ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ ಠಾಣೆ:ಶ್ರೀಮತಿ ಶಿವಕಾಂತಮ್ಮ ಗಂಡ ಹುಲಿಗಯ್ಯ ಗುತ್ತಧಾರ ಸಾ: ಸಾಯಿರಾಮ ನಗರ ಗುಲಬರ್ಗಾ
ರವರು ನಾನಿ ಬೀದರಕ್ಕೆ ಹೋಗಿದ್ದಾಗ ದಿನಾಂಕ 20/21-06-2013 ರ ರಾತ್ರಿ ವೇಳೆಯಲ್ಲಿ ಯಾರೋ
ಕಳ್ಳರು ಸಾಯಿ ರಾಮ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮೂರಿದು ಮನೆಯಲ್ಲಿಟ್ಟ ಬಂಗಾರದ 2 ಸುತ್ತು
ಉಂಗುರ ಸಾದಾ ನಮೂನೆಯ ತಲಾ 5 ಗ್ರಾಂ ಒಟ್ಟು 10 ಗ್ರಾಂ ಅ,ಕಿ 25,000/- , ಬಂಗಾರದ ಬಿಸ್ಕಿಟ ನಮೂನೆಯ ಇದ್ದ ಬಂಗಾರ 15 ಗ್ರಾಂ ಅ.ಕಿ 45,000/- ರೂ, ಬೆಳ್ಳಿಯ ನಾಲ್ಕು ಗ್ಲಾಸಗಳು ಡಿಸೈನದ್ದು
ಅ.ಕಿ 6,000/-,ಬೆಳ್ಳಿಯ
ಬಟ್ಟಲುಗಳು ಸಾದಾ ಮಾಟದ್ದು 4 ಅ.ಕಿ 2000/- ,ಬೆಳ್ಳಿಯ ಪ್ಲೇಟಗಳು 5 ಅ.ಕಿ 3000/-, ನಗದು ಹಣ
ಒಟ್ಟು 19,300/- ಇವುಗಳಲ್ಲಿ 500, 100 ರೂಪಾಯಿ
ನೋಟುಗಳಿದ್ದವು. ಹೀಗೆ ಒಟ್ಟು 1,00,300/- ರೂ ಬೆಲೆ ಯುಳ್ಳದ್ದು ಕಳುವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ
ಮೇಲಿಂದ ಠಾಣೆ ಗುನ್ನೆ ನಂ:97/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ. ಜಗದೇವಿ ಗಂಡ
ಜೈಭೀಮ ಚನ್ನಗುಂಡೆ ವಯ:26 ವರ್ಷ ಉ:
ಹೊಲ-ಮನೆ ಕೆಲಸ ಜಾತಿ:ಹೊಲೆಯ ಸಾ: ಕೇರೂರ ತಾ: ಆಳಂದ ರವರು ನನ್ನ ಗಂಡನಾದ
ಜೈಭೀಮ ಇತನು ದಿನಾಂಕ:28/05/2013 ರಂದು ಮಧ್ಯಾಹ್ನ 2 ಗಂಟೆಗೆ ನಮ್ಮ ಕೇರೂರ ಗ್ರಾಮದಿಂದ ಮಾದನ
ಹಿಪ್ಪರಗಾಕ್ಕೆ ಹೋಗಿ ಬಜಾರ ಮಾಡಿಕೊಂಡು ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವನು
ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ
ಠಾಣೆ ಗುನ್ನೆ.ನಂ:52/2013 ಕಲಂ: “ಮನುಷ್ಯ ಕಾಣೆಯಾದ ಬಗ್ಗೆ” ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳ ಪ್ರಕರಣ:
ಶಹಾಬಾದ ನಗರ ಠಾಣೆ;ದಿನಾಂಕ:16/04/2012 ರಂದು ಪೇಠಶಿರೂರ ಗ್ರಾಮದಲ್ಲಿ ಆನಂದರಾವ ಘಾಟೆ ಇವರ ಮಗನಾದ ರಾಜೇಶ
ಇವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿರುತ್ತಾರೆ. ನನಗೆ ಆಂಧ್ರದ ವೆಲ್ಗಟೂರ ಗ್ರಾಮಕ್ಕೆ
ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ ನನ್ನ ಗಂಡ ರಾಜೇಶ, ಮಾವ ಆನಂದರಾವ, ಅತ್ತೆ ಶಾಂತ@ಖ್ಯಾದ,
ನಾದಿನಿಯರಾದ ಜ್ಯೋತಿ, ರಜಿತ, ಲತಾ ಇವರೆಲ್ಲರೂ ಸೇರಿಕೊಂಡು ನೀನು ದರಿದ್ರ ಹೆಣ್ಣು ಗಂಟು
ಬಿದ್ದೀದಿ, ನಿನಗೆ ಮದುವೆ ಮಾಡಿಕೊಂಡಿದ್ದಕ್ಕೆ ಯಾವುದೆ ಲಾಭ ಆಗಿಲ್ಲ ತವರು ಮನೆಯಿಂದ ಮದುವೆಯಲ್ಲಿ ಕೊಟ್ಟ ಸಾಮಾನುಗಳು
ಯಾವುದಕ್ಕೂ ಬರುವದಿಲ್ಲಾ ನಿನಗೆ ಅಡುಗೆ ಮಾಡಲು ಬರುವದಿಲ್ಲಾ, ನಡತೆಗೆಟ್ಟವಳು ನೀನು ನಮ್ಮ
ಮನೆಯಲ್ಲಿ ಇರಬೇಕಾದರೆ ತವರು ಮನೆಯಿಂದ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಮಾನಸಿಕ
ಹಿಂಸೆ ನೀಡಿರುತ್ತಾರೆ ಹಾಗೂ ವಿಷ ಬೇರಿಸಿದ ಔಷದ ಕೊಟ್ಟು, ಗ್ಯಾಸ ಸಿಲಿಂಡೆರ ತೆರೆದು, ಭಾವಿಗೆ
ನೂಕಿ ಕೊಲ್ಲಲು ಪ್ರಯತ್ನಿಸಿರುತ್ತಾರೆ, ಹಾಗೂ ಕೈಯಿಂದ ಹೊಡೆದಿರುತ್ತಾರೆ, ನಿನ್ನೆ ರಾತ್ರಿ
10-11 ಸುಮಾರಿನ ಸಮಯದಲ್ಲಿ ನನ್ನ ಗಂಡ, ಮಾವ, ಅತ್ತೆ ಮತ್ತು ಮೂವರು ನಾದಿನಿಯರು ಸೇರಿಕೊಂಡು
ನನ್ನ ತವರು ಮನೆಯಾದ ಶಹಾಬಾದಕ್ಕೆ ಬಂದು ನೀನು ವಿಚ್ಛೇದನಾ ಕೊಡದಿದ್ದರೆ ನಿನಗೆ ಮತ್ತು ನಿನ್ನ
ತವರು ಮನೆಯವರಿಗೆ ಖಲಾಸ ಮಾಡುವದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ
ಶಿವರಂಜನಿ ಗಂಡ ರಾಜೇಶ ಗಾಟೆ ವ:19 ಜಾ:ಯಾದವ ಉ:ಮನೆಕೆಲಸ ಸಾ:ವೆಲ್ಗೆಟೂರ ಜಿಲ್ಲೆ:ಕರೀಂ ನಗರ
ರಾಜ್ಯ ಆಂಧ್ರ ಪ್ರದೇಶ ಹಾ:ವ:ಹನುಮಾನ ನಗರ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2013
ಕಲಂ:323,307,498(ಎ),504,506 ಸಂ:149 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಚಾರ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ:ನಾನು ಎರಡು ಗಂಡು ಮಕ್ಕಳ ತಾಯಿಯಿದ್ದು,
ನನ್ನ ನನ್ನ ಗಂಡ ಗ್ಯಾಸ ರೀಪೆರಿ ಮತ್ತು
ರೀಫಿಲಿಂಗ ಸೇಂಟರ್ ಅಂಗಡಿ ಇಟ್ಟುಕೊಂಡಿರುತ್ತಾರೆ. ನನ್ನ ಗಂಡ ವ್ಯಾಪಾರ ಮಾಡುವ ಅಂಗಡಿಯಲ್ಲಿ
ವಿಜಯಕುಮಾರ ತಂದೆ ನಾಗೇಂದ್ರಪ್ಪಾ ಅಣಕಲ ಎಂಬುವನು ನಾವು ಈ ಮೊದಲು ಸಿದ್ದೇಶ್ವರ
ಕಾಲೋನಿಯಲ್ಲಿದ್ದಾಗ ಕೆಲಸ ಮಾಡುತ್ತಿದ್ದರು. ನನ್ನ ಗಂಡನಿಗೆ ಊಟದ ಬುತ್ತಿ ತೆಗೆದುಕೊಂಡು ಹೋದಾಗ
ಅವನು ನಮ್ಮ್ಲಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯವಾಗಿರುತ್ತದೆ ಸುಮಾರು 5-6 ತಿಂಗಳ ಹಿಂದೆ
ನನ್ನ ಮನೆಗೆ ವಿಜಯಕುಮಾರ ಅಣಕಲ ಇತನು ಬಂದು ನಿನ್ನ ಗಂಡನಿಗೆ ಮೂರು ಲಕ್ಷ ರೂಪಾಯಿ ಸಾಲ ಕೊಟ್ಟಿರುತ್ತೇನೆ ಸಾಲ ಕೊಡು
ಅಂದರೆ ಅವನು ತಲೆ ಮರೆಸಿಕೊಂಡಿರುತ್ತಾನೆ ಅಂತಾ ಬೈದು ನನಗೆ ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ
ಮಾಡುತ್ತಿರುವದನ್ನು ಕಂಡು ನಮ್ಮ ಮನೆಯ ಮಾಲಿಕರು ಜಗಳ ಬಿಡಿಸಿದರು, ನನ್ನ ಗಂಡನಿಗೆ ವಿಷಯ ತಿಳಿಸಿದೆ
ಅವರು ವಿಜಯಕುಮಾರನಿಗೆ ತಮ್ಮನಿಂಗಿತ ಹೆಚ್ಚಿಗೆ ನೋಡಿರುತ್ತೇನೆ ವಿಚಾರಿಸೊಣ ಅಂತಾ ಸುಮ್ಮನಾದರು ದಿನಾಂಕ:27.05.2013
ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ರಾಜು ಎಂಬುವನು ಮನೆಗೆ ಬಂದು ನಿಮಗೆ
ವಿಜಯಕುಮಾರ ಕರೆಯುತ್ತಿದ್ದಾನೆ ಅಂತಾ ಹೇಳಿದ್ದರಿಂದ ನಾನು ಹಣದ ವಿಷಯದಲ್ಲಿ ಕರೆಯಿತ್ತಿರಬಹುದು
ಅಂತಾ ನನ್ನ ಮಕ್ಕಳೊಂದಿಗೆ ರಾಜುವಿನೊಂದಿಗೆ ಹಿಂಬಾಲಿಸಿ ವಿಜಯಕುಮಾರ ಇದ್ದಲ್ಲಿಗೆ ಹೋದೆನು. ಅಲ್ಲಿ
ವಿಜಯಕುಮಾರ ಹಾಗೂ ಇತರ 3-4 ಜನರು ವಿಜಯಕುಮಾರನು ಇತ್ತಿಚಿಗೆ ಕ್ರೂಜರ್ ಜೀಪ ಖರೀದಿಸಿದ ವಾಹನದಲ್ಲಿ
ಆಳಂದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ರಫೀಕ ಎಂಬುವವರ ಮನೆಯಲ್ಲಿ ಕೂಡಿ ಹಾಕಿ ದಿನಾಂಕ:27.05.2013
ರಿಂದ ದಿನಾಂಕ:21.06.2013 ರವರೆಗೆ ಪ್ರತಿ ದಿವಸ ಕುಡಿದು ಬಂದು ನನ್ನ ಮಕ್ಕಳಿಗೆ ಕೊಲೆ
ಮಾಡುತ್ತೇನೆ ಅಂತಾ ಬೆದರಿಸಿ ನನ್ನೊಂದಿಗೆ ಜಬರಿ ಸಂಬೋಗ ಪ್ರತಿ ರಾತ್ರಿ ಮಾಡಿರುತ್ತಾನೆ. ಬೆಳಿಗ್ಗೆ
ಅವನ ಮಿತ್ರರು ಕಾವಲು ಕಾಯುತ್ತಿದ್ದರು. ದಿನಾಂಕ:21.06.2013 ರಂದು ಮಧ್ಯಾಹ್ನ ನನ್ನ ಗಂಡನಿಗರ ಪೋನ
ಮಾಡಿ ನಾ ಇರುವ ಸ್ಥಳ ಹಾಗೂ ನನಗೆ ಅಪಹರಿಸಿ ಜಬರಿ ಸಂಬೋಗ ಮಾಡಿದ ಬಗ್ಗೆ
ತಿಳಿಸಿದರಿಂದ ನನ್ನನ್ನು ಕರೆದುಕೊಂಡು ಬಂದಿರುತ್ತಾರೆ ಅಂತಾ ನೊಂದ 28 ವರ್ಷದ ಮಹಿಳೆ ದೂರು
ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:37/2013
ಕಲಂ 143.147.341.366.376.504.506.ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment