿದ್ದಿ ಎಲ್ಲರೂ ಇವನನ್ನು ಖಲಾಸ ಮಾಡಿರಿ ಮಗಾ ಬಹಾಳ ಕುಣಿಲಿಕತ್ತಾನ ಎಂದು ನನ್ನನ್ನು ಮನ್ಮಥ ಒಂದು ರಾಡಿನಿಂದ ನನ್ನ ಬೆನ್ನಿಗೆ ಹೊಡೆದನು, ಸಂಗಡಿಗರೆಲ್ಲರೂ ಸೇರಿ ನನಗೆ ಹೊಡೆ ಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ರೇಖಾ ಗಂಡ ಹಣಮಂತ ಗಾಯಕವಾಡ ಸಾ|| ಪಡಸಾವಳಿ ರವರು  ಗ್ರಾಂಪಂಚಾಯತಿ ಅಧ್ಯಕ್ಷೆಯಾಗಿರುತ್ತೇನೆ, ದಿನಾಂಕ 31-01-2014 ರಂದು ಮಧ್ಯಾಹ್ನ 2.30 ಗಂಟೆಗೆ ಗ್ರಾಮ ಸಭೆ ನಡೆದಾಗ ಸಮಸ್ಯೆಗಳು ಜನರು ಕೇಳುತ್ತಾ ಇದ್ದರು ಗಲಾಟೆ ನಡೆದಾಗ ನನ್ನ ಪತಿ ಮಧ್ಯದಲ್ಲಿ ಬಂದು ಶಾಂತ ರೀತಿಯಿಂದ ಇರಲು ಹೇಳಿದರು, ಕುಡಾ ಮಲ್ಲಿನಾಥ ತಂದೆ ವಿಶ್ವನಾಥ ಬಿರಾದಾರ ಸಂ 17 ಜನರು ಸಾ|| ಪಡಸಾವಳಗಿ ರವರು ಬಂದು ಹೊಡೆಬಡೆ ಮಾಡಿ ಜಾತಿನಿಂದನೆ ಮಾಡಿ  ನಿಮಗೆ ಊರಲ್ಲಿ ಇರಗೊಡಲ್ಲಾ ಅಧಿಕಾರ ಮಾಡಿಲು ಬಿಡುವುದಿಲ್ಲಾ  ಎಂದು ಹೊಡೆಯುತ್ತಿದ್ದರು ಆವಾಗ ನನ್ನ ಗಂಡನಿಗೆ ಹೊಡೆದು ಕೊರಳಲ್ಲಿರುವ ಒಂದು ತೋಲೆ ಬಂಗಾರದ ಲಾಕಿಟ್ 5000 ರೂಪಾಯಿ & ನನ್ನ ಕೊರಳಲ್ಲಿರುವ ಒಂದು ತೋಲೆ ಬಂಗಾರದ ಸರ ಕಸಿದುಕೊಂಡಿರುತ್ತಾರೆ, ಇವರಿಂದ ನನಗೆ ನನ್ನ ಗಂಡನಿಗೆ ಜೀವ ಬೆದರಿಕೆ ಇರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಸುಭಾಷ ತಂದೆ ವೀರೇಶ ಸಿಂಗೆ ಸಾ|| ಪಡಸಾವಳಗಿ ನಮ್ಮ ಊರ ಗ್ರಾಮ ಸಭೆ ನಡೆದಾಗ ಅದರಲ್ಲಿ ಗಲಾಟೆ ಮಾಡಿದ್ದರಿಂದ ನಾನು ಮಧ್ಯ ಹೋಗಿ ಶಾಂತವಿರಲು ಹೇಳಿದ್ದರಿಂದ ನನ್ನ ಮೈಮೇಲೆ ಒಮ್ಮೇಲೆ ಮಲ್ಲಿನಾಥ ಬಿರಾಜದಾರ, ವಿಶ್ವನಾಥ ಬಿರಾಜದಾರ ಹಾಗೂ ಅವರ ಅಣ್ಣತಮ್ಮಂದಿರು ಅವರ ಸಂಗಡಿಗರಾದ ಈ ಕೇಳಗೆ ತೋರಿಸಿದ ವ್ಯಕ್ತಿಗಳು ನನ್ನ ಮೇಲೆ ಬಂದು ಮನಸ್ಸಿಗೆ ಬಂದಂತೆ ಕೈಯಿಂದ ಮುಷ್ಟಿಯಿಂದ ಕಾಲಿನಿಂದ ಒದ್ದು ಹೊಡೆಬಡೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ ಇವರಿಂದ ನಮಗೆ ಜೀವ ಭಯ ಇರುತ್ತದೆ, & ನನ್ನ ಜೀವಕ್ಕೆನಾದರೂ ಆದರೆ ಈ ಕೆಳಗೆ ತೋರಿಸಿದ 10 ಜನರು ಕಾರಣರಾಗಿರುತ್ತಾರೆ. ಎಂದು ತಿಳೀಸಿರುತ್ತೇನೆ, 1) ಮಲ್ಲಿನಾಥ ವಿಶ್ವನಾಥ ಬಿರಾಜದಾರ 2) ವಿಶ್ವನಾಥ ತಂದೆ ಶ್ರೀಮಂತ ಬಿರಾಜದಾರ 3) ಶಿವಲಿಂಗಪ್ಪಾ ಸಂಗಪ್ಪಾ ಚಾರೆ 4) ಗುರುಲಿಂಗಪ್ಪಾ ಸಿದ್ದಣ ಬಿರಾಜದಾರ 5) ಭೋಗೇಶ ಸಿದ್ದಣ್ಣ ಬಿರಾಜದಾರ 6) ಶಿವಕಿರಣ ತಂದೆ ಶ್ರಿಮಂತ ಪಾಟೀಲ್ 7) ರೇವಣಸಿದ್ದಪ್ಪಾ ಬಾಬು ಉಡಚಣ 8) ಕೇದಾರನಾಥ ಕಾಶಿನಾಥ ಬಿರಾಜದಾರ 9) ವೈಜನಾಥ ಕಾಶಿನಾಥ ಬಿರಾಜದಾರ 10) ಶ್ರೀದೇವಿ ವಿಶ್ವನಾಥ ಬಿರಾಜದಾರ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಹಣಮಂತ ತಂದೆ ಭೀಮಶಾ ಗಾಯಕವಾಡ ಸಾ|| ಪಡಸಾವಲಿ ನಿವಾಸಿಯಾಗಿದ್ದು ದಿನಾಂಕ 31/01/2014 ರಂದು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಮಯ 2.30 ಗಂಟೆಗೆ ಗ್ರಾಮ ಸಭೆ ನಡೆದಿತ್ತು ಅದರಲ್ಲಿ ನನ್ನ ಹೆಂಡತಿಯಾದ ರೇಖಾ ಗಂಡ ಹಣಮಂತ ಗಾಯಕವಾಡ ಅಧ್ಯಕ್ಷೆಯಾಗಿರುತ್ತಾಳೆ, ವಿನಾಕಾರಣವಾಗಿ ಮಲ್ಲಿನಾಥ ವಿಶ್ವನಾಥ ಬಿರಾಜದಾರ ಇವರು ಬಂದು ಪಿಡಿಓ ರವರಿಗೆ ಅಡ್ಡಾದಿಡ್ಡಿ ಮಾತನಾಡಿದ್ದರಿಂದ ನಾನು ಆತನನ್ನು ಸಮಾಧಾನ ಮಾಡಲು ಹೋದೆ ಆವಾಗ ಮಲ್ಲಿನಾಥ ತಂದೆ ವಿಶ್ವನಾಥ ಬಿರಾಜದಾರ ಇವರು ನನಗೆ ಜಾತಿ ನಿಂದನೆ ಮಾಡಿರುತ್ತಾರೆ 1) ಮಲ್ಲಿನಾಥ ತಂದೆ ವಿಶ್ವನಾಥ ಬಿರಾಜದಾರ 2) ವಿಶ್ವನಾಥ ತಂದೆ ಶ್ರೀಮಂತ ಬಿರಾಜದಾರ 3) ಶಿವಲಿಂಗಪ್ಪಾ ತಂದೆ ಸಂಗಣ್ಣಾ ಚಾರೆ  4) ಗುರುಲಿಂಗಪ್ಪಾ ತಂದೆ ಸಿದ್ದಣ್ಣಾ ಬಿರಾಜದಾರ 5) ಭೋಗೇಶ ತಂದೆ ಸಿದ್ದಣ್ಣಾ ಬಿರಾಜದಾರ 6) ಶಿವಕಿರಣ ತಂದೆ ಶ್ರೀಮಂತ ಪಾಟೀಲ್ 7) ರೇವಣಸಿದ್ದಪ್ಪಾ ತಂದೆ ಬಾಬು ಉಡಚಣ 8) ವಿಶ್ವನಾಥ ತಂದೆ ಕಲ್ಯಣಿ ಜಮಾದಾರ 9) ಲಕ್ಷ್ಮಣ ತಂದೆ ಕಲ್ಯಣಿ ಜಮಾದಾರ 10) ಕಾಶಿನಾಥ ತಂದ ಶ್ರೀಮಂತ ಬಿರಾಜದಾರ 11) ಕೇದಾರನಾಥ ತಂದೆ ಕಾಶಿನಾಥ ಬಿರಾಜದಾರ  12) ಅಶೋಕ ತಂದೆ ಹೊನ್ನಪ್ಪಾ ಜಮಾದಾರ 13) ವೈಜನಾಥ ತಂದೆ ಕಾಶಿನಾಥ ಬಿರಾಜದಾರ 14) ಶ್ರೀದೆವಿ ಗಂಡ ವಿಶ್ವನಾಥ ಬಿರಾಜದಾರ  15) ನಿರ್ಮಲಾ ಗಂಡ ಕಾಸಿನಾಥ ಬಿರಾಜದಾರ 16) ನಿಲಮ್ಮಾ ಗಂಡ ಬಸವರಾಜ ಬಿರಾಜದಾರ 17) ಪುತಳಾಬಾಯಿ ಗಂಡ ಶಿವಪುತ್ರಪ್ಪಾ ಬಿರಾದಾರ 18) ಮಲ್ಲಿನಾಥ ತಂದೆ ಕಲ್ಯಾಣಿ ಬೇತಾಳೆ 19) ಪಾರ್ವತಿ ಗಂಡ ಗುರುಲಿಂಗಪ್ಪಾ ಬಿರಾಜದಾರ 20) ರತ್ನಾಬಾಯಿ ಗಂಡ ಬೋಗೇಶ ಬಿರಾಜದಾರ 21) ಚೀದಾನಂದ ತಂದೆ ವೀರಭದ್ರಯ್ಯಾ ಸ್ವಾಮಿ ಇವರೆಲ್ಲರು ನನಗೆ ಹೊಡೆದು ಜಾತಿ ನಿಂದನೆ ಮಾಡಿ ಜೀವ ಹೊಡೆಯಲು ಹೊಂಚು ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅಪ್ಪಾರಾಯ ತಂದೆ ರೇವಣಸಿದ್ದಪ್ಪಾ ಘಾಳೆ ಸಾ|| ಪಡಸಾವಳಿ ದಿನಾಂಕ 31/01/2014 ರಂದು ಮಧ್ಯಾಹ್ನ 3.15 ನಿಮಿಷಕ್ಕೆ ಯೋಗಿರಾಜ ಪಾನಶಾಪ ಎದುರು ನಿಂತಿದ್ದ ಗ್ರಾಮ ಸಭೆ ನಡೆದಿತ್ತು ನನ್ನ ಹತ್ತಿರ ಬಂದು ಜಾತಿ ನಿಂದನೆ ಮಾಡಿದ್ದು  ಶಿವಲಿಂಗಪ್ಪಾ ಚಾರೆ ಬಂದು ಸಮಗಾರ ಇದ್ದಿರಿ ಜಾತಿ ಎಂದರೆ ನಿಮಗೇನು ಆಗುತ್ತೆ ಎಂದು ಅವರು ಅಂದರು ಅವರಿಬ್ಬರು ಮತ್ತು ನನ್ನ ನಡುವೆ ವಾದವಿವಾದವಾಯಿತು ಅವರು ನಾನು ಗಪ್ಪಾದಾಗ ನಿಮಗೆ ಓಟ ಹಾಕಬಾರದಿತ್ತು ನಿಮಗೆ ಊರಲ್ಲಿ ಇರಬಾಡದಿತ್ತು ಊರ ಹೊರಗೆ ಇಡಬೇಕಿತ್ತು & ನಿಮಗೆ ಖಲಾಸ ಮಾಡತೆವಿ ನಿಮದು ಬಹಳ ನಡೆದಿದೆ, ಜೀವ ಹೊಡೆಯುತ್ತೇವೆ ಎಂದು ಜಾತಿ ಎತ್ತಿ ಬೈದು ಇಬ್ಬರೂ ಎದೆಯ ಮೇಲಿನ ಅಂಗಿ ಹಿಡಿದು ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿರೇಶ ತಂದೆ ರಮಾನಂದ ಗಲಗಲಿ ರವರು ದಿನಾಂಕ: 31/01/2014 ರಂದು ರಾತ್ರಿ 10=30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಡಿ 8187 ನೆದ್ದರ ಮೇಲೆ ಗೋವಾ ಹೊಟೇಲ ದಿಂದ ಎಸ್.ಟಿ.ಬಿ.ಟಿ. ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟಂಟಂ ನಂ:ಕೆಎ 32  7014 ರ ಚಾಲಕನು ಅತಿವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ವಾಹನ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

No comments: