POLICE BHAVAN KALABURAGI

POLICE BHAVAN KALABURAGI

14 April 2013

GULBARGA DISTRICT REPORTED CRIMES

ಕೊಲೆ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:12/04/2013 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದ ಪ್ರಭಾವತಿ ಹೊಲಕ್ಕೆ ಹೋಗಿದ್ದು, ನನ್ನ ಹಿರಿಯ ಮಗ ಪ್ರವೀಣ ಇತನು ನಮ್ಮ ಸಂಬಂಧಿಕರ ಊರಿಗೆ ಹೋಗಿದ್ದನು. ಮನೆಯಲ್ಲಿ ಮಲ್ಲಿಕಾರ್ಜುನ ಒಬ್ಬನೇ ಇದ್ದನು. ಸಾಯಂಕಾಲ ನಾವು ಮನೆಗೆ ಬಂದಾಗ ಮಲ್ಲಿಕಾರ್ಜುನ ಇರಲಿಲ್ಲಾ. ನಮ್ಮ ಸಂಬಂಧಿಕರಿಗೆ ಫೋನ್ ಮುಖಾಂತರ ವಿಚಾರಿಸಲು ಅವನು ಸಿಗದ ಕಾರಣ ದಿನಾಂಕ:13/04/2013 ರಂದು ಸಿಂದಗಿ ಪೊಲೀಸ್ ಠಾಣೆಗೆ ಹೋಗಿ ನನ್ನ ಮಗ ಕಾಣೆಯಾಗಿರುತ್ತಾನೆ ಅಂತಾ ಪ್ರಕರಣ ದಾಖಲಿಸಿರುತ್ತೆನೆ. ಹಾಗೂ ಗಂಡು ಮಕ್ಕಳಲ್ಲಿ ಮೂರನೆಯ ಮಗನಾದ ಪ್ರಶಾಂತ ಇತನು 2011 ನೇ ಸಾಲಿನಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೆ ಮರಳಿ ಬಂದಿರುವದಿಲ್ಲಾ. ಇತನ ಬಗ್ಗೆಯು ಸಹ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆನೆ. ಇದಕ್ಕೆಲ್ಲಾ ಕಾರಣವೆನೆಂದರೆ, ನಮ್ಮ ಎರಡನೆ ಅಣ್ಣ-ತಮ್ಮಕಿ ಅಪ್ಪಾಸಾಹೇಬ ತಂದೆ ಗುಂಡಪ್ಪ ಅರಳಿಗಿಡ ಸಾ: ಯರಗಲ್(ಬಿಕೆ) ಇತನ ಮಧ್ಯ ಮತ್ತು ನಮ್ಮ ನಡುವೆ 4-5 ವರ್ಷಗಳ ಹಿಂದೆ ಜಗಳವಾಗಿತ್ತು. ಅವರು ಮತ್ತು ನಾವು ಮಾತಾಡುತ್ತಿರಲಿಲ್ಲ. ಜನರ ಮುಂದೆ ಈ ಮಕ್ಕಳಿಗೆ ಸತ್ತೆನಾಸ ಮಾಡುತ್ತೇನೆ ಅಂತಾ ಹೇಳುತ್ತಾ ತಿರುಗಾಡುತ್ತಿದ್ದನು. ನನ್ನ ಮಗ ಮಲ್ಲಿಕಾರ್ಜುನನಿಗೆ ಈ ಹಿಂದೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಕೂಡಿಕೊಂಡು ಅಪಹರಿಸಿಕೊಂಡು ಹೋಗಿದ್ದರು. ನನ್ನ ಮಗ ಗೊಲಗೇರಿಯಿಂದ ತಪ್ಪಿಸಿಕೊಂಡು ಬಂದಿದ್ದನು.ದಿನಾಂಕ:14/04/2013 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಂದೇವಾಲ ಸಿಮೆಯ ಮುಖ್ಯ ರಸ್ತೆಯ ಪಕ್ಕದ ಭಾವಿಯಲ್ಲಿ ಒಬ್ಬ ಹುಡುಗನ ಹೇಣ ಬಿದ್ದಿರುತ್ತದೆ ಅಂತಾ ಮಾಹಿತಿ ತಿಳಿದುಕೊಂಡು ನಾನು ಮತ್ತು ನನ್ನ ಅಣ್ಣನಾದ ಸಿದ್ದಣ್ಣ ಅರಳಿಗಿಡ, ನಮ್ಮೂರ ಶಿವಪ್ಪ ಬದರಿ ಮೂವರು ಕೂಡಿ ಮಂದೇವಾಲ ಸೀಮೆಯ ಬಾವಿಯಲ್ಲಿ ಹೋಗಿ ನೋಡಲು ನನ್ನ ಮಗನ ಹೆಣ ಅಂಗಾತವಾಗಿ ಬಿದ್ದು ತೇಲುತ್ತಿತ್ತು. ನೋಡಲು ಅವನ ಕುತ್ತಿಗಿಗೆ ಹಾಗೂ ಮುಖಕ್ಕೆ ಗಾಯಗಳಾಗಿದ್ದವು. ಮುಖದಿಂದ ರಕ್ತ ಸೋರುತ್ತಿತ್ತು. ನನ್ನ ಮಗನಿಗೆ ಅಪ್ಪಾಸಾಹೇಬ ಹಾಗೂ ಅವನ ಸಹೋದರ ಮಾವ ಶಾಂತಪ್ಪ ಅಂಬಲಗಿ ಇವರು ನಮ್ಮೂರ ಶರಣಪ್ಪ ಅರಳಿಗಿಡ ಮತ್ತು ನಿಂಗಪ್ಪ ಅರಳಿಗಿಡ ಇವರ ಕುಮ್ಮಕ್ಕಿನಿಂದ ದಿನಾಂಕ:12/04/2013 ರಂದು ಕೊಲೆ ಮಾಡುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿ, ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಮಂದೇವಾಲ ಸೀಮೆಯ ಬಾವಿಯಲ್ಲಿ ಹಾಕಿ ಹೋಗಿರುತ್ತಾರೆ ಅಂತಾ  ಶ್ರೀ  ಶಿವಾನಂದ ತಂದೆ ತುಕ್ಕಪ್ಪ ಅರಳಿಗಿಡ  ವಯಾ|| 36  ಸಾ:ಯರಗಲ್ (ಬಿಕೆ) ತಾ|| ಸಿಂದಗಿ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ  ನಂ:54/2013 ಕಲಂ.364, 302, 201 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ:ದಿನಾಂಕ:13/04/2013 ರಂದು ರಾತ್ರಿ ಸುಮಾರು 10-30 ಗಂಟೆ ಸುಮಾರಿಗೆ ನಾವು ಮನೆಯವರು ಊಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಜನರು ಕೂಗುವುದು ಚಿರಾಡುವುದು ನಿಂದನೆ ಮಾಡುತ್ತಿರುವದು ಕೇಳಿಸಿತ್ತು. ಹಾಗೇ ಮನೆಯ ಮೇಲೆ ಕಲ್ಲು ಹೊಡಿಯುತ್ತಿದ್ದರು. ಅಷ್ಟರಲ್ಲಿಯೇ ನಮ್ಮ ಮನೆಯ ಬಾಗಿಲು ಮುರಿದು ಶ್ರೀಕಾಂತ ತಂದೆ ಬಸವರಾಜ ಬಿರಾದಾರ  ಇತನು ಜಾತಿ ನಿಂದನೆ ಮಾಡಿ ಜಾತ್ರೆ ನಿಮಿತ್ಯ ಊರಿನಲ್ಲಿ ನಡೆದಿರುವ ನಾಟಕದಲ್ಲಿ ನೀನು ಬಂದು ಹಣ (ಆಯ್ಯಾರಿ) ಮಾಡುತ್ತಿ ಮಗನೆ, ನಾವು ತರಿಸಿದ ನಾಟಕದಲ್ಲಿ ಕಾರಬಾರ ಮಾಡುತ್ತಿರಿ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ಸೊಂಟದ ಎಡ ಪಕ್ಕಯ ಮೇಲೆ ಜೋರಾಗಿ ಹೊಡೆದನು ಆಗ ಹೊಡೆತಕ್ಕೆ ಭಾರಿ ಗುಪ್ತ ಗಾಯವಾಗಿ  ನಾನು ಕೆಳಗೆ  ಬಿದ್ದೆನು, ಹಾಗೂ ಗುರುದೇವಪ್ಪ ತೋಳನವಾಡಿ, ರಾಜು ತಂದೆ ಬಸವಂತರಾಯ ಪಾಟೀಲ್, ಶರಣಬಸಪ್ಪ ತಂದೆ ರಾಮಲಿಂಗಪ್ಪ ರೆಡ್ಡಿ, ಪ್ರಕಾಶ ತಂದೆ ರಾಮಲಿಂಗಪ್ಪ  ರೆಡ್ಡಿ,  ವಿಠಲ ತಂದೆ ರಾಮಲಿಂಗಪ್ಪ ಚಾಂಗೋಲೆ ,ಶರಣಬಸಪ್ಪ ಉಜಳಂಬೆ  ಬಂಡೆಪ್ಪ ತಂದೆ  ಬಸವಣಪ್ಪ ಸಂಗೋಳಗಿ , ಶಿವರಾಯ ತಂದೆ ಗುಂಡಪ್ಪ ಪಾಟೀಲ್ . ಸುಖದೇವ ತಂದೆ ವಿಠಲ ಕಣಮುಸ್ , ಈರಣ್ಣ ತಂದೆ ಹಣಮಂತರಾಯ ಗೊಬ್ಬರು ,ಪ್ರಕಾಶ ಚಾಂಗೋಲೆ  ಮಂಜುನಾಥ ತಂದೆ ಶಿವರಾಯ ಜಮದಾರ . ಮಹಾಂತೇಶ ತಂದೆ ಬಸವರಾಜ ಬಿರೆದಾರ ಇವರೆಲ್ಲರೂ ನನಗೆ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ. ಅಲ್ಲದೆ ಎಲ್ಲರೂ ನನ್ನನ್ನು ಮನೆಯ ಮುಂದುಗಡೆಯಿಂದ ಹೊಡೆಯುತ್ತಾ ಮಲ್ಲಿಕಾರ್ಜುನ ದೇವಸ್ಥಾನದ ಒಳಗೆ ಎಳೆದುಕೊಂಡು ಹೋಗಿ ಅಲ್ಲಿಯೇ ಕೂಡ ಎಲ್ಲರೂ ಹೊಡೆದಿರುತ್ತಾರೆ. ಅಲ್ಲಿಯೇ ಇದ್ದ ಅಕ್ಬರ್ ತಂದೆ ಅಲ್ಲಾವೋದ್ದೀನ ಅದಾಭ ಇವನು ಬಿಡಿಸಲು ಬಂದಾಗ ಇವನಿಗೂ ಕೂಡ ನನ್ನ ಎದರುನಲಿಯೇ ಶಿವರಾಜ ತಂದೆ ಗುಂಡಪ್ಪ ಪೊಲೀಸ ಪಾಟೀಲ್ . ಅಕ್ಬರನಿಗೆ ಕೈಯಿಂದ ಬಲಕಣ್ಣಿನ ಕೆಳರಪ್ಪೆಯ ಹೊಡೆದು ಉಗೂರಿನಿಂದ ಚೂರಿ ರಕ್ತಗಾಯ ಪಡಿಸಿ ಹೊಡೆ ಬಡೆ ಮಾಡಿರುತ್ತಾನೆ. ಅಂತಾ ಹಣಮಂತರಾಯ ತಂದೆ ಗುಂಡಪ್ಪ ತಳಕೇರಿ ವಯಾ||:28 ವರ್ಷ, ಸಾ: ಬಾಳಿ ತಾ:ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ 143 147 148 448 342 323 324 325 504 506 ಸಂ 149 ಐಪಿಸಿ ಸಂ:3[1][10] ಎಸ್ ಸಿ / ಎಸ್ ಟಿ ಪಿ ಎ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: