POLICE BHAVAN KALABURAGI

POLICE BHAVAN KALABURAGI

26 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಾಜೀದ ಅಹ್ಮದ ತಂದೆ ಅಬ್ದುಲ ಸುಕ್ಕುರ ವ|| 21 ವರ್ಷ ಉ|| ಕೂಲಿ ಕೆಲಸ ಸಾ|| ಹೊಸ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ನಾನು ದಿನಾಂಕ:26-11-12 ರಂದು ರಾತ್ರಿ 00-30 ಗಂಟೆ ಸುಮಾರಿಗೆ ನನ್ನ ಗೆಳೆಯನ ಜೊತೆ ದ್ವಿ-ಚಕ್ರ ವಾಹನದ ಮೇಲೆ ಹಿಂದೆ ಕುಳಿತುಕೊಂಡು ಡಾಲಫೀನ ಶಾಲೆ ಹತ್ತಿರ ಹೋರಟಾಗ ಅಲ್ಲಿ ಆರೀಪ ಇತನು ನಿಂತಿದ್ದು ನಮ್ಮನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಬಳಿ ಇರುವ ಚಾಕುವಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ:ಶ್ರೀ ಮಾನಪ್ಪ ತಂದೆ ಈರಣ್ಣಾ ದೊಡ್ಡಮನಿ  ಸಾ: ಬಿರಾಳ ಬಿ ತಾ: ಜೇವರ್ಗಿ ನಮ್ಮೂರ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಮತ್ತು ಅವರ ಜನಾಂಗದವರು ಅಲ್ಲದೇ ಇತರೆ ಜನರೊಂದಿಗೆ ಕೂಡಿಕೊಂಡು ದಿನಾಂಕ:30-7-2012 ರಂದು ಬಿರಾಳ (ಬಿ) ಗ್ರಾಮದ ಬಸವೇಶ್ವರ ಕಟ್ಟೆಯನ್ನು ದ್ವಂಶಗೊಳಿಸಿ, ಅದೇ ವಿಷಯದಲ್ಲಿ ನಮ್ಮ ಮತ್ತು ಲಿಂಗಾಯತ ಜನರೊಂದಿಗೆ ದ್ವೇಶ ಸಾಧಿಸುತ್ತಾ ಬಂದಿದ್ದಿಲ್ಲದೇ ಒಂದಿಲ್ಲ ಒಂದು ದಿವಸ ನಮ್ಮಗೆ ಖಲಾಸ ಮಾಡಿಯೇ ಬಿಡುತ್ತೇವೆ ಅಂತ ಊರಲ್ಲಿ ಬೈದಾಡುತ್ತಾ ಬಂದಿದ್ದು, ದಿನಾಂಕ: 25-11-2012 ರಂದು ಸಾಯಂಕಾಲ 5-00 ಗಂಟೆಗೆ ಬಿರಾಳ (ಬಿ) ಗ್ರಾಮದ ಗ್ರಾಮ ಪಂಚಯತ ಎದರು ಖುಲ್ಲಾ ಜಾಗೆಯಲ್ಲಿ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಸಂಗಡ 71   ಜನರು ಸಾ:ಎಲ್ಲರೂ ಬಿರಾಳ (ಬಿ ಗ್ರಾಮದವರು ಕೊಲೆ ಮಾಡು ಉದ್ದೇಶದಿಂದ ಗುಂಪು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ )ರಾಡು, ಕೊಡಲಿ, ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನನಗೆ ಮತ್ತು ಗ್ರಾಮದ ಇತರ ಜನರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:175/12 ಕಲಂ 143. 147. 148. 323. 324. 336. 307 ಸಂಗಡ 147 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಅಯ್ಯಪ್ಪ ತಂದೆ ಸಿದ್ದಪ್ಪ ನಾಗನಟಗಿ ಬೇಡರ ಸಾ:ಬಿರಾಳ (ಬಿ) ರವರು ನಮ್ಮೂರ ನಿಂಗನಗೌಡ ತಂದೆ ಅಯ್ಯನಗೌಡ  ಮತ್ತು ಅವರ ಜನಾಂಗದವರು ನಿರ್ಮಿಸಿದ ಬಸವೇಶ್ವರ ಕಟ್ಟೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಇತರರು ಕೂಡಿಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ಕಾನೂನು ರೀತಿ ದಿನಾಂಕ:30/07/2012 ರಂದು ಕಟ್ಟೆಯನ್ನು ತೆರುವಗೊಳಿಸಿದ್ದು ಇರುತ್ತದೆ. ಅದೇ ವೈಶ್ಯಮ್ಯದಿಂದ ಲಿಂಗಾಯತ ಜನಾಂಗದವರು ಮತ್ತು ಇತರ ಜನಾಂಗದವರು ಕೂಡಿಕೊಂಡು ನಮ್ಮ ಸಮಾಜದ ಮೇಲೆ ಹಲ್ಲೇ ಮಾಡುತ್ತಾ ಬಂದಿದಲ್ಲದೇ ದಿನಾಂಕ:25-11-2012 ರಂದು ಸಾಯಾಂಕಾಲ 5-00 ಗಂಟೆಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಖುಲ್ಲಾ ಜಾಗದಲ್ಲಿ ನಿಂಗಣ್ಣಾ ಗೌಡ ತಂದೆ ಅಯ್ಯಣಗೌಡ ಮಾಲಿ ಪಾಟೀಲ ಸಂಗಡ 24 ಜನರು ಅಲ್ಲದೇ ಗ್ರಾಮದ ಇತರರು ಸಾ:ಬಿರಾಳ (ಬಿ) ಗುಂಪು ಕಟ್ಟಿಕೊಂಡು ಬಂದು ನನಗೆ ಮತ್ತು ನಮ್ಮ ಜನಾಂಗದವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ಕೆಲವು ಜನರು ಕೈಯಲ್ಲಿ ಬಡಿಗೆ, ಕಲ್ಲುಗಳು ಹಿಡಿದುಕೊಂಡು,ನಾವು ಕಟ್ಟಿದ ಬಸವೇಶ್ವರ ಕಟ್ಟೆ ದ್ವಂಶ ಮಾಡಿರುತ್ತಾರೆ. ಶರಣಬಸಪ್ಪ ತಂದೆ ಕರಣಪ್ಪ ಆಂದೊಲಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ  ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ನಿಂಗಣ್ಣಗೌಡ ತಂದೆ ಅಯ್ಯಣಗೌಡ ಪಾಟೀಲ  ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.  ಅಲ್ಲದೆ ಅವರಲ್ಲಿಯ ಕೆಲವು ಜನರು ಒಮ್ಮೇಲೆ ಅವರ ಕೈಯಲ್ಲಿದ ಬಡಿಗೆಗಳಿಂದ ನಮ್ಮ ಜನಾಂಗದವರಿಗೆ  ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗುಪ್ತಪೆಟ್ಟು ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:176/12 ಕಲಂ 143.147.148.323.324.504.506.336.307 ಐ.ಪಿ.ಸಿ ಸಂ 3(1) (10) ಎಸ.ಸಿ/ಎಸ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರುಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಮೋಹನರಡ್ಡಿ ತಂದೆ ವೆಂಕಟರಡ್ಡಿ ನಾಯಕಿನ್ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ನಮ್ಮ ಹೊಲ ಹಾಗೂ ನಮ್ಮ ಪಕ್ಕದ ಮನೆಯವರಾದ ನಮ್ಮ ಜಾತಿಯ ಸಾಯಿರಡ್ಡಿ ಇವರ ಹೊಲ ಅಕ್ಕಪಕ್ಕದಲ್ಲಿದ್ದು ನಮ್ಮ ಹೊಲಕ್ಕೆ ಹೋಗಬೇಕಾದರೆ ಸಾಯಿರಡ್ಡಿ ಇವರ ಹೊಲದಿಂದ ಹೋಗಲು ದಾರಿ ಇದ್ದು ಸಾಯಿರಡ್ಡಿ ಇತನು ನಮಗೆ ತನ್ನ ಹೊಲದಿಂದ ನಮ್ಮ ಹೊಲಕ್ಕೆ ಹೋಗದಂತೆ ಒಂದು ವರ್ಷದಿಂದ ತಕರಾರು ಮಾಡುತ್ತಿದ್ದು ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ:25-11-2012 ರಂದು ರಾತ್ರಿ 9-00 ಗಂಟೆಗೆ ನಾನು ಹಾಗೂ ನಮ್ಮ ಅಣ್ಣ-ತಮ್ಮಕಿಯವರಾದ  ಶ್ರೀನಿವಾಸರಡ್ಡಿ ತಂದೆ ಮಾಸರಡ್ಡಿ ನಾಯಕಿನ್, ಮೋಹನರಡ್ಡಿ ತಂದೆ ನರಸಿಂಹಲು ಮನ್ನೆ  ನರಸಿಂಹಲು ತಂದೆ ನಾಗಪ್ಪಾ, ಮನ್ನೆ ಕೃಷ್ಣಾ ತಂದೆ ನರಸಿಂಹಲು ಮನ್ನೆ, ಅನಿಲ ತಂದೆ ಕೃಷ್ಣಾ ಮನ್ನೆ, ಶ್ರೀಕಾಂತ ತಂದೆ ಮೋಹನರಡ್ಡಿ ಮನ್ನೆ ಎಲ್ಲರೂ ಕೂಡಿ ಮೋಹರಂ ನೋಡಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ನೀರಿನ ಟ್ಯಾಂಕಿನ ಹತ್ತಿರ ಸಾಯಿರಡ್ಡಿ, ರಘುಪತಿರಡ್ಡಿ,ನಾಗರಡ್ಡಿ,ಲಾಲಪ್ಪಾ ತಂದೆ ಬಸಪ್ಪಾ ಮನ್ನೆ,ಶಾಣಪ್ಪಾ ತಂದೆ ಶಾಮಪ್ಪಾ ಮನ್ನೆ ಮತ್ತು ಶ್ರೀನಿವಾಸರಡ್ಡಿ ತಂದೆ ತಿಪ್ಪಣ್ಣ ಮನ್ನೆ ಸಾ|| ಎಲ್ಲರೂ ಆಡಕಿ ಗ್ರಾಮ ರವರು ಕೈಯಲ್ಲಿ ರಾಡು, ಕಲ್ಲು ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನೀವು ನಮ್ಮ ಹೊಲದಿಂದ ಹೋಗಬೇಡಿರಿ ಅಂದರೂ ಕೂಡಾ ಯಾಕೆ ಹೋಗುತ್ತೀರಿ ಅಂತಾ ಜಗಳ ತಗೆದು ಕೊಲೆ ಮಾಡುವ ಉದ್ಯೇಶದಿಂದ ಕೊಡಲಿಯಿಂದ .ರಾಡಿನಿಂದ ,ಬಡಿಗೆಯಿಂದ ,ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ- 143,147,148,341, 324,307504, 506 ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: