POLICE BHAVAN KALABURAGI

POLICE BHAVAN KALABURAGI

18 December 2013

Gulbarga District Reported Crimes

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ದಿನಾಂಕ 17.12.2013 ರಂದು 8.15 ಪಿ.ಎಮ್.ಕ್ಕೆ ವಿರೇಶ ಈತನಿಗೆ ಬೆಂಗಳೂರಿಗೆ ಕಳುಹಿಸಿ ಕೊಡಲು ರೇಲ್ವೆ ಸ್ಟೇಷ್ನನ್ನಿಗೆ ಬಿಟ್ಟ ಬರಲು ಶ್ರೀಶೈಲ ತಂದೆ ಗುರುಲಿಂಗಪ್ಪಾ ಹಿರೇಮಠ ಸಾ|| ಹೊನ್ನಕಿರಣಗಿ ಇತನು ತನ್ನ ಮೊ.ಸೈ.ನಂ ಕೆಎ-32 ಎಸ್-7082 ನೇದ್ದರ ಮೇಲೆ ಕರೆದುಕೊಂಡು ಮತ್ತು ಇವರ ಹಿಂದೆ ಇವರ ಚಿಕ್ಕಪ್ಪಾ ಇವರು  ಮೊ.ಸೈ. ನಂ ಕೆಎ-32 ಇಸಿ-8759 ನೇದ್ದರ ಮೇಲೆ ತೊನಸಳ್ಳಿ ದಾಟಿ ಸ್ವಲ್ಪ ದೂರ ಬಂದಾಗ ಮೃತನು ನಡೆಸುತ್ತಿದ್ದ ಮೊ.ಸೈ. ಕೆಟ್ಟಿದ್ದು ಅವರು ನಿಲ್ಲಿಸಿ ನೋಡುವಾಗ ಹಿಂದೆ ಅವರ ಚಿಕ್ಕಪ್ಪನವರು ಬಂದು  ತಮ್ಮ ಮೊಟಾರ ಸೈಕಲ ಬೆಳಕು ಹಾಕಿ ನೋಡುವಷ್ಟರರಲ್ಲಿ ಜೇವರ್ಗಿ ಕಡೆಯಿಂದ ಒಂದು ಇಂಡಿಕಾ ಕಾರ ಚಾಲಕನು ಶಹಾಬಾದ ಕಡೆಗೆ ಅತಿ ವೇಗ ಮತ್ತು ನಿಷ್ಕಾಳಜಿತನದಿಂಧ ನಡೆಸಿಕೊಂಡು ಬಂದು ಶ್ರೀಶೈಲ ಮತ್ತು ವಿರೇಶನಿಗೆ ಹಾಗೂ ಅವರ ಮೊ.ಸೈ.ಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಶ್ರಶೈಲ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ವಿರೆಶನಿಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಸದರಿ ಕಾರ ಚಾಲಕನು ತನ್ನ ಕಾರನ್ನು ಅಲ್ಲೇ ಸ್ವಲ್ಪ ಬಾಜುದೂರದಲ್ಲಿ ಫೂಲ ಹತ್ತಿರ ಬಲಗಡೆ ಕೆಳಗೆ ಪಲ್ಟಿ ಆಗಿ ಬಿದ್ದು ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ರಾಜಶೇಖರ ತಂದೆ ಶರಣಯ್ಯಾ ಹಿರೇಮಠ ಸಾ||ಹೊನ್ನಕಿರಣಗಿ ಗ್ರಾಮ ತಾ||ಜಿ|| ಗುಲಬರ್ಗಾ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಬಸವರಾಜ ತಂದೆ ನೀರು ಜಾಧವ ಸಾಃ ಕೂಡ್ಲಿ ತಾಂಡಾ ತಾಃ ಚಿಂಚೋಳಿ ಜಿಃ ಗುಲಬರ್ಗಾ  ಮತ್ತು ಆತನ ಸಂಬಂಧಿಕರಾದ ಸಾಗರ ತಂದೆ ರಾಮಶೆಟ್ಟಿ ಜಾಧವ ಹಾಗು ವಿಕಾಸ ತಂದೆ ರಾಜು ಜಾಧವ ಕೂಡಿಕೊಂಡು ಮತ್ತು ಚಂದನಕೇರಾ ಕಲದೊಡ್ಡಿ ತಾಂಡಾದ 1) ಉದಯ ತಂದೆ ತಾರು ರಾಠೋಡ 2) ಸುನೀಲ ತಂದೆ ಕಾಶಿನಾಥ ಜಾಧವ 3) ಯಮುನಾಬಾಯಿ ಗಂಡ ಬಿಕ್ಕು ರಾಠೋಡ 4) ಶ್ರೀದೇವಿ ಗಂಡ ಶಿವಕುಮಾರ ರಾಠೋಡ 5) ರಾಮಾಬಾಯಿಗಂಡ ಥಾವರು ರಾಠೋಡ 6) ಜೀತೇಶ ತಂದೆ ಪುರು ರಾಠೋಡ 7) ಚಾಂದಿಬಾಯಿ ಗಂಡ ರೂಪಲಾ ಜಾಧವ ಹಾಗು ಇನ್ನೂ 3-4 ಜನರು ಕೂಡಿಕೊಂಡು  ಹುಮನಾಬಾದ ತಾಲ್ಲೂಕಿನ ಕಟ್ಟೋಳಿ ಗ್ರಾಮದಲ್ಲಿ ಮರಿಯಮ್ಮಾ ದೇವಿಯ ಜಾತ್ರೆವಿದ್ದ ಪ್ರಯುಕ್ತ ಜಾತ್ರೆಗೆ ಹೋಗಲು ಚಂದನಕೇರಾ ತಾಂಡಾದ ಉದಯ ರಾಠೋಡ ಇವರ  ಬೊಲೇರೋ ಪೀಕಪ್ ನಂ. ಕೆಎ:32,ಬಿ: 8808 ನೇದ್ದನ್ನು ಬಾಡಿಗೆ ಮುಗಿಸಿಕೊಂಡು ಅದರಲ್ಲಿ ಕುಳಿತುಕೊಂಡು ಚಂದನಕೇರಾ ತಾಂಡಾದಿಂದ ಸೊಂತ ಮಾರ್ಗವಾಗಿ ಕಟ್ಟೋಳಿಗೆ ಹೋಗುತ್ತಿರುವಾಗ ಸರಫೋಸಕಿಣ್ಣಿ ಕ್ರಾಸ್ ದಾಟಿದ ನಂತರ ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಾಗಣ್ಣಾ ತಂದೆ ರೇವಣಸಿದ್ದಪ್ಪಾ ಮಲಕಾರ್ಜೇ ಸಾಃಚಂದನಕೇರಾ ತಾಃಚಿಂಚೋಳಿ ಜಿಃ ಗುಲಬರ್ಗಾ ತಾನು ಚಲಾಯಿಸುತ್ತಿರುವ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತದಿಂದ ಚಲಾಯಿಸುತ್ತಾ ಮುಂದೆ ಹೋಗುವ  ವಾಹನಗಳಿಗೆ ಕಟ್ಟ್  ಹೊಡೆಯುತ್ತಾ ಹೋಗುತ್ತಿದ್ದಾಗ ನಾವು ನಿಧಾನವಾಗಿ ಚಲಾಯಿಸಲು ಹೇಳಿದರೂ ಕೂಡಾ ಕೇಳದೆ ಹಾಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಸೊಂತ ಗ್ರಾಮದ ಕಲ್ಮೂಡ  ಕ್ರಾಸ ಹತ್ತಿರ ಒಮ್ಮೇಲೆ ಜೀಪನ್ನು ಕಟ್ ಹೊಡೆಲು ಹೋಗಿ ರಸ್ತೆಯ ಎಡಬದಿ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತ ಪಡಿಸಿಓಡಿ ಹೋಗಿದ್ದರಿಂದ  ಫಿರ್ಯಾದಿಗೆ ಬಿಟ್ಟು ವಾಹನದಲ್ಲಿ ಕುಳಿತವರಿಗೆತಲೆಗೆಮೈ-ಕೈಗಳಿಗೆ ರಕ್ತಗಾಯ ಮತ್ತು ಗುಪ್ತ ಗಾಯಗಳಾಗಿದ್ದವು. ಮತ್ತು  ಸುನೀಲ ಜಾಧವ ಈತನಿಗೆ ಎಡಗಲ್ಲಕ್ಕೆಎಡ ಮೆಲಕಿನ ಹತ್ತಿರ ಬಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಬೇಹುಷ ಆಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಜಿ. ರಾಜಗೋಪಾಲರಾವ ತಂದೆ ಬಾಪುರಾವ ಸಾ|| ಕಟ್ಟಾಲಿಂಗಂಪೇಟ್ ಮಂಡಲ್ ಚಂದುರ್ತಿ ಜಿ|| ಕರಿಮ್ ನಗರ ಆಂದ್ರಾ ಪ್ರದೇಶ   ಹಾ|| ||ವರ್ದಾನಗರ  ನ್ಯೂ ಜೇವರ್ಗಿ ರಸ್ತೆ ಗುಲಬರ್ಗಾ  ರವರು  ದಿನಾಂಕ  15-12-13 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವರ ದರ್ಶನಕ್ಕೆ ಹೋಗಿ ಅಲ್ಲಿ ಹೀರೊ ಹೊಂಡಾ ಸ್ಲೇಂಡರ್ ಮೋಟಾರ ಸೈಕಲ  ನಂ ಕೆಎ 32 ಕ್ಯೂ 3802 ನೇದ್ದನ್ನು ನಿಲ್ಲಿಸಿ ಗುಡಿಯ ಒಳಗೆ ಹೋಗಿ ದೇವರ ದರ್ಶನ  ಮಾಡಿ ನಂತರ 06-00 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ ಹತ್ತಿರ ಬಂದಿದ್ದು ಅಲ್ಲಿ ಮೋಟಾರ ಸೈಕಲ್ ಇರಲಿಲ್ಲಾ ಅಲ್ಲಲ್ಲಿ ಹುಡುಕಾಡಿದರು ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ ಮೋಟಾರ ಸೈಕಲ್  ಕಪ್ಪು ಬಣ್ಣದು ಉಳ್ಳದು ಇದ್ದು, CHASSIS NO.  04F16F09082, ENGINE NO. 04F15E08794,  ಅ.ಕಿ 23,000/- ರೂ. ಬೆಲೆ ಬಾಳುವದನ್ನು ಯಾರೊ ಅಪರಿಚತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: