POLICE BHAVAN KALABURAGI

POLICE BHAVAN KALABURAGI

29 March 2013

GULBARGA DISTRICT REPORTED CRIMES


ಆಸ್ತಿಗಾಗಿ ತಮ್ಮನ ಕೊಲೆ:
ರೇವೂರ ಪೊಲೀಸ್ ಠಾಣೆ:ಶ್ರೀ, ಬಸವರಾಜ ತಂದೆ ಚನ್ನಬಸಪ್ಪ ಬಣಗಾರ ವ||55 ವರ್ಷ ಜಾ|| ಬಣಗಾರ   || ಎಸ್.ಡಿ.ಎ. ಸಾ|| ಅತನೂರ  ಹಾ|||| ಅಫಜಲಪೂರ  ರವರು ನಾವು 6 ಜನ ಅಣ್ಣ ತಮ್ಮಂದಿರಿದ್ದು 16 ಎಕರೆ ಜಮೀನು ಇರುತ್ತದೆ. ನನ್ನ  4 ನೇ ತಮ್ಮ ಚಂದ್ರಕಾಂತ ತಂದೆ ಚನ್ನಬಸಪ್ಪ ಬಣಗಾರ ವಯಾ||35 ಇತನಿಗೆ ಮದುವೆ ಆಗಿರುವುದಿಲ್ಲ 16 ಎಕರೆ ಜಮೀನಿನಲ್ಲಿ ಎಲ್ಲರು ಪಾಲು ಹಂಚಿಕೊಂಡಿರುತ್ತೆವೆ.  ಶಿವಾನಂದ ಬಣಗಾರನು ವಯಾ|| 35 ವರ್ಷ  ಇತನು ಚಂದ್ರಕಾಂತನ ಪಾಲಿನ ಜಮೀನು ನನಗೆ ಕೊಡು ಅಂತ ಕಳೆದ 4-5 ವರ್ಷಗಳಿಂದ ಜಗಳ ಮಾಡುತ್ತಾ ಬಂದಿರುತ್ತಾನೆ,  ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 26-03-2013 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಶಿವಾನಂದ ಇತನು ಚಂದ್ರಕಾಂತ ಇತನ ತಲೆಗೆ ಒನಕೆಯಿಂದ ತಲೆಗೆ ಹೊಡೆದು ನೂಕಿಕೊಟ್ಟಿದ್ದರಿಂದ ತಲೆಗೆ ಬಲವಾದ ಒಳಪೆಟ್ಟಾಗಿ ಮೈಕೈಗಳಿಗೆ ತರಚಿದ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದರಿಂದ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಸವೇಶ್ವರ ಆಸ್ಪತ್ರೆ ವೈಧ್ಯಾಧೀಕಾರಿಗಳು ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ದಿನಾಂಕ:28-03-2013 ರಂದು ಬೆಳಿಗಿನ ಜಾವ 3-00 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿ ನನ್ನ ತಮ್ಮ ಚಂದ್ರಕಾಂತನು ಮೃತಪಟ್ಟಿರುತ್ತಾನೆ. ಅಂತಾ ಬಸವರಾಜ ರವರು ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ:25/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಜಿ.ಸೆಲ್ವರಂಗಂ ಪ್ರಾದೇಶಿಕ ಆಡಳಿತ ಅಧಿಕಾರಿಗಳು ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಫೇಕ್ಸ ಪ್ರಾದೇಶಿಕ ಕಛೇರಿ ಬೆಂಗಳೂರು ರವರು ಗುಲಬರ್ಗಾ ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಪೆಕ್ಸ ಸರಕು ಅಂಗಡಿ ಸುಪರ ಮಾರ್ಕೆಟ ಗುಲಬರ್ಗಾದಲ್ಲಿ ಸೇಲ್ಸಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರವೀಣಕುಮಾರ ಇತನು ದಾಸ್ತಾನು ಸರಕುಗಳಲ್ಲಿ 2012 ನೇ ಸಾಲಿನ ಅಗಸ್ಟ ತಿಂಗಳಿನಿಂದ 2013 ನೇ ಸಾಲಿನ ಪೆಬ್ರುವರಿ ತಿಂಗಳ ವರೆಗೆ ಅಂದಾಜು 12,30,529-25 ರೂಪಾಯಿಯ ಸರಕಿನ ನಿವ್ವಳ ಮೊತ್ತವನ್ನು ಲೇಕ್ಕ ತೋರಿಸದೆ ನಮ್ಮ ಕಂಪನಿಗೆ ನಷ್ಟ ಮಾಡಿ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 39/2013 ಕಲಂ, 406, 408, 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀಮತಿ ಲಲೀತಾ ಗಂಡ ಧರ್ಮಣ್ಣ ಮೇದಾರ ಸಾ:ಲಕ್ಷ್ಮೀ ಟಾಕೀಜಿ ಹತ್ತಿರ ಜೇವರ್ಗಿ ರವರು ನನ್ನ ಗಂಡ ಧರ್ಮಣ್ಣ ತನು ದಿನಾಂಕ:27-03-2013 ರಂದು ಮಧ್ಯಾಹ್ನದ ಸಮಯದಲ್ಲಿ ಮತ್ತು ರಾತ್ರಿ 7-00  ಗಂಟೆಯ ಸುಮಾರಿಗೆ ಸರಾಯಿ ಕುಡಿದು ಬಂದು ನನ್ನ ಮಾವ ರೇವಣಸಿದ್ದ ಇತನಿಗೆ ಆಸ್ತಿಯಲ್ಲಿ ಪಾಲು ಕೋಡು ಅಂತ ಕೇಳಿದಕ್ಕೆ ಕೊಡುವುದಿಲ್ಲ ಅಂತ ಅವನ ಸಂಗಡ ಜಗಳ ಮಾಡಿದ್ದನು. ನಾನು ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ನನ್ನ ಗಂಡ ಧರ್ಮಣ್ಣ ಇತನು ಮನೆಯ ಮುಂದೆ ಇರುವ ಪತ್ರಾಸ ಸೇಡಿ ಕೇಳಗೆ ಮಂಚದ ಮೇಲೆ ಮಲಗಿಕೊಂಡಿದ್ದನು. ನಮ್ಮ ಮಾವ ರೇವಣಸಿದ್ದ ಇತನು ನನ್ನ ಗಂಡ ಸರಾಯಿ ಕುಡಿದು ಬಂದು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ದಿನಾಂಕ:28-03-2013 ರ ರಾತ್ರಿಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಆತನ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:47/2013 ಕಲಂ, 302 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ;
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ, ಅರ್ಜುನ ತಂದೆ ಬಂಡು ಖರಾತ, ವಃ 48 ವರ್ಷ, ಉಃ ಕುರಿ ಕಾಯುವದು,ಜಾಃಕುರಬರ, ಸಾಃರಾಜನಾಳ, ಹತ್ತರಕಿ ಪೊಸ್ಟ, ತಾಃ ಇಂಡಿ, ಜಿಃ ಬಿಜಾಪೂರರವರು ನಾನು 4-5 ತಿಂಗಳಿಂದ ನಮ್ಮೂರಿನಿಂದ ಕುರಿಗಳನ್ನು ಮೇಯಿಸುತ್ತಾ ಗುಲಬರ್ಗಾಕ್ಕೆ ಬಂದ್ದಿದ್ದು, ದಿನಾಂಕ: 28-03-2013 ರಂದು ಕುರಿಗಳನ್ನು ಪಾಳಾ ಗ್ರಾಮದ ಹತ್ತಿರ ಮೇವು ತಿನ್ನುವದಕ್ಕೆ ಬಿಟ್ಟು  ನಾನು ಮತ್ತು ನನ್ನೊಂದಿಗೆ ಇದ್ದ ಕಾರಭಾರಿ ತಂದೆ ಗೇನಪ್ಪಾ ಇಬ್ಬರು ಕೂಡಿ ಗುಲಬರ್ಗಾಕ್ಕೆ ಕುರಿ ಮಾರಲು ಬಂದು ಸೇಡಂ ರಿಂಗ ರೋಡ ಹತ್ತಿರ ಕುರಿ ಮಾರಿಕೊಂಡು ಬಸವೇಶ್ವರ ಆಸ್ಪತ್ರೆಯ ಹತ್ತಿರ ಮಧ್ಯಾಹ್ನ ರೋಡ ದಾಟುತ್ತಿದ್ದಾಗ ಕಾರ ನಂ. ಕೆಎ-32 ಎಮ್-1499 ನೇದ್ದರ ಚಾಲಕನು ತನ್ನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗಾಲು ಹಿಂಬಡಿಗೆ ಭಾರಿ ಗುಪ್ತ ಪೆಟ್ಟಾಗಿ ಪಾದದ ಹತ್ತಿರ ತರಚಿದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ: 19/2013 ಕಲಂ 279, 338 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: