ಅಪಘಾತ
ಪ್ರಕರಣ:
ಚಿಂಚೋಳಿ
ಪೊಲೀಸ್ ಠಾಣೆ:ಶ್ರೀ ದಶರಥ ತಂಧೆ ಮಾಣಿಕಪ್ಪಾ ಪೊಲಕಪಳ್ಳಿ ಉ|| ಅಟೋ ಚಾಲಕ ಸಾ|| ಭವಾನಿ ಮಂದಿರ ಏರಿಯಾ ಚಂದಾಪೂರ ತಾ|| ಚಿಂಚೋಳಿ ರವರು ನನ್ನ ತಂಗಿಗೆ ಸುಮಾರು ಒಂದು ತಿಂಗಳ
ಹಿಂದೆ ಗುಲ್ಬರ್ಗಾ ತಾಲೂಕಿನ ಹಾಗರಗುಂಡಗಿ ಗ್ರಾಮದ ಸುರೇಶ ತಂದೆ ದೇವಿಂದ್ರಪ್ಪಾ ಗಾಲಿ ಇತನೊಂದಿಗೆ
ಮದುವೆ ಮಾಡಿಕೊಟ್ಟಿರುತ್ತೆವೆ. ನಮ್ಮ ತಾಲೂಕಿನಲ್ಲಿರುವ ಚಿಟ್ಟೆನಾಡು ಚಿಮೆಂಟ ಕಂಪನಿಯಲ್ಲಿ ಸೆಕ್ಯೂರಿಟಿ
ಗಾರ್ಡ ಕೆಲಸದ ಸಲುವಾಗಿ 10 ದಿವಸಗಳಿಂದ ನನ್ನ ಬಾವನಾದ ಸುರೇಶ ನಮ್ಮ ಮನೆಯಲ್ಲಿರುತ್ತಾನೆ. ಸೆಕ್ಯೂರಿಟಿ
ಗಾರ್ಡ ಕೆಲಸಕ್ಕೆ ಭರ್ತಿಯಾಗುವ ಕುರಿತು ಕಾಗದ ಪತ್ರಗಳನ್ನು ತರುವ ಸಲುವಾಗಿ ಭಾವನಾದ ಸುರೇಶನು ಇತನು
ದಿನಾಂಕ:13-06-2013 ರಂದು ಮುಂಜಾನೆ 8-00 ಗಂಟೆಗೆ ನನ್ನ ತಮ್ಮನ ಕೆಎ-32 ವಿ-6148 ಮೋಟಾರ ಸೈಕಲ್ ಪ್ಯಾಶನ್ ಪ್ರೋ ನೇದ್ದರ
ಮೇಲೆ ಎದುರು ಮನೆಯ ದಿನೇಶ ತಂದೆ ಸುಭಾಸ ಸಂದಾಪೂರ ವ||19 ಎಂಬುವನಿಗೆ
ಜೋತೆಯಲ್ಲಿ ಕರೆದುಕೊಂಡು ಹೋಗಿರುತ್ತಾನೆ.ರಾತ್ರಿ 8.00 ಗಂಟೆಗೆ ನನ್ನ ಮೋಬೈಲಿಗೆ ಪೋನಮಾಡಿ ಟಿಸಿ
ತೆಗೆದುಕೊಂಡಿದ್ದು ಮರಳಿ ಚಂದಾಪೂರಕ್ಕೆ ಇಬ್ಬರು ಕೂಡಿಕೊಂಡು ಬರುತ್ತಿದ್ದೆವೆ ಅಂತಾ ತಿಳಿಸಿದರು.ರಾತ್ರಿ
11.30 ಗಂಟೆಯವರೆಗೆ ಬರುವ ದಾರಿ ಕಾಯುತ್ತಾ ಕುಳಿತ್ತಿದ್ದೆವು. ಮೋಬೈಲಿಗೆ ಪೋನ ಮಾಡಿದರೆ ಸ್ವಿಚ್
ಆಪ್ ಬರುತ್ತಿತ್ತು, ದಿನಾಂಕ:14-06-2013 ರಂದು ಮುಂಜಾನೆ
10-30 ಗಂಟೆಗೆ ಚಿಂಚೋಳಿಯ ಓವರ ಬ್ರಿಡ್ಜ ಕೆಳಗೆ ಮೋಟಾರ ಸೈಕಲ ಮೇಲಿಂದ ಬಿದ್ದು ಮೃತ ಪಟ್ಟಿರುತ್ತಾರೆ
ಎಂಬ ವಿಷಯ ತಿಳಿದುಕೊಂಡು ನಮ್ಮ ಮನೆಯವರೆಲ್ಲರೂ ಹೋಗಿ ನೋಡಲು ಸುರೇಶ ಮತ್ತು ದಿನೇಶ ಇವರು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಠಾಣೆ ಗುನ್ನೆ ನಂ:147/2013 ಕಲಂ 279,304
(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ 14/06/2013 ರಂದು ರಾತ್ರಿ 9:45 ಯಿಂದ 10:15 ಗಂಟೆ ಮಧ್ಯದ ಸಮಯದಲ್ಲಿ
ನನ್ನ ಗಂಡನಾದ ಸುಧಾಕರ ತಂದೆ ಸಂಗಣ್ಣಾ ಉಳ್ಳಿ ಉ:ಹೊಟೆಲ
ವ್ಯಾಪಾರ ಚಿಗರಳ್ಳಿ ಕ್ರಾಸ ಹಾ|ವ||ಮುದಬಾಳ (ಬಿ) ಇತನಿಗೆ ಜೇವರ್ಗಿ–ಶಹಾಪೂರ ಮೇನ್ ರೋಡ್ ಮುದಬಾಳ
(ಬಿ) ಕೆನಾಲ ಹತ್ತಿರ ಯಾವೂದೂ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ
ನಡೆಸಿ ಡಿಕ್ಕಿ ಪಡಿಸಿ ಸ್ಥಳದಲ್ಲಿಯೇ ಮೃತಪಡಿಸಿ ತನ್ನ ವಾಹನದೂಂದಿಗೆ ಓಡಿ ಹೋಗಿರುತ್ತಾನೆ. ಅಪಘಾತ
ಪಡಿಸಿದ ವಾಹನ ಮತ್ತು ಚಾಲಕನ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಪ್ರೇಮಾ ಗಂಡ
ಸುಧಾಕರ್ ಉಳ್ಳಿ ಸಾ: ಚಿಗರಳ್ಳಿ ಕ್ರಾಸ ಹಾ.ವ ಮುದಬಾಳ (ಬಿ) ರವರು ದೂರು ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ 116/2013 ಕಲಂ 279, 304 (ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ
ಮತ್ತು ಜಾತಿ ನಿಂದನೆ ಪ್ರಕರಣ:
ಮುದೋಳ
ಪೊಲೀಸ್ ಠಾಣೆ:ಶ್ರೀ ನಾಗಪ್ಪ ತಂದೆ ಭೀಮಪ್ಪ ಬ್ಯಾಡರ್ ಸಾ;ಕೊಲಕುಂದಾ ರವರು ನನ್ನ 18 ವರ್ಷದ ಮಗಳಿದ್ದು, ಅವಳು ಒಂದು ತಿಂಗಳ ಹಿಂದೆ ಬೀದರದ
ಛೇಡ ಗ್ರಾಮಕ್ಕೆ ನಮ್ಮ ಅತ್ತೆ ಮಾವ ನವರ ಮನೆಗೆ ಹೋಗಿದ್ದಳು, ದಿನಾಂಕ:15-05-2013 ರಂದು ನನ್ನ
ಮಗಳು ಹುಸೇನಮ್ಮ ಇವಳು ಛೇಡದಿಂದ ನಮ್ಮೂರಿಗೆ ಬರುತ್ತೇನೆಂದು ಬಂದವಳು ನಮ್ಮ ಮನೆಗೆ ಬಂದಿರುವದಿಲ್ಲ,
ಹುಸೆನಮ್ಮ ಇವಳು ನಮ್ಮೂರ ಮಲ್ಲಿಕಾರ್ಜುನ ತಂದೆ ಚಂದಪ್ಪ ಗಾಡದಾನ ಜಾ:ಕಬ್ಬಲಿಗೇರ ಇವನ ಜೋತೆ ಹೋಗಿರುತ್ತಾಳೆ
ಅಂತಾ ಜನರು ಮಾತನಾಡಿಕೊಳ್ಳುತ್ತಿದ್ದರಿಂದ ಮಲ್ಲಿಕಾರ್ಜುನ ಇತನ ತಾಯಿಯಾದ ಕಾಶಮ್ಮ ಗಂಡ ಚಂದಪ್ಪ
ಗಾಡದಾನ ಇವಳಿಗೆ ನಿನ್ನ ಮಗ ಮಲ್ಲಿಕಾರ್ಜುನ ಜೋತೆ ನನ್ನ ಮಗಳು ಹೋಗಿರುತ್ತಾಳೆ ಅಂತಾ ಊರಲ್ಲಿ
ಜನರು ಮಾತನಾಡುತ್ತಿದ್ದಾರೆ ನಿನ್ನ ಮಗ ಏಲ್ಲಿದ್ದಾನೆ ಅಂತಾ ಹೇಳು ನನ್ನ ಮಗಳು ನಿಮ್ಮ
ಮನೆಯಲ್ಲಿದ್ದರೆ ಕಳುಹಿಸಿರಿ ಅಂತಾ ಕೇಳಿದ್ದಕ್ಕೆ ಕಾಶಮ್ಮ ಇವಳು ನಿನ್ನ ಮಗಳು ನನ್ನ ಮಗನ ಜೋತೆ
ಏಕೆ ಹೋಗಿರುತ್ತಾಳೆ ನನ್ನ ಮಗ ಬೆಂಗಳೂರಿಗೆ ಕೆಲಸಕ್ಕೆ ಹೋಗಿರುತ್ತಾನೆ. ನಿನ್ನ ಮಗಳ ವಿಷಯ ನನಗೆ
ಕೇಳಬ್ಯಾಡ, ನಮ್ಮ ಮನೆಗೆ ಬರಬ್ಯಾಡ ಅಂತಾ ತಕರಾರು ಮಾಡಿದ್ದಳು. ದಿನಾಂಕ:13-06-2013 ರಂದು ಬೆಳಿಗ್ಗೆ
7-30 ಗಂಟೆ
ಸುಮಾರಿಗೆ ನರಸಪ್ಪ ತಂದೆ ಚನ್ನಪ್ಪ, ಶ್ರೀಧರ ತಂದೆ ನರಸಪ್ಪ, ರವಿಂದ್ರ ತಂದೆ ನರಸಪ್ಪ, ಕಾಶಮ್ಮ
ಗಂಡ ಚಂದ್ರಪ್ಪ ಗಾಡದಾನ ಜಾ:ಕಬ್ಬಲಿಗೇರ, ಇವರು 4 ಜನರು ನಮ್ಮ ಮನೆಯ ಮುಂದೆ ರಸ್ತೆಯ ಮೇಲೆ ಬಂದು
ನನಗೆ ಜಾತಿ ಏತ್ತಿ ಬೈದು ನಿನ್ನ ಮಗಳು ಹುಸೇನಮ್ಮ ಇವಳಿಗೆ ನಾವೇ ಹಣ ಕೊಟ್ಟು ಓಡಿಸಿದ್ದೇವೆ ಅಂತಾ
ಹೇಳಿ ನೀನು
ನಮ್ಮ ಮೇಲೆ ಕೇಸ ಮಾಡಿದ್ದಿ ಅಂತಾ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗೆ ಬಂದು ನಾನು ನಿಮ್ಮ
ಮೇಲೆ ಯಾವುದೇ ಕೇಸ ಮಾಡಿರುವದಿಲ್ಲಾ ಅಂತಾ ಹೇಳಲು ನೀನು ಸುಳ್ಳು ಹೆಳುತ್ತಿ ಮಗನೆ ಅಂತಾ ಹೊಡೆ
ಬಡೆ ಮಾಡಿರುತ್ತಾರೆ.ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದ್ದು ಹೆಚ್ಚಿನ
ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತಾರೆ. ಆದ್ದರಿಂದ
ಸದರಿ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:112/2013 ಕಲಂ 323, 324, 504, 506, 114 ಸಂ 34 ಐಪಿಸಿ ಮತ್ತು 3(1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್
1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
No comments:
Post a Comment