ಅಪಘಾತ ಪ್ರರಕಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ, ದಯಾನಂದ ತಂದೆ ಆನಂದರಾವ ತಂಬಾಕೆ ವಯ;20ವರ್ಷ ಜ್ಯಾತಿ;ಲಿಂಗಾಯತ ಉ;ಬಿ.ಇ. ವಿದ್ಯಾರ್ಥಿ ಸಾ|| ಹಾಳ ತಡಕಲ ತಾ:ಆಳಂದ ಜಿ;||ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಗುರುನಾಥ ತಂದೆ ಕರಬಸಪ್ಪಾ ಬಿರಾದರ, ಶಿವರಾಜ ತಂದೆ
ಸುಭಾಶ ಸಿರಸಿ ಸಾ|| ನಸಿರವಾಡಿ ತಾ|| ಆಳಂದ ನಾವೇಲ್ಲರೂ ದಿನಾಂಕ:31-12-2012 ರಂದು ರಾತ್ರಿ
9-30 ಗಂಟೆಯ ಸುಮಾರಿಗೆ ಹೊಸ ವರ್ಷ ಆಚರಣೆ ಮಾಡುವ ಕುರಿತು
ನನ್ನ ಹೀರೊ ಹೋಂಡಾ ಫ್ಯಾಸನ ನಂ.ಕೆಎ-32 ಯು-8285 ನೇದ್ದರ ಮೇಲೆ ಆಳಂದದಿಂದ
ಗುಲಬರ್ಗಾಕ್ಕೆ ಹೋರಟಿದ್ದು ಮೋಟಾರ ಸೈಕಲನ್ನು
ಗುರುನಾಥ ಬಿರಾದರನು ನಡೆಯಿಸುತ್ತಿದ್ದು, ರಾತ್ರಿ 11-45 ಗಂಟೆಯ ಸುಮಾರಿಗೆ ಭೀಮಳ್ಳಿ ಕ್ರಾಸ ಸಮೀಪಿಸುತ್ತಿರುವಾಗ
ಗುಲಬರ್ಗಾ ಕಡೆಯಿಂದ ಮೋಟಾರ ಸೈಕಲ ಸವಾರನು ತನ್ನ ಹಿಂದೆ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು
ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ರೋಡ ಸೈಡ್ ಹಿಡಿದು ಹೋಗದೆ, ರೋಡಿನ
ಮದ್ಯದಲ್ಲಿ ವೇಗವಾಗಿ ಹೊರಟಿದ್ದು , ರಡು ಮೋಟಾರ
ಚಾಲಕರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದರಿಂದ ಎಲ್ಲರೂ ಮೋಟಾರ ಸೈಕಲ್ ಸಮೇತ ಜೋರಾಗಿ ಬಿದ್ದೆವು.
ನನಗೆ ಟೊಂಕಕ್ಕೆ ಬಾರಿ ಗುಪ್ತ ಪೆಟ್ಟಾಗಿರುತ್ತದೆ, ಎರಡು ಮೋಕಾಲಿಗೆ ಭಾರಿ ರಕ್ತಗಾವಾಗಿ ನಡೆಯಲು
ಬಾರದಂತೆಯಾಗಿದ್ದು, ಹೋಗಿ ಬರುವ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಾಲಾಗಿ ಶಿವರಾಜ ಸಿರಸಿ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ
ಬೇಹುಶ ಆಗಿದ್ದನು. ಗುರುನಾಥನಿಗೂ ರಕ್ತಗಾಯವಾಗಿರುತ್ತದೆ.ಡಿಕ್ಕಿ ಹೋಡೆದ ಮೋಟಾರ ಸೈಕಲ್
ನೋಡಲು ಬಜಾಜ ಪಲ್ಸರ ನಂ.ಕೆಎ-32 ವಾಯ-4179
ನೇದ್ದರ ಸವಾರ ಸುಶೀಲಕುಮಾರ ತಂದೆ ಅಂಬದಾಸ ಜಾಧವ
ವಯ;22 ವರ್ಷ ಉ;ವಿದ್ಯಾರ್ಥಿ ಸಾ|| ನ್ಯೂ ರಾಘವೆಂದ್ರ ನಗರ ಗುಲಬರ್ಗಾ ಇತನಿಗೆ ತಲೆಗೆ ಭಾರಿ
ರಕ್ತಗಾಯ, ಬಲಗಾಲಿಗೆ ಭಾರಿ ಗಾಯವಾಗಿತ್ತು ,ಅದೇ ವೇಳೆಗೆ ಅವನ ಹೊಟ್ಟೆಯ ಮೇಲೆ ಯಾವುದೋ ಭಾರವಾದ
ವಾಹನ ಹೋಗಿ ಬಲಗಾಲು ತೊಡೆಯ , ಹೊಟ್ಟೆಯಲ್ಲಿ
ಮಾಂಸ ಖಂಡಗಳು ಹೋರಗಡೆ ಬಂದಿರುತ್ತವೆ, ಯಾವ ವಾಹನ ಹೋಗಿರುತ್ತದೆ ಅನ್ನುವದು ನನಗೆ ಆದ ನೋವಿನ
ಬಾದೆಯಲ್ಲಿ ಸರಿಯಾಗಿ ನೋಡಿರುವದಿಲ್ಲಾ ಆತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದನು. ಮತ್ತು ಅವನ ಹಿಂದಗಡೆ ಮೋಟಾರ ಸೈಕಲ ಮೇಲೆ ಕುಳಿತಿದ್ದ
ಪ್ರಕಾಶ ತಂದೆ ಅಮೃತ ಜಮದಾರ ಸಾ;ನ್ಯೂರಾಘವೆಂದ್ರ ಕಾಲೂನಿ ಗುಲಬರ್ಗಾ ಇತನಿಗೆ ಭಾರಿರಕ್ತಗಾಯವಾಗಿದ್ದವು, ನಂತರ 108 ಅಂಬುಲೆನ್ಸ ವಾಹನ
ಬಂದು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತಾ ಹೇಳಿಕೆ ಕೊಟ್ಟ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.01/2013 ಕಲಂ. 279,338,304 (ಎ) ಐಪಿಸಿ ನೇದ್ದರ ಪ್ರಕಾರ
ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
No comments:
Post a Comment