POLICE BHAVAN KALABURAGI

POLICE BHAVAN KALABURAGI

30 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಡಾ|| ಮಣ್ಣೂರ ಕೃಷಿ ವಿಜ್ಞಾನಿ ಕೃಷಿ ಸಂಶೋದನಾ ಕೇಂದ್ರ ಗುಲಬರ್ಗಾ ಮತ್ತು ಮ್ಯಾಜಿಸ್ಟ್ರೆಟರ  ಫ್ಲೈಯಿಂಗ ಸ್ಕ್ಯಾಡ್ ಎಂ.ಸಿ.ಸಿ ಅಧಿಕಾರಿ 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರ ಗುಲಬರ್ಗಾರವರು ದಿನಾಂಕ:29-04-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಜೇವರ್ಗಿ ಕ್ರಾಸ  ಹತ್ತಿರದ  ಎಸ್‌.ಕೆ ಯಾತ್ರಿಕ ನಿವಾಸ ಹಿಂದುಗಡೆ  ಭಗವತಿ ನಗರದಲ್ಲಿ  ಹೋಗುತ್ತಿರುವಾಗ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ವಿದ್ಯುತ ಕಂಬಗಳ  ಮೇಲೆ  ಜೆ.ಡಿ.ಎಸ್‌ ಪಕ್ಷದ ಅಭ್ಯರ್ಥಿ  ಶ್ರೀ, ಶಶಿಲ ಜಿ.ನಮೊಶಿ, ಮತ್ತು ಶ್ರೀ ಹೆಚ್‌.ಡಿ ಕುಮಾರಸ್ವಾಮಿ ರವರ ಭಾವಚಿತ್ರ ಮತ್ತು ಪಕ್ಷದ ಚಿಹ್ನೆವುಳ್ಳ  ಸ್ಟಿಕ್ಕರ (ಪಾಂಪ್ಲೇಂಟ)ಗಳನ್ನು ಅಂಟಿಸಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ. ಕಾರಣ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಶಶೀಲ ಜಿ.ನಮೋಶಿ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2013 ಕಲಂ ಕಲಂ, 3 ಕರ್ನಾಟಕ ಒಪನ ಪ್ಲೇಸ್‌  (ಪ್ರಿವೇನಶನ ಆಫ್‌ ಡಿಸಫೀಗರಮೆಂಟ) ಆಕ್ಟ 1981 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಮಿನಾಕ್ಷಿ ಗಂಡ ಸಿದ್ರಾಮಪ್ಪಾ ಪಡಶೆಟ್ಟಿ ವಯಾ: 50 ವರ್ಷ   ಸಾ|| ಶಿವಪಾರ್ವತಿ ನಗರ ಸಂತೋಷ ಕಾಲೋನಿ ಗುಲಬರ್ಗಾರವರು ನಾನು ಮತ್ತು ಸುಶೀಲಾ ರವರು ದಿನಾಂಕ:29-04-2013 ರಂದು   ಮಧ್ಯಾಹ್ನ 3-30 ಗಂಟೆಗೆ ಅಟೋರಿಕ್ಷಾ ನಂಬರ ಕೆಎ-32 ಎ- 5603 ನೇದ್ದರಲ್ಲಿ ಕುಳಿತು ಮನೆಯ ಕಡೆಗೆ ಬರುತ್ತಿರುವಾಗ ಅಟೋರಿಕ್ಷಾ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಜೇವರ್ಗಿ ರೋಡಿನ ಅಂಭಾ ಭವಾನಿ ಗುಡಿಯ ಹತ್ತಿರ ರೋಡ ಡೆವೈಡರಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಸುಶೀಲಾ ಇವರಿಗೆ  ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:30/2013 ಕಲಂ:279, 337  ಐ.ಪಿ.ಸಿ. ಸಂಗಡ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಸೂರ್ಯಕಾಂತ  ತಂದೆ  ತಿಪ್ಪಣ್ಣಾ ಸುಣ್ಣಗಾರ ಸಾ: ಫಿರೋಜಬಾದ ತಾ: ಗುಲಬರ್ಗಾ ರವರು  ನನ್ನ ತಮ್ಮ ದತ್ತು ಇತನು ಟಿ.ವ್ಹಿ.ಎಸ್. ಮೋಟಾರ ಸೈಕಲ ನಂ ಕೆ.ಎ-32-ಎಕ್ಸ್-8552 ನೆದ್ದರ ಮೇಲೆ ನನ್ನ ಮಗ ರಾಜು ಇತನಿಗೆ ಮೊಟಾರ ಸೈಕಲ ಹಿಂದೆ ಕೂಡಿಸಿಕೊಂಡು ದಿನಾಂಕ:29-04-2013 ರಂದು ಮದ್ಯಾಹ್ನ 3-00 ಗಂಟೆಗೆ ಜೇವರಗಿ – ಗುಲಬರ್ಗಾ ಮೇನ್ ರೋಡ ಲಕ್ಷ್ಮೀ ಗುಡಿ ಕ್ರಾಸ ಹತ್ತಿರ ರೋಡಿನಲ್ಲಿ ಜೇವರಗಿ ಕಡೆಯಿಂದ ಗುಲಬರ್ಗಾದ ಕಡೆಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮಲೇ ಕಟ್ ಹೊಡೆದು ರೋಡಿನಲ್ಲಿದ್ದ ಗೂಟದ ಕಲ್ಲಿಗೆ ಡಿಕ್ಕಿ ಹೊಡೆದು ಮೋಟಾರ ಸೈಕಲದೊಂದಿಗೆ ಕೆಳಗೆ ಬಿದ್ದು ಭಾರಿಗಾಯ ಹೊಂದಿದ್ದು, ಉಪಚಾರ ಕುರಿತು ಗುಲಬರ್ಗಾಕ್ಕೆ  ತೆಗೆದುಕೊಂಡು ಹೋಗುತ್ತಿದ್ದಾಗ ದತ್ತು ಇತನು ಸಾಯಂಕಾಲ 5-00 ಗಂಟೆಗೆ ಮಾರ್ಗ ಮದ್ಯ ಮೃತ ಪಟ್ಟಿರುತ್ತಾನೆ. ರಾಜು ಇತನಿಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸೂರ್ಯಕಾಂತ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:93/2013 ಕಲಂ 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: