POLICE BHAVAN KALABURAGI

POLICE BHAVAN KALABURAGI

21 January 2014

Gulbarga District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿಜಯಕುಮಾರ ತಂದೆ ರಾಮಚಂದ್ರ ಭಂಡಾರಿ ಸಾ: ಡಬರಾಬಾದ ರವರು ದಿನಾಂಕ 20-01-14 ರಂದು  ಮಧ್ಯಾಹ್ನ 1-30 ಗಂಟೆ ಸುಮಾರಿಗೆ ತಮ್ಮೂರಿನ ಮರಗಮ್ಮನ ಗುಡಿ ಹತ್ತಿರ ಕುಳಿತಾಗ ಆರೋಪಿ ಶಾಂತಪ್ಪ ಈತನು ನನಗೆ ನೋಡಿ ಅವಾಚ್ಯ ಶಬ್ದಗಳಿಂದ ಬೈದು ಇಲ್ಲಿ ಕೂಡಬೇಡಾ ಅಂತಾ ಬೈದನು. ನಾನು ಅಲ್ಲಿಂದ ಎದ್ದು ಗುಲಬರ್ಗಾ ಕಡೆ ಹೋದನು.  ಮರಳಿ ಸಂಜೆ 6-00 ಗಂಟೆ ಸುಮಾರಿಗೆ ಮರಳಿ ಮನೆಗೆ ಬಂದಾಗ ನಮ್ಮ ಮನೆಯವರಾದ, ತಾಯಿ, ಅಕ್ಕ, ಅಣ್ಣ ಇವರು ತಿಳಿಸಿದ್ದೆನೆಂದೆರೆ, ಸದರಿ ಶಾಂತಪ್ಪನು ಕುಡಿದ ಅಮಲಿನಲ್ಲಿ  ಆಗ್ಗಾಗೆ ಮನೆಗೆ ಬಂದು ಹೊಲಸು, ಹೊಲಸು ಶಬ್ದಗಳಿಂದ ಬೈಯ್ಯುವುದು ಮಾಡುತ್ತಾನೆ ಅವನಿಗೆ ವಿಚಾರಿಸಿರಿ ಅಂತಾ ಹೇಳಿದರು. ಆಗ ನಾನು ಮತ್ತು ನನ್ನ ಅಣ್ಣ  ಮಹೇಂದ್ರ ಸಂಜೆ 6-30 ಗಂಟೆ ಸುಮಾರಿಗೆ ಸದರಿ ಶಾಂತಪ್ಪನಿಗೆ  ವಿಚಾರಿಸಿದಾಗ, ಶಾಂತಪ್ಪನು  ನನಗೆ ಅವಾಚ್ಯ ಶಬ್ದಗಳಿಂದ ಬೈದು ತೆಕ್ಕಿ ಕುಸ್ತಿಗೆ ಬಿದ್ದು ಜಗಳಾ ಮಾಡುತ್ತಿರುವಾಗ,  ತಮ್ಮನಾದ ಮಹೇಶಕುಮಾರ  ಜಗಳಾ ಬಿಡಿಸಲು ಬಂದಾಗ ಶಾಂತಪ್ಪನು ಮಹೇಶಕುಮಾರನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈ ಮುಷ್ಷಿ ಮಾಡಿ ಹೊಟ್ಟೆಯಲ್ಲಿ ಮತ್ತು ಪಕ್ಕೆಗೆ ಹೊಡೆದನು. ಮಹೇಶಕುಮಾರನಿಗೆ ಭಾರಿ ಒಳಪೆಟ್ಟಾಗಿ ಬೇಹುಷ ಆಗಿ ಬಿದ್ದನು. ಆಗ ಅವನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ, ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು  ಸದರಿ ಶಾಂತಪ್ಪನು ಅವಾಚ್ಯ ಶಬ್ದಗಳಿಂದ ಬೈದಾಡಿದ ವಿಷಯ ಕೇಳಿದ್ದಕ್ಕೆ ಅದೇ ವೈಷ್ಯಮ ಹೊಂದಿ ಶಾಂತಪ್ಪನು ಮಹೇಶಕುಮಾರನಿಗೆ ಕೊಲೆ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ : 
ಸ್ಟೇಷನ ಬಜಾರ ಠಾಣೆ : ದಿನಾಂಕ 20-01-2014 ರಂದು 1300 ಗಂಟೆಗೆ ಶ್ರೀ ರಾಜಕುಮಾರ ತಂದೆ ಮಾಪಣ್ಣ ತಳಕೆರಿ  ನಿರ್ವಾಹಕ ಸಂಖ್ಯೆ 14258 ಘಟಕ ನಂ.1 ಈ.ಕ.ರ.ಸಾ ಸಂಸ್ದೆ ಗುಲಬರ್ಗಾ ವಿಭಾಗ 1 ಇವರು ಬಸ್ ನಂ. ಕೆಎ 32 ಎಫ್ 1784 ನೇದ್ದರ ಮೇಲೆ ಕರ್ತವ್ಯದ ಮೇಲಿದ್ದು ತಿಮ್ಮಾಪೂರ ಸರ್ಕಲದಿಂದ ಮಾರ್ಕೆಟಗೆ ಹೋಗುವಾಗ ಒಬ್ಬ ಪ್ರಯಾಣಿಕನು ಸದರಿ ಬಸ್ಸಿನಲ್ಲಿ ಹತ್ತಿ ಆನಂದ ಹೋಟೆಲ ಹತ್ತಿರ ಇಳಿಯಲು ಟಿಕಿಟ ಪಡೆಯಲು ಕೆಳಿದನು. ಆಗ ಸದರಿ ಮಾರ್ಗದಲ್ಲಿ ಬಸ ಹೋಗುವುದಿಲ್ಲಾ ಅಂತಾ ಹೇಳಿದಾಗ ಲಾಹೋಟಿ ಪೆಟ್ರೋಲ ಪಂಪ ಹತ್ತಿರ ಇಳಿಸಲು ಜಗಳ ತೆಗೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕೈಯಿಂದ ಮೂರು ನಾಲ್ಕು ಸಲ ಎದೆಯ ಮೇಲೆ ಹೊಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಭೀರಪ್ಪ ತಂದೆ ನಾಗಪ್ಪ ಗೂಗಿದರಿ ಸಾ:ಅಂಬೇವಾಡ ರವರು  ದಿನಾಂಕ 19-01-2014 ರಂದು ಸಾಯಂಕಾಲ 07:45 ಗಂಟೆಯ ಸುಮಾರಿಗೆ ನಮ್ಮೂರ ಮಡ್ಡಿಯ ಹತ್ತಿರ ರಸ್ತೆಯಲ್ಲಿ ನನ್ನ ಕಾಕ ಭೀಮಶ್ಯಾನಿಗೆ ನಾನು ಹೊಲದಲ್ಲಿ ನನ್ನ ತಮ್ಮಂದಿರೊಂದಿಗೆ ಯಾಕೆ ತಕರಾರು ಮಾಡಿದಿ ಅಂತಾ ಕೇಳುತ್ತಿದ್ದಾಗ ಅವನು ನನ್ನೊಂದಿಗೆ ಜಗಳ ಮಾಡ ಹತ್ತಿದ್ದನು ಅಷ್ಟರಲ್ಲಿಯ ಅವನ ಹೆಂಡತಿಯಾದ ಮಹಾದೇವಿ ಮತ್ತು ಮಕ್ಕಳಾದ ಮುತ್ತಣ್ಣ ತಂದೆ ಭೀಮಶ್ಯಾ ಗೂಗಿದರಿ,ದತ್ತಪ್ಪ ತಂದೆ ಭೀಮಶ್ಯಾ ಗೂಗಿದರಿ, ಮಾಣಿಕ ತಂದೆ ಭಿಮಶ್ಯಾ ಗೂಗಿದರಿ ಇವರು ಕೂಡಿ ಬಂದವರೆ ನನ್ನೊಂದಿಗೆ ತಕರಾರು ಮಾಡಿ ತಡೆದು ನಿಲ್ಲಿಸಿ ಕೈಯಿಂದ ಕಟ್ಟಿಗೆಯಿಂದ ನನ್ನ ಮೂಗಿನ ಹತ್ತಿರ ಹೊಡೆದು ರಕ್ತಗಾಯ ಮಾಡಿ ನೀಮ್ಮ ಜೀವ ಸಹಿತ ಬೀಡುವುದಿಲ್ಲಾ ಅಂತಾ ಜೀವದ ಭಯದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: