ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ
ಪರವೀನ ಗಂಡ ಮಹ್ಮದ ಗೌಸ ವ: 35 ವರ್ಷ ಸಾ:ಮುಸ್ಲಿಂ ಉ: ಮನೆ ಕೆಲಸ ಸಾ: ಕಾಳಮ್ಮ ಟೆಂಪಲ್ ಹತ್ತಿರ
ಸಂತ್ರಾಸವಾಡಿ ಗುಲಬರ್ಗಾರವರು ನಾನು ಮಹ್ಮದ ಗೌಸ ನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು,
ಮದುವೆಯಾದಾಗಿನಿಂದಲು ನನ್ನ ಗಂಡನು ದಿನಾಲು ಕುಡಿದ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಹಾಗೂ
ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡುತ್ತಾ ಹೋಡೆ-
ಬಡೆ ಮಾಡುವುದು ಮಾಡುತ್ತಿರುತ್ತಾನೆ. ತವರು
ಮನೆಯಿಂದ ಹಣ ತೆಗೆದುಕೊಂಡು ಬರಲು ಕಿರುಕುಳ
ನೀಡುತ್ತಿದ್ದಾನೆ. ಇಲ್ಲಿಯವರೆಗೆ ನನ್ನ ತಂದೆಯವರು ನನ್ನ ಗಂಡಿನಿಗೆ ಒಂದು ಲಕ್ಷ ರೂಪಾಯಿ ನೀಡಿರುತ್ತಾರೆ ಇದಲ್ಲದೆ
ಮದುವೆಯಲ್ಲಿ ಕೊಟ್ಟ ಬಂಗಾರವನ್ನು ಮಾರಿರುತ್ತಾನೆ ಮತ್ತು
ನನ್ನಗೆ ಇನ್ನೂ ಒಂದು ಲಕ್ಷ ರೂಪಾಯಿ
ತೆಗೆದುಕೊಂಡು ಬರಬೇಕೆಂದು ಇಲ್ಲವಾದರೆ ನನ್ನನ್ನು ಮತ್ತು
ನನ್ನ ಮಕ್ಕಳು ಕೊಲ್ಲುವುದಾಗಿ ಹೇಳಿರುತ್ತಾನೆ. ದಿನಾಂಕ:14.05.2013 ರಂದು ಮುಂಜಾನೆ
ಸುಮಾರು 9.00 ಗಂಟೆಗೆ ನನ್ನ ಗಂಡನು ನಾನು ತವರು ಮನೆಯಲ್ಲಿರುವಾಗ ನನಗೆ ಹಾಗೂ ನನ್ನ ತವರು ಮನೆಯವರಿಗೆಲ್ಲಾ ಅವಾಚ್ಯ
ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾನೆ. ಕಾರಣ ನನ್ನ
ಗಂಡನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ:28/2013 ಕಲಂ 498(ಎ).323.504.506 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್
ಠಾಣೆ:ದಿನಾಂಕ:18/6/2013
ರಂದು ಸಾಯಂಕಾಲ 6-00 ಗಂಟೆಗೆ ಕಲ್ಲಹಂಗರಗಾ ಗ್ರಾಮದ
ಸೀಮೆಯಲ್ಲಿ ಈಗಾಗಲೇ ಲೈಟಿನ ಕಂಬಗಳಿಗೆ ಮೂರು (ತ್ರೀಫೇಸ) ಅಲ್ಯುಮಿನಿಯಂ ವೈಯರ
ಅಳವಡಿಸಿದ್ದು ದಿನಾಂಕ:14-05-2013 ರಂದು ನಾನು ಮತ್ತು ನನ್ನ ಸಹ ಪಾಠಿಯಾದ ಪ್ರಕಾಶ ಇಬ್ಬರು ಕೂಡಿ ಕಲ್ಲಹಂಗರಗಾ ಗ್ರಾಮದಿಂದ ಕೆರೆ
ಅಂಬಲಗಾ ಗ್ರಾಮಕ್ಕೆ ಹೋಗುವ ಕಂಬಗಳ ನಿರೀಕ್ಷಣೆ ಮಾಡುತ್ತಿದ್ದಾಗ ಕಂಬಗಳಿಗೆ ಅಳವಡಿಸಿದ್ದ ಅಲ್ಯುಮಿನಿಯಂ ವಾಯರ ಇರಲಿಲ್ಲಾ.
ಯಾರೋ ಕಳ್ಳರು ಕಳ್ಳರು ರಾತ್ರಿ ವೇಳೆಯಲ್ಲಿ 22 ಕಂಬಕ್ಕೆ ಅಳವಡಿಸಿದ ವೈರ ಕಳ್ಳತನ ಮಾಡಿ ಜೆಸ್ಕಾಂ ಕಂಪನಿಗೆ ಅಂದಾಜ
92,000/-ರೂ.ಯಷ್ಟು ಹಾನಿ ಮಾಡಿರುತ್ತಾರೆ ಅಂತಾ ಶ್ರೀ ದೇವೆಂದ್ರ ತಂದೆ ಯಲ್ಲಪ್ಪ ಕುಪ್ಪಿಗೌಡ್ರ ಉ: ಸಹಾಯಕ ಅಭಿಯಂತರರು (ಉ) ಸಾ :
ನಿಡಗುಂದಿ ತಾ: ಬಸವನ ಬಾಗೇವಾಡಿ ಜಿ: ಬಿಜಾಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:243/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ನನ್ನ ತಮ್ಮ ಶ್ರೀಮಂತ ಇತನು ಹೋಲಕ್ಕೆ ಹೋಗಿ ಬರುವ
ಸಲುವಾಗಿ ಒಂದು ತಿಂಗಳ ಹಿಂದೆ ಹೊಂಡಾ ಸೈನ್ ಮೋಟರ ಸೈಕಲನ್ನು ಖರೀದಿ ಮಾಡಿದ್ದನು. ದಿನಾಂಕ:18/05/2013
ಬೆಳ್ಳಿಗೆ 7:00 ಗಂಟೆಯ ಸುಮಾರಿಗೆ ಶ್ರೀಮಂತ ಇತನು ತನ್ನ ಮೋಟಾರ ಸೈಕಲಿನ ನಂಬರ ಮತ್ತು ಕಾಗದ
ಪತ್ರಗಳು ಮಾಡಿಕೊಂಡು ಬರಲು ಗುಲಬರ್ಗಾದ ಆರ್.ಟಿ.ಓ ಕಾರ್ಯಾಲಯಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ
ಮನೆಯಿಂದ ಹೋಗಿರುತ್ತಾನೆ. ಮದ್ಯಾಹ್ನ 1:40 ಗಂಟೆಯ ಸುಮಾರಿಗೆ ನಮಗೆ ಪರಿಚಯ ಇದ್ದ ಬಸಯ್ಯಾ
ಹೀರೆಮಠ ಇವರು ನನಗೆ ಫೋನ ಮಾಡಿ ನಿಮ್ಮ ತಮ್ಮ ಶ್ರೀಮಂತ ಇತನಿಗೆ ಫೀರೋಜಾಬಾದ ದರ್ಗಾ ಹತ್ತಿರ
ರಸ್ತೆಯ ಮೇಲೆ ಒಂದು ಬಸ್ಸ ಚಾಲಕನು ಅತಿವೇಗವಾಗಿ ಮತ್ತು ಅಲ್ಷ್ಯತನದಿಂದ ಚಲಾಯಿಸಿ ನಿಮ್ಮ ತಮ್ಮನ
ಮೋಟರ ಸೈಕಲ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಮ್ಮ ಶ್ರೀಮಂತ ಇತನು ಬಸ್ಸಿನ ಟೈಯರಿನ ಕೆಳಗೆ
ಬಿದ್ದು ತಲೆ ಪೂರ್ತಿ ಒಡೆದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಅಂತಾ ತಿಳಿಸಿದ್ದರಿಂದ
ನಾವೆಲ್ಲರೂ ಸ್ಥಳಕ್ಕೆ ಬಂದು ನೋಡಲು ಶ್ರೀಮಂತ ಇತನ ತಲೆಯ ಭಾಗ ಪೂರ್ತಿಯಾಗಿ ಒಡೆದು ಮೌಂಸ ಖಂಡ
ಹೊರಗೆ ಬಂದಿದ್ದು ಮತ್ತು ಎಡಗೈ, ಬಲಗಾಲಿನ ಮೊಳಕಾಲ, ಬಲಗೈ
ರಟ್ಟೆಯ ಹತ್ತಿರ ಮುರಿದಿದ್ದು ಮತ್ತು ಹೊಟ್ಟೆ ಒಡೆದು ಕರಳುಗಳು ಹೋರಗೆ ಬಂದಿರುತ್ತವೆ. ಅಪಘಾತ
ಪಡಿಸಿದ ಬಸ ನಂಬರ ನೋಡಲಾಗಿ ಕೆಎ-36 ಎಫ್-761 ಇದ್ದು ಚಾಲಕನ ಹೆಸರು ಅಮೀನ ಪಟೇಲ ಅಂತಾ ತಿಳಿದು
ಬಂದಿರುತ್ತದೆ. ನನ್ನ ತಮ್ಮನ ಹೆಂಡತಿ ಕಾಶಿಬಾಯಿ ಇವಳು ಮೃತ ದೇಹ ನೋಡಿದ ಕೂಡಲೆ ಬೇಹುಶ ಆಗಿರುತ್ತಾಳೆ.
ಕಾರಣ ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಬಸವಂತರಾಯ ತಂದೆ ಮಲ್ಲಪ್ಪಾ
ಬೂದಿಹಾಳ ವಯ:55 ವರ್ಷ ಉ:ಒಕ್ಕಲುತನ ಜಾ:ಗಾಣಿಗ ಸಾ:ಬಳೂಂಡಗಿ ತಾ:ಜೇವರ್ಗಿ ರವರು ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 72/2013 ಕಲಂ, 279, 304 (ಎ) ಐಪಿಸಿ ಸಂಗಡ 187
ಐ.ಎಮ.ವಿ.ಅಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆನಾರೋಗ್ಯದಿಂದ ವಿಚಾರಣೆ ಬಂದಿ ಸಾವು :
ಫರತಬಾದ ಪೊಲೀಸ್ ಠಾಣೆ: ಗುಲಬರ್ಗಾ ಕೇಂದ್ರ ಕಾರಾಗೃಹದ ವಿಚಾರಣಾ ಬಂದಿ ಗುರುಸಿದ್ದಪ್ಪಾ
ತಂದೆ ಕಲ್ಲಪ್ಪಾ ವಯ: 70 ವರ್ಷ ಸಾ:ದೆಸಣಗಿ ತಾ:ಜೇವರ್ಗಿ ಜಿ:ಗುಲಬರ್ಗಾ ಎಂಬಾತನು 2 ನೇ
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುಲಬರ್ಗಾದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದನು.
ಸದರಿ ಬಂಧಿಯು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದಿನಾಂಕ:14/5/2013 ರಂದು ಜಿಲ್ಲಾ ಸರಕಾರಿ
ಆಸ್ಪತ್ರೆ ಗುಲಬರ್ಗಾಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಿಡುಗಡೆಯಾಗಿ ದಿನಾಂಕ:18/5/2013 ರಂದು
ಮದ್ಯಾಹ್ನ 2-30 ಗಂಟೆಗೆ ಕಾರಾಗೃಹದಲ್ಲಿ ದಾಖಲಾಗಿರುತ್ತಾನೆ. ಸದರಿ ಬಂಧಿಯು ಮೇಲ್ನೊಟಕ್ಕೆ
ತೀವ್ರ ತೆರನಾದ ಅನಾರೋಗ್ಯದಿಂದ ಬಳಲುತ್ತಿರುವದು ಕಂಡು ಬರುತ್ತಿದ್ದರಿಂದ ಆತನನ್ನು ಪುನಃ 2-45
ಗಂಟೆಗೆ ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನನ್ನು ಪರೀಕ್ಷಿಸಿ ಅಲ್ಲಿನ
ವೈದ್ಯಾಧಿಕಾರಿಗಳು ಸದರಿ ಬಂಧಿಯನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಚಿಕಿತ್ಸೆ
ಫಲಕಾರಿಯಾಗದೆ ಸದರಿ ಬಂಧಿಯು ದಿನಾಂಕ:18/5/2013 ರಂದು ಸಮಯ 4-30 ಗಂಟೆಗೆ ಮೃತಪಟ್ಟಿರುವುದಾಗಿ
ವೈಧ್ಯಾಧಿಕಾರಿಳು ತಿಳಿಸಿರುತ್ತಾರೆ. ಅಂತಾ ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:
15/2013 ಕಲಂ, 176 (ಬಿ) ಸಿ.ಅರ್. ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment