ಹಲ್ಲೆ ಮಾಡಿ ಕೊಲೆಗೆ
ಪ್ರಯತ್ನ:
ಕಮಲಾಪೂರ ಪೊಲೀಸ್
ಠಾಣೆ: ಶ್ರೀಮತಿ,
ಕಾಶಿಬಾಯಿ ಗಂಡ ಸುನೀಲ್ ಗೌರ ವ:20 ವರ್ಷ ಸಾ; ನವನಿಹಾಳ ತಾ;ಜಿ;ಗುಲಬರ್ಗಾ ನನಗೆ ಒಂದೂವರೆ ವರ್ಷದ
ಹಿಂದುಗಡೆ ಸುನೀಲ ತಂದೆ ಶಂಕರ ಗೌರೆ ಸಾ: ನವನಿಹಾಳ ಇತನೊಂದಿಗೆ ನವನಿಹಾಳ ಗ್ರಾಮದಲ್ಲಿ
ಗುರುಹಿರಿಯರ ಸಮಕ್ಷಮ ಬಂಗಾರ ಮತ್ತು ನಗದು ಹಣ ಮನೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿ
ಕೊಟ್ಟಿದ್ದು, ಮದುವೆಯಾಗಿ 2 ತಿಂಗಳ ನಂತರ ಮನೆಯಲ್ಲಿ ಅತ್ತೆಯಾದ ಗುಂಡಮ್ಮ, ಮೈದುನರಾದ ಸಂಜೀವ, ಮತ್ತು
ವಿಜಯ ಇವರೆಲ್ಲರೂ ಕೂಡಿಕೊಂಡು ನನಗೆ ತವರು ಮನೆಯಿಂದ ಬಂಗಾರ ಮತ್ತು ಖರ್ಚು ಮಾಡಲು ಹಣ
ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತೊಂದರೆ
ನೀಡುತ್ತಿದ್ದರು.ಈ ವಿಷಯವನ್ನು ನನ್ನ ತವರು ಮನೆಯಲ್ಲಿ ತನ್ನ ಅಣ್ಣ ತಮ್ಮಂದಿರಿಗೆ ಮತ್ತು
ಸಂಭಂದಿಕರಿಗೆ ತಿಳಿಸಿದ್ದು, ಅವರೆಲ್ಲರೂ ಕೂಡಿಕೊಂಡು ನನ್ನ ಗಂಡ, ಅತ್ತೆ ಮತ್ತು ಮೈದುನರನ್ನು
ಊರಿಗೆ ಕರೆಯಿಸಿ ಬುದ್ದಿಮಾತು ಹೇಳಿ ನನ್ನ ಗಂಡನ ಮನೆಗೆ ಕೊಟ್ಟು ಕಳುಹಿಸಿರುತ್ತಾರೆ. ದಿನಾಂಕ:29/10/2012
ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಗಂಡ, ಅತ್ತೆ ಗುಂಡಮ್ಮ ಹಾಗೂ
ಮೈದುನರಾದ ಸಂಜೀವ ಮತ್ತು ವಿಜಯ ಇವರೆಲ್ಲರೂ ಕೂಡಿಕೊಂಡು ವಿನಾಃಕಾರಣ ಅವಾಚ್ಯವಾಗಿ ಬೈದು ಅತ್ತೆ
ಗುಂಡಮ್ಮ ಇವಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ತಂದು ನನ್ನ ಮೈ ಮೇಲೆ ಹಾಕಿದ್ದು, ನಾನು ಅವರಿಂದ
ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೈದುನರಾದ ಸಂಜೀವ ಮತ್ತು ವಿಜಯ ಇವರೂ ಕೂಡ ಅಲ್ಲಿಗೆ ಬಂದು
ಮನೆಯ ಬಾಗಿಲು ಹಾಕಿದ್ದು, ನನ್ನ ಗಂಡ ಸುನೀಲ್ ಇತನು ಒಂದು ಕಡ್ಡಿ ಪೆಟ್ಟಿಗೆಯಿಂದ ಬೆಂಕಿ ಕೊರೆದು
ನನ್ನ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ಚಿರಾಡುತ್ತಾ ಮನೆಯ
ಹೊರಗಡೆ ಬಂದಾಗ ಜನರು ಜಮಾವಣೆಗೊಂಡು ಉಪಚಾರ ಕುರಿತು ಹುಮನಾಬಾದಕ್ಕೆ ಕರೆ ತಂದು ನಂತರ ಹೆಚ್ಚಿನ
ಉಪಚಾರ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ, ಸದರಿಯವರ ಮೇಲೆ ಕಾನೂನು
ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:111/2012 ಕಲಂ
498 (ಎ), 307, 504.506.ಸಂಗಡ 34 ಐ.ಪಿ.ಸಿ ಸಂಗಡ ಕಲಂ 3 ಮತ್ತು 4 ಡಿ.ಪಿ. ಆಕ್ಟ್ ಪ್ರಕಾರ ಪ್ರಕರಣ
ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ, ತಾನಾಜಿ ತಂದೆ ಸಂಬಾಜಿ ಜಾಧವ ಉ||ಲಾರಿ
ಡ್ರೈವರ ಸಾ; ಮಂಗಲವೇಡ ಜಿ||ಸೋಲಾಪೂರ ರವರು ನನ್ನ ಲಾರಿ ನಂ
ಎಮ್ ಹೆಚ್ 13 ಆರ್ 4363 ನೇದ್ದು ನಾನೆ ಚಲಾಯಿಸುತ್ತಾ ಬಾಡಿಗೆ ಹೊಡೆಯುತ್ತಾ ನನ್ನ ಹೆಂಡತಿ ಮಕ್ಕಳೊಂದಿಗೆ
ಜೀವಸುತ್ತೇನೆ ದಿನಾಂಕ:30/10/2012 ರಂದು ಸಾಯಂಕಾಲ 5.00 ಗಂಟೆಗೆ ರಾವೂರ ಗ್ರಾಮದಲ್ಲಿ ಪರ್ಸಿ
ಲೋಡ ತುಂಬಿಕೊಂಡು ಬರುವಾಗ ಆಳಂದ ಮಾರ್ಗವಾಗಿ ಮಂಗಲಮೇಡ ಗ್ರಾಮಕ್ಕೆ ಹೋಗುತ್ತಿರುವಾಗ ರಾತ್ರಿ
10-00 ಗಂಟೆ ಸುಮಾರಿಗೆ ಆಳಂದ ಪಟ್ಟಣದ ಸಮೀಪದಲ್ಲಿಯ ಡೋಗಿ ನಾಲಾ ಚಡಾಣದಲ್ಲಿ ನನ್ನ ಲಾರಿ
ಆಕಸ್ಮಿಕವಾಗಿ ಕೆಟ್ಟ ನಿಂತಿತು ನಾನು ಲಾರಿಯಿಂದ ಕೆಳಗೆ ಇಳಿದು ನೋಡುತ್ತಿದ್ದಾಗ 6 ಜನರ ಗುಂಪು
ನನ್ನ ಬಳಿ ಬಂದವರೇ ನನಗೆ ಹಿಡಿದು ಪಕ್ಕದ ಸೂರ್ಯಪಾನ ಬೆಳೆ ಇರುವ ಹೊಲದಲ್ಲಿ ಒಯ್ದು ನನ್ನ
ಮೈಲೆಲಿನ ಅಂಗಿ ಪ್ಯಾಂಟ ಕಳಚಿ ಅಂಗಿ ಜೇಬಿನಲ್ಲಿದ್ದ 2000/- ರೂ ನಗದು ಹಣ ಹಾಗೂ ಒಂದು ಹಳೆಯ
ಮೋಬೈಲ್ ಅ||ಕಿ|| 1000 ರೂ ಇದ್ದು ಜಬರ ದಸ್ತಿಯಿಂದ
ತಗೆದುಕೊಂಡು ಹೋದರು ಸದರಿಯವರು ಮುಖಕ್ಕೆ ಮತ್ತು ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು ನಂತರ
ನಾನು ನನ್ನ ಲಾರಿಗೆ ನೋಡಲಾಗಿ ಲಾರಿಯ ಡೀಜಲ್ ಪೈಪ ಲಿಕೇಜ ಆಗಿದ್ದು ನೋಡಿ ಸರಿಪಡಿಸಿಕೊಂಡು
ಆಳಂದಕ್ಕೆ ಬಂದಿದ್ದೇನೆ. ಆದಕಾರಣ ನನ್ನಿಂದ ಹಣ ಮತ್ತು ಮೋಬೈಲ ಆಲ್ಲದೇ ನನ್ನ ಮೈಮೇಲಿನ ಬಟ್ಟೆಗಳು
ತಗೆದುಕೊಂಡು ಕಸಿದುಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 211/2012 ಕಲಂ ಐಪಿಸಿ 395 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment