POLICE BHAVAN KALABURAGI

POLICE BHAVAN KALABURAGI

27 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ದಿನಾಂಕ:26/04/2013 ರಂದು ಮಂದೇವಾಲ ಗ್ರಾಮದ ಹತ್ತಿರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಚುನಾವಣಾ ಪ್ರಚಾರ ಕಾರ್ಯಕ್ರಮಪ್ರಯುಕ್ತ ಶ್ರೀ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್ ಹಾಗೂ ಕೇಂದ್ರ ಮಂತ್ರಿಯಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ವರು ಚುನಾವಣಾ ಪ್ರಚಾರದ ನಿಮಿತ್ಯ ಅಭ್ಯರ್ಥಿಯಾದ ಡಾ:ಅಜೆಯಸಿಂಗ್ ವರಪರವಾಗಿ ಚುನಾವಣೆ ಪ್ರಚಾರ ಕೈಕೊಂಡಿದ್ದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ||| ಅಜಯಸಿಂಗ್ ಹಾಗೂ ದಾಬಾದ ಮಾಲಿಕ ಮಹಿಬೂಬಸಾಬ ರವರು ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿರುವದರಿಂದ ಚುನಾವಣೆ ನೀತಿ ನೀತಿ ಸಂಹಿತೆ ಉಲ್ಲಂನೆಯಾಗಿರುತ್ತದೆ ಅಂತಾ ಶ್ರೀ,ಕೆ ಎಸ್ ಬೀದರಕರ್ ಅಭಿವೃದ್ದಿ ಅಧಿಕಾರಿಗಳು ಕೆ..ಡಿ.ಬಿಮತ್ತು ಜೇರ್ಗಿ ನೇಲೋಗಿ ಹೊಬಳಿಯ ಫ್ಲೈಯಿಂಗ್ ಸ್ಕ್ವಾಡ್ ಚುನಾವಣೆ ಅಧಿಕಾರಿ ಗುಲಬರ್ಗಾರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:63/2013 ಕಲಂ 171 (ಇ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:26/04/2013 ರಂದು  ರಾಯಚೂರ ದಿಂದ  ರೈಲ್ವೆ ಮೂಲಕ ಗುಲಬರ್ಗಾ ರೈಲ್ವೆ ನಿಲ್ದಾಣಕ್ಕೆ ಬಂದು, ನನ್ನ ತಮ್ಮನಾದ  ಮಹ್ಮದ ಸುಲ್ತಾನ ಮೊಹಿಯೊದ್ದಿನ ರವರ “DELL LAPTOP”ನ್ನು ನನ್ನ ಕೆಲಸದಸಲುವಾಗಿತೆಗೆದುಕೊಂಡಿದ್ದುಖಾಸಗಿ ಕೆಲಸ ಮುಗಿಸಿಕೊಂಡು  ಬೀದರಕ್ಕೆ ಹೊಗುವ ಸಂಬಂಧ  ಗುಲಬರ್ಗಾ ಕೇಂದ್ರ ಬಸ ನಿಲ್ದಾಣಕ್ಕೆ ಬಂದು ರಾತ್ರಿ 8-25 ಗಂಟೆ ಸುಮಾರಿಗೆ  ಪ್ಲಾಟ ಫಾರಂ ದಲ್ಲಿ ನಿಂತಿರುವ ರಾಜಹಂಸ ಬಸ್ ನಂ.ಕೆಎ 38-ಎಫ್‌-587 ರಲ್ಲಿ ಸೀಟಿನ ಮೇಲೆ ನನ್ನ ಲಗೇಜ ಬ್ಯಾಗ ಮತ್ತು ಡೇಲ ಲ್ಯಾಪಟಾಪ  ಬ್ಯಾಗ ಇಟ್ಟು  ಮೂತ್ರ ವಿಸರ್ಜನೆ ಮಗುಗಿಕೊಂಡು ಮರಳಿ ಬಂದು ನೊಡಲು ನನ್ನ ಲ್ಯಾಪಟಾಪ ಬ್ಯಾಗ ಇರಲಿಲ್ಲ. ಯಾರೋ ಕಳ್ಳರು DELL LAPTOP   ಅ||ಕಿ|| 35,000/-ರೂಪಾಯಿಗಳ ಮೌಲ್ಯದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಹ್ಮದ ಹಸನ್ ಮುಲ್ಲಾ ತಂದೆ ಡಿ.ಹೆಚ್.ಮುಲ್ಲಾ ಸಾ: ಅಜಾದ ನಗರ ರಾಯಚೂರ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ; 73/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ:26-04-13 ರಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ಶ್ರೀ ಡಾ: ಡಿ.ಎಂ. ಮಣ್ಣೂರು ಮ್ಯಾಜಿಸ್ಟ್ರೇರ ಸ್ಕಾಡ ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ ಗುಲಬರ್ಗಾ ರವರು ಮತ್ತು ಎಂ.ಸಿ.ಸಿ. ತಂಡದ ಸಿಬ್ಬಂದಿಯವರು ಚುನಾವಣೆ ವಿಕ್ಷಣೆ ಮಾಡುತ್ತ ಹುಸೇನ ಗಾರ್ಡ ಹತ್ತಿರ ಹೋದಾಗ ನಂಬರ ಇಲ್ಲದಿರುವ ಇನೋವಾ ಕಾರ ಅದರ ಗ್ಲಾಸ್ ಮೇಲೆ ಹಸ್ತದ ಚೆನ್ಹೆವಿರುವ ಸ್ಟೀಕರ ಅಂಟಿಸಲಾಯಿತು. ಕಾರಿನ ಚಾಲಕನಾದ ಸಂಜೆಯ ಇತನಿಗೆ ವಿಚಾರಿಸಲು ಆತನು ನಮ್ಮ ಮಾಲಿಕನಾದ ಇರ್ಶಾದ ಜಾಹಾಗೀರದಾರ ರವರಿಗೆ ವಿಚಾರಿಸಲು ಹೇಳಿದನು. ನಾನು ಮಾಲಿಕನಾದ ಜಾಹಾಗಿರದಾರ ಸಾ|| ಪೂಣೆ ಇವನಿಗೆ ವಿಚಾರಿಸಲು ಅವನು ನಮ್ಮ ಹತ್ತಿರ ಯಾವದೇ ಪರವಾನಿಗೆ ಇಲ್ಲಾ ನೀವು ಯಾರೂ ಕೇಳುವದಕ್ಕೆ ಅಂತಾ ಮಾತನಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:61/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜಬರಿ ಸಂಭೋಗ ಮತ್ತು ಜಾತಿ ನಿಂದನೆ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ನಾನು ಈ ಹಿಂದೆ ಹೀರಾಪೂರ ಕ್ರಾಸ್ ಹತ್ತಿರವಿರುವ ಶಾಲೆಯಲ್ಲಿ 8 ನೇ ತರಗತಿಯಿಂದ 10 ನೇ ತರಗತಿಯವರಿಗೆ ವ್ಯಾಸಾಂಗ ವಿದ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಅದೇ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದ ಅನಂತರಾಜ ತಂದೆ ಗುರಣ್ಣಾ ಸಾ:ಶಹಾಬಜಾರ ಅಕ್ಕಮಹಾದೇವಿ ಗುಡಿ ಹತ್ತಿರ ಗುಲಬರ್ಗಾ ರವರು ನನಗೆ ಪ್ರೀತಿಸುತ್ತೆನೆ ಅಂತಾ ಹೇಳಿ ಬೀದರಗೆ ಹಾಗೂ ಬಿಜಾಪೂರಕ್ಕೆ ಕರೆದುಕೊಂಡು ಹೋಗಿ ಲಾಡ್ಜದಲ್ಲಿ ಜಬರಿ ಸಂಭೋಗ ಮಾಡಿರುತ್ತಾನೆ. ಮತ್ತು ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸಂಭೋಗ ಮಾಡಿರುತ್ತಾನೆ. ಗರ್ಭಿವತಿಯಾದಾಗ ಮಾತ್ರಗಳನ್ನು ಕೊಟ್ಟು ಗರ್ಭಪಾತ ಮಾಡಿಸಿರುತ್ತಾನೆ. 2 ನೇ ಸಲ  ಗರ್ಭವತಿಯಾದ ಸಿದ್ದಿ ಭಾಷಾ ದರ್ಗಾ ಹತ್ತಿರ ಬಂದು ಗರ್ಭಪಾತ ಮಾಡಿಕೋ ಅಂತಾ ಜಗಳ ತೆಗೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾನೆ. ದಿನಾಂಕ:30.03.2013 ರಂದು ಬೆಳಿಗ್ಗೆ 7-00 ಗಂಟೆ ನಾನು ಆತನ ಮನೆಗೆ ಹೋಗಿ ನನ್ನನ್ನು ಮದುವೆ ಮಾಡಿಕೋ ಅಂತಾ ಕೇಳಿದಾಗ ಜಾತಿ ನಿಂದೆನೆ ಮಾಡಿರುತ್ತಾನೆ. ಹಾಗೂ ಆತನ ಹೆಂಡತಿಯಾದ ಭಾಗೀರತಿ ರವರು ಸಹ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಗುಲಬರ್ಗಾ ವಿರೇಶ ನಗರದ 35 ವರ್ಷದ ಯುವತಿ ಖಾಸಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 376, 420 ಐಪಿಸಿ ಮತ್ತು 3 (1) (10)  (12) (2) (7) ಎಸಸಿ/ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: