POLICE BHAVAN KALABURAGI

POLICE BHAVAN KALABURAGI

28 October 2013

Gulbarga District Reported Crimes

ಇಂಟರನೆಟ ಕೆಫೆಗಳಲ್ಲಿ ಅಶ್ಲೀಲ ಚಿತ್ರ ಪ್ರದರ್ಶಿಸುತ್ತಿರುವವರ ಬಂಧನ :

ಸ್ಟೇಷನ ಬಜಾರ ಠಾಣೆ :ಶ್ರೀ ಬಸವರಾಜ .ಬಿ. ಬಜಂತ್ರಿ ಪಿ. ಸ್ಟೇಷನ ಬಜಾರ ಪೊಲೀಸ್ ಠಾಣೆ ರವರು ಒಂದು ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆ ಆರೋಪಿ ಮುದ್ದೆ ಮಾಲು ಸಮೇತ ತಂದು ಹಾಜರುಪಡಿಸಿದ್ದು ಸಾರಾಂಸವೆನೆಂದರೆ. ದಿನಾಂಕ. 26-10-2013 ರಂದು   8:00 ಪಿ.ಎಮ್ ಸುಮಾರಿಗೆ ನಾನು ಬಸವರಾಜ.ಬಿ.ಬಜಂತ್ರಿ ಪಿ. ಸ್ಟೇಷನ ಬಜಾರ ಠಾಣೆಯಲ್ಲಿದ್ದಾಗ ತಿಮ್ಮಾಪೂರಿ ಸರ್ಕಲನಲ್ಲಿರುವ ನಿಧಿ ಇಂಟರನೆಟ್ ಹಾರ್ಡವೇರ & ನೆಟವರ್ಕ ಅಂಗಡಿಯಲ್ಲಿ ಅಶ್ಲಿಲ ಸಂಬೋಗ ಚಿತ್ರಗಳು ಕಂಪ್ಯೂಟರನಲ್ಲಿ ಡೌನಲೋಡ ಮಾಡಿ ಸಾರ್ವಜನಿಕರಿಗೆ ತೊರಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರರನ್ನು ಠಾಣೆಗ ಬರಮಾಡಿಕೊಂಡು ಶ್ರೀ ಮಲ್ಲಿಕಾರ್ಜುನ ಬಂಡೆ ಪಿ.ಎಸ್. (ಅವಿ)ಮುರಳಿ ಎಂ.ಎನ್ ಪಿ.ಎಸ್. (ಕಾ&ಸು) ಮತ್ತು ಸಿಬ್ಬಂದಿರವರು  ಮಾನ್ಯ ಎಸ್.ಪಿ.ಸಾಹೇಬರು, ಮಾನ್ಯ ಅಪರ ಎಸ್.ಪಿ.ಸಾಹೇಬರು, ಮಾನ್ಯ ಡಿ.ಎಸ್.ಪಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಠಾಣೆಯಿಂದ ಹೊರಟು ತಿಮ್ಮಾಪೂರಿ ಕಾಂಪ್ಲೆಕ್ಸ್ ಹೋಗಿ ವಾಹನದಿಂದ ಇಳಿದು ನಿಧಿ ಇಂಟರನೆಟ್ ಹಾರ್ಡವೇರ & ನೆಟವರ್ಕ ಅಂಗಡಿ ಒಳಗೆ ಹೋಗಿ ಪಂಚರ ಸಮಕ್ಷಮ ನೋಡಲಾಗಿ 5+5 ಚಿಕ್ಕ ಚಿಕ್ಕ ಕ್ಯಾಭಿನ ಇದ್ದು ಅದರಲ್ಲಿ ನಾಲ್ಕು ಹುಡುಗರು ಒಂದೊಂದು ಕ್ಯಾಭಿನದಲ್ಲಿ ಇದ್ದರು ಮತ್ತು ಮ್ಯಾನೇಜರ ಕೂಡಾ ಇದ್ದನ್ನು ಮೊದಲನೆ ಕ್ಯಾಭಿನದಲ್ಲಿಯ ಕಂಪ್ಯೂಟರದಲ್ಲಿ ಅಶ್ಲಿಲ ಸಂಬೊಗ ಚಿತ್ರಾವಳಿ ದೃಶ್ಯ ಮೂಡಿಬರುತ್ತಿದ್ದು ಒಬ್ಬ ವ್ಯಕ್ತಿ ನೋಡುತ್ತಿದ್ದ ಆಗ ನಾವು ವಿಡಿಯೋ ಗ್ರಾಫ ಮಾಡಿ ಕ್ಯಾಬಿನದಲ್ಲಿಯ ಸಿ.ಪಿ.ಯು, ಮಾನಿಟರ್, ಕೀ ಬೋರ್ಟ, ಮೌಜ ಮತ್ತು ಕರೆಂಟ್ ಚಾಲ್ತಿಯಲ್ಲಿತು. ಹೀಗೆ ಇನ್ನೂಳಿದ ಕ್ಯಾಬಿನಗಳಲ್ಲಿ ಮೂರು ಜನ ಹುಡುಗರು  ಅಶ್ಲಿಲ ಸಂಬೊಗ ಚಿತ್ರಾವಳಿ ದೃಶ್ಯ ಮೂಡಿಬರುತ್ತಿದದ್ದನ್ನು ನೋಡುತ್ತಿದ್ದರು. ಮ್ಯಾನೇಜರ ಕೂಡಾ ಒಂದು ಕಂಪ್ಯೂಟರನಲ್ಲಿ ಅಶ್ಲಿಲ ಸಂಬೊಗ ಚಿತ್ರವನ್ನು ನೋಡುತ್ತಿದ್ದನ್ನು ಮತ್ತು ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದು ಅಲ್ಲದೇ ಕಟ್ಟಡದ ಮಾಲಿಕನು ಸಹ ಕೃತ್ಯಕೆ ಸಹಕರಿಸಿದ್ದಾನೆ. ನಾವು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವರ ಹೆಸರು ವಿಚಾರಿಸಲು 1) ಮಹ್ಮದ ಯೂಸುಫ ತಂದೆ ಗುಲಾಮ ಮೈನುದ್ದಿನ ಸಾ|| ಖಮರ ಕಂಪೌಂಡ ಗುಲಬರ್ಗಾ, 2) ಹಬೀಬ ತಂದೆ ಗುಡುಸಾಬ ಸಾ|| ಹುದಾಮಜೀದ ಹತ್ತಿರ ಗುಲಬರ್ಗಾ, 3) ಸತೀಶಕುಮಾರ ತಂದೆ ನರಸಿಂಗರಾವ ಜೀವತೆ ಸಾ|| ಹೀರಾಪೂರ ಗುಲಬರ್ಗಾ, 4) ಶ್ರೀಶೈಲ ತಂದೆ ಚಂದ್ರಶ್ಯಾ ಸಾ|| ಚೌಡಾಪೂರ ಹಾ.|| ಶಾಂತಿನಗರ ಗುಲಬರ್ಗಾ, 5) ರಫಿಕ ತಂದೆ ಮಿಯಾಲಾಲ ಸಾ|| ಖಾದ್ರಿಚೌಕ ಗುಲಬರ್ಗಾ ಅಂತಾ ಹೇಳಿದ್ದು ಸದರಿ ಅಂಗಡಿಯ ಮಾಲಕನ ಹೆಸರು ಗುರುರಾಜ.ಎಸ್.ಪಾಟೀಲ ಅಂತಾ ಗೊತ್ತಾಯಿತು. ಅಂಗಡಿಯಲ್ಲಿದ್ದ 1) ನಾಲ್ಕು ಫಿಲಿಫ್ಸ್ ಕಂಪನಿಯ ಮಾನಿಟರ್ .ಕಿ|| 8,000/-, 2) ಎರಡು ಎಲ್.ಜಿ.ಕಂಪನಿಯ ಮಾನಿಟರ್ .ಕಿ|| 4,000/-, 3) ಒಂದು ಸ್ಯಾಮಸಂಗ್ ಕಂಪನಿಯ ಮಾನಿಟರ್ .ಕಿ|| 2,000/-, 4) ಹತ್ತು ವಿವಿಧ ಕಂಪನಿಯ ಸಿ.ಪಿ.ಯು .ಕಿ|| 60,000/- 5) ಹತ್ತು ಕೀ ಬೋರ್ಡ .ಕಿ|| 2,000/- ರೂ , 6) ಎಳು ಮೌಸಗಳು .ಕಿ|| 500/- ರೂ, 7) ಡಿ-ಲಿಂಕ್ ಕಂಪನಿಯ ಸ್ವಿಚ್ಚ .ಕಿ|| 1,000/- ರೂ, 8) ನಾಲ್ಕು ಕಿವಿಗೆ ಹಾಕುವ ಹೆಡ್ ಫೊನ್ .ಕಿ|| 400/- ರೂ, 9) ಆರು ಪ್ಲಾಸ್ಟಿಕ ಖುರ್ಚಿ .ಕಿ|| 600/-, 10) ಒಂದು ಪ್ಲಾಸ್ಟಿಕ ಸ್ಟೂಲ .ಕಿ|| 50/- ರೂ. 11) ನಾಲ್ಕು ವಿವಿಧ ಕಂಪನಿಯ ಮೊಬೈಲಗಳು .ಕಿ|| 3,500/- ಹೀಗೆ ಒಟ್ಟು. .ಕಿ|| 82,050 ರೂ. ಮತ್ತು ನಗದು ಹಣ 3,020/- ರೂ, ನೆದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಸಮೇತ ಠಾಣೆಗೆ ತಂದು ಹಾಜರುಪಡಿಸಿದರ ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: