ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ,ಸಿದ್ದು ತಂದೆ ರಾಜಶೇಖರ ಪಾಟೀಲ್ ಸಾ:ಹೋಳಿ
ಮೈದಾನ ತಾ:ಸೇಡಂ
ರವರು ನಾನು ಮನೆಯಲ್ಲಿದ್ದಾಗ ದಿ:24-04-2013 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ನಮ್ಮ
ತಾತನಾದ ನಾಗಣ್ಣ ತಂದೆ ಸಂಗಪ್ಪ ಪರಗಿ ಇವರು ಲೈಟಿನ ಬಿಲ್ ಕಟ್ಟಲು ಕೆ.ಇ.ಬಿ ಆಫೀಸಗೆ ಹೋದರು ನಾನು
ನಮ್ಮ ಕಿರಾಣ ಅಂಗಡಿಗೆ ಹೋಗಿ ಅಂಗಡಿ ತೆರೆಯುತ್ತಿದ್ದಾಗ, ರೇವಣಸಿದ್ದಪ್ಪ ಅನ್ನವವರು ಫೋನ ಮುಖಾಂತರ
ನಿಮ್ಮ ತಾತಾ ನಾಗಣ್ಣ ಇವರಿಗೆ ಕೆ.ಇ.ಬಿ ಆಫೀಸ್ ಎದುರುಗಡೆ ಮಹೀಂದ್ರ ಕಂಪನಿಯ ಹೊಸ ಟಂ-ಟಂ ನೇದ್ದರ
ಚಾಲಕನು ಡಿಕ್ಕಿ ಪಡಿಸಿದ್ದರಿಂದ ಅವರ ತಲೆಯ ಹಿಂಬಾಗಕ್ಕೆ, ಎಡಗಣ್ಣಿನ ಹುಬ್ಬಿಗೆ ಹಾಗೂ ಮೂಗಿಗೆ
ರಕ್ತಗಾಯವಾಗಿದ್ದಲ್ಲದೇ, ಬಲಕಿವಿಯಿಂದ ರಕ್ತ ಬರುತ್ತಿದೆ ಅಂತ ತಿಳಿಸಿದನು. ನಾನು ಹೋಗಿ ನೋಡಲು
ನನ್ನ ತಾತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ವಾಹನದ ಚಾಲಕನಾದ ಶ್ರೀನಿವಾಸರೆಡ್ಡಿ ತಂದೆ
ವೆಂಕಟರೆಡ್ಡಿ ತುಳೇರ ಸಾ|| ಸಣ್ಣಅಗಸಿ ಸೇಡಂ ಇತನು ಉಪಚಾರ ಕುರಿತು ಅದೇ ವಾಹನದಲ್ಲಿ ಆಸ್ಪತ್ರೆಗೆ
ಸೇರಿಕೆ ಮಾಡಿರುತ್ತಾನೆ. ಸಾಯಂಕಾಂಲ 4-00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಅಂತಾ ದೂರು
ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:99/2013 ಕಲಂ-279, 337, 338 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡಿದ್ದು, ನಂತರ ಕಲಂ, 304 (ಎ) ಅಳವಡಿಸಿಕೊಂಡಿರುತ್ತಾರೆ.
ದರೋಡೆ
ಮಾಡಲು ಪ್ರಯತ್ನ:
ಗುಲಬರ್ಗಾ
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ನಸುಕಿನ
ಜಾವ 4-30 ಗಂಟೆ ಸುಮಾರಿಗೆ ನಮ್ಮ ಠಾಣಾ ಸರಹದ್ದಿನ ಕೆರೆ ಭೋಸಗಾ ಬಸ್ಸ ಸ್ಟಾಂಡ ಹಿಂದುಗಡೆ ಕೆಲವು
ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕ ಅಸ್ತ್ರಗಳು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ಜನರಿಗೆ ಮತ್ತು
ವಾಹನಗಳಿಗೆ ನಿಲ್ಲಿಸಿ ದರೋಡೆ ಮಾಡಲು ನಿಂತಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ
ಮಾರ್ಗದರ್ಶನದ ಮೇರೆಗೆ ಪಿ.ಎಸ.ಐ ಆನಂದರಾವ ರವರು
ಮತ್ತು ಸಿಬ್ಬಂದಿಯವರು ಹೋಗಿ ದರೋಡೆ ಮಾಡಲು ಯತ್ನಿಸುತ್ತಿರುವ ಆರೋಪಿಗಳಾದ 1) ಶೇಖ್ಯಾ ತಂದೆ ಹಣಮಂತ ಖೇರತಿ ವಯಾ|| 24 ಸಾ||
ರಾಮತಿರ್ಥ ಹತ್ತಿರ ಗುಲಬರ್ಗಾ, ಸಂಗಡ 4
ಜನರು ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:213/2013
ಕಲಂ,399,402 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
ಜೂಜಾಟ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:24-04-2013 ರಂದು ಸಾಯಂಕಾಲ
4-00 ಗಂಟೆ ಸುಮಾರಿಗೆ ಹೀರಾಪೂರ ಸೀಮೆಯಲ್ಲಿ ಬರುವ
ಬಾಬುಮಿಯ್ಯಾ ತೋಟದ ಹೊಲದಲ್ಲಿ ಸಮೀಪ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ
ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ರವರಾದ ಆನಂದರಾವ ರವರು ಮತ್ತು ಅವರು
ಸಿಬ್ಬಂದಿಯವರು ದಾಳಿ ಮಾಡಿ ನವಾಬ ಅಲಿ ತಂದೆ ಅಮೀರ ಅಲಿ ವ:38 ವರ್ಷ ಉ: ಚಹಾ ಪತ್ತಿ ವ್ಯಾಪರ
ಸಾ: ಎಂ.ಎಸ್.ಕೆ.ಮಿಲ್ಲ ಜಿಲಾನಾಬಾದ ಗುಲಬರ್ಗಾ 2) ಕಲ್ಯಾಣರಾವ ತಂದೆ ದೇವಿಂದ್ರಪ್ಪ
ಹೀರಾಪೂರ ವ:53 ವರ್ಷ ಉ: ವಾಚಮ್ಯಾನ ಕೆಲಸ
ಸಾ: ಹೀರಾಪೂರ ಗ್ರಾಮ 3) ಸಾಬೀರ ಹುಸೇನ ತಂದೆ ಮಹೆಬೂಬಸಾಬ
ವ:35 ವರ್ಷ ಉ: ಸೆಂಟ್ರಿಂಗ ಕೆಲಸ ಸಾ: ಎಂ.ಎಸ್.ಕೆ.ಮಿಲ್ಲ
ಗುಲಬರ್ಗಾ 4) ನಿಜಾಮೋದ್ದಿನ ತಂದೆ ನಸಿರೋದ್ದಿನ
ವ:45 ವರ್ಷ ಉ:ಲಾರಿ ಮೆಕ್ಯಾನಿಕ ಸಾ:ಬಿಲಾಲಬಾದ ಗುಲಬರ್ಗಾ 5) ಮಹ್ಮದ ಖಾಜಾ ತಂದೆ ಇಸ್ಮಾಯಿಲ್ ಮೈದರಗಿ ವ:23 ವರ್ಷ ಉ: ಆಟೋ ಚಾಲಕ ಸಾ: ಹೀರಾಪೂರ
ಗುಲಬರ್ಗಾ ರವರನ್ನು ದಸ್ತಗಿರಿ ಮಾಡಿ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ
4,580/- ರೂಪಾಯಿಗಳು ಹಾಗೂ ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡ ಮೇರೆಗೆ ಠಾಣೆ ಗುನ್ನೆ ನಂ:214/2013
ಕಲಂ, 87 ಕ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
No comments:
Post a Comment