ಬಾಲಕರ ಬಾಲ ಮಂದಿರದಿಂದ ಮಕ್ಕಳು ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 16-12-2013 ರಿಂದ 18-12-2013 ರವರೆಗೆ
ಸಿ.ಡಬ್ಲೂ.ಸಿ/ಡಿ.ಸಿ.ಪಿ.ಯು ಇತರೆ ಎನ್.ಜಿ.ಓ ಗಳ ಸಂಯುಕ್ತ ಮಕ್ಕಳ ಸರ್ವೆ ದಾಳಿಯಲ್ಲಿ 25
ಮಕ್ಕಳನ್ನು ನಮ್ಮ ಸಂಸ್ಥೆಯಾದ ಅಧೀಕ್ಷಕರು ಸರಕಾರಿ ಬಾಲಕರ ಬಾಲ ಮಂದಿರ ಪ್ರಗತಿ ಕಾಲೋನಿ
ಗುಲಬರ್ಗಾಕ್ಕೆ ಒಪ್ಪಿಸಿದ್ದು ಸದರಿ 25 ಮಕ್ಕಳಲ್ಲಿ 1. ರಾಜು ತಂದೆ ಸಿದ್ರಾಮ್ 2. ಸಂಜಯ್ @ ವಿಜಯ ತಂದೆ
ಶಾಣಪ್ಪಾ 3. ಈರಪ್ಪಾ ತಂದೆ ವೆಂಕಪ್ಪಾ ಇವರು
ಸಂಸ್ಥೆಯಲ್ಲಿದ್ದ ಇನ್ನೂ 03 ಮಕ್ಕಳಾದ 1. ಶರಬ ತಂದೆ ಆನಂದಪ್ಪಾ 2. ಅಗ್ನಿ ತಂದೆ ಹಣಮಂತ 3. ಖಾಜಾ ತಂದೆ ಹಸನ ಪಟೇಲ್ ಇವರು
06 ಜನ ಕೂಡಿಕೊಂಡು ದಿನಾಂಕ 19-12-2013 ರಂದು ಬೆಳಗ್ಗೆ 02:00 ಗಂಟೆಗೆ ಸಂಸ್ಥೆಯಿಂದ ಓಡಿ ಹೋಗಿದ್ದು ನಂತರ ಹುಡುಕಾಡಲಾಗಿ ಅದರಲ್ಲಿ
ಒಬ್ಬ ಹುಡುಗನಾದ ಅಗ್ನಿ ತಂದೆ ಹಣಮಂತ ವಯಃ 14 ಇತನು ಮರಳಿ ಬಾಲಕರ ಬಾಲ ಮಂದಿರಕ್ಕೆ ಬಂದಿದ್ದು
ಇನ್ನುಳಿದ 05 ಬಾಲಕರು ಕಾಣೆಯಾಗಿದ್ದು ಸದರಿಯವರನ್ನು ಎಲ್ಲಾ ಕಡೆ ಹುಡುಕಾಡಲಾಗಿ
ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ
:
ಮಾಹಾಗಾಂವ ಠಾಣೆ :
ದಿನಾಂಕ 27-12-2013 ರಂದು 6.45 ಪಿ,ಎಮ್,ಕ್ಕೆ ಶ್ರೀ ಸಂಜುಕುಮಾರ ತಂ ಪ್ರಭು ಒಡೆಯರಾಜ ಸಾ|| ಕುರಿಕೋಟ ರವರ ಚಿಕ್ಕಪ್ಪನ ಹೆಂಡತಿಯಾದ ಶರಣಮ್ಮ ಗಂ
ಶಾಮರಾಯ ಒಡೆಯರಾಜ ಇವಳು ಕುರಿಕೋಟ ಗ್ರಾಮದ ಬಸ ಸ್ಟಾಂಡ ಹತ್ತಿರದಿಂದ ರೋಡಿನ ಎಡಗಡೆಯಿಂದ ಮನೆಗೆ
ಹೋಗುವಾಗ ಗುಲಬರ್ಗಾ ಕಡೆಯಿಂದ ಹಿಂದಿನಿಂದ ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆ,ಎ, 32 ಕೆ 4835 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೋಡೆದು ಅಪಘಾತ ಪಡಿಸಿ ಓಡಿ
ಹೋಗಿದ್ದು ಶರಣಮ್ಮ ಇವಳಿಗೆ ತಲೆಯ ಹಿಂಬಾಗ ಭಾರಿ ರಕ್ತಗಾಯ ಹಾಗೂ ಎದೆ ಹೊಟ್ಟೆ ಎರಡು ಕಾಲುಗಳಿಗೆ
ಒಳಪೆಟ್ಟು ಮತ್ತು ರಕ್ತಗಾಯವಾಗಿದ್ದು ಮಾತನಾಡುವ ಸ್ಥತಿಯಲ್ಲಿ ಇರುವುದಿಲ್ಲಾ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು
ಪ್ರಕರಣ :
ಅಫಜಲಪೂರ ಠಾಣೆ: ಶ್ರೀ ಮಂಜುನಾಥ ತಂದೆ
ಮಾಹದೇವಪ್ಪಾ ಆರೆಕರ ಸಾ|| ಅಫಜಲಪೂರ ಇವರು ದಿನಾಂಕ 05-12-2013 ರಂದು 10 ಎಎಮ್ ಕ್ಕೆ ಮೋ ಸೈ ನಂ ಕೆಎ-32,ಯು-6147 ನ್ನು ತಗೆದುಕೊಂಡು ನಾನು ಕೆಲಸ ಮಾಡುವ
ಸಿಡಿಪಿಓ ಕಛೇರಿಯ ಮುಂದೆ ನಿಲ್ಲಿಸಿ ಕೆಲಸ ಮಾಡಿ 2 .30 ಪಿಎಮ್ ಕ್ಕೆ ಬಂದು ನೋಡಿದರೆ ನನ್ನ ಮೋ
ಸೈ ಸ್ಥಳದಲ್ಲಿ ಇಲ್ಲದ ಕಾರಣ ಎಲ್ಲಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಅ ಕಿ 18000 ಇರಬಹುದು
ಯಾರೋ ಕಳ್ಳರು ನನ್ನ ಮೋ ಸೈ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ರಾಮಚಂದ್ರ ತಂದೆ ಮೋತ್ಯಾ ನಾಯಕ ಚವಾಣ ಸಾ: ಕೊತ್ತಾಪಲ್ಲಿ
ತಾಂಡಾ ರವರು ದಿನಾಂಕ 27-12-2013 ರಂದು 0830 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ
ಮೊತ್ಯಾ ನಾಯಕ ಹಾಗು ನಮ್ಮ ತಮ್ಮ ವಿಜಯಕುಮಾರ ಕೂಡಿ ನಮ್ಮ ತಾಂಡಾದ ರುಕ್ಯಾ ನಾಯಕ ತಂದೆ ಹರ್ಯಾ
ನಾಯಕ ಇವರ ಮನೆಯ ಹತ್ತಿರ ಇರುವ ರಸ್ತೆಯಿಂದ ನಮ್ಮ ಹೊಲಕ್ಕೆ ಗೋಬ್ರ್ಯಾ ತಂದೆ ಥಾವರ್ಯಾ ನಾಯಕ
ಇವರು ನಮಗೆ ಕೊಟ್ಟ ಸ್ಪಿಂಕ್ಲರ್ ತೆಗೆದು ನಮ್ಮ ಹೊಲಕ್ಕೆ ಹೊಗುತ್ತಿರುವಾಗ ನಮ್ಮ ತಾಂಡಾದ ರಾಜು
ತಂದೆ ನರಸಿಂಗ ನಾಯಕ ಚವಾಣ ಹಾಗು ಆತನ ಸಂಗಡ 14-15 ಜನರು ಕೂಡಿ ಬಂದು ನಮಗೆ ಏ ಭೋಸಡಿ ಮಕ್ಕಳೆ
ನೀವು ತೆಗೆದುಕೊಂಡು ಹೊಗುತ್ತಿರುವ ಸ್ಪಿಂಕ್ಲರ್ ನಮ್ಮದು ಇದೆ ಅಂತಾ ಜಗಳಾ ತೆಗೆದರು. ಆಗ ನಾನು
ಮತ್ತು ನಮ್ಮ ತಂದೆಯವರು ಅವರಿಗೆ ನಮ್ಮದು ಸ್ಪಿಂಕ್ಲರ್ ಗೋಬ್ರ್ಯಾ ತಂದೆ ಥಾವರ್ಯಾ ನಾಯಕ ಇತನು
ತೆಗೆದುಕೊಂಡು ಹೊಗಿ ಕಳೆದಿರುತ್ತಾನೆ. ಅದರ ಬದಲಿಗೆ ಈ ಸ್ಪಿಂಕ್ಲರ್ ಅವನು ನಮಗೆ
ಕೊಟ್ಟಿರುತ್ತಾನೆ ಎಂದು ಹೇಳಿದರು ಕೂಡ ಅವರು ಕೇಳದೆ ಮಕ್ಕಳೆ ನಮ್ಮದು ಸ್ಪಿಂಕ್ಲರ್ ತೆಗೆದುಕೊಂಡು
ಅವರ-ಇವರ ಹೆಸರು ಹೇಳುತ್ತಿರಿ ಅಂತಾ ಎಲ್ಲರೂ
ಕೂಡಿ ನನಗೆ, ನಮ್ಮ ತಂದೆ ಮೊತ್ಯಾ ನಾಯಕ, ನಮ್ಮ ತಾಯಿ ಮಂಗಿಬಾಯಿ, ಮತ್ತು ಅಂಬಾದಾಸ ಇವರಿಗೆ
ಕೈಯಿಂದ, ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿರುತ್ತಾರೆ. ಮತ್ತು ನಮ್ಮ
ತಂದೆಗೆ ತೊರಡಿನ ಮೇಲೆ ಒದ್ದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment