ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:
ಶ್ರೀ,
ಗೊರಖನಾಥ ತಂದೆ ರಾಮರಾವ ಜಾಧವ ಸಾ: ಆದರ್ಶ ನಗರ ಗುಲಬರ್ಗಾರವರು ನಮ್ಮ ತಂದೆ ರಾಮರಾವ, ತಾಯಿ ಶಾಂತಾಬಾಯಿ, ಅಣ್ಣ ಸುರೇಶ, ಅತ್ತಿಗೆ ಅಂಜನಾ, ಅವರ ಮಕ್ಕಳಾದ ಸ್ನೇಹಾ,ಶ್ರೇಯಾ, ನಮ್ಮ ಅಣ್ಣತಮಕೀಯ ರಾಜೇಂದ್ರ,ಅವನ ಹೆಂಡತಿ ಜಗದೇವಿ ಹಾಗು ನಮ್ಮ ಸಂಬಂದಿಕರಾದ
ಮುಕ್ತಾಬಾಯಿ, ಗೀತಾರಾಠೋಡ, ಅಂಕಿತಾ ರಾಠೋಡ ನಾವೆಲ್ಲರೂ ದಿನಾಂಕ:11/05/2013 ರಂದು ಬೆಳಗ್ಗೆ 9.00
ಗಂಟೆಯ ಸುಮಾರಿಗೆ ನಮ್ಮ ಬುಲೆರೋ ವಾಹನ ನಂ.ಕೆಎ.32.ಎಮ್.9067 ನೆದ್ದರಲ್ಲಿ ತೇಜುಸಿಂಗ್ ನ ಮಗಳ
ಮದುವೆಗೆ ಶಹಾಪೂರಕ್ಕೆ ಹೋಗಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸರಡಗಿ ಕ್ರಾಸ ಹತ್ತಿರ ಬರುತ್ತಿರುವಾಗ ಲಾರಿ
ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ವಾಹನಕ್ಕೆ
ಎದುರಿನಿಂದ ರಭಸವಾಗಿ ಡಿಕ್ಕಿ ಪಡಿಸಿದನು. ನನಗೆ ಗುಪ್ತಗಾಯ ಮತ್ತು ಹಲ್ಲು ಮುರಿದಂತೆ ಆಗಿದೆ.
ನಮ್ಮ ತಂದೆಗೆ, ತಾಯಿಗೆ ಅತ್ತಿಗೆ ಅಂಜನಾ, ಅಣ್ಣನ ಮಕ್ಕಳಾದ ಸ್ನೇಹಾ, ರಾಜೇಂದ್ರನಿಗೆ ಮತ್ತು ಅವನ
ಹೆಂಡತಿ ಜಗದೇವಿ ಅವಳಿಗೆ ನಮ್ಮ ಸಂಬಂಧಿಕರಾದ ಮುಕ್ತಾಬಾಯಿ ಹಾಗೂ ಗೀತಾ
ರಾಠೋಡ,ಅಂಕಿತಾ ರಾಠೋಡ ರವರೆಲ್ಲರಿಗೆ ಭಾರಿ ಗಾಯವಾಗಿರುತ್ತವೆ ಅಪಘಾತ ಪಡಿಸಿದ ಲಾರಿ ನಂಬರ ನೋಡಲು
ಕೆಎ.32.ಬಿ.2702 ನೇದ್ದಾಗಿರುತ್ತದೆ. ಲಾರಿ ಚಾಲಕನು ಲಾರಿ ಬಿಟ್ಟು ಹೋಗಿರುತ್ತಾನೆ. ಉಪಚಾರ
ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿರುತ್ತವೆ. ಹಾಗೂ ಮುಕ್ತಾಬಾಯಿ ಮತ್ತು ನಮ್ಮ ತಂದೆ
ರಾಮರಾವ ಇಬ್ಬರು ಕಾಮರೆಡಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿರುತ್ತಾರೆ. ಅಂತಾ ಗೋರಖನಾಥ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ:71/2013 ಕಲಂ, 279,337,338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ:11-05-2013
ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ
ಅಟೋರಿಕ್ಷಾ ನಂ. ಕೆಎ-32 ಎ-9691 ನೇದ್ದರಲ್ಲಿ ಪ್ರಯಾಣಿಕರಾದ ಪ್ರೇಮಾ ಮತ್ತು ಅಂಬಿಕಾ ಹಾಗೂ
ಇನ್ನಿಬ್ಬರನ್ನು ಕೂಡಿಸಿಕೊಂಡು ಶಾಹಬಜಾರ ನಾಕಾದಿಂದ ಮದನ ಟಾಕೀಸ್ ಕಡೆ ಬರುತ್ತಿದ್ದಾಗ ಬುಚನಳ್ಳಿ
ಗಾದಿ ಕಾರ್ಖಾನೆ ಹತ್ತಿರ ಎದರುಗಡೆಯಿಂದ ಟೊಯೊಟಾ ಕ್ವಾಲಿಸ್ ಕಾರ ನಂ. ಕೆಎ-23 ಎಮ್.ಎ-0088 ನೇದ್ದರ
ಚಾಲಕನು ತನ್ನ ಕಾರನ್ನು ಮದನ ಟಾಕೀಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಅಟೋದಲ್ಲಿ ಕುಳಿತ ಪ್ರೇಮಾ
ಮತ್ತು ಅಂಬಿಕಾ ಇವರಿಗೆ ಸಾದಾ ಸ್ವರೂಪದ ಗಾಯವಾಗಿರುತ್ತವೆ ಅಂತಾ ಶಶಿಕುಮಾರ ತಂದೆ ಹಣಮಂತ ವಠಾರ, ವಃ 21 ವರ್ಷ, ಉಃ ಅಟೋ ಚಾಲಕ ಸಾಃ ಕೆರೆಭೋಸಗಾ
ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2013 ಕಲಂ, 279, 337, ಐಪಿಸಿ
ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ,ಜಗದೀಶ್ಚಂದ್ರ ತಂದೆ ಸಿದ್ರಾಮಪ್ಪಾ
ಪಾಟೀಲ್ ಸಾ|| ಡೊಂಗರಗಾಂವ ರವರು ನಾನು ಚನ್ನಪ್ಪಾ ತಂದೆ ಮಡಿವಾಳಪ್ಪಾ ರಾಂಪೂರೆ, ಇವರಿಗೆ 3000/-
ರೂಪಾಯಿಗಳು ಸಾಲ ಅಂತಾ ಕೇಳಿದ್ದರಿಂದ ಕೊಟ್ಟಿದ್ದು, ಮರಳಿ ಕೊಡು ಅಂತಾ ಕೇಳಿದಕ್ಕೆ ಚನ್ನಪ್ಪ, ಸಾಗರ ತಂದೆ ಚೆನ್ನಪ್ಪಾ ರಾಂಪೂರೆ, ಸುನೀಲ ತಂದೆ
ಚನ್ನಪ್ಫಾ ರಾಂಪೂರೆ, ಅಮೀತ ತಂದೆ ಚೆನ್ನಪ್ಪಾ ರಾಂಪೂರೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ
ಮಾಡಿ ರಕ್ತಗಾಯಗೊಳಿಸಿ ಅವಾಚ್ಯವಾಗಿ ನಿಂದಿಸಿರುತ್ತಾರೆ ಅಂತಾ ಜಗದೀಶ್ಚಂದ್ರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ: 50/2013 ಕಲಂ, 341, 323, 324, 504, 506 ಸಂಗಡ 34 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment