POLICE BHAVAN KALABURAGI

POLICE BHAVAN KALABURAGI

30 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಬಸವರಾಜ ತಂದೆ ಸುಭಾಶ್ಚಂದ್ರ ರವರು ದಿನಾಂಕ: 28-12-2013 ರಂದು ರಾತ್ರಿ 10-30 ಗಂಟೆಯ ಸುಮಾರಿ ತನ್ನ ಮೋ/ಸೈಕಲ್ ನಂ: ಕೆಎ 32 ಎಕ್ಸ 8040 ರ ಮೇಲೆ ಕುಳಿತು ಡಬರಾಬಾದ ಕ್ರಾಸ್ ದಿಂದ ವಿವೇಕಾನಂದ ಕಾಲೋನಿ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಒಂದು ಮೋ/ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಫಿರ್ಯಾದಿಗೆ ಭಾರಿ ಗಾಯಗೊಳಿಸಿ ತನ್ನ ಮೋ/ಸೈಕಲ್ ಸಮೇಲೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸಿದ್ರಾಮ ತಂದೆ ಮಲ್ಲೇಶಪ್ಪಾ ತಳವಾರ, ಸಾಃ ಕಟಗರಪೂರ ಶಹಾಬಜಾರ ಗುಲಬರ್ಗಾ  ರವರ ಮಗ ಅಭಿಶೇಕ ಇವನು ದಿನಾಂಕ 29-12-2013 ರಂದು 07-30 ಪಿ.ಎಮ್ ಕ್ಕೆ  ಮನೆಯಿಂದ ಚಾಕಲೇಟ ತರಲು ಅಂಗಡಿಗೆ ಹೋಗಿ ಕಟಗರಪೂರದಲ್ಲಿರುವ ಸಂಜಯ ಸಿಂಗ ಇವರ ಮನೆಯ ಮುಂದೆ ರಸ್ತೆ ದಾಟುತ್ತಿದ್ದಾಗ ಯಾವುದೋ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಶಹಾ ಬಜಾರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಅಭಿಶೇಕ ಈತನಿಗೆ ಎಡಗಾಲು ಮೊಳಕಾಲು ಕೆಳಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 29-12-2013  ರಂದು 12-15 ಪಿ,ಎಮ್,ದ ಸೂಮಾರಿಗೆ ಕಮಲಾಪೂರ ಕಡೆಯಿಂದ ಗುಲಬರ್ಗಾಕ್ಕೆ  ಲಾರಿ ನಂ ಕೆ,, 22 -485 ನೇದ್ದರಲ್ಲಿ ಹೋಗುವಾಗ ಅದರ ಚಾಲಕನಾದ ಶೇಖಮಹ್ಮದ ತಂ ಶೇಖ ಹೈದರಸಾಬ ಸಾ|| ಕಮಲಾಪೂರ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕಗ್ಗನಮಡ್ಡಿ ಕ್ರಾಸ ದಾಟಿ ಸ್ವಲ್ಪ ಮುಂದೆ ಯಾವುದೆ ಮುನ್ನಸೂಚನೆ ನೀಡದೆ ಒಮ್ಮಲೆ ಬ್ರೆಕ ಹಾಕಿ ಲಾರಿ ನಿಲ್ಲಿಸಿದ್ದಾಗ ಹಿಂದಿನಿಂದ ಕ್ರೂಸರ ಜೀಪ ನಂ ಕೆ,, 32 ಬಿ 9022 ನೇದ್ದರ ಚಾಲಕನಾದ ಶಿವಪುತ್ರ ತಂ ರೇವಣಸಿದ್ದಪ್ಪ ಬಣಮಗಿ ಸಾ|| ಕುರಿಕೋಟ ಇತನು ತನ್ನ ಕ್ರೂಸರ ಜೀಪದ ಅಂತರ ಕಾಯಿದು ಕೊಳ್ಳದೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಹಿಂದಿನಿಂದ ಲಾರಿಗೆ ಡಿಕ್ಕಿಹೊಡೆದು ಅಪಘಾತ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಮಾಣಿಕ ತಂದೆ ಬಾಲಪ್ಪಾ ಘತ್ತರಗಿ ಸಾ; ರಾಮನಗರ ಸರಸ್ವತಿ ಮಂದಿರ ಹತ್ತಿರ ಯಶೋದಾ ನಾಗನಪಳ್ಳಿ ಎಸ.ಬಿ ಕಾಲೇಜ ಮುಂದುಗಡೆ ಗುಲಬರ್ಗಾ ರವರ ಮಗಳಾದ ಕೀರ್ತಿ @ಶ್ವೇತಾ ವಯಾ 14 ವರ್ಷ ಇವಳು ದಿನಾಂಕ 29-12-2013 ರಂದು 08-30 ಪಿ.ಎಮ್.ಕ್ಕೆ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: