POLICE BHAVAN KALABURAGI

POLICE BHAVAN KALABURAGI

08 March 2013

GULBARGA DISTRICT REPORTED CRIMES


ಮಾರಣಾಂತಿಕ ಹಲ್ಲೆ :
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:07/03/2013 ರಂದು ಮಧ್ಯಾಹ್ನ ವೇಳೆಗೆ ಸದರಿ ಪರಮೇಶ್ವರನ ಅಣ್ಣನಾದ ಹಣಮಂತನು ಮೋಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ಅವನ ಕೈಯಲ್ಲಿಯ ಪೇಪರ ಕೆಳಗೆ ಬಿದ್ದಿದ್ದು ಅದನ್ನು ಕೊಡುವಂತೆ ಕೇಳಿದನು. ನಾನು ಕೊಡಲಾರದಕ್ಕೆ ಮಗನೇ ನಿನಗೆ ನೋಡಿಕೊಳ್ಳುತ್ತೆನೆ. ಎಂದು ಹೇಳಿ ಹೋಗಿದ್ದನು. ಆತನ ತಮ್ಮನಾದ ಪರಮೇಶ್ವರನಿಗೆ ಹೇಳಿ ಕಳುಹಿಸಿದ್ದರಿಂದ  ಸಾಯಂಕಾಲ 4-30 ಗಂಟೆಗೆ ಸುಮಾರಿಗೆ ನಾನು ಬಸವ ನಗರದ ಹನುಮಾನ ಮಂದಿರ ಹತ್ತಿರ ಕುಳಿತಾಗ ನಮ್ಮ ಒಣಿಯ ಪರಮೇಶ್ವರ ತಂದೆ ಯಲ್ಲಪ್ಪ ಟೇಕಳಾ ಇತನು ಕೈಯಲ್ಲಿ ಚಾಕು ತೆಗೆದುಕೊಂಡು ಬಂದು ನಮ್ಮ ಅಣ್ಣನಿಗೆ ಬೈದಿದಿ ಅಂತಾ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನಗೆ ಹೊಡೆದನು, ನಾನು ಕೈ ಅಡ್ಡ ಪಡಿಸಿದಕ್ಕೆ ಆ ಚಾಕುವಿನ ಎಟು ನನ್ನ ಎಡಗೈ ಮೋಳಕ್ಕೆ ಹತ್ತಿರ ಭಾರಿ ಗಾಯಗಳಾಗಿ ಕೈ ನರಗಳು ಕಟ್ಟಾಗಿ ರಕ್ತ ಸ್ರಾವ ಆಗಿರುತ್ತದೆ. ಅಂತಾ ಶ್ರೀ ಕಿರಣಕುಮಾರ ತಂದೆ ಶಂಭುಲಿಂಗ ಸಂಗವಾರ ಸಾ:ಬಸವ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 35/2013 ಕಲಂ.341,307,504,109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ನಾಗರಾಜ ತಂದೆ ಶ್ರೀಮಂತ ದೊಡ್ಡಮನಿ ಸಾ:ಅಶೋಕ ನಗರ ಗುಲಬರ್ಗಾರವರು ನಾನು ಮತ್ತು ದೀಪಕ ತಂದೆ ಲಕ್ಷ್ಮಣ ಸಾ|| ರೇವಣಸಿದ್ದೇಶ್ವರ ಕಾಲೋನಿ ಗುಲಬರ್ಗಾ ರವರು ಕೂಡಿಕೊಂಡು ದಿನಾಂಕ:07/03/2013  ರಂದು ಮುಂಜಾನೆ ಆಳಂದ ಚೆಕ್ಕ ಪೋಸ್ಟ್‌ ಹತ್ತಿರದಿಂದ ಮೋಟಾರ ಸೈಕಲ ನಂಬರ ಕೆಎ-32 ವೈ-5396 ನೇದ್ದರ ಮೇಲೆ ಆಳಂದಕ್ಕೆ ಹೋರಟಿದ್ದು ಕೆರಿಬೋಸಗಾ ಕ್ರಾಸ ಹತ್ತಿರ ಮೋಟಾರ ಸೈಕಲನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಎದರುಗಡೆಯಿಂದ ಯಾವುದೋ ಕ್ರೋಜರ ವಾಹನ ಬಂದಿದ್ದು ಅದಕ್ಕೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ ಆಯ ತಪ್ಪಿ ರಸ್ತೆ ಪಕ್ಕದಲ್ಲಿ ಬಿದ್ದು ನನಗೆ ಮತ್ತು ದೀಪಕನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:123/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.

No comments: