ಅಪಘಾತ ಪ್ರಕರಣಗಳು
:
ಸಂಚಾರಿ ಠಾಣೆ : ಶ್ರೀ ಅವಿನಾಶ ತಂದೆ ಬಾಬುರಾವ ಶಿವಕೇರಿ, , ಸಾಃ ಮ. ನಂ. 260-261, ಆದರ್ಶ ನಗರ ಗುಲಬರ್ಗಾ ರವರು ದಿನಾಂಕ 15-09-2013 ರಂದು ರಾತ್ರಿ ಆದರ್ಶ ನಗರ ಫ್ಯಾನ್ಸಿಕ್ರಾಸ್ ಹತ್ತಿರ ನಡೆದುಕೊಂಡು
ಹೋಗುತ್ತಿದ್ದಾಗ ಬಸವೇಶ್ವರ ಕಾಲೂನಿ ಕಡೆಯಿಂದ ಒಂದು ಸಿಲವರ ಬಣ್ಣದ ಮೋಟಾರ ಸೈಕಲ ಚಾಲಕ ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಎದರುನಿಂದ ಡಿಕ್ಕಿ ಹೊಡೆದು ಅಪಘಾಥ
ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ
ಠಾಣೆ : ಶ್ರೀ ಶ್ರೀಶೈಲ ರೆಡ್ಡಿ ತಂದೆ ನೀಲಕಂಠಪ ರೆಡ್ಡಿ ಸಾಃ ಸುಭಾಷ ಚೌಕ್
ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕಃ 21-09-2013
ಮುಂಜಾನೆ 07:45 ಗಂಟೆ ಸುಮಾರಿಗೆ ಸುಭಾಷ ಚೌಕ್ ಬ್ರಹ್ಮಪೂರ ದಿಂದ ಹೊರಟು ಓಂ ನಗರ ಗೇಟಿಗೆ ಒಂದು
ಆಟೋದಲ್ಲಿ ಬಂದು ಇಳಿದು ತನ್ನ ಗೆಳೆಯನಾದ ರೇವಣಯ್ಯ ಸ್ವಾಮಿ ಇವನೊಂದಿಗೆ ಇ.ಎಸ್.ಐ ಆಸ್ಪತ್ರೆಯ
ಕಟ್ಟಡದ ಕಾಮಾಗಾರಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಓಂ ನಗರ ಗೇಟ್ ದಿಂದ ಮುಂದೆ ಇರುವ
ಹೊಟೆಲ್ ಹತ್ತಿರ ಬಂದಾಗ ಒಬ್ಬ ಆಟೋ ಚಾಲಕ ನಂ. ಕೆ.ಎ. 32 ಎ 9744 ನೇದ್ದನ್ನು ಅತಿವೇಗ ಮತ್ತು
ಅಲಕ್ಷತನದಿಂದ ನಡೆಸಿ ಡಿಕ್ಕಿ ಹೊಡೆದು ಭಾರಿಗಾಯಪಡಿಸಿಆಟೋ ಚಾಲಕನು ತನ್ನ ಆಟೋವನ್ನು
ನಿಲ್ಲಿಸಿದಂತೆ ಮಾಡಿ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕಸ್ಮಿಕ ಬೆಂಕಿ ಅಪಘಾತ :
ಫರತಾಬಾದ ಠಾಣೆ : ಶ್ರೀ ಅನೀಲಕುಮಾರ ತಂದೆ ಅಲಿಸಾಬ ಪವಾರ ಸಾ:ಮನೆ ನಂ: 117
ವಿಧ್ಯಾ ನಗರ ಕಾಲೋನಿ ಎಮ್.ಎಸ್.ಕೆ.ಮಿಲ್ಲ ರಸ್ತೆ ಗುಲಬರ್ಗಾ ಇವರು ದಿನಾಂಕ 20-09-2013
ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಶಹಾಬಾದದಲ್ಲಿ ತನ್ನ ಖಾಸಗಿ ಕೆಲಸ ಇರುವದರಿಂದ ನಮ್ಮ ಮಾವರಾದ ಮಧುಕರರಾವ
ಇವರು ಖರೀಧಿಸಿದ ಹೊಸ ಕಾರನ್ನು ತಗೆದುಕೊಂಡು ಶಹಾಬಾದಕ್ಕೆ ಹೋಗಿ ಮರಳಿ
ಗುಲಬರ್ಗಾಕ್ಕೆ ಬರುವ ಸಲುವಾಗಿ ರಾತ್ರಿ 11.00 ಗಂಟೆಗೆ ನಾನು ಸದರ ಹೊಸ ಕಾರನಲ್ಲಿ ಕುಳಿತು
ಶಾಹಾಬಾದ ಜೇವರ್ಗಿ ರೋಡಿನ ಮೂಲಕ ಹೊರಟಿದ್ದು, ರಾತ್ರಿ 11-30 ಗಂಟೆಯ ಸುಮಾರಿಗೆ ಶಾಹಾಬಾದ ಕ್ರಾಸ
ಇನ್ನೂ 1 ಕಿ.ಮಿ ಇರುವಾಗಲೇ ನಮ್ಮ ಕಾರಿನಲ್ಲಿ ವಾಯರ್ ಸುಟ್ಟ ವಾಸನೆ ಬರುತ್ತಿದ್ದಾಗ ನಮ್ಮ ಕಾರ
ಚಾಲಕನು ಕಾರು ನಿಲ್ಲಿಸಿ ನೋಡಿದಾಗ ಕಾರಿನ ಇಂಜೀನ ಹತ್ತಿರ ಹೊಗೆ ಬರುತ್ತಿದ್ದನ್ನು ನೋಡಿ
ಕಾರನಿಂದ ಹೊರಗಡೆ ಬಂದು ನೋಡುತ್ತಿದ್ದಂತೆ ಕಾರಿನ ಒಳಗಡೆ ಶಿಟಿಗೆ ಬೆಂಕಿ ಹತ್ತಿಕೊಂಡಿತ್ತು.
ರಾತ್ರಿ ಇರುವದರಿಂದ ನಮಗೆ ಏನು ಮಾಡಬೇಕು ಅಂತಾ ತಿಳಿಯದೆ ಫಾಯರ್ ಸ್ಟೆಷನಕ್ಕೆ ಫೊನ ಮಾಡಿ
ತಿಳಿಸಿದೇವು. ಫಾಯರ್ ವಾಹನ ಬರುವಾಗಲೇ ನಮ್ಮ ಕಾರಿಗೆ
ಸಂಪೂರ್ಣ ಬೆಂಕಿ ಹತ್ತಿಕೊಂಡಿದ್ದು ಇರುತ್ತದೆ. ಫಾಯರ್ ವಾಹನ ಬಂದು ಸದರಿ ಬೆಂಕಿಯನ್ನು
ಆರಿಸಿದರು. ನಂತರ ನಮ್ಮ ಕಾರ ನೋಡಲು ಸಂಪೂರ್ಣವಾಗಿ ಸುಟ್ಟಿದ್ದು ಇರುತ್ತದೆ, ಸದರಿ ಕಾರಿನ ವಾಯರ
ಸಕೀರ್ಟಿನಿಂದ ಹೊಗೆ ಎದ್ದು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿಯಿಂದ ನಮ್ಮ ಹೊಸ ಕಾರ ಇಂಜಿನ ನಂ 1 ಎನ್ ಡಿ 1215477 ಚೆಸ್ಸಿ ನಂ MBJ53NEE004009030~0112 ನೇದ್ದು ವಾಯರ ಶಾಕ ಸಕೀರ್ಟದಿಂದ ಆಕ್ಮಸಿಕವಾಗಿ ಬೆಂಕಿ
ಹತ್ತಿ ಸಂಪೂರ್ಣವಾಗಿ ಸುಟ್ಟು ಹಾಳಾಗಿರುತ್ತದೆ, ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಕುಮಾರ ತಂ ವೀರಭದ್ರಪ್ಪ ಮಾಗಾ ಸಾ|| ಹರಸೂರ
ತಾ|| ಜಿ|| ಗುಲಬರ್ಗಾ ರವರ ಹೆಂಡತಿಯಾದ ಮಹಾದೇವಿ ಇವಳು ತನ್ನ ಮಕ್ಕಳಾದ ಅಪೂರ್ವ, 04 ವರ್ಷ ಹಾಗೂ
ಮಹೇಶ 3 ವರ್ಷದ ಗಂಡು ಮಗುವಿನೊಂದಿಗೆ ದಿನಾಂಕ
15-09-13 ರಂದು ಮದ್ಯಾಹ್ನ 12.00
ಗಂಟೆಯ ಸೂಮಾರಿಗೆ ತಮ್ಮೂರ ಸರಡಗಿ ಎಂಬುವ ಹೆಣ್ಣು ಮಗಳ ಹತ್ತಿರ ಬಟ್ಟೆ ಹೋಲೆಯವುದು ಕಲೆಯುವ
ಸಂಬಂದ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಗಂಡನ ಮನೆಯಿಂದ ಹೋದವಳು ಇಲ್ಲಿಯವರೆಗೆ
ಬಂದಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ
ಸಂಬಂದಿಕರ ಊರುಗಳಿಗೆ ಹಾಗು ಇತರೆ ಕಡೆ ತಿರುಗಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment