ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ
ನಗರ ಠಾಣೆ : ಶ್ರೀ ಮಹ್ಮದ ಇಬ್ರಾಹಿಂ @ ಮಹ್ಮದ ಫಿರೋಜ್ ಇಬ್ರಾಹಿಂ ತಂದೆ
ಮಹ್ಮದ ಇಸ್ಮಾಯಿಲ್ ಇವರು ದಿನಾಂಕಃ 22-10-2013 ರಂದು ಅಬ್ದುಲ್ ರಸೂಲ್ ಇವರ ಕಡೆಯಿಂದ ಮನೆ ನಂ.
4-601/76ಎ ಪ್ಲಾಟ ನಂ. 51 ಜಿ ಮನೆಯನ್ನು ಅಗ್ರೀಮೆಂಟ್ ಫಾರ್ ಸೇಲ್ ನೇದ್ದರ ಪ್ರಕಾರ
37,00,786/- ರೂ. ಗೆ ಖರೀದಿ ಮಾಡುವ ವಿಷಯದಲ್ಲಿ ಮಾತುಕತೆಯಾಗಿದ್ದು ಉಳಿದ ಹಣ 7 ಲಕ್ಷ ರೂಪಾಯಿ ನೊಂದಣಿ
ಸಮಯದಲ್ಲಿ ಕೊಡುವ ಮಾತುಕತೆಯಾಗಿದ್ದು ಇರುತ್ತದೆ. ಅಬ್ದುಲ್ ರಶೀದ ಇತನು ಮಹ್ಮದ ಶರೀಫ್ ಇವರಿಗೆ
12 ಲಕ್ಷ ರೂಪಾಯಿಗೆ ಅಗ್ರೀಮೆಂಟ್ ಫಾರ್ ಸೇಲ್ ಮಾಡಿಕೊಟ್ಟಿದ್ದ ರಿಂದ ಇವರಲ್ಲಿ ವೈಮನಸ್ಸು ಉಂಟಾಗಿದ್ದು
ಈ ಬಗ್ಗೆ ಮೇಲಾಧಿಕಾರಿಯವರಲ್ಲಿ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕಃ 23-12-2013
ರಂದು 01:15 ಪಿ.ಎಂ. ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕುಳಿತುಕೊಂಡಾಗ ಸುಮಾರು 5-6 ಜನರು ಬಂದು
ಅದರಲ್ಲಿ ಒಬ್ಬನು ರಾಡು ಹಿಡಿದುಕೊಂಡು ಬಂದವರೇ ಅಬ್ದುಲ್ ರಸೂಲ್ ಈ ಮನೆ ನಮ್ಮ ಸಾಹೇಬರಿಗೆ ಮಾರಿದ್ದಾನೆ
ನೀವು ಖರೀದಿ ಮಾಡಿಕೊಂಡ ಬಗ್ಗೆ ಸುಳ್ಳು ಹೇಳುತ್ತೀರಿ ಅಂತಾ ಎದೆಯ ಮೇಲಿನ ಅಂಗಿಯನ್ನು ಹಿಡಿದು ತಡೆದು
ನಿಲ್ಲಿಸಿ ರಾಡಿನಿಂದ ನನ್ನ ಎಡಗಡೆ ತಲೆಗೆ ಮತ್ತು ಬಾಯಿಯ ಮೇಲೆ ಹೊಡೆದು ನನ್ನ ಬಲಗಡೆ ಹಲ್ಲಿಗೆ ಪೆಟ್ಟಾಗಿ
ಹಲ್ಲು ಬಿದ್ದು ಹೋಗಿರುತ್ತದೆ. ಹಾಗೆ ಎಡ ಗಣ್ಣಿನ ಹತ್ತಿರ ಹೊಡೆದು ರಕ್ತಗಾಯ ಪಡಿಸಿ ಎಲ್ಲರೂ ಕೂಡಿಕೊಂಡು
ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಷ್ಟರಲ್ಲಿ ನನ್ನ ತಾಯಿಯಾದ ಅಕ್ತರ ಜಹಾನ ಇವರು ಬಿಡಿಸಿಕೊಳ್ಳಲಿಕೆ
ಬಂದಾಗ ಬಲಗೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ನಂತರ ನನ್ನ ಹೆಂಡತಿ ಹಾಗು ಮಕ್ಕಳು ನನಗೆ ಹೊಡೆಯುವದನ್ನು
ನೋಡಿ ಜಗಳ ಬಿಡಿಸಿದರು. ಹೋಗುವಾಗ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದರು. ಅಬ್ದುಲ್ ರಸೂಲ್, ಮಹ್ಮದ ಶಫೀ,
ಮಹ್ಮದ ಮುಜಬೂರ ರಹೆಮಾನ್ ಮತ್ತು ಗೌಸ ಖುರೇಷಿ ಇವರ ಕುಮ್ಮಕ್ಕಿನಿಂದ 5-6 ಜನರನ್ನು ಕಳಿಸಿ ನನಗೆ,
ನನ್ನ ಮಕ್ಕಳಿಗೆ ಹಾಗು ನನ್ನ ತಾಯಿಗೆ ಹೊಡೆ ಬಡೆ ಮಾಡರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಂಏಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಂಗಾವ ಠಾಣೆ
: ದಿನಾಂಕ 23-12-2013 ರಂದು ಬೆಳಿಗ್ಗೆ 10-30 ಕ್ಕೆ ಮನೆಯಿಂದ ನನ್ನ ಹೆಂಡತಿ ಮತ್ತು ನಮ್ಮ ಪರಿಚಯದವರಾದ ಪ್ರಶಾಂತ ಕುಮಾರ ತಂದೆ ಮಸ್ತಾನಪ್ಪ ತಾಳಕೋಟಿ ಇಬ್ಬರು ಕೂಡಿಕೊಂಡು ತಮ್ಮ ಬಜಾಜ ಡಿಸ್ಕವರಿ ವಾಹನ ಸಂ. KA 32 – Y 4974 ನೇದ್ದರ ಮೇಲೆ ಕುಳಿತುಕೊಂಡು ರೇವಣಸಿದ್ದೇಶ್ವರ ಗುಡ್ಡಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಹೋಗಿರುತ್ತಾರೆ.
ನಂತರ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ನನ್ನ ಹೆಂಡತಿಗೆ ಕರೆದುಕೊಂಡು ಹೋಗಿದ್ದ ಪ್ರಶಾಂತ ಕುಮಾರ ಇತನು ಫೋನ್ ಮಾಡಿ ನಿಮ್ಮ ಹೆಂಡತಿಗೆ ನಾಗೂರ ಸಮೀಪ ಅಪಘಾತವಾಗಿದೆ ಅಂತ ತಿಳಿಸಿದನು. ನಂತರ ನಾನು ಅಪಘಾತ ಪಡಿಸಿದ ಸ್ಥಳಕ್ಕೆ ಅಂದರೆ ನಾಗೂರ ಸಮೀಪ ಹೋಗಿ ನೋಡಿ ನನ್ನ ಹೆಂಡತಿಗೆ ವಿಚಾರಿಸಲು ಸದರಿಯವಳು ತಿಳಿಸಿದ್ದೆನೆಂದರೆ, ಪ್ರಶಾಂತ ಕುಮಾರ ಇತನು ನಾಗೂರ ಸಮೀಪ ವಾಹನವನ್ನು ಅತೀವೇಗ ಮತ್ತು ಆಲಕ್ಷತನದಿಂದ ಚಲಾಯಿಸಿದ್ದರಿಂದ ವಾಹನ ಒಮ್ಮೆಲೆ ಜಂಪ್ ಆಗಿದ್ದರಿಂದ, ನಾನು ಕೆಳಗೆ ಬಿದ್ದಿರುತ್ತೇನೆ ಅಂತ ತಿಳಿಸಿರುತ್ತಾಳೆ. ನಂತರ ನನ್ನ ಹೆಂಡತಿಗೆ ನೋಡಲಾಗಿ ತಲೆಗೆ ಭಾರಿ ಗಾಯವಾಗಿದ್ದು ನಂತರ ನನ್ನ ಹೆಂಡತಿಗೆ ಮಾತಾಡುವುದಕ್ಕೆ ಸಾಧ್ಯವಾಗಲಿಲ್ಲ. ನಂತರ ನಾನು ಮತ್ತು ನನ್ನ ಜೊತೆ ಇದ್ದ ಪ್ರಶಾಂತ ಕುಮಾರ ಇಬ್ಬರು ಕೂಡಿಕೊಂಡು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಸೇರಿಕೆ ಮಾಡಿರುತ್ತೇವೆ. ಈಗ ಸದ್ಯ ನನ್ನ ಹೆಂಡತಿ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅಂತಾ ಜಗದೀಶ ತಂ ಗುರಪ್ಪ ನಾಗಶೆಟ್ಟಿ ಸಾ|| ಹಾವನೂರ ಹಾ||ವ|| ಪ್ರಗತಿ ಕಾಲೋನಿ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment