POLICE BHAVAN KALABURAGI

POLICE BHAVAN KALABURAGI

21 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಶಿವಕುಮಾರ ಅಯ್ಯಪಗೊಳ ಸಾ: ಯಡ್ರಾಮಿ ದಿನಾಂಕ: 20-12-2013 ರಂದು ಮದ್ಯಾಹ್ನ ನಮ್ಮ ಅಣ್ಣತಮ್ಮಕಿಯ ಅಶೋಕ ಹಾಗೂ ನಮ್ಮೂರ ರೇವಣಸಿದ್ದಯ್ಯ ಹಿರೇಮಠ ಇಬ್ಬರೂ ಮೋಟಾರ ಸೈಕಲ ಮೇಲೆ ಜೇವರ್ಗಿಗೆ ಹೋಗಿ ವಾಪಸ ಯಡ್ರಾಮಿಗೆ ಬರುತ್ತಿದ್ದಾಗ ಸಾಯಂಕಾಲ 7-00 ಗಂಟೆಗೆ ಗುಳ್ಯಾಳ ಕ್ರಾಸ ಹತ್ತಿರ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟಾರ ಸೈಕಲಗೆ ಅಪಘಾತಪಡಿಸಿ ಮೋಟಾರ ಸೈಕಲ ನಡೆಯಿಸುತ್ತಿದ್ದ  ಅಶೋಕ  ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ರೇವಣಸಿದ್ದಯ್ಯನಿಗೆ ಗಾಯಾಗಳು ಆಗಿರುತ್ತವೆ.  ಅಪಘಾತದ ನಂತರ ವಾಹನದ ಚಾಲಕನು ವಾಹನದ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 20-12-2013 ರಂದು ಶ್ರೀ ಲಕ್ಷ್ಮೀಕಾಂತ ತಂದೆ ಶಿವಲಿಂಗಪ್ಪ ಸಾವಳಗಿ  ಸಾ: ಗಉಲಬರ್ಗಾ ಇವರು ತನ್ನ ಟಾಟಾ ಇಂಡಿಕಾ ಕಾರ ಕೆಎ 02 ಝ 3242 ನೇದ್ದು ಚಾಲನೆ ಮಾಡುತ್ತಾ ತನ್ನ ಹೆಂಡತಿ ತವರು ಮನೆಯಾದ ಸಾತಖೇಡ ಗ್ರಾಮಕ್ಕೆ ಹೊರಟಿದ್ದು, ಸಂಜೆ 6-30  ಗಂಟೆ ಸುಮಾರಿಗೆ ಕಪನೂರ ಗ್ರಾಮದ ಪೋರ್ಡ ಶೋ ರೂಮು ಇನ್ನೂ ಸ್ವಲ್ಪ ಮುಂದೆ ಇರುವಂತೆ  ಹೊರಟಾಗ ಹಿಂದಿನಿಂದ  ಲಾರಿ ಎಪಿ 23 ಡಬ್ಲ್ಯೂ 0593 ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ  ಮುಂದೆ ಹೊರಟ  ನನ್ನ  ಕಾರ ಕೆಎ 02 ಝ 3242 ಮತ್ತು ಅದರ ಪಕ್ಕದಲ್ಲಿ ಹೊರಟ ಆಟೋರಿಕ್ಷಾ ಕೆಎ 32 ಬಿ 4136 ನೇದ್ದಕ್ಕೆ  ಡಿಕ್ಕಿ ಹೊಡೆದು ಸ್ಥಳದಲ್ಲಿ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಡಾ : ಚಂದ್ರಶೇಖರ ತಂದೆ ದುಂಡಪ್ಪ ರವರು ದಿನಾಂಕ: 20/12/2013 ರಂದು ಬೆಳಿಗ್ಗೆ 9=30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಡಬ್ಲೂ 7245 ನೆದ್ದರ ಮೇಲೆ ತನ್ನ ಮನೆಯಿಂದ ಎಸ್.ಪಿ.ಆಫೀಸ್ ರೋಡ ಮುಖಾಂತರ ಜಿ.ಜಿ.ಸರ್ಕಲ ದಿಂದ ಬಸವೇಶ್ವರ ಆಸ್ಪತ್ರೆಗೆ ಹೊಗುತ್ತಿದ್ದಾಗ ಸರಕಾರಿ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದಿನಿಂದ ಮೊ/ಸೈಕಲ್ ನಂ: ಕೆಎ 32 ಇಡಿ 2964 ರ ಸವಾರನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ  ಫಿರ್ಯಾದಿಗೆ ಗಾಯಗೊಳಿಸಿ ಮೊ/ಸಯಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ  20-12-2013  ರಂದು 09-00 ಎ.ಎಮ್ ಕ್ಕೆ ಶ್ರೀ ನಾಗಣ್ಣಾ ತಂದೆ ಹಣಮಂತ್ರಾಯ ಬಸ್ತೆನವವರ, , ಸಾಃ ಟೆಂಗಳಿ ಗ್ರಾಮ, ತಾಃ ಚಿತ್ತಾಪೂರ, ಇವರು ಗಂಜ ಬಸ್ ಸ್ಟಾಂಡ ಹತ್ತಿರ ನಿಂತಾಗ ಆರೋಪಿ ಕೇದರನಾಥ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ವೈ 2773 ನೇದ್ದು ಹುಮನಾಬಾದ ಬೇಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಗಂಜ ಬಸ್ ಸ್ಟಾಂಡ ಹತ್ತಿರ ನಿಂತ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಣ್ಣಿನ ಮೇಲೆಹಣೆಗೆಎಡಗೈ ಹಸ್ತಕ್ಕೆ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ದತ್ತಾತ್ರೇಯ ತಂದೆ ಚಂದ್ರಯ್ಯಾ ರವರು ದಿನಾಂಕ: 20-12-2013 ರಂದು ಸಾಯಂಕಾಲ 7-40 ಗಂಟೆಯ ಸುಮಾರಿಗೆ ಸುಪರ ಮಾರ್ಕೇಟನಲ್ಲಿರುವ ತಮ್ಮ ಬಟ್ಟೆ ಅಂಗಡಿಯಿಂದ  ಎಮ್.ಪಿ.ಹೆಚ್.ಎಸ್ ಶಾಲೆಯ ಎದುರು ಇರುವ ಟಾಯಲೇಟನಲ್ಲಿ ಏಕಿ ಮಾಡಲು ಬಂದು ವಾಪಸ ಬಟ್ಟೆ ಅಂಗಡಿಗೆ ನಡೆದುಕೊಂಡು ಹೋಗುತ್ತಿರುವಾಗ ಉದಯಗಿರಿ  ರಾಗಜೀನ ಅಂಗಡಿ ಎದುರು ರೋಡ ಪಕ್ಕದಲ್ಲಿ ಅಟೋರೀಕ್ಷಾ ವಾಹನಗಳು ನಿಂತಿದ್ದವು ಫಿರ್ಯಾದಿ ಹಿಂದಿನ ಅಟೋರೀಕ್ಷಾ ಹಿಂದಿನಿಂದ ಹೋಗುವಾಗ ಅಟೋರೀಕ್ಷಾ ಒಮ್ಮೇಲೆ ತನ್ನ ಅಟೋರೀಕ್ಷಾ ವಾಹನವನ್ನು ನಿಸ್ಕಾಳಜಿತನದಿಂದ ಹಿಂದಕ್ಕೆ ಚಲಾಯಿಸಿ ಫಿರ್ಯಾದಿ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಅಟೋರೀಕ್ಷಾ ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 19-12-2013 ರಂದು  ರಾತ್ರಿ 11:00 ಗಂಟೆ ಸುಮಾರಿಗೆ ಅಣ್ಣ ಬಸವರಾಜ ಇತನು ತಾಯಿಗೆ ತನಗೆ 5000/- ರೂ ಅವಶ್ಯಕತೆ ಇರುತ್ತದೆ ಎಲ್ಲಿಯಾದರೂ ತೆಗೆದುಕೋಂಡು ಬಾ ಅಂತಾ ಬಾಯಿಮಾತಿನ ತಂಟೆತಕರಾರು ಮಾಡುತ್ತಿದ್ದಾಗ ತಮ್ಮ ಫಿರ್ಯಾದಿ ಜಗನ್ನಾಥ ಇತನು ಬಸವರಾಜನಿಗೆ ಈಗತಾನೆ 15 ದಿವಸಗಳ ಹಿಂದೆ 2000/- ರೂ ತೆಗೆದುಕೊಂಡು ಹೋಗಿದ್ದಿ ಆ ಹಣ ಇನ್ನು ತೀರಿಸಬೇಕಾಗಿದೆ ಈಗ 5000/- ರೂ ಎಲ್ಲಿಂದ ತಂದು ಕೊಡಬೇಕು ತಾಯಿ ಹತ್ತಿರ ಹಣ ಇಲ್ಲ ಅಂತಾ ಅಂದಾಗ ಬಸವರಾಜ ಇತನು ಎದ್ದು ಬಂದು ಮನೆಯ ಹೊರಗೆ ನಿಂತಿದ್ದ ಫಿರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಮಗನೇ ನನಗೆ ಬುದ್ದಿಮಾತು ಹೇಳುವವನು ಅಂತಾ ಅಂದವನೇ ಅಲ್ಲಿಯೇ ಇದ್ದ ಕೂಡುಗೋಲು ತೆಗೆದುಕೋಂಡು ಎಡಗೈ ಹಸ್ತಕ್ಕೆ ಮೋಳಕೈ ಹತ್ತಿರ ಮತ್ತು ಎಡಗಾಲಿನ ತೋಟಡೆಗೆ ಹೋಡೆದು ಭಾರಿ ರಕ್ತಗಾಯಗೊಳಿಸಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: