ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಅನೀಲ
ತಂದೆ ಶಂಕರರಾವ ವಯಾ|| 28 ಪಾಟೀಲ ಸಾ|| ಭೂಸನೂರ
ರವರು ದಿನಾಂಕ:03-03-2013 ರಂದು 9-00 ಸುಮಾರಿಗೆ ತಮ್ಮ ಮನೆಯಿಂದ ಹೊಲಕ್ಕೆ ಹೋಗುವಾಗ ದಾರಿ
ಮಧ್ಯ ಮಲ್ಲಿಕಾರ್ಜುನ ಹೈಸ್ಕೂಲ ಹತ್ತಿರ ಕೆನಾಲ ಬ್ರಿಡ್ಜ ಮೇಲೆ ಹೊರಟಾಗ ಆತನ ಹಿಂದಿನಿಂದ ಹಿಟಾಚಿ
ಟಾಟಾ ನಂ. EX 200 LC, 2001-8138 ನೇದ್ದರ ಚಾಲಕನು ಅದರ ಬಕೀಟನ್ನು
ನಿರ್ಲಕ್ಷತನದಿಂದ ತಿರುಗಿಸಿದಾಗ ಟಾಟಾ ಹಿಟಾಚಿಯ ಮುಂದಿನ ಬಕೀಟನ್ನು ಎಡಗಾಲ ಮೊಳಕಾಲ ಮೇಲೆ ಬಡಿದು
ಬ್ರಿಡ್ಜಿನ ಬೇಸಮೆಂಟಕ್ಕೆ ಬಡಿದಿದ್ದರಿಂದ ಕಾಲು ಕಟ್ಟಾಗಿ ಸ್ಥಳದಲ್ಲಿಯೇ ಬಿದ್ದಿದ್ದು ಆಗ
ಹಿಟಾಚಿಯ ಚಾಲಕನ್ನು ಹಿಟಾಚಿ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಿಂಬರ್ಗಾ
ಠಾಣೆ ಗುನ್ನೆ ನಂ:22/2013 ಕಲಂ, 287, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಮಲ್ಲಯ್ಯ ತಂದೆ ಶರಣಯ್ಯ ಹಿರೇಮಠ ಸಾ|| ಜ್ಯೋತಿ ನಗರ ಗುಲಬರ್ಗಾ ರವರು ನಾನು ದಿನಾಂಕ:05/03/2013 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಹುಮನಾಬಾದ
ರೋಡಿಗೆ ಇರುವ ವಾಣಿಜ್ಯ ತೆರಿಗೆ ಇಲಾಖೆ ಚೆಕ್ಕ ಪೋಸ್ಟ ಪಕ್ಕದಲ್ಲಿ ಹೋಗು-ಬರುವ ವಾಹನಗಳನ್ನು
ಚೆಕ್ಕ ಮಾಡುತ್ತಾ ನಿಂತಾಗ ಆಗ ಹುಮನಾಬಾದ ರೋಡ ಕಡೆಯಿಂದ ಪೋರ್ಡ ಕಾರ ಕೆಎ-32 ಟಿಜಡ್-7590 ನೇದ್ದರ ಚಾಲಕ ಅಜೀತ ತಂದೆ ಮಾಹಾದೇವ ಸೂರ್ಯವಂಶಿ ಸಾ:ವರ್ಧನ ನಗರ ಉದನೂರ
ರೋಡ ಗುಲಬರ್ಗಾ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬರುವುದನ್ನು
ನೋಡಿ ಕೈ ಸನ್ನೆ ಮಾಡಿ ನಿಲ್ಲಿಸಲು ತಿಳಿಸಿದಾಗ ವೇಗದಲ್ಲಿ ಬಂದವನೇ ನನ್ನ ಬಲಗಾಲಿಗೆ ಡಿಕ್ಕಿ ಹೊಡೆದನು. ಸ್ಥಳದಲ್ಲಿ ಕಾರ ನಿಲ್ಲಿಸಿದ್ದು, ನನ್ನ ಬಲಗಾಲಿಗೆ, ತಲೆಗೆ, ಬಲಹುಬ್ಬಿನ ಮೇಲೆ,ಬಲಹಸ್ತದ ಮೇಲೆ ರಕ್ತಗಾಯವಾಗಿರುತ್ತದ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 121/2013 ಕಲಂ 279. 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ;ದಿನಾಂಕ:04.03.2013
ರಂದು ಬೆಳಿಗ್ಗೆ 8.45 ಗಂಟೆಗೆ ಚಿಂಚೋಳಿ ಪಟ್ಟಣದ ನೀರಿನ ಬುಗ್ಗಿಯಿಂದ ತನ್ನ 9 ವರ್ಷದ ಮಗಳಿಗೆ (ಹೆಸರು
ಸೂಚಿಸಿರುವದಿಲ್ಲ) ಭಾಲ್ಕಿ ಮಠದ ಸ್ವಾಮಿಜಿಯಾದ ಗುಂಡಪ್ಪಾ ಎಂಬುವವರು ಅಪಹರಣ ಮಾಡಿಕೊಂಡು
ಹೋಗಿರುತ್ತಾನೆ. ಅಪಹರಣಕ್ಕೋಳಗಾದ ನನ್ನ ಮಗಳು ಕೆಂಪು ಬಣ್ಣ, ದುಂಡು ಮುಖ, ನೀಟಾದ ಮೂಗು, ಮತ್ತು ದುಂಡನೇಯ ಮೈಕಟ್ಟು
ಹೊಂದಿದವಳಾಗಿದ್ದು ಒಂದು ಚಾಕ್ಲೇಟ ಬಣ್ಣದ ಟೀ ಶರ್ಟ, ಮೆಂಹಂದಿ ಬಣ್ಣದ ಜೀನ್ಸ ಪ್ಯಾಂಟ, ಎರಡು ಕಿವಿಗಳಲ್ಲಿ ಬೆಳ್ಳಿ ರಿಂಗ್ ಧರಿಸಿದ್ದು, ಬೇಬಿ ಕಟಿಂಗ್ ಮಾಡಿಸಿದ್ದು ಕನ್ನಡ
ಬಾಷೆಯಲ್ಲಿ ಮಾತಾಡುತ್ತಾಳೆ ಅಂತಾ ಅಪಹರಣಗೊಂಡ ಹುಡಗಿಯ ತಾಯಿಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಚಿಂಚೋಳಿ ಠಾಣೆ
ಗುನ್ನೆ ನಂ:39/2013 ಕಲಂ 363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment