ಕಳ್ಳತನ ಪ್ರಕರಣ:
ಶಹಾಬಾದ ನಗರ ಠಾಣೆ: ದಿನಾಂಕ:27/06/2013 ರಂದು ಬೆಳಗ್ಗೆ
4.30 ಸುಮಾರಿಗೆ ನನ್ನ ಹೆಂಡತಿಯಾದ ನಸೀಮಾ ಇವಳು ಎದ್ದಾಗ ಮನೆಯ ಬಾಗಿಲು (ಮುಖ್ಯ ದ್ವಾರ )
ತೆರೆದಿದ್ದು ನೋಡಿ ನನಗೆ ಎಬ್ಬಿಸಿ ಮನೆಯ ಮನೆಯ ಬಾಗಿಲು ತೆರೆದಿದೆ ಅಂತಾ ತಿಳಿಸಿದಾಗ ನಾನು
ಗಾಬರಿಯಾಗಿ ಮನೆಯ ಬಾಗಿಲು ನೋಡಲು ಬಾಗಿಲಿನ ಒಳಗಿನ ಬೋಲ್ಟ
ತೆಗೆದು ಒಳಗಡೆ ಬಂದು ಬೆಡರೂಮ ಪಕ್ಕದ ರೂಮಿನಲ್ಲಿ ಕಟ್ಟಿಗೆ ಪೆಟ್ಟಿಗೆಯಲ್ಲಿ ಇಟ್ಟಿದ್ದ
3,00,000/-ರೂ ನಗದು ಹಣ ಮತ್ತು ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ 10,000/- ರೂ ನಗದು ಹಣ
ಯಾರೋ ಕಳ್ಳರು ಮಧ್ಯರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸೈಯದ ಮಸೂದ ತಂದೆ ಸೈಯದ
ಅಹ್ಮದ ಉ:ಒಳ್ಳೆಣ್ಣೆ ವ್ಯಾಪಾರ ಸಾ:ಗಾಂಧಿಚೌಕ
ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:129/2013 ಕಲಂ:457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment