POLICE BHAVAN KALABURAGI

POLICE BHAVAN KALABURAGI

01 January 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ದಶರಥ ತಂದೆ ವೀರಭದ್ರಪ್ಪ ಕಿವುಡನೊರ ಸಾ: ಊಡಗಿ ರವರು ದಿನಾಂಕ: 31-12-2013 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಅಣ್ಣ ತಮ್ಮಕಿಯ ತಮ್ಮನಾದ ಗೌತಮ ತಂದೆ ಸಿದ್ರಾಮಪ್ಪ ಕಿವಡನೊರ ಇತನು  ಓಡುತ್ತಾ ಬಂದು ತಿಳಿಸಿದ್ದೇನಂದರೆ  ನಾನು ಮತ್ತು ರವಿ ಕೊಟ್ಟರಕಿ ಇಬ್ಬರೂ ಕೂಡಿ ಮೋಟಾರು ಸೈಕಲ್ ನಂ ಕೆಎ-32-ವಾಯ್- 6746 ನ್ನೇದ್ದರ ಮೇಲೆ  ಹೊಸ ವರ್ಷದ ನಿಮಿತ್ಯ ಸೇಡಂದಿಂದ ಕೇಕ್ ತಗೆದುಕೊಂಡು ಹೊರಟಾಗ ನಮ್ಮ ಗ್ರಾಮದ ಗ್ರಾಮ ಪಂಚಾಯತ ಎದುರುಗಡೆ ರಸ್ತೆಯ ಮೇಲೆ 1. ಬಸವರಾಜ ತಂದೆ ಮರೆಪ್ಪ ದಂಡಗುಂಡ  2. ದೇವಿಂದ್ರಪ್ಪ ತಂದೆ ಹುಸನೆಪ್ಪ ಕರನಕೊಟ 3. ತಾಜೋದಿನ್ ತಂದೆ ಹಮೀದ್ ಖುರೇಶಿ 4. ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪ   ತೆಲ್ಕೂರ 5. ಉಮಾಕಾಂತ ತಂದೆ ದೇವಿಂದ್ರಪ್ಪ ತೆಲ್ಕೂರ 6. ಹಮೀದ ತಂದೆ ರುಕ್ಮೊದಿನ್ ಖುರೇಶಿ 7. ಶರಣಪ್ಪ ತಂದೆ ಕಾಶಪ್ಪ ಯರಗಲ್ 8. ಸಿದ್ದಪ್ಪ ತಂದೆ ಮಲ್ಲೇಶಿ ತೆಲ್ಕೂರ ಜಾ: ಕುರಬರ 9. ಸಾಬಣ್ಣಾ ತಂದೆ ಮೊಗಲಪ್ಪ ಚಿಕ್ಕೊಳಿ 10. ಶರಣಪ್ಪ ತಂದೆ ಸಾಬಣ್ಣ ಚಿಕ್ಕೊಳಿ ಸಾ: ಎಲ್ಲರೂ ಊಡಗಿ ಗ್ರಾಮದವರು ರಸ್ತೆಯ ಮೇಲೆ ನಿಂತಿದರು ನಾನು ಹಾರ್ನ  ಹೊಡೆದರೂ ಅವರು ದಾರಿಯ ಮೇಲಿಂದ  ಸರಿಯಲಿಲ್ಲಾ ಆಗ ನಾನು ಅವರಿಗೆ ದಾರಿ ಬೀಡಿರಿ ಹಾರ್ನ ಹೊಡೆದರೂ ಯಾಕೆ? ರಸ್ತೆ ಬಿಡುತ್ತಿಲ್ಲಾ ಅಂತಾ ಕೇಳಿದೆ ಆಗ  ಅವರೇಲ್ಲರು ಸೇರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹೋಡೆಯುತ್ತಿದ್ಆರೆ ಅಂತಾ ತಿಳಿಸಿದ್ದು ನಾನು ಮತ್ತು ನೀಲಕಂಠ ತಂದೆ ಗುರುಲಿಂಗಪ್ಪ ಕಟ್ಟಿಮನಿ ಮತ್ತು ಸಂಭಂದಿಕನಾದ ಪ್ರಕಾಶ ತಂದೆ ಬಾಬಣ್ಣ ಗುಲಗುಂಜೀ ಸಾ: ಸುಲೇಪೆಟ  3 ಜನರು ಗಾಡಿ ತರಣೊ ಅಂತಾ ಪಂಚಾಯತ ಎದರುಗಡೆ ಹೋದೇವು ನಾವು ಹೋಗುವಷ್ಟರಲ್ಲಿ ನಮ್ಮ ಸೈಕಲ್ ಮೋಟಾರಕ್ಕೆ ಕಲ್ಲಿನಿಂದ ಜಜ್ಜುತ್ತಿದ್ದರು ಆಗ ನಾನು ನನ್ನ ಗಾಡಿಗೆ ಏಕೆ ಡ್ಯಾಮೇಜ ಮಾಡುತ್ತಿದ್ದರೀ ಅಂತಾ ಕೇಳಿದ್ದಕ್ಕೆ  ಎಲ್ಲರು ಸೇರಿ ನನಗೆ ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದಸ್ತಯ್ಯ ತಂದೆ ಸಿದ್ಧಯ್ಯಾ ಗುತ್ತೆದಾರ  ಸಾ: ಪ್ಲಾಟ ನಂ. 118  ಆಳಂದ ಚೆಕ್ಕ ಪೋಸ್ಟ್ ರಾಮತೀರ್ಥ ನಗರ ಆಳಂದ ರಸ್ತೆ ಗುಲಬರ್ಗಾ  ರವರ ಮಗಳಾದ ಅಪೂರ್ವ ವ:15 ವರ್ಷ ಇವಳು ದಿನಾಂಕ 06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಮನೆಯಿಂದ ಶಾಲೆಗೆ ಹೋದವಳು ಇಲ್ಲಿಯವರೆಗೆ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ. ನನ್ನ ಮಗಳ ಪತ್ತೆ ಕುರಿತು ನಮ್ಮ ಸಂಬಂಧಿಕರ ಊರಾದ ಚಿತ್ತಾಪೂರ, ಕಾಳಗಿ, ತಾಂಡೂರ, ಸೇಡಂ, ಮದ್ದರಕಿ, ಹೂವಿನ ಹಡಗಿಲ್, ಬಳ್ಳಾರಿ,  ಪೂನಾ, ಬೆಂಗಳೂರ ಮತ್ತು ಇತರೇ ಕಡೆ ಇಲ್ಲಿಯವರೆಗೆ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ.ನಮ್ಮ ಓಣಿಯಲ್ಲಿ ವಾಸವಾಗಿರುವ 1.ರಮೇಶ ತಂದೆ ಬಂಡೆಪ್ಪ  2. ರಾಜು ತಂದೆ ಅಣ್ಣೆಪ್ಪ ವಡ್ಡರ 3. ಸುನೀಲ ತಂದೆ ನಾರಾಯಣ  ಈ ಮೂರು ಜನರು ದಿನಾಂಕ 06-11-13 ರಿಂದ ನಮ್ಮ ಓಣಿಯಲ್ಲಿ ಕಾಣಿಸುತ್ತಿಲ್ಲಾ. ಈ ಮೂರು ಜನರೇ ನನ್ನ ಮಗಳಾದ ಅಪೂರ್ವ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ದಿನಾಂಕ 31-12-2013 ರಂದು  ರಂದು ಬೆಳಗ್ಗೆ 9.00 ಗಂಟೆಗೆ ತನ್ನ ಅಣ್ಣನಾದ ಸಿದ್ರಾಮ ಇತನ ತೊಗರಿ ಹೋಲದಲ್ಲಿ ತನ್ನ ಅಣ್ಣನಾದ ಬಸವರಾಜ ತಂ ಘಾಳಪ್ಪ ಕೊಟ್ಟರ್ಗಿ ಹಾಗೂ ಅವನ ಮಗನಾದ ಶ್ರೀಕಾಂತ ತಂ ಬಸವರಾಜ ಕೊಟ್ಟರ್ಗಿ ಇವರು ಹಿಂದಿನ ವೈಶಮ್ಯದಿಂದ ಜಗಳ ತೆಗೆದು ಶ್ರೀಕಾಂತನು ಸಲೀಕೆಯಿಂದ ಬಲಗಾಲ ಮೊಳಕಾಲ ಮೇಲೆ ಹಾಗೂ ಎಡಗಾಲ ಮೊಳಕಾಲಮೇಲೆ ಎಡಕೀವಿಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು ಬಸವರಾಜ ಇತನು ಲಾಂಗಚೆಕ್ಕದಿಂದ ತೊಡೆಗೆ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲದೆ ಅವಾಚ್ಯಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಶಿವಕುಮಾರ ತಂ ಘಾಳಪ್ಪ ಕೊಟ್ಟರ್ಗಿ ಸಾ|| ದಮ್ಮೂರ ಅರ್,ಸಿ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಇಂದು ದಿನಾಂಕ 31-12-2013 ರಂದು 09-00 ,ಎಮ್,ಕ್ಕೆ ತನ್ನ ಕಾಕನಾದ ಸಿದ್ರಾಮ ಇತನ ಹೋಲಕ್ಕೆ ಹೋಗಿ ತನ್ನ ತಂದೆಯೊಂದಿಗೆ ಊಟದ ಸಮಯದಲ್ಲಿ ಜಗಳ ಏಕೆ ಮಾಡಿರುವಿ ಅಂತಾ ತನ್ನ ಕಾಕನಾದ ಶಿವಕುಮಾರ ತಂ ಘಾಳಪ್ಪ ಕೊಟ್ಟರ್ಗಿ ಇತನಿಗೆ ಕೆಳಿದಕ್ಕೆ ಶಿವಕುಮಾರ ಇತನು ಬಡಿಗೆಯಿಂದ ಬೆನ್ನಮೇಲೆ ಎರಡು ಮೊಳಕಾಲ ಮೇಲೆ ಹೊಡೆದಿದ್ದು ಸಿದ್ರಾಮ ಇತನು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿದ್ದು ನಾಗಮ್ಮ ಇವಳು ಕೈಯಿಂದ ಕುತ್ತಿಗೆ ಮೇಲೆ ಎದೆಯ ಮೇಲೆ ಹೊಡೆದಿರುತ್ತಾಳೆ ಅವರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀಕಾಂತ ತಂ ಬಸವರಾಜ ಕೊಟ್ಟರ್ಗಿ ಸಾ|| ದಮ್ಮೂರ ಅರ್,ಸಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀಮತಿ ಈರಮ್ಮಾ ಗಂಡ ರಾಚಪ್ಪಾ ಸಾವರನಾಳ ರವರು  ದಿನಾಂಕ 30-12-2013 ರಂದು ತನ್ನ ಅತ್ತಿಗೆ ಸರಸ್ವತಿಯೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 10 ಗಂಟೆ ಸುಮಾರಿಗೆ ಮೈದುನನಾದ ಈರಪ್ಪಾ ತಂದೆ ಸಂಗಪ್ಪಾ ಈತನು ಮನೆಯ ಹೊರಗಡೆ ನಿಂತು ಬಾಗಿಲು ಬಡೆದು ಬಾಗಿಲು ತೆರೆ ರಂಡಿ ಅಂತ ಬೈಯುತ್ತಿರುವಾಗ,ಬಾಗಿಲುತೆರೆಯದ ಕಾರಣ  ಕಾಲನಿಂದ ಬಾಗಿಲಗೆ ಒದ್ದುಬಾಗಿಲು ತೆರೆದು ಒಳಗಡೆ ಬಂದು ಕೈಯಿಂದ ಎರಡು ಕಡೆ ಮಲಕ್ಕಿಗೆ ಹೊಡೆದು ,ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆಅಲ್ಲದೆ ಸರಸ್ವತಿಗೆ ಕೂಡ ಕೈಯಿಂದ ಹೊಡೆದು ಎದೆಯ ಮೇಲಿನ ಸೇರಗು ಹಿಡಿದು ಹೋರಗಡೆ ಎಳೆದುಕೊಂಡು ಬಂದು,   ಅಲ್ಲಿ ಅವಳ ಹೋಟ್ಟೆಗೆ ಕಾಲಿನಿಂದ ಒದ್ದಿರುತ್ತಾನೆ. ಅದರಿಂದಾಗಿ ಗುಪ್ತಗಾಯವಾಗಿರುತ್ತದೆಅಲ್ಲದೆ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಗುರುನಾಥ ತಂದೆ ಶ್ರೀಶೈಲ ಕಲಶೇಟ್ಟಿ ಸಾ:ಹಾವನೂರ ತಾ:ಅಫಜಲಪೂರ ಹಾವ:ಕಾಳಿಂಗ ಲಾಡ್ಜ ಸ್ಟೇಷನ್ ಏರಿಯಾ ಗುಲಬರ್ಗಾ ಇವರು ಕಳಿಂಗ ಲಾಡ್ಜನ್ನು ಶ್ರೀ ರಮಾನಂದ ತಂದೆ ಅಕ್ಕರಿ ಭಂಡಾರಿ ಎಂಬುವವರು ನಡೆಸುತ್ತಿದ್ದು ದಿನಾಂಕ 30-12-2013 ರಂದು 01-30 ಪಿ.ಎಮ್. ದ ಸುಮಾರಿಗೆ ನಾನು ಕೌಂಟರ ಕರ್ತವ್ಯದಲ್ಲಿ ನಾನು ಮತ್ತು ನಮ್ಮ ಲಾಡ್ಜನ ರೂಮ್ ಬಾಯಗಳಾದ ಶೇಖರ, ವಿಜಯಕುಮಾರ ಇವರು ಕೌಂಟರನಲ್ಲಿ  ಇದ್ದಾಗ ಏಕಾಏಕಿಯಾಗಿ ರಾಮೇಶ್ವರ ಶಾಸ್ತ್ರೀ, ಭಗವಾನಶಾಸ್ತ್ರಿ, ಅರ್ಜುನಶಾಸ್ತ್ರಿ ಮತ್ತು ರಾವಣಶಾಸ್ತ್ರಿ ಹಾಗೂ ಇನ್ನಿತರರು ಕೂಡಿ ಲಾಡ್ಜ ಕೌಂಟರಿಗೆ ಬಂದು ಈ ಲಾಡ್ಜ ನಮ್ಮದಿದೆ ಅನ್ನುತ್ತಾ ಅರ್ಜುನ ಶಾಸ್ತ್ರಿ ಎಂಬುವವನು ಕೌಂಟರ ಮೇಲೆ ಇದ್ದ ಲ್ಯಾಂಡ ಪೋನ್‌ನ ಕನೆಷನ್ ಕಿತ್ತಿ ಅವಾಚ್ಯ ಶಬ್ದಗಳಿಂದ ಬೈದು  ಲಾಡ್ಜ ಬಂದ ಮಾಡು ಲಾಡ್ಜಗೆ ಬರುವ ಗ್ರಾಹಕರಿಗೆ ರೂಮ ಕೊಡಬೇಡ ಅನ್ನುತ್ತಾ ನನಗೆ ಹೆದರಿಸಿ  ಕೈಯಿಂದ ಕಪಾಳಕ್ಕೆ ಹಾಗೂ ಬೆನ್ನ ಮೇಲೆ ಹೊಡೆದರು, ಅಲ್ಲದೇ ಈ ಮಕ್ಕಳಿಗೆ ಲಾಡ್ಜ ಬಿಡಿಸಿ ಓಡಿಸೋಣ ಅಂತಾ ಅಂದು ಮೋಬೈಲಗಳನ್ನು ಸ್ವೀಚ್ ಆಫ್ ಮಾಡುವಂತೆ ನನಗೆ ಮತ್ತು ನಮ್ಮ ರೂಮ್ ಬಾಯಗಳಿಗೆ ಜೀವದ ಬೆದರಿಕೆ ಹಾಕಿ ಮೋಬೈಲ್ ಸ್ವೀಚ್ ಹಾಫ್ ಮಾಡಿಸಿದನು. ಆಗ ನಾನು ಇವರಿಗೆ ಯಾಕೇ ಸರ್ ಅಂತಾ ಕೇಳಲಾಗಿ ಮಗನೇ ಇದೆಲ್ಲಾ ನೀನೇನು ಕೇಳುತ್ತಿಯಾ ಕೇಳುವವರು ಬರಲಿ ಅಂತಾ ಅನ್ನುತ್ತಾ ಲಾಡ್ಜನ 1 ನೇ ಮಹಡಿಯಲ್ಲಿ ಹೋಗಿ ಅರ್ಜುನಶಾಸ್ತ್ರಿ, ಭಗವಾನಶಾಸ್ತ್ರಿ, ಮತ್ತು ರಾವಣಶಾಸ್ತ್ರೀ ಇವರುಗಳು ರೂಮ್ ನಂ:106 ನೇದ್ದರ ಬಾಗಿಲಿಗೆ ಜೋರಾಗಿ ಒದ್ದಿದ್ದರಿಂದ ಬಾಗಿಲ ಕೊಂಡಿ ಮುರಿದಿದ್ದು ಅಲ್ಲದೇ ಇವರುಗಳು 2ನೇ ಮಹಡಿಯಲ್ಲಿ ಹೋಗಿ ರೂಮ್ ನಂ:115ರ ಬಾಗಿಲಿಗೆ ಜೋರಾಗಿ ಒದ್ದರಿಂದ ಬಾಗಿಲ ಕೊಂಡಿ ಮುರಿದು ಹಾನಿಯಾಗಿರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಗುರುಬಾಯಿ ಗಂಡ ನಾಗಪ್ಪ ಹಡಪಾದ ಸಾ|| ಮನೆ ನಂ; ಎಲ್ ಐ ಜಿ 105/ಸಿ ಕೆಎಚ್‌ಬಿ ಕಾಲೋನಿ ಗುಲಬರ್ಗಾ ಇವರು ದಿನಾಂಕ 28-12-2013 ರಂದು  ಸಾಯಂಕಾಲ 05-00 ಗಂಟೆ ಸುಮಾರಿಗೆ ನಮ್ಮ ಉರಾದ ಕುಕ್ಕನೂರ್ ಗ್ರಾಮಕ್ಕೆ ಹೋಗಿದ್ದು ದಿನಾಂಕ. 31-12-2013 ರಂದು ಬೆಳಿಗ್ಗೆ  08-00 ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ಮುರದಿದ್ದು ಒಳಗಡೆ ಹೋಗಿ ನೋಡಲಾಗಿ ಅಲಮಾರದಲ್ಲಿಯ ಬಂಗಾರದ ಮತ್ತು ಬೆಳ್ಳಿಯ ಆಭರಣ ಹಾಗು ನಗದು ಹಣ ಒಟ್ಟು  24500/- ರೂ  ಬೆಲೆಬಾಳುವ ಆಬರಣಗಳನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸ್ಟೇಷನ ಬಜಾರ ಠಾಣೆ : ಶ್ರೀ ಬಸವಣ್ಣಗೌಡ ತಂದೆ ಗೌಡಪ್ಪಗೌಡ ಮಾಲಿಪಾಟೀಲ್ ಸಾ:  ಮನೆ ನಂ. ಎಂ.ಐ.ಜಿ-180 ಕೆಎಚ್‌ಬಿ ಕಾಲೋನಿ ಗುಲಬರ್ಗಾ ರವರು ದಿನಾಂಕ 29-12-2013  ರಂದು ಬೆಳಿಗ್ಗೆ .0800 ಗಂಟೆ ಸುಮಾರಿಗೆ ನಮ್ಮ ಉರಾದ ಹಂದನೂರ್ ಗ್ರಾಮಕ್ಕೆ ಹೋಗಿದ್ದು ದಿನಾಂಕ. 31-12-2013 ರಂದು ಮದ್ಯಾಹ್ನ 12  ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ಮುರದಿದ್ದು ಒಳಗಡೆ ಹೋಗಿ ನೋಡಲಾಗಿ ಅಲಮಾರದಲ್ಲಿಯ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 24000/- ರೂ ಬೆಲೆಬಾಳುವ ಬಂಗಾರ, ಬೆಳ್ಳಿಯ ವಸ್ತುಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಷೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಮಹಿಮೂದ ಅಲಿ ತಂದೆ ಮಹೆಬೂಬ ಅಲಿ ಸಾ : ಜಿಲಾನಾಬಾದ ಎಮ್.ಎಸ್.ಕೆ. ಮಿಲ್. ಗುಲಬರ್ಗಾ ರವರು ದಿನಾಂಕ 16-11-2013 ರಂದು  ರಂದು ಮದ್ಯಾಹ್ನ1230 ರಿಂದ 1250 ಗಂಟೆಯ ಮದ್ಯ ನನ್ನ ಹೀರೊಹೊಂಡಾ ಸ್ಪ್ಲೇಂಡರ್ ಪ್ಲಸ್ ನಂ: ಕೆಎ 32 ಆರ್-1611 ||ಕಿ|| 40,000/- ಮೈಸೂರ ಬ್ಯಾಂಕ ಹತ್ತಿರ ಸೂಪರ ಮಾರ್ಕೆಟ ಗುಲಬರ್ಗಾ ದಲ್ಲಿ ನಿಲ್ಲಿಸಿ ಬರೋಡಾ ಬ್ಯಾಂಕಗೆ ಹೋಗಿ ಬರುವಸ್ಟರಲ್ಲಿ ಯಾರೋ ಕಳ್ಳರು ನನ್ನ ವಾಹನ ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಬಗ್ಗೆ ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: