POLICE BHAVAN KALABURAGI

POLICE BHAVAN KALABURAGI

20 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಈರಣ್ಣ ತಂದೆ ಶಂಕರ ನಿಂಬೂರ ಸಾ:ಡೊಂಗರಗಾಂವ  ರವರು ದಿನಾಂಕ: 19-01-2014 ರಂದು ರಾತ್ರಿ 07-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಚಂದ್ರಕಾಂತ @ ಚಂದ್ರು ತಂದೆ ಘಾಳೆಪ್ಪ ಕಿಣಗಿ ಈತನು ತನ್ನ ಟಂ.ಟಂ.ನಂ: ಕೆಎ-32 –ಎ- 5810 ನೇದ್ದರಲ್ಲಿ ತೊಗರಿ ಚೀಲ ಲೋಡ ಮಾಡುವುದಿದೆ ನಡೆ ಅಂತಾ ಕರೆದುಕೊಂಡುಹೋಗಿದ್ದು, ಅವರಮನೆಯಿಂದ  ತೊಗರಿ ಚೀಲಗಳನ್ನು  ಲೋಡ ಮಾಡಿಕೊಂಡು  ಕಮಲಾಪೂರಕ್ಕೆ ಬಂದು ಅಡತದಲ್ಲಿ ಲೋಡ ಇಳಿಸಿ ಮರಳಿ ಊರಿಗೆ ಹೋಗುವಾಗ ರಾತ್ರಿ ಬಹಳವಾಗಿದ್ದರಿಂದ ಕಮಲಾಪೂರದಲ್ಲಿಯೇ ಊಟ ಮಾಡಿಕೊಂಡು ನಂತರ ಗುಲಬರ್ಗಾ- ಹುಮನಾಬಾದ ರಾಷ್ಟ್ರೀಯ ಹೆದ್ದರಿ  218 ನೇದ್ದರ ಮಾರ್ಗವಾಗಿ ಡೊಂಗರಗಾಂವ ಕಡೆಗೆ ಹೋಗುತ್ತಿದ್ದಾಗ  ಚಿಂದಿ  ಬಸವಣ್ಣನ ಗುಡಿಯ  ಹತ್ತಿರ ಹೋಗುತ್ತಿದ್ದಂತೆ ಎದುರುಗಡೆಯಿಂದ   ಒಬ್ಬಅಪರಿಚಿತ  ವಾಹನ ಚಾಲಕನು  ತನ್ನ  ವಾಹನದ ಹೆಡ ಲೈಟ್ ಡಿಪ್ಪರ ಮಾಡದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತಿದ್ದ ಟಂ.ಟಂಕ್ಕೆ ಡಿಕ್ಕಿ ಹೊಡೆದು  ಅಪಘಾತ ಪಡಿಸಿ ತನ್ನ ವಾಹನವನ್ನು  ನಿಲ್ಲಿಸದೇ  ಓಡಿಸಿಕೊಂಡು  ಹೋದನು. ನಂತರ ನಾನು ಸಾವರಿಸಿಕೊಂಡು  ಟಂ.ಟಂದಿಂದ  ಹೊರಗೆ ಬಂದು ನೋಡಲಾಗಿ ನನಗೆಬಲಗಾಲಿಗೆ, ಮರ್ಮಾಂಗಕ್ಕೆ, ಮುಖಕ್ಕೆ, ಭಾರಿ  ರಕ್ತಗಾಯ ಮತ್ತು ಮೈ ಕೈ ಗಳಿಗೆ ತರಚಿದ ರಕ್ತಗಾಯಗಳಾಗಿದ್ದು,ಚಂದ್ರಕಾಂತ  ಕಿಣಗಿ ಈತನಿಗೆ  ನೋಡಲಾಗಿ ಆತನ ತೆಲೆಗೆ, ಮುಖಕ್ಕೆ ಕೈ-ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಅರುಣಕುಮಾರ ತಂದೆ ಶಿವರಾಮ ಕಠಾರೆ ಸಿ.ಹೆಚ್ ಸಿ 64  ಸಾಃ ವಿವೇಕಾನಂದ ನಗರ ಖಾದ್ರಿ ಚೌಕ ಗುಲ್ಬರ್ಗಾ ರವರು  ದಿನಾಂಕ 19-1-2014 ರಂದು 10-00 ಎ.ಎಮಕ್ಕೆ ಮದನ ಟಾಕೀಜದಿಂದ  ಶಹಾಬಜಾರ ನಾಕಾ ರೋಡಿನಲ್ಲಿ ಬರುವ ಬಾವಗಿ ಟೆಂಟ ಹೌಸ ಎದುರುಗಡೆ ಆರೋಪಿ ಶಂಕರ ಈತನು ತನ್ನ ಗೂಡ್ಸ ನಂ  ಕೆ ಎ 32 ಎ 2774 ನೇದ್ದನ್ನು ಮದನಟಾಕೀಜ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಪಿರ್ಯಾದಿಯ  ಮೋ ಸೈ  ನಂ ಕೆ ಎ 32 ಎಲ್ 7852 ನೇದ್ದಕ್ಕೆ ಡಿಕ್ಕಿ ಪಡಿಸಿ ಅಫಘಾತಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಸರಕಾರಿ ಸ್ವತ್ತಿಗೆ ಹಾನಿ ಉಂಟು ಮಾಡಿದ ಪ್ರಕರಣ :
ನರೋಣಾ ಠಾಣೆ : ದಿನಾಂಕ; 18-01-2014 ರಂದು 2000 ಗಂಟೆಗೆ ಗೋಪಾಲ ತಂದೆ ಶ್ರೀಮಂತ ಹಳನಕರ್  ನರೋಣಾಪೊಲೀಸ ಠಾಣೆಯಲ್ಲಿ  ಠಾಣೆಯ ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ 2145 ಗಂಟೆಗೆ ಸ್ಥಳೀಯ ನರೋಣಾ ಗ್ರಾಮಸ್ಥರಾದ ಶಿವಾನಂದ ತಂದೆ ಸುಭಾಶ್ಚಂದ್ರ ಬೋಳಶೇಟ್ಟಿ ಹಾಗೂ ಇತರರು ಕೂಡಿ ಜೀಪನಂಬರ್ ಕೆ ಎ 17 ಎಂ 1671 ರಲ್ಲಿ ತಮ್ಮ ಹೊಲದಲ್ಲಿಯ ಕಡಲೆ ಬೆಳೆಯನ್ನು ಕಳವು ಮಾಡಿದವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದು ಅಲ್ಲದೆ ಗ್ರಾಮಸ್ಥರಾದ 1] ಯಶ್ವಂತ ಕೋರೆ 2] ನ್ಯಾಮಣ್ಣ ಬಳಗಾರ 3] ಅಶೋಕ ಬಳಗಾರ 4] ಶ್ರೀಮಂತ ಚಿಚಕೋಟಿ 5] ಮಲ್ಲಿಕಾಜರ್ುನ ವಾಲಿ 6] ಬಸವರಾಜ ಹೀರೆಗೌಡ 7] ಮಹೇಶ ವಾಲಿ 8] ಮಲ್ಲಿಕ ದೇಖೂನ 9] ಚಂದ್ರ ಹಾದಿಮನಿ 10] ಬಸವರಾಜ ಚಂದಯ್ಯ ಗುತ್ತೆದಾರ 11] ಗೌರೇಶ ಕಲ್ಲಶೇಟ್ಟಿ 12] ಪ್ರಕಾಶ ಬೋಳಶೇಟ್ಟಿ 13] ರೇವಣಸಿದ್ದ ಗೋಳಾ  14] ಅಣ್ಣಪ್ಪ ತಂದೆ ಖ್ಯಾಮಣ್ಣ ಕಣ್ಮುಸ್ 15] ಶಿವಾನಂದ ಬೇಲ್ಲೂರ ಹಾಗೂ ಇತರೆ 15-20 ಜನರು ಗುಂಪು ಕಟ್ಟಿಕೊಂಡು ಬಂದು ಕಡಲೆ ಕಳವು ಮಾಡಿದವರನ್ನು ನಾವು ಬಿಡುವದಿಲ್ಲ. ಅವರಿಗೆ ನಮ್ಮ ವಶಕ್ಕೆ ಕೊಡಿ ಅಂತಾ ಅವರನ್ನು ಗುರಾಯಿಸುತ್ತಾ ನನ್ನೊಂದಿಗೆ ಏರು ದನಿಯಲ್ಲಿ. ಆಗ ಠಾಣೆಯ ಪಹರೆ ಕರ್ತವ್ಯದಲ್ಲಿ  ನಾನು ಈ ಮೇಲೆ ನಮೂದಿಸಿದ ಜನರಿಗೆ ಠಾಣೆಯಲ್ಲಿ ಈ ರೀತಿ ಅಸಬ್ಯವಾಗಿ ವರ್ತಿಸುವುದು  ಸರಿಯಲ್ಲ ಅಂತಾ ತಿಳಿಸಿ ಹೇಳುವಾಗ ಈ ಮೇಲೆ ನಮೂದಿಸಿದ ಜನರು ನನ್ನ ಮೈಮೇಲೆ ಬಂದು ನನೊಂದಿಗೆ ದಂಗಾಮುಸ್ತಿ ಮಾಡುತ್ತಿದ್ದರು. ಅಷ್ಟರಲ್ಲಿ ಠಾಣೆಯಲ್ಲಿದ್ದ ಶ್ರೀ. ಮಾನಯ್ಯ ದೊರೆ  ಪಿ ಎಸ್ ಐ ಸಾಹೇಬರು ಹಾಗೂ ಸಿಬ್ಬಂದಿ ಜನರಾದ  ಶಿವಶರಣಪ್ಪ ಹೆಚ ಸಿ 90 ಶಿವಪುತ್ರಪ್ಪ ಹೆಚ ಸಿ 163, ವಿವೇಕಾನಂದ ಸಿಪಿಸಿ 783, ಮಹೇಶ ಸಿಪಿಸಿ 926 , ಬಸವರಾಜ ಸಿಪಿಸಿ 589, ಪ್ರಭಾಕರ ಸಿಪಿಸಿ 244 , ರವರುಗಳು . ಸಹ ಬಂದು ಈ ಜನರನ್ನು  ಬುದ್ದಿವಾದ ಹೇಳುತ್ತಿದ್ದರು ಆದರೂ ಸಹ ನಮ್ಮಮಾತಿಗೆ ಬೆಲೆ ಕೊಡೆದೆ ಇವರಲ್ಲಿ ಕೆಲವರು ಕೈಯಲ್ಲಿ ಕಲ್ಲು ಹಿಡಿದುಕೊಂಡು ಠಾಣೆಯ ಮುಂಭಾಗದಲ್ಲಿ ಜೋತು ಹಾಕಿದ ಕನ್ನಡಿಗೆ, ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಿರುವ  ತೋಗು ಬೋರ್ಡಗೆ ಹಾಗೂ ಹೂ ಕುಂಡಗಳಿಗೆ ಮತ್ತು ಹೊರಗೆ ಇಟ್ಟಿದ ಪೀಠೋಪಕರಣಗಳಿಗೆ ಹೊಡೆದಿದ್ದು, ಇದರಲ್ಲಿ ಕನ್ನಡಿ ಮತ್ತು 3 ಹೂ ಕುಂಡಗಳು ಹಾಗೂ ಮೇಲಾಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಿರುವ  ತೋಗು ಬೊರ್ಡು ಮುರಿದಿರುತ್ತದೆ. ಇದ್ದರಿಂದ  ಸುಮಾರು 4000 ರೂ ಗಳಷ್ಟು ಸರಕಾರಿಕ್ಕೆ ಹಾನಿಯಾಗಿರುತ್ತದೆ. ನಾನು ಸರಕಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಈ ಮೇಲೆ ನಮೂದಿಸಿದ ಜನರು ವಿನಾಃಕಾರಣವಾಗಿ ಗುಂಪು ಕಟ್ಟಿಕೊಂಡು ಠಾಣೆಗೆ ಬಂದು ಕರ್ತವ್ಯ ನಿರತನಾದ ನನಗೆ ಅಡ್ಡಾತ್ತಿಡಿಯಾಗಿ , ಅಸಭ್ಯ ರೀತಿಯಲ್ಲಿ ವರ್ತಿಸಿ  ಕರ್ತವ್ಯಕ್ಕೆ ತೊಂದರೆ ಉಂಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀ ಮತಿ ಅನ್ನಪೂರ್ಣಾ ಗಂಡ ಅರ್ಜುನ ಹಡಗಿಲಕರ  ಸಾ : ಇಂದಿರಾ ನಗರ ಗುಲಬರ್ಗಾ ಇವರು ಕುಟುಂಬ ಸಮೇತ ದಿನಾಂಕ 13-01-2014  ರಂದು   ನಮ್ಮ ಮನೆಗೆ ಕೀಲಿ ಹಾಕಿಕೊಂಡು ಸೌದತ್ತಿಗೆ ಹೊಗಿದ್ದು ಇಂದು ದಿನಾಂಕ 19-01-2014 ರಂದು ಬೆಳಗ್ಗೆ   7 ಗಂಟೆಯ ಸುಮಾರಿಗೆ   ರಾಜೇಶ ಇತನು ನಮಗೆ ಪೊನ ಮಾಡಿ ತಿಳಿಸಿದ್ದೇನಂದರೆ. ಮನೆಯ ಬಾಗಿಲು ಮುರಿದ್ದಿದ್ದು ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದರುತ್ತವೆ ಅಂತಾ ತಿಳಿಸಿದ್ದು ನಾವು ಮರಳಿ ಮದ್ಯಾನ್ಹ 1 ಗಂಟೆಗೆ ನಮ್ಮ ಮನೆಗೆ ಬಂದು ನೊಡಲಾಗಿ ನಮ್ಮ ಮನೆಯ ಬಾಗಿಲು ಮುರಿದು ಮನೆಯಲ್ಲಿಯ  ಬಂಗಾರದ ಆಭರಣಗಳು ಮ್ತ್ತು ನಗದು ಹಣ ಹೀಗೆ ಒಟ್ಟು 16,500/- ರೂ ಕಿಮ್ಮತ್ತಿನವುಗಳನ್ನು  ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಮತಿ ಶಿವಕಾಂತಮ್ಮ ಗಂಡ ಲಕ್ಷ್ಮಣ ಹೋನ್ನಳ್ಳಿ ಸಾ :ಇಂದಿರಾ ನಗರ ಗುಲಬರ್ಗಾ ಇವರು ತಮ್ಮ ಕುಟುಂಬ ಸಮೇತ ದಿನಾಂಕ 13-01-2014 ರಂದು ನಮ್ಮ ಮನೆಗೆ ಕೀಲಿ ಹಾಕಿಕೊಂಡು ಸೌದತ್ತಿಗೆ ಹೊಗಿದ್ದು ಇಂದು ದಿನಾಂಕ 19-01-2014 ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ  ರಾಜೇಶ ಇತನು ನಮಗೆ ಪೊನ ಮಾಡಿ ತಿಳಿಸಿದ್ದೇನಂದರೆ. ಮನೆಯ ಬಾಗಿಲು ಮುರಿದ್ದಿದ್ದು ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದರುತ್ತವೆ ಅಂತಾ ತಿಳಿಸಿದ್ದು ನಾವು ಮರಳಿ ಮದ್ಯಾನ್ಹ 1 ಗಂಟೆಗೆ ನಮ್ಮ ಮನೆಗೆ ಬಂದು ನೊಡಲಾಗಿ ನಮ್ಮ ಮನೆಯ ಬಾಗಿಲು ಮುರಿದು ಮನೆಯಲ್ಲಿಯ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 24,200/- ರೂ ಕಿಮ್ಮತ್ತಿನವುಗಳನ್ನು  ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಝಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 19-01-2014 ರಂದು ಸಾಯಂಕಾಲ  ಗಾಜೀಪೂರ ಬಡಾವಣೆಯ ಪ್ರಲ್ಹಾದ ಗುಂಡಗುರ್ತಿ ಇವರ ಮನೆಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ  ಪಿ ಎಸ್ ಮತ್ತು ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು 7-8 ಜನರು ಗುಂಪಾಗಿ ಕುಳಿತು ಅಂದರ 50 ರೂಪಾಯಿ ಬಾಹರ 50 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಸಾಯಂಕಾಲ 5:00 ಗಂಟೆಗೆ ಒಮ್ಮೇಲೆ ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ 8 ಜನರನ್ನು ಹಿಡಿದು ಹೆಸರು ವಗೈರೆ ವಿಚಾರಿಸಲು 1. ಗೌಡಪ್ಪಗೌಡ ತಂದೆ ದೇವಪ್ಪ ಪಾಟೀಲ್ ಸಾ|| ಗಾಜೀಪೂರ ಗುಲಬರ್ಗಾ 2. ನಾಗರೆಡ್ಡಿ ತಂದೆ ವಿಜಯರೆಡ್ಡಿ ಸಾ|| ಬಸವೇಶ್ವರ ಕಾಲೋನಿ ಗುಲಬರ್ಗಾ 3.  ದಿನೇಶಕುಮಾರ ತಂದೆ ನಾಗೇಂದ್ರಪ್ಪ ಪೇಚಟ್ಟಿ ಸಾ|| ರಾಮಂದಿರ ಹತ್ತಿರ ಗುಲಬರ್ಗಾ 4. ಚಂದ್ರಶೇಟ್ಟಿ ತಂದೆ ಶಂಕರ ಸಿಂಪಿ ಸಾ|| ಗಾಜೀಪೂರ ವಿಜಯ ಲಾಡ್ಜ ಹತ್ತಿರ ಗುಲಬರ್ಗಾ 5. ಬಸವರಾಜ ತಂದೆ ಸೋಮಶೇಖರ ರುದನೂರ ಸಾ|| ಕೋಡದೂರ 6. ಶರಣಬಸಪ್ಪ ತಂದೆ ವೈಜಿನಾಥ ಹಾಶೇಟ್ಟಿ ಸಾ|| ಕೋಡದೂರ 7. ರೇವಣಸಿದ್ದಪ್ಪ ತಂದೆ ಬಸವರಾಜ ಪಾಟೀಲ ಸಾ|| ಬಸವೇಶ್ವರ ಕಾಲೋನಿ ಗುಲಬರ್ಗಾ 8. ನರೇಂದ್ರ ತಂದೆ ಸೋಮಶೇಖರ ಪಾಟೀಲ್ ಸಾ|| ಕೋಡದೂರ  ಒಟ್ಟು ನಗದು ಹಣ  ರೂ.11.050/- ಹಾಗೂ 52 ಇಸ್ಪೆಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ಭೀಮಶ್ಯಾ ತಂದೆ ಭೂತಾಳಿ ಗೂಗಿದರಿ ಸಾ:ಅಂಬೇವಾಡ ರವರು ತಮ್ಮ  ಹೊಲಕ್ಕೆ ಹೋಗಿಬರುವ ದಾರಿ ವಿಷಯದಲ್ಲಿ ನನ್ನ ಅಣ್ಣನ ಮಕ್ಕಳು ನನ್ನೋಂದಿಗೆ ತಕರಾರು ಮಾಡುತ್ತಿದ್ದು ಸದರಿ ವಿಷಯ ಊರಲ್ಲಿ ನಾಲ್ಕು ಜನ ಹಿರಿಯರಿಗೆ ತಿಳಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತಾ ನಾನು ಊರಲ್ಲಿ ಹೋಗುತ್ತಿದ್ದಾಗ ದಿನಾಂಕ 19-01-2014 ರಂದು ಸಾಯಂಕಾಲ 07:45 ಗಂಟೆಯ ಸುಮಾರಿಗೆ ನಮ್ಮೂರ ಗೊಕಟ ಹತ್ತಿರ ರಸ್ತೆಯಲ್ಲಿ ಬರುವಾಗ ನನ್ನ ಎದುರಿಗೆ ಬಂದ 1] ಶರಣಪ್ಪ ತಂದೆ ನಾಗಪ್ಪ ಗೂಗಿದರಿ 2] ಭೀರಪ್ಪಾ ತಂದೆ ನಾಗಪ್ಪ ಗೂಗಿದರಿ 3] ಲಕ್ಷ್ಮಣ ತಂದೆ ನಾಗಪ್ಪ ಗೂಗಿದರಿ 4] ಆನಂದ ತಂದೆ ನಾಗಪ್ಪ ಗೂಗಿದರಿ 5] ಕಲ್ಲಮ್ಮಾ ಗಂಡ ಲಕ್ಷ್ಮಣ ಗೂಗಿದರಿ 6] ಸರುಬಾಯಿ ಗಂಡ ನಾಗಪ್ಪ ಗೂಗಿದರಿ ಸಾ: ಎಲ್ಲರೂ ಅಂಬೇವಾಡ  ರವರು ನನ್ನನ್ನು  ತಡೆದು ನಿಲ್ಲಿಸಿ ಅವರಲ್ಲಿ ಶರಣಪ್ಪ ಸೂಳೆ ಮಗನೆ ಯಾಕೆ ನಮ್ಮೊಂದಿಗೆ ಹೊಲದ ದಾರಿ ವಿಷಯದಲ್ಲಿ ತಕರಾರು ಮಾಡುತಿ ಅಂತಾ ಬೈದು ಕೈಯಿಂದ ನನ್ನ ಎದೆ ಮೇಲಿನ ಅಂಗಿ ಹಿಡಿದು ನೂಕಿಸಿಕೊಟ್ಟಿರುತ್ತಾನೆ.ನಾನು ನೆಲಕ್ಕೆ ಬಿದ್ದಾಗ ಕಾಲಿನಿಂದ ನನ್ನ ಎದೆಯ ಮೇಲೆ ಹೊಟ್ಟೆ ಮೇಲೆ ಒದ್ದಿರುತ್ತಾರೆ ಕಲ್ಲಿನಿಂದ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ನಾನು ಚೀರಾಡುವ ಸಪ್ಪಳ ಕೇಳಿ ನನ್ನ ಹೆಂಡತಿ ಮತ್ತು ಮಗ ದತ್ತಪ್ಪ ಬೀಡಿಸಲು ಬಂದಾಗ ಅವರಿಗು ಕೂಡ ಕೈಯಿಂದ  ಹೊಡೆ ಬಡೆ ಮಾಡಿ ಕುದಲು ಹಿಡಿದು ಎಳೆದಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: