ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ
ಅರವಿಂದ ತಂದೆ ಸೋಮಶೇಖರ ದೇಸಾಯಿ ಸಾಃ ಇಂದ್ರಾ ಆಸ್ಪತ್ರೆಯ ಹತ್ತಿರ ಬ್ಯಾಂಕ ಕಾಲೋನಿ
ಗುಲಬರ್ಗಾರವರು ನಾನು ನಮ್ಮ ಅಡತಿಯಲ್ಲಿ ಮಾಲು ಇಟ್ಟ ರೈತರಿಗೆ ಹಣ ಕೊಡುವುದರ ಸಂಬಂಧ ಸುಪರ ಮಾರ್ಕೆಟದಲ್ಲಿರುವ
ಬ್ಯಾಂಕ ಆಪ್ ಇಂಡಿಯಾ ಬ್ಯಾಂಕಿಗೆ ಮಧ್ಯಾಹ್ನ 1.15 ಪಿ.ಎಮಕ್ಕೆ ಬ್ಯಾಂಕಿನಿಂದ 8,00,000/-
ಹಣವನ್ನು ಖಾತೆಯಿಂದ ತೆಗೆದುಕೊಂಡು ನನ್ನ ಹೊಂಡಾ ಆಕ್ಟಿವ ವಾಹನ ನಂ. ಕೆಎ-32-ಕ್ಯೂ-7338 ನೇದ್ದರ
ಹಿಂದಿನ ಡಿಕ್ಕಿಯಲ್ಲಿಟ್ಟುಕೊಂಡು ನಮ್ಮ ಗೋದಾಮಿನ ಹೋಗಿದ್ದು ನಮ್ಮ ಪಕ್ಕದ ಗೋದಾಮಿನ ಮುಂದೆ ಎರಡು
ಜನರು ಕುಳಿತಿದ್ದರು ಅವರಿಗೆ ಮಾತನಾಡಿಸಿ ನಮ್ಮ ಗೋದಾಮಿನಲ್ಲಿರುವ ಮುನಿಮರಾದ ಸುಭಾಷ ಕುಂಬಾರ
ಮತ್ತು ಡಾ.ನಿಸಾರ ಪಟೇಲ ಮತ್ತು ಹಮಾಲರನ್ನು ಮಾತನಾಡಿಸಿಕೊಂಡು ಮರಳಿ ನನ್ನ ಗಾಡಿಯನ್ನು
ತೆಗೆದುಕೊಂಡು ಗಂಜನಲ್ಲಿರುವ ನಮ್ಮ ಅಡತಿಗೆ ಹೋಗಿ ಗಾಡಿಯನ್ನು ನಿಲ್ಲಿಸಿ ಡಿಕ್ಕಿಯಲ್ಲಿರುವ
ಹಣವನ್ನು ತೆಗೆಯಲು ಹೋದಾಗ ಗಾಡಿಯ ಡಿಕ್ಕಿಯನ್ನು ಮುರಿದಿದ್ದು ಅದರಲ್ಲಿದ್ದ 8,00,000/- ರೂಪಾಯಿಗಳು
ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ. 66/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ ದತ್ತು ತಂದೆ ಬಾಬು ಜಾಧವ
ಸಾ||ಗೊಬ್ಬುರವಾಡಿ ತಾಂಡಾ ರವರು ನಾನು ದಿನಾಂಕ:20-03-2013 ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ
ತಮ್ಮ ತಾಂಡದ ಹತ್ತಿರ ಅಪರಿಚಿತ 60 ವರ್ಷದ ವಯಸ್ಸಿನ ವ್ಯಕ್ತಿಗೆ ಯಾವುದೋ ಒಂದು ವಾಹನ ಚಾಲಕನು
ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿ ಹೋಗಿರುತ್ತಾನೆ. ಅಪರಿಚಿತ
ಮನುಷ್ಯನಿಗೆ 108 ಅಂಬುಲೇನ್ಸ ನಲ್ಲಿ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೊರಟಾಗ
ಗುಲಬರ್ಗಾ ಸರಕಾರಿ ಆಸ್ಪತ್ರೆ ಸಮೀಪಿಸುತ್ತಿರುವಾಗ ಸದರಿ ಅಪರಚಿತ ವ್ಯಕ್ತಿ ಮೃತ
ಪಟ್ಟಿರುತ್ತಾನೆ, ಅಂತಾ ದತ್ತು ಜಾಧವ ಅನ್ನುವವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 26/2013
ಕಲಂ 279.304 [ಎ] ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ
ದಾಖಲಿಸಿಕೊಂಡಿರುತ್ತಾರೆ.
No comments:
Post a Comment