POLICE BHAVAN KALABURAGI

POLICE BHAVAN KALABURAGI

18 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ²æÃಮತಿ ನಿಂಗಮ್ಮಾ ಗಂಡ ಮಾಳಿಂಗ ಸಿಂದಗಿ ಸಾ|| ಇಂಗಳಗಿ ತಾ|| ಅಫಜಲಪೂರಜಿಲ್ಲಾ|| ಗುಲಬರ್ಗಾರವರು ನನ್ನ ತಾಯಿಯಾದ ಮಲಕಮ್ಮ ಗಂಡ ಬೀರಪ್ಪಾ ಪೂಜಾರಿ ಸಾ|| ಮದರಾ (ಬಿ)  ತಾ|| ಅಫಜಲಪೂರ ಇವರು ದಿನಾಂಕ:17-04-2013 ರಂದು ನನ್ನನ್ನು ಆಸ್ಪತ್ರೆಗೆ ತೋರಿಸುವ ಕುರಿತು ಗುಲಬರ್ಗಾದ ಚಿಣಮಗೇರಿ ಆಸ್ಪತ್ರೆಗೆ ಬಂದಿದ್ದು, ಉಪಚರಿಸಿಕೊಂಡು ಸಂಗಮೇಶ್ವರ ಆಸ್ಪತ್ರೆಯ ಎದುರುಗಡೆ ಸ್ಕ್ಯಾನಿಂಗ ಮಾಡಿಸಿದ ಮೇಲೆ ನನ್ನ ಮಗನಿಗೆ ಅನ್ನ ತರುವ ಸಲುವಾಗಿ ಬಸ್ ನಿಲ್ದಾಣದ ಎದುರಿನ ಪ್ರಿನ್ಸ ಹೊಟೇಲ ಎದುರಿನ ರೋಡಿನ ಪಕ್ಕದಲ್ಲಿರುವ ಅನ್ನದ ಬಂಡಿಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಬಸ್ ನಂ: ಕೆಎ-28 ಎಫ್ 1683 ನೇದ್ದರ ಚಾಲಕ ಮಹ್ಮದ ಅಮಜದ ಇತನು ನಿಸ್ಕಾಳಿಜಿತನದಿಂದ ಚಲಾಯಿಸಿ ಅತೀ ರಭಸದಿಂದ ಮಲಕಮ್ಮಾ ಇವಳಿಗೆ ಡಿಕ್ಕಿ ಪಡಿಸಿದ್ದರಿಂದ ಬಲಗೈ ಮುಂಗೈಯಿಂದ ಹಸ್ತದವರೆಗೆ ಭಾರಿ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗಡೆಯಿಂದ ಹಿಮ್ಮಡಿಯವರಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ಹಾಗೂ ಮೂಗಿನ ಮೇಲೆ, ಹೊಟ್ಟೆಗೆ ಗುಪ್ತಗಾಯ ಆಗಿದ್ದರಿಂದ  ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಹೆಚ್ಚಿನ ಉಪಚಾರ ಕುರಿತು ಸತ್ಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಉಪಚಾರ ಕೊಡಿಸುವಷ್ಟರಲ್ಲಿ ನನ್ನ ತಾಯಿ ಮಲಕಮ್ಮಾ ಇವಳು ಸಾಯಂಕಾಲ 5=40 ಗಂಟೆಗೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ. ಸದರಿ ಬಸ್ಸ ಚಾಲಕ ಮಹ್ಮದ ಅಮಜದ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮೃತಳ ಮಗಳು ನಿಂಗಮ್ಮ ಇವಳು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:26/2013 ಕಲಂ:279, 304 (ಎ)  ಐ.ಪಿ.ಸಿ.  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಮಳಖೇಡ ಪೊಲೀಸ ಠಾಣೆ: ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರು ಮುಕ್ರಂ ಖಾನ್ ಇವರಿಗೆ ಜೀಪ ವಾಹನದ ಮೇಲೆ ದ್ವನಿವರ್ಧಕ ಅಳವಡಿಸಿದ ಬಗ್ಗೆ ವಿಚಾರಣೆ ಮಾಡಲಾಗಿ ಮುಕ್ರಂ ಖಾನ್ ಮತ್ತು ಆತನ ಸಂಗಡ ಸುಮಾರು 20 ಜನರು ಅವಾಚ್ಯವಾಗಿ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಅಂತಾ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:39/2013 ಕಲಂ 127 (ಎ) The Representation of people act 1951  &  147. 353. 188. 186. 504. ಸಂಗಡ 149 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

No comments: