POLICE BHAVAN KALABURAGI

POLICE BHAVAN KALABURAGI

16 August 2013

GULBARGA DIST REPORTED CRIMES

ರೋಜಾ ಪೊಲೀಸ್ ಠಾಣೆ:
ಕಾಣೆಯಾದ ಪ್ರಕರಣ:
ದಿನಾಂಕ:15/08/2013 ಫಿರ್ಯಾದಿ ಶ್ರೀಮತಿ ಯಾಸ್ಮೀನ ಬೇಗಂ ಗಂಡ ಮಹ್ಮದ ಹನೀಫ ವಯ: 36, ಉ: ನ್ಯೂ ಲೈಫ ಆಸ್ಪತ್ರೆಯಲ್ಲಿ ಆಯಾ ಕೆಲಸ ಸಾ:ಮನೆ ನಂ.5-993/181/4ಎ ಅಲ್  ಉಮರ ಮಂಜಿಲ್ ನಾಗೈ ಮಹಿಬೂಬ ನಗರ ರಿಂಗ ರೋಡ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡೆಸಿದ್ದು ಸಂಕ್ಷಿಪ್ತ ಸಾರಾಂಶ ಏನೆಂದರೆ ನಾನು ನ್ಯೂ ಲೈಫ ಖಾಸಗಿ ಆಸ್ಪತ್ರೆ ಎಮ.ಎಸ್.ಕೆ.ಮಿಲ್ ಹತ್ತಿರ ಆಯಾ ಅಂತಾ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನನ್ನ ಗಂಡ ಮಹ್ಮದ ಹನೀಫ ಇವರು ತೀರಿಕೊಂಡಿರುತ್ತಾರೆ ನನಗೆ ಒಟ್ಟು 6 ಜನ ಮಕ್ಕಳಿದ್ದು ಅದರಲ್ಲಿ 3 ಜನ ಗಂಡು ಮತ್ತು 3 ಜನ ಹೆಣ್ಣು ಮಕ್ಕಳು ಇರುತ್ತಾರೆ ಗಂಡು ಮಕ್ಕಳಲ್ಲಿ ಕೊನೆಯ ಮಗ ಮಹ್ಮದ ಇರ್ಫಾನ ತಂದೆ ಮಹ್ಮದ ಹನೀಫ ವಯ: 8 ವರ್ಷ, ಇರುತ್ತಾನೆ. ಇವನು ಶಾಲೆಗೆ ಹೋಗದೆ ಮನೆಯಲ್ಲಿಯೇ ಇರುತ್ತಾನೆ.ಹೀಗಿದ್ದು ನಾನು ಮನೆಯಲ್ಲಿ ಇದ್ದಾಗ ನನ್ನ ಕೊನೆಯ ಮಗ ಮಹ್ಮದ ಇರ್ಫಾನ ಈತನು ನಾನು ಸಪ್ನಾ ಬೇಕರಿ ಹತ್ತಿರ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೋದವನು ಸಂಜೆಯ ವರೆಗೆ ಆದರೂ ಮನೆಗೆ ಬಂದಿರುವದಿಲ್ಲ ಮಗ ಮನೆಗೆ ಬರಲಾರದಕ್ಕೆ ನಾನು ಎಲ್ಲಾ ಕಡೆ ನಮ್ಮ ಸಂಬಂದಿಕರಲ್ಲಿ ಬಂದು ಬಳಗದಲ್ಲಿ ಬಡಾವಣೆಗಳಲ್ಲಿ ಹುಡುಕಾಡಿದರೂ ಸಹ ನನ್ನ ಮಗ ಮಹ್ಮದ ಇರ್ಫಾನ ಈತನು ಸಿಕ್ಕಿರುವದಿಲ್ಲಾ ದಿನಾಂಕ: 12/08/2013 ರಿಂದ ಇಲ್ಲಿಯವರೆಗೆ ನನ್ನ ಮಗನ ಬಗ್ಗೆ ಹುಡುಕಾಟ ಮಾಡಿರುತ್ತೇವೆ ನನ್ನ ಮಗ ಸಿಕ್ಕಿರುವದಿಲ್ಲಾ ಮನೆಯಿಂದ ಕಾಣೆಯಾಗಿರುತ್ತಾನೆ.ಕಾರಣ ಕಾಣೆಯಾದ ನನ್ನ ಮಗ ಮಹ್ಮದ ಇರ್ಫಾನ ಈತನಿಗೆ ಪತ್ತೆಹಚ್ಚಿಕೊಡಲು ವಿನಂತಿ ಅವನ ಚೆಹರಾ ಪಟ್ಟಿ ಈ ಕೆಳಗಿನಂತೆ ಇರುತ್ತದೆ. ಹೆಸರು :-ಮಹ್ಮದ ಇರ್ಫಾನ, ತಂದೆ :-ಮಹ್ಮದ ಹನೀಫ, ವಯಸ್ಸು :-8 ವರ್ಷ, 25/05/2004, ಜಾತಿ :-ಮುಸ್ಲಿಂ, ವಿದ್ಯಾಬ್ಯಾಸ :-ಇಲ್ಲಾ,ಎತ್ತರ :-3 ಫೀಟ್ 6 ಇಂಚು , ಮೈಬಣ್ಣ :- ಸಾಧಾರಣ ಗೋಧಿ ಮೈಬಣ್ಣ , ಸಾಧಾರಣ ಮೈಕಟ್ಟು, ಎಡಗಾಲ ಹಿಮ್ಮಡಿಯ ಮೇಲೆ ಹೊಸ ಬಿದ್ದ ಗಾಯವಾಗಿದ್ದು ಸ್ವಲ್ಪ ಕುಂಟುತ್ತಾನೆ. , ಉಡುಪು :- ಕಪ್ಪು ಬಣ್ಣದ ಪ್ಯಾಂಟು, ಹಸಿರು ಕಪ್ಪು ಲೈನಿಂಗ ಟಿ ಶರ್ಟು , ಮಾತನಾಡುವ ಭಾಷೆ:-ಹಿಂದಿ,ಕಾರಣ ಕಾಣೆಯಾದ ನನ್ನ ಮಗನ ಪತ್ತೆಹಚ್ಚಿ ಅನೂಕೂಲ ಮಾಡಿಕೊಡಬೇಕು ಅಂತಾ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ನನ್ನ ಮಗನ ಭಾವಚಿತ್ರಗಳನ್ನು ಸಹ  ಕೂಡಾ ತಮ್ಮ ದಯಾಪರ ಮಾಹಿತಿಗಾಗಿ ಸಲ್ಲಿಸಲಾಗಿದೆ. ಅಂತಾ ವಗೈರೆ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.            
 ನೆಲೋಗಿ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:
ದಿನಾಂಕ: 30/06/2013 ರಂದು ಬೆಳಿಗ್ಗೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವ ಸಮಯಕ್ಕೆ ನಮ್ಮ ಊರಿನವರಾದ ಗುಂಡಯ್ಯ ಸ್ವಾಮಿ ಮತ್ತು ಶಿವಯ್ಯ ಸ್ವಾಮಿ ಇವರಿಬ್ಬರೂ ಸೇರಿಕೊಂಡು ನಮ್ಮ ಹೊಲಕ್ಕೆ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮತ್ತು ನನಗೆ ಬಾಯಿಗೆ ಬಂದ ಹಾಗೆ ಬೈಯುತ್ತಾ ಎಲೆ ಮಾದಿಗ ಸೂಳೆ ಮಗನೇ ನಿನ್ನನ್ನು ಖಲಾಸ ಮಾಡಿ ಬಿಡುತ್ತೇವೆ ಅಂತಾ ಹೇಳಿ ನನ್ನನ್ನು ಮನಬಂದಂತೆ ಹೊಡೆದಿದ್ದಾರೆ. ಮತ್ತು ನನ್ನನ್ನು ಸುಟ್ಟು ಹಾಕುತ್ತೇವೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಮತ್ತು ನಾನು ಅಂಜುತ್ತಾ ಕುಂತಾಗ ನನಗೆ ಏನೋ ದೋಚದೆ ಇದ್ದಾಗ, ನಾನು ಕಾನೂನಿನ ಮೊರೆ ಬಂದಿದ್ದೇನೆ. ಕಾರಣ ತಾವು ನನಗೆ ಕಾನೂನಿನ ರಕ್ಷಣೆ ನೀಡಿ ನನಗೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಶಹಾಬಾದ ನಗರ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:


 ದಿನಾಂಕ:14/08/2013ರಂದು ಪಿರ್ಯಾದಿದಾರರಾದ ಶ್ರೀ ಬಾಬಾ ಪಟೇಲ ತಂದೆಲಾಡ್ಲೇಪಟೇಲಇವರುಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಅಳಿಯ ಮಹ್ಮದ ವಸೀಂ ಹಾಗೂ ವಾಚಮನರಾದ ವಿಠ್ಠಲರಾವ, ಬಸಪ್ಪಾ ಕೂಡಿ ಮಾತನಾಡುತ್ತಾ ಕುಳಿತಿದ್ದಾಗ ಆರೋಪಿತರಾದ 1)ಮಹ್ಮದ ಸಲಾವುದ್ದೀನ 2)ಸೈಯದ ಟಮಕಿ ಗುಲಬರ್ಗಾ ಇಬ್ಬರೂ ಕೂಡಿಕೊಂಡು ಬಂದು ನಮ್ಮ ಮಾವ ಪಾಶಾ ಪಟೇಲ ಎಲ್ಲಿದ್ದಾನೆ ಅಂತಾ ಕೇಳಿದಾಗ ಗೊತ್ತಿಲ್ಲ ಅಂದಿದ್ದಕ್ಕೆ ಸದರಿಯವರು ಕೂಡಿ ಅವಾಚ್ಯ ಶಬ್ಗಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ನನಗೆ ಮತ್ತು ನಮ್ಮ ಅಳಿಯನಿಗೆ ಹೊಡೆದು ನಂತರ ನಮ್ಮ ಆಫೀಸಗೆ ನುಗ್ಗಿ ಆಫೀಸನಲ್ಲಿದ್ದ ಅಂದಾಜು 1,97,000/-ರೂ ಕಿಮ್ಮತ್ತಿನ ಸಾಮಾನುಗಳಾದ ಎಲ್‌‌ಸಿಡಿ ಮಾನಿಟರ, ಸಿಪಿಯು, ಪ್ರೀಂಟರ, ಕೀಬೋರ್ಡ, ಕಂಫ್ಯೂಟರ ಟೇಬಲ, ಎಲ್‌‌ಸಿಡಿ ಟಿವಿ, ಸಾಗವಾನಿ ಟೇಬಲ, 8 ಕುರ್ಚಿಗಳು,ಕೂಲಿಂಗ ಗ್ಲಾಸ ಬಾಗಿಲು,ಗೋಡೆ ಗಡಿಯಾರ, 2 ಮೊಬೈಲಗಳು, ಎಸಿ ಅಸೆಂಬ್ಲೀಬಾಕ್ಸ್‌ ಮುಂತಾದ ಸಾಮಾನುಗಳನ್ನು ಹೊಡೆದು ಲುಕಸಾನಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಪಿರ್ಯಾದಿ. ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: