ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ,ತಿಪ್ಪಣ್ಣ ತಂದೆ ಮಲ್ಕಣ್ಣ ಮಾರೆನೊರ ವಯಾ||50, ರೈಲ್ವೆ ನೌಕರ, ಸಾ:ಇಂಜಳ್ಳಿ ಹಾ||ವ|| ವಿ.ಸಿ.ಎಫ್. ಕಾಲೋನಿ
ಸೇಡಂರವರು ನನ್ನ ಮಗನಾದ ಭಿಮರಾಯ ವಯಾ||26 ವರ್ಷ ಇತನು ವಿ.ಸಿ.ಎಫ್, ನಲ್ಲಿ ಲೇಬರ್ ಕೆಲಸ ಮಾಡಿಕೊಂಡಿದ್ದನು,
ಆತನಿಗೆ ಆರಾಮ ಇಲ್ಲದ ಕಾರಣ ದಿನಾಂಕ:11-04-2013 ರಂದು ಕೆಲಸಕ್ಕೆ
ಹೋಗಿರಲಿಲ್ಲ, ಮಧ್ಯಾಹ್ನ ಸಮಯದಲ್ಲಿ ವಿ.ಸಿ.ಎಫ್.ನ ಬಸ್
ನಿಲ್ದಾಣದ ಕಡೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ಸಾಯಂಕಾಲ 4-30 ಗಂಟೆ ಸುಮಾರಿಗೆ ಕಿಶನ್
ತಂದೆ ಧನಸಿಂಗ್ ಚೌವ್ಹಾಣ ಸಾ:ಬಸವ ನಗರ ಸೇಡಂ ಇತನು, ನಿಮ್ಮ ಮಗನಾದ ಭೀಮರಾಯ ಇತನು ವಾಸವದತ್ತಾ ಸಿಮೆಂಟ್
ಫ್ಯಾಕ್ಟರಿಯ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ 4-20 ಗಂಟೆ ಸುಮಾರಿಗೆ
ಸೇಡಂ ಕಡೆಯಿಂದ ಒಂದು ಲಾರಿಯ ಚಾಲಕ ನಿಮ್ಮ ಮಗನಿಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ರಕ್ತಗಾಯ ವಾಗಿರುತ್ತದೆ ಅಂತ ತಿಳಿಸಿದ್ದರಿಂದ,
ನಾನು ಮತ್ತು ನನ್ನ ಹೆಂಡತಿ ತಿಪ್ಪಮ್ಮ, ದಶರಥ
ಮಾರೆನೊರ ಹೋಗಿ ನೋಡಲು ಲಾರಿ ನಂ-ಎಮ್.ಹೆಚ್.-04 ಬಿಜಿ.-673
ನೇದ್ದರ ಚಾಲಕ ಸೇಡಂ ಕಡೆಯಿಂದ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸ್ಸ
ನಿಲ್ದಾಣದ ಎದುರುಗಡೆ ಮುಖ್ಯ ರಸ್ತೆಯ ಮೇಲೆ ಹಾಕಿದ ಡಿವೈಡರ್ ಹತ್ತಿರ ಒಮ್ಮೆಲೆ ಕಟ್ ಹೊಡೆದಾಗ, ಬಸ್
ನಿಲ್ದಾಣದಲ್ಲಿ ಕುಳಿತಿದ್ದ ನನ್ನ ಮಗ ಭಿಮರಾಯ ಇತನಿಗೆ ಡಿಕ್ಕಿ ಹೊಡೆದಿದ್ದರಿಂದ ಆತನಿಗೆ
ತಲೆಗೆ, ಮೂಗಿಗೆ, ಬಲಗಡೆ
ಹೊಟ್ಟೆಗೆ, ಸೊಂಟಕ್ಕೆ ಭಾರಿ
ರಕ್ತಗಾಯವಾಗಿ ಕರಳು ಹೊರಗೆ ಬಂದಿದ್ದು, ಬಲ ತೊಡೆಗೆ ಭಾರಿ ರಕ್ತಗಾಯವಾಗಿ ಪೂರ್ತಿ ಮೌಂಸ ಹೊರಗೆ
ಬಂದು ಕಾಲು ಸೊಂಟ ಮುರಿದಿದ್ದು ಮತ್ತು ಬಲಗಡೆಯ ತೊರಡಿಗೆ ಭಾರಿ ರಕ್ತಗಾಯವಾಗಿದ್ದು ಸದರಿ ಲಾರಿಯ
ಚಾಲಕ ಅಲ್ಲಾಭಕ್ಷ ತಂದೆ ಅಬ್ದುಲ್ ಕರೀಂಸಾಬ ಸಾ:ಸುಲೇಪೇಠ ಇತನು
ಅಪಘಾತ ಪಡಿಸಿದ ನಂತರ ಓಡಿಹೋಗಿರುತ್ತಾನೆ. ಭೀಮರಾಯ ಇತನಿಗೆ ಉಪಚಾರ ಕುರಿತು ಸೇಡಂ ಸರಕಾರಿ
ಆಸ್ಪತ್ರೆಗೆ ತರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-81/2013 ಕಲಂ-279, 304(ಎ) ಐಪಿಸಿ
ಸಂಗಡ 187 ಐ.ಎಮ್.ವ್ಹಿ. ಆಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment